ತಾಲಿಬಾನಿಗಳಿಂದ ತಪ್ಪಿಸಿಕೊಂಡವಳ ಬದುಕು ಪಾಕಿಸ್ತಾನದಲ್ಲಿ ಹೀಗಾಯಿತು

By: ವಿಸ್ಮಯ್
Subscribe to Oneindia Kannada

'ಪುರುಷ ಪ್ರಧಾನ ಸಮಾಜದಲ್ಲಿ ಬಹುತೇಕ ಸಂದರ್ಭದಲ್ಲಿ ಪುರುಷರದ್ದೇ ಆಧಿಪತ್ಯ. ಆದರೂ ಇಲ್ಲಿ ಯಾಕೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಮುಂದಕ್ಕೆ ನಡೆದು ಹೋಗುತ್ತಿದ್ದರೆ, ನೀವು ಯಾಕೆ ಅವರಿಂದ 10 ಅಡಿ ಹಿಂದೆ ನಡೆದುಕೊಂಡು ಹೋಗುತ್ತಿದ್ದೀರಾ? ನೀವು ಮುಂದೆಯಿದ್ದು, ಪತ್ನಿ ಮತ್ತು ಪುತ್ರಿಯರು ಹಿಂದೆ ಬರಬೇಕಲ್ವಾ?

-ಅಫ್ಘನಿಸ್ತಾನದ ಗ್ರಾಮವೊಂದರಲ್ಲಿ ಕೆಲ ವರ್ಷಗಳ ಹಿಂದೆ ಇಂತಹ ಒಂದು ಪ್ರಶ್ನೆ ವಿದೇಶಿ ಪತ್ರಕರ್ತೆಯೊಬ್ಬರು ವ್ಯಕ್ತಿಯೊಬ್ಬನನ್ನು ಕೇಳಿದಾಗ, 'ನಿಮಗೆ ಯಾಕೆ ಇದರ ಉಸಾಬರಿ' ಎಂದು ಸಿಟ್ಟಾಗಿ ಮುಂದೆ ಸಾಗಿದ.

ವಿದೇಶಿ ಪತ್ರಕರ್ತೆ ಗೊಂದಲಕ್ಕೆ ಒಳಗಾಗಿದ್ದು ಕಂಡು ಅಲ್ಲೇ ಕೂತಿದ್ದ ಅಜ್ಜಿ ಬೊಚ್ಚುಬಾಯಿಯಲ್ಲಿ ಉತ್ತರಿಸಿದಳು: ಇಲ್ಲಿನ ನೆಲದಲ್ಲಿ ಬಾಂಬ್ ಗಳನ್ನು (landmines) ಅಡಗಿಸಿಡಲಾಗಿದೆ. ಯಾರಾದರೂ ಅವು ಇರುವ ಕಡೆ ಹೆಜ್ಜೆಯಿಟ್ಟರೆ, ಸ್ಫೋಟಗೊಂಡು ಕೂದಲು ಸಹ ಸಿಗದಂತೆ ಪುಡಿಯಾಗುತ್ತಾರೆ. ಅದಕ್ಕೆ ಇಲ್ಲಿನ ಪುರುಷರು ಸಾಯುವ ಪ್ರಶ್ನೆ ಎದುರಾದಾಗ, ಮೊದಲು ಮಹಿಳೆಯರನ್ನು ಮುಂದೆ ಬಿಡುತ್ತಾರೆ.[ಅಫ್ಘಾನಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, 35 ಮಂದಿ ಸಾವು]

Escape from Taliban, arrest in Pakistan

ಬಹುಶಃ ಇದು ಸೇರಿದಂತೆ ಇಂತಹದ್ದೇ ಹಲವು ಕಾರಣಗಳಿಂದ ಅಫ್ಘನ್ ಮಹಿಳೆಯರು ಸೇರಿದಂತೆ ಎಲ್ಲರೂ ಬೇರೆ ಬೇರೆ ದೇಶಗಳಲ್ಲಿ ಅಕ್ರಮವಾಗಿ ನುಸುಳಿಯಾದರೂ ಬದುಕಲು ಬಯಸುತ್ತಾರೆ. ಅಂತಹ ಆಶಾಜೀವಿಗಳಲ್ಲಿ 'ಅಫ್ಘನ್ ಹುಡುಗಿ' ಶರ್ಬತ್ ಬೀಬಿ (ಶರ್ಬತ್ ಗುಲ್) ಕೂಡ ಒಬ್ಬರೆಂದರೆ ಅಲ್ಲಗಳೆಯಲಾಗದು.

ಲಕ್ಷಾಂತರ ಅಫ್ಘನರಂತೆ ಆಕೆಯೂ ಪೌರತ್ವದ ನಕಲಿ ಕಾರ್ಡುಗಳನ್ನು ಪಡೆದು ಪ್ರವೇಶಿಸಿರಬಹುದು. ಅದಕ್ಕಾಗಿ, ಪಾಪ ಅವರು ಬೆಲೆಯೂ ತೆತ್ತಿದ್ದಾರೆ.ಆಕೆಯನ್ನು ಪಾಕಿಸ್ತಾನದ ಎಫ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೂ ವಿಶೇಷವೆಂದರೆ, ನಕಲಿ ಕಾರ್ಡುಗಳ‌ನ್ನು ಮಾಡಿಸಿಕೊಟ್ಟವರಲ್ಲಿ ಪಾಕಿಸ್ತಾನ ಆಡಳಿತ ವರ್ಗದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಶಾಮೀಲಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.[ಅಪಹರಣಕ್ಕೆ ಒಳಗಾಗಿದ್ದ ಭಾರತದ ಜುಡಿತ್ ಡಿಸೋಜಾ ತವರಿಗೆ]

ಶರ್ಬತ್ ಬೀಬಿ ಬೇರೆ ಯಾರೂ ಅಲ್ಲ. ನ್ಯಾಷನಲ್ ಜಿಯೊಗ್ರಾಫಿಕ್ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಗೊಂಡು 'ಯುದ್ಧ ಪೀಡಿತ ಅಫ್ಘನ್ ಮೋನಾಲಿಸಾ'ಎಂದು ಪ್ರಖ್ಯಾತಿ ಹೊಂದಿದವರು. ಅದಕ್ಕೆ ಕಾರಣವಾದ ಆ ಪತ್ರಿಕೆಯ ಛಾಯಾಗ್ರಹಕ ಸ್ಟೀವ್ ಮಾರ್ಕ್ ಕೆರ್ರಿ ನಿರಾಶ್ರಿತರ ಡೇರೆಯಲ್ಲಿ ಆಕೆಯನ್ನು 1984 ಮತ್ತು 2002ರಲ್ಲಿ ಕ್ಯಾಮೆರಾದಲ್ಲಿ ಸೆರೆ ಹಿಡಿದ.

ವಿಶ್ವಸಂಸ್ಥೆ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚಿನ ನಿರಾಶ್ರಿತರು ಈ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿ ಪ್ರದೇಶದ ಡೇರೆಗಳಲ್ಲಿ ವಾಸವಿದ್ದಾರೆ. ಅಫ್ಘಾನಿಸ್ತಾನದ ಯುದ್ಧಪೀಡಿತ ಪ್ರದೇಶದಲ್ಲಿ ನೆಮ್ಮದಿ ಕಳೆದುಕೊಂಡು ಬದುಕುವುದಕ್ಕಿಂತ ಮತ್ತು ನಿರಂತರ ಶೋಷಣೆ, ದೌರ್ಜನ್ಯ ಎದುರಿಸುವುದಕ್ಕಿಂತ ಬೇರೊಂದು ದೇಶದಲ್ಲಿ ಅಕ್ರಮ ನಿವಾಸಿಗಳಾಗಿ ಬದುಕುವುದೇ ಮೇಲು ಎಂದು ಭಾವಿಸಿದವರು ಅವರು.

ಆದರೆ, ಇಲ್ಲಿ ಬದುಕು ಅನಿರೀಕ್ಷಿತ ತಿರುವು ಕಂಡಿತು. ಅದಕ್ಕೆ ಹೇಳಿದ್ದು, ಎಸ್ಕೇಪ್ ಫ್ರಮ್ ತಾಲಿಬಾನ್, ಅರೆಸ್ಟ್ ಇನ್ ಪಾಕಿಸ್ತಾನ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nat Geo's famed 'Afghan Girl' Sharbat Gula arrested from her Peshawar (Pakistan) residence by FIA for alleged forgery of a Computerised National Identity Card. On the backdrop of incident here is an article about situation of women in Afghanistan.
Please Wait while comments are loading...