ಮೌಖಿಕ ವಿಮರ್ಶೆಯ ಮಹಾ ದಾರ್ಶನಿಕ
ಕೀ
ರಂ ನಾಗರಾಜ್ ಇನ್ನಿಲ್ಲ. ಅವರ ಸಾವಿನ ಮೂಲಕ ನಾವು ಹಳೆಗನ್ನಡ, ನಡುಗನ್ನಡ ಮತ್ತು ಹೊಸಕನ್ನಡಕ್ಕಿದ್ದ ಬೆಳಕಿಂಡಿಯೊಂದನ್ನು ಶಾಶ್ವತವಾಗಿ ಕಳೆದುಕೊಂಡೆವು. ಕುಮಾರವ್ಯಾಸ ಮತ್ತು ಬೇಂದ್ರೆ ಮತ್ತೆ ಬಡವಾದರು. 18 ನೇ ಶತಮಾನದ ಅನೇಕ ತತ್ವಪದಕಾರರನ್ನು ಇನ್ನು ಕೇಳುವವರಿಲ್ಲ. ನಾಡಿನ ತುಂಬಾ ಹರಡಿಕೊಂಡಿರುವ ಅವರ ಅಸಂಖ್ಯ ಶಿಷ್ಯರುಗಳಿಗೆ ಮಾರ್ಗದರ್ಶನ ಮಾಡುವ ನಿಜದ ಗುರು ಈಗ ಮರೆಯಾದರು. id="toptextpromo">ಕೀ
ರಂ ಹೆಚ್ಚು ಬರೆದಿಲ್ಲ. ಬರೆಯುವ ಬಗ್ಗೆ ಅವರಿಗೆ ಅಂತಹ ಒಲವೂ ಇರಲಿಲ್ಲ. ಆದರೆ ನಮ್ಮ ಜನಪದರ ಹಾಗೆ ಅವರು ತಮ್ಮ ಮೌಖಿಕ ವಿಮರ್ಶೆಯ ಮೂಲಕ ಜನರನ್ನು ಸುಲಭವಾಗಿ ತಲುಪಿ ಬರಹಗಳ ಮಿತಿಯನ್ನು ನಾಡಿಗೆ ತೋರಿಸಿದರು. ಕನ್ನಡ ವಿವಿ ಯಲ್ಲಿ ನಾನು ಕೀ ರಂ ಅವರ ಜೊತೆಗಿದ್ದೆ. ಸಾಹಿತ್ಯ ಮತ್ತು ಜಾನಪದವನ್ನು ಸಂಸ್ಕೃತಿಯೊಂದರ ವಿಭಿನ್ನ ಅಭಿವ್ಯಕ್ತಿಗಳೆಂದು ಭಾವಿಸಿದ್ದ ಅವರು ಪಂಪನ ಕಾವ್ಯವನ್ನು ಓದಿದ ಮರು ಕ್ಷಣದಲ್ಲಿ ಅವರು ತಾಳಮದ್ದಳೆಯ ಬಗ್ಗೆ ಮಾತಾಡುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಹುಲಿಗೆಮ್ಮ
ದೈವದ ಪಾಯಸ ಪವಾಡದೊಂದಿಗೆ ಕುಮಾರವ್ಯಾಸನ ಕಾವ್ಯದ ದ್ರೌಪದಿ ಸ್ವಯಂವರದ ಭಾಗವನ್ನು ಜೋಡಿಸುತ್ತಿದ್ದರು. ಮೈಲಾರಲಿಂಗನ ಜಾತ್ರೆಯನ್ನು ಬೇಂದ್ರೆ ಕಾವ್ಯದೊಡನೆ ಇರಿಸಿ ಸಂಭ್ರಮಿಸುತ್ತಿದ್ದರು. ಈ ಬಗೆಯ ಅವರ ಚಿಂತನಾ ವಿನ್ಯಾಸವು ನಮ್ಮನ್ನು ಸಾಹಿತ್ಯ-ಜಾನಪದಗಳ ಕೃತಕ ವಿಭಜನೆಗಳ ಆಚೆ ಕೊಂಡೊಯ್ಯುತ್ತಿದ್ದವು. ನಾನು ನನ್ನ ಜೀವಿತಾವಧಿಯಲ್ಲಿ ಕಂಡ ಬಹುದೊಡ್ಡ ದಾರ್ಶನಿಕ ಕೀ ರಂ.ಅವರಿಗೆ ನನ್ನ ನಮನಗಳು











Click it and Unblock the Notifications