• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನವರಿ 15ರಂದು ಕಂಕಣ ಸೂರ್ಯಗ್ರಹಣ

By Staff
|
Kankana solar eclipse on Jan 15, 2010
ಬೇಕೆಂದಾಗ ಬಾರದ, ಬಂದಾಗ ಕಳೆದುಕೊಳ್ಳಬಾರದ ಸುಂದರ ವಿದ್ಯಮಾನಗಳೇ ಗ್ರಹಣಗಳು. ಅದನ್ನು ಸುರಕ್ಷಿತವಾಗಿ ವೀಕ್ಷಿಸಿದಲ್ಲಿ, ಮನಸ್ಸಿನಲ್ಲಿ ತೃಪ್ತಿ ಮತ್ತು ನಿಸರ್ಗದ ಬಗ್ಗೆ ಆಸಕ್ತಿ ಮೂಡುತ್ತದೆ. ಯಾವೊಬ್ಬ ವ್ಯಕ್ತಿಯ ಮೇಲೆ ಗ್ರಹಣ ಕೆಟ್ಟ ಪರಿಣಾಮ ಬೀರುವುದಿಲ್ಲ. ಗ್ರಹಣದಿಂದ ಯಾರೂ ಭಯಪಡುವುದು ಬೇಡ. ಗಾಳಿಸುದ್ಧಿಗಳಿಗೆ ಕಿವಿಗೊಡದೆ, ಗ್ರಹಣವನ್ನು ಎಲ್ಲರೂ ವೀಕ್ಷಿಸಬಹುದು, ಪ್ರಕೃತಿಯನ್ನು ಆರಾಧಿಸಬಹುದು.

* ಆರ್. ಸೀತಾರಾಮಯ್ಯ, ಶಿವಮೊಗ್ಗ

ಖಗೋಲ ವಿದ್ಯಮಾನದಲ್ಲಿ ಸೂರ್ಯ ಚಂದ್ರ ಮತ್ತು ಭೂಮಿಯ ಸಹವರ್ತನೆಯಿಂದ, ತಮ್ಮದೇ ಆದ, ಚಲನೆಯ ಪಥಗಳನ್ನು ಹೊಂದಿರುವ, ಇವುಗಳ ವಿಶಿಷ್ಟ ಹೊಂದಾಣಿಕೆಯಿಂದಾಗಿ, ನಿರ್ದಿಷ್ಟ ಸ್ಥಳಗಳಲ್ಲಿ, ನಿಶ್ಚಿತ ಸಮಯಕ್ಕೆ, ನೆರಳಿನ ಪರಿಮಾಣಕ್ಕೆ ಅನುಗುಣವಾಗಿ, ಪಾರ್ಶ್ವ, ಕಂಕಣ ಹಾಗೂ ಪೂರ್ಣ ಗ್ರಹಣಗಳು ಸಂಭವಿಸುತ್ತಿರುತ್ತವೆ. ಸೂರ್ಯಗ್ರಹಣ ಅಮಾವಾಸ್ಯೆಯಂದು, ಚಂದ್ರಗ್ರಹಣ ಹುಣ್ಣಿಮೆಯಂದು ಸಂಭವಿಸುತ್ತದೆ.

ಈ ಕಂಕಣ ಸೂರ್ಯ ಗ್ರಹಣವು ಸಾರೋಸ್‌ನ 141ನೇ ಸರಣಿಯಲ್ಲಿ ಬರುವ 70 ಗ್ರಹಣಗಳಲ್ಲಿ 23ನೇ ಗ್ರಹಣವಾಗಿದೆ. ಈ ಗ್ರಹಣವು ಚಂದ್ರನ ಕೋನಿಯಗಾತ್ರ, ಸೂರ್ಯನ ಗಾತ್ರಕ್ಕಿಂತ ಚಿಕ್ಕದಾಗುವ, ಸೂರ್ಯನ ಪ್ರಭಾಗೋಳ ಪೂರ್ತಿಯಾಗಿ ಮುಚ್ಚದೆ, ಬಳೆಯಂತೆ ಕಂಡುಬರುವ, ಕಂಕಣಾಕೃತಿಯಲ್ಲಿ ಕಂಡುಬರುತ್ತದೆ. ಈ ಅಪರೂಪದ ಕಂಕಣಾಕೃತಿ ಸೂರ್ಯಗ್ರಹಣವನ್ನು ನೋಡುವುದು ಅತೀ ವಿರಳ. ಭಾರತದಲ್ಲಿ ಈ ಹಿಂದೆ 20 ಜುಲೈ 1944ರಂದು ಗೋಚರಿಸಿತ್ತು. ಮತ್ತೆ ಭಾರತದಲ್ಲಿ ಮುಂದಿನ ಕಂಕಣಾಕೃತಿ ಸೂರ್ಯಗ್ರಹಣ ವೀಕ್ಷಿಸುವ ಅವಕಾಶ 2019ರ ಡಿಸೆಂಬರ್ 26ರಂದು ದೊರೆಯುತ್ತದೆ. ಆಗ ಕರ್ನಾಟಕ, ತಮಿಳುನಾಡುವಿನಲ್ಲಿ ಕಂಕಣ ಸೂರ್ಯ ಗ್ರಹಣ ಹಾದು ಹೋಗುತ್ತದೆ.

ಇದೇ 2010 ಜನವರಿ 15ರಂದು ಶುಕ್ರವಾರ, ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ. ಭಾರತೀಯ ಕಾಲಮಾನ ಬೆಳೆಗ್ಗೆ 9 ಗಂಟೆ 35 ನಿಮಿಷಕ್ಕೆ ಗ್ರಹಣ ಸ್ಪರ್ಶವಾಗಲಿದ್ದು ಮದ್ಯಾಹ್ನ 3 ಗಂಟೆ 38 ನಿಮಿಷಕ್ಕೆ ಗ್ರಹಣ ಮೋಕ್ಷವಾಗುತ್ತದೆ. ಒಟ್ಟು ಗ್ರಹಣದ ಕಾಲ 6 ಗಂಟೆ 3 ನಿಮಿಷಗಳು. ಗ್ರಹಣದ ಕಂಕಣಾಕೃತಿಯ ಪೂರ್ಣತೆಯ ಅವಧಿ 11 ನಿಮಿಷ 8 ಸೆಕೆಂಡುಗಳು. ಗ್ರಹಣದ ಗ್ರಾಸ ಪ್ರಮಾಣ 0.919 ರಷ್ಟಿರುತ್ತದೆ. ಗ್ರಹಣದ ನೆರಳು ಸುಮಾರು 300 ಕಿ.ಮೀ ವಿಸ್ತಾರದ ಪಥದಲ್ಲಿ ಭೂಮಿಯ ಅರ್ಧಭಾಗದಷ್ಟು ಕ್ರಮಿಸುತ್ತದೆ. ಈ ಗ್ರಹಣವು, ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ ಪ್ರಾರಂಭವಾಗಿ, ಕಾಂಗೋ, ಉಗಾಂಡ, ಕೀನ್ಯಾ, ಸೊಮಾಲಿಯಾ, ಮೂಲಕ ಹಾಯ್ದು, ಹಿಂದೂ ಮಹಾಸಾಗರ ಮೂಲಕ ಭಾರತದ ದಕ್ಷಿಣ ದಂಡೆಯ ಮೇಲೆ, ನೈರುತ್ಯದಿಂದ, ಈಶಾನ್ಯದ ಕಡೆಗೆ ಸಾಗಿ, ಶ್ರೀಲಂಕ, ಬಾಂಗ್ಲಾದೇಶ, ಬರ್ಮ, ಚೀನಾ ಮೇಲೆ ಹಾಯ್ದು ನಂತರ ಗ್ರಹಣ ಮುಕ್ತಾಯವಾಗುತ್ತದೆ.

ಕಂಕಣಾಕೃತಿ ಕಂಡುಬರುವ ಪರಿಪೂರ್ಣ ಪಟ್ಟಿ, ನೈರುತ್ಯದಿಂದ, ಈಶಾನ್ಯದ ಕಡೆಗೆ ದಕ್ಷಿಣಭಾರತದ ಸ್ಥಳಗಳಾದ, ರಾಮೇಶ್ವರಂ, ಕನ್ಯಾಕುಮಾರಿ, ನಾಗರ್‌ಕೋಯಿಲ್, ತಿರುನಲ್ವೇಲಿ, ತಾಂಜಾವೂರ್, ತ್ರೀವೇಂದ್ರಮ್, ಮಧುರೈ ಸ್ಥಳಗಳಲ್ಲಿ ಮುಂದುವರೆಯುತ್ತದೆ. ಈ ಸ್ಥಳಗಳಲ್ಲಿ ಮಾತ್ರ ಕಂಕಣಾಕೃತಿಯ ಸೂರ್ಯನನ್ನು ವೀಕ್ಷಿಸಬಹುದು. ರಾಮೇಶ್ವರಂನಲ್ಲಿ ಕಂಕಣಾಕೃತಿಯ ಮಧ್ಯಕಾಲದ ಪೂರ್ಣತೆಯ ಅವಧಿ 10 ನಿಮಿಷ 11 ಸೆಕೆಂಡುಗಳವರೆಗಿರುತ್ತದೆ. ಇದು ಕಂಕಣಾಕೃತಿ ಗ್ರಹಣ ವೀಕ್ಷಣೆಗೆ ಸೂಕ್ತವಾದ ಸ್ಥಳವಾಗಿದೆ. ಭಾರತದ ಉಳಿದ ಸ್ಥಳಗಳಲ್ಲಿ ಖಂಡಗ್ರಾಸ (ಭಾಗಶಃ) ಸೂರ್ಯ ಗ್ರಹಣ ಗೋಚರಿಸುತ್ತದೆ.

ಭಾರತದಲ್ಲಿ, ಭಾರತೀಯ ಕಾಲಮಾನ ಬೆಳೆಗ್ಗೆ 11 ಗಂಟೆಗೆ ಗ್ರಹಣ ಸ್ಪರ್ಶಕಾಲ ಉಂಟಾಗುತ್ತದೆ. ಮಧ್ಯಾಹ್ನ 1 ಗಂಟೆ 20 ನಿಮಿಷಕ್ಕೆ ಗ್ರಹಣದ ಮಧ್ಯಕಾಲವಾಗಿರುತ್ತದೆ. ಮದ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಮೋಕ್ಷ . ಕರ್ನಾಟಕದಲ್ಲಿ ಆಯಾಸ್ಥಳದಲ್ಲಿ ಅಕ್ಷಾಂಶ ರೇಖಾಂಶಕ್ಕನುಗುಣವಾಗಿ ಗ್ರಹಣದ ಸ್ಪರ್ಶಕಾಲ, ಮೋಕ್ಷಕಾಲ ವ್ಯತ್ಯಾಸವಾಗುತ್ತದೆ.

ಮುಂದಿನ ಭಾಗ : ಕಂಕಣ ಸೂರ್ಯಗ್ರಹಣ ಶಾಂತಿ ಇತ್ಯಾದಿ..

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more