• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು

By *ಸಿದ್ದೇಶ ಕುರ್ಕಿ
|
ಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.

ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ, ಸ್ವ-ನಿಯಂತ್ರಿತದಲ್ಲಿರುವುದು, ನಮ್ಮನ್ನು ನಾವೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಈಕಾರ್ಯವನ್ನು ನೀತಿಪೂರ್ಣದಿಂದ ನಡೆಯುವವನೇ ಮಾಡಬಲ್ಲ ಆತ ಪರರಿಗೆ ಮೋಸ ಮಾಡುವುದಿಲ್ಲ, ಸತ್ಯಮಾರ್ಗವನ್ನು ಬಿಡುವುದಿಲ್ಲ, ಆತ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ಮತ್ತು ಯಾರ ಹಂಗಿಲ್ಲದೆ ಬಾಳುವುದನೇ ಸ್ವರಾಜ್ಯ ಎಂದು ಗಾಂಧಿಯವರು ನಂಬಿದ್ದರು.

ಪ್ರಜಾಪ್ರಭುತ್ವ ಎಂದರೆ ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಅಳಲ್ಪಡುವ ತತ್ವ ಎಂದು. ಅದರೆ ಇಂದಿನ ಪ್ರಜಾಪ್ರಭುತ್ವ (ಡೆಮಾಕ್ರಸಿ ) ಎಂದರೆ ಮತಗಳ ಬೇಟೆಯಾಡುವುದು, ದೇಶದ ಸಂಪನ್ಮೂಲಗಳನ್ನು ಲೂಟಿಮಾಡುವುದು, ರಾಜಕೀಯವಾಗಿ ಕ್ರಿಮಿನಲೈಜು ಮಾಡುವುದು, ಅಮಾಯಕಾರನ್ನು ಶೋಷಿಸುವುದು ಎಂಬುದಾಗಿದೆ. ಏಕೆಂದರೆ ಸಾಕ್ರೆಟಿಸನ ಮಾತು ಕೇಳ್ತಿದ್ದಿವೆ ಆದರೂ ವಿಷ ಹಾಕ್ತಿವಿ.

ಪೈಗಂಬರ ಬಗ್ಗೆ ಮಾತನಾಡುವುದು ದೇಶಾಂತರ ಓಡಿಸುತ್ತೇವೆ. ಕ್ರಿಸ್ತನ ವಿಚಾರ ಹೇಳುವುದು ಶಿಲುಬೆಗೆ ಏರಿಸುವುದು. ಗಾಂಧಜೀಯವರ ಅನುಯಾಯಿಗಳು ಎಂದು ಹೇಳುತ್ತೇವೆ, ನಿರಪಾರಾಧಿಗಳಿಗೆ ಗುಂಡು ಹಾರಿಸೋದು . ರೌಡಿಗಳಿಗೆ ಭೂಗತ ದೊರೆಗಳಿಗೆ ಪೋತ್ಸಾಹ ನೀಡುವುದು, ನಿಷ್ಟಾವಂತ ಪ್ರಾಮಾಣಿಕರನ್ನು ಮೇಲೆ ಏಳದಂತೆ ತುಳಿಯುವುದು , ದೇಶದ್ರೋಹಿಗಳಿಗೆ ಸಹಕಾರ ನೀಡುವಾದಾಗಿದೆ.

ಹಿಂದೆ ದೇಶಕ್ಕೆ ಮಾನ, ಮರ್ಯಾದೆ ಘನತೆ ಗೌರವ, ಪ್ರತಿಷ್ಟೆಗಳಿಗೆ " ಬರ " ಇರಲಿಲ್ಲ ಏಕೆಂದರೆ ದೇಶಕ್ಕಾಗಿ "ನಾನು "ಎಂದು ತಿಳಿದಿದ್ದರು. ಈಗ " ನನಗಾಗಿ" ದೇಶ ಎನ್ನುವ ಭ್ರಷ್ಟರ ಸಂತತಿ ಹೆಚ್ಚಿ, ತನ್ನ ಅಸ್ತಿ,ಕುಟುಂಬಕ್ಕಾಗಿ,ಸಂವಿಧಾನ ( ರಾಜ್ಯ ದೇಶದ) ನೀತಿ ತತ್ವಗಳನ್ನು ಗಾಳಿಗೆ ತೂರಿ, ತಮಗೆ ತೋರಿದಂತೆ ಕಾನೂನು ನೀತಿ ನಿಯಮ ಬದಲಾಗಿ ಇವತ್ತು ನಮ್ಮ ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳು , ನಾಯಕರು ವೋಟಬ್ಯಾಂಕಗಳೆಂದು ಪರಿಗಣಿಸಿ ರಾಜಕೀಯ ಲಾಭ ಗಿಟ್ಟಿಸುವ ದಾರಿಯಲ್ಲಿ ನಡೆದು ಧರ್ಮ , ಜಾತಿ ಪಂಗಡಎಂದು ಸಮಾಜ ಹೊಡೆಯುತ್ತಾ , ಅಸಹಾಯಕರ ಮೇಲೆ ಶೋಷಣೆ ನಿರಂತರವಾಗಿ ಸಾಗಿ. ನಮ್ಮ ದೇಶದಲ್ಲಿ ಈ ಕೆಳಗಿನ ಸಮಸ್ಯೆಗಳು ಕಾಡುತ್ತಿವೆ.

ರಾಜಕೀಯ ಪಕ್ಷಗಳಿಗೆ ದೇಶದ ಪ್ರಗತಿಗಿಂತ ಅಧಿಕಾರ ಹಿಡಿಯುವುದೇ ಮುಖ್ಯವಾಗಿ ಬಿಟ್ಟಿರುವುದರಿಂದ ಆರ್ಧಿಕ ವಿಷಯ ನಿರ್ಲಕ್ಷಕ್ಕೊಳಗಾಗಿ ಭಾಷಣಗಳಲ್ಲಿ ಸುದ್ದಿ ಸಮಚಾರಗಳಲ್ಲಿ ಬಹುತೇಕ ಪಕ್ಷಗಳು ಆರ್ಥಿಕ, ಸಾಮಜಿಕ ಸುಧಾರಣೆಗಳನ್ನು ಪ್ರತಿಪಾದಿಸುತ್ತವೆ. ಆದರೆ ವಾಸ್ತವದಲ್ಲಿ ಆಡಳಿತಾರೂಢ ಪಕ್ಷಗಳಾಗಲಿ ಅಥವಾ ವಿರೋದ ಪಕ್ಷಗಳಾಗಲಿ ಸುಧಾರಣೆಯತ್ತ ಗಮನ ಹರಿಸುತ್ತಿಲ್ಲ.

ನೂರೆಂಟು ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡು , ಒಂದೊಂದು ಪಕ್ಷದ ನಿಲುವುಗಳು ಬೇರೆ ಬೇರೆಯಾಗಿ ದೇಶದ ಏಕತೆಗೆ ದುಡಿಯುವ ಕಾರ್ಯ ಆಗುತ್ತಿಲ್ಲ.ಅಧಿಕಾರದ ದಾಹ ಎಲ್ಲ ಪಕ್ಷಗಳಿಗೆ ಅಂಟಿಕೊಂಡು ರೋಗವಾಗಿ , ಪಕ್ಷಂತಾರಗೊಳ್ಳುತ್ತಿದ್ದರೆ.

ಭಾರತ ಫೆಡರಲ್ ರಾಷ್ಟವೆಂದು ಡಾ.ಬಿ.ಆರ್. ಅಂಬೇಡ್ಕರವರ ನಿಲುವಾಗಿತ್ತು. ಆದರೆ ಸ್ವಾತಂತ್ರ್ಯದ ನಂತರ ಪಕ್ಷಗಳ ವ್ಯವಸ್ಥೆ ಆರೋಗ್ಯ ಪೂರ್ಣವಾಗಿ ಬೆಳೆಯಲಿಲ್ಲ, ರಾಷ್ಟೀಯ ಪಕ್ಷಗಳು ಫೆಡರಲ್ ತತ್ವಗಳನ್ನು ಮೈಗೂಡಿಸಿಕೊಳ್ಳಲಿಲ್ಲ, ಹಾಗಾಗಿ ದೇಶದ ಪರಿಸ್ಥಿತಿ ಹದಗೆಟ್ಟಿದೆ.ರಾಷ್ಟೀಯ ಪಕ್ಷಗಳು ಹೈಕಮಾಂಡ ಪ್ರವೃತಿ ಬೆಳಸಿಕೊಂಡು, ದೇಶದ ಆಗು ಹೋಗುಗಳ ಬಗ್ಗೆ ಚರ್ಚಿಸದೆ, ತಮ್ಮ ಪಕ್ಷಗಳ ನಿಲುವನ್ನು ಅವಲಂಬಿಸಿರುವುದು ದೇಶಕ್ಕೆ ದೊಡ್ಡ ಹೊಡೆತವಾಗಿದೆ.

ದೇಶದ ಪ್ರಗತಿಗಾಗಿ ಅನುಸರಿಸಬೇಕಾದ ನಿಯಮಗಳು

*ಬೆಳೆಯುತ್ತಿರುವ ಜನಸಂಖ್ಯೆಯನ್ನು ಕಡಿಮೆ ಮಾಡಬೇಕಾದರೆ " ಕುಟುಂಬಕ್ಕೆ ಒಂದೇ ಜ್ಯೋತಿ " ಸಾಕು ಚಿಕ್ಕ ಕುಟುಂಬ ಚೊಕ್ಕ ಕುಟುಂಬವೆಂದು ಕಾನೂನು ನಿಯಮ.

*ರಾಜಕಾರಣಿಗಳು , ಆಡಳಿತಧಿಕಾರಿಗಳು, ಸರ್ಕಾರಿ ಕೆಲಸಕ್ಕೆ ಲಂಚ ಪಡೆಯದೆ ಪರಿಶುದ್ದರಾಗಬೇಕು ಆಗ ಭ್ರಷ್ಟಾಚಾರ ನಿರ್ಮೂಲನಗೊಂಡು ದೇಶದ ಆಭಿವೃದ್ದಿಗೆ ಸಹಾಯಕವಾಗಲಿದೆ.

*ಅಮೆರಿಕದ ಅಧ್ಯಕ್ಷಗಿರಿಗೆ ನಿಯಮವಿದ್ದಂತೆ,ನಮ್ಮ ದೇಶದಲ್ಲಿಯೂ ಒಂದೇಬಾರಿ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಹುದ್ದೆಗೆ ಅಧಿಕಾರ ನಿಯಮ.

*ಆರ್ಥಿಕ ಸುಧಾರಣೆಗಾಗಿ ಎಲ್ಲ ಪಕ್ಷಗಳು ಏಕಚಿತ್ತದಿಂದ ಶ್ರಮಿಸಿದರೆ ಭಾರತ ಪ್ರಬಲ ಆರ್ಥಿಕ ಶಕ್ತಿಯನ್ನು ಹೊಂದಿದ ದೇಶವಾಗಿ ಹೊರಹೊಮ್ಮುತ್ತದೆ.

*ಪರರಾಷ್ಟ್ರಗಳಿಂದ ಸಾಲ ಮಾಡುವುದನ್ನು ತಡೆಗಟ್ಟಿ, ರಾಷ್ಟ್ರದ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳುವತ್ತ ಗಮನಹರಿಸಬೇಕು.

*ದೇಶದಲ್ಲಿ ಸಂಯುಕ್ತರಂಗಗಳ ಸರಕಾರ ರಚನೆಯಾಗುತ್ತಿದ್ದು ರಾಜಕೀಯವಾಗಿ ಭಿನ್ನಭಿಪ್ರಾಯಗಳು ಬಂದು ಮಧ್ಯೆ ಸರಕಾರ ಬಿದ್ದು ಮಧ್ಯಂತರ ಚುನಾವಣೆಗಳ ಹಾವಳಿ ಹೆಚ್ಚಿ, ದೇಶದ ಮೇಲೆ ಹಣದ ಹೊರೆ ಬೀಳುತ್ತದೆ ಅದ್ದರಿಂದ ಚುನಾವಣಾ ಆಯೋಗ ಒಂದೆರಡು ರಾಷ್ಟ್ರೀಯ ಪಕ್ಷಗಳಿಗೆ ಮಾತ್ರ ಮನ್ನಣೆ ನೀಡಿ, ಪ್ರಾದೇಶಿಕ ಪಕ್ಷಗಳಿಗೆ ಚುನಾಯಿತರಾದರೆ ನಾಮಪತ್ರದಲ್ಲಿ ಯಾವ ಪಕ್ಷಕ್ಕೆ ಬೆಂಬಲವನ್ನು ನೀಡುತ್ತಾರೆ ಎಂಬುದು ತಿಳಿಸಬೇಕು. ಹಾಗೆಯೇ ಬೆಂಬಲ ವ್ಯಕ್ತ ಪಡಿಸಿದ ಪಕ್ಷಕ್ಕೆ ಐದು ವರ್ಷ ಅವಧಿಯವರಗೂ ಬೇರೆ ಪಕ್ಷಗಳಿಗೆ ಬೆಂಬಲಿಸುವಂತಿಲ್ಲವೆಂದು ಆಯೋಗ ನಿಯಮ ಮಾಡಬೇಕು.

*ಜಾತಿ ಭೇಧ ಎನ್ನದೆ ಎಲ್ಲರಿಗೂ ಒಂದೇ ಕಾನೂನು ಮಾಡಿ ಆರ್ಥಿಕವಾಗಿ ಹಿಂದುಳಿದಂಥವರಿಗೆ ಮಾತ್ರ ಮೀಸಲಾತಿ ಕೊಡುವಂತಾಗಬೇಕು.

*ಒಳ್ಳೆಯ ತಂತ್ರಜ್ಞ್ಞಾರಿಗೆ, ವಿಜ್ಞಾನಿಗಳಿಗೆ,ಆರ್ಥಶಾಸ್ತ್ರಜ್ಞರಿಗೆ ಸರಕಾರ ಪೋತ್ಸಹ ನೀಡಿ ಸಂಶೋದನೆ ಮಾಡಲು ಅವಕಾಶ ಮಾಡಿಕೊಡಬೇಕು.

*ಕೇವಲ ವೋಟಬ್ಯಾಂಕಗೋಸ್ಕರ ಜಾತಿ ಬೀಜ ಬಿತ್ತದೆ ಸರ್ವರಿಗೂ ಸಮನಾದ ಹಕ್ಕನ್ನ ನೀಡಬೇಕು.

*ಭ್ರಷ್ಟ ರಾಜಕಾರಣಿ , ಅಧಿಕಾರಿಗಳಿಗೆ ಶಿಕ್ಷೆ ನೀಡುವಂತಯಾಗಬೇಕು.

*ಕ್ರಿಮಿನಲ್‌ಗಳಿಗೆ ಚುನಾವಣಿಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಾರದು.

*ಭಯೋತ್ಪಾದನೆ ನಿರ್ಮೂಲನಕ್ಕೆ ಎಲ್ಲ ರಾಜಕೀಯ ಪಕ್ಷಗಳು ,ಪಕ್ಷ ಬೇಧ ಮರೆತು ಒಂದುಗೂಡಿಯಾವ ವ್ಯಕ್ತಿಯ ಭಯೋತ್ಪಾದನೆಯಲ್ಲಿ ತೊಡಗುತ್ತಾನು ಆತಂಹವನಿಗೆ ಪ್ರೋತ್ಸಹ ನೀಡದೆ ವಿಚಾರಣೆಯಲೇ ಕಾಲ ಕಳೆಯದೇ ಗಲ್ಲು ಶಿಕ್ಷೆಗೆ ಗುರಿ ಪಡಿಸಲು ಒಮ್ಮತದ ನಿರ್ಧಾರ ಕೈಗೊಳ್ಳಬೇಕು.

ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ, ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more