• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಧ್ಯಮ ಮತ್ತು ವಿಶ್ವಾಸಾರ್ಹತೆ

By ಬರಹಗಾರ : ಶೇಷಾದ್ರಿ
|

ಸುದ್ದಿ ಪ್ರಕಟಿಸುವಲ್ಲಿ ತಾನೇ ಮೊದಲಿಗನಾಗಬೇಕೆಂಬ competetive pressure ನಿಂದ ಮತ್ತು/ಅಥವಾ ಯಜಮಾನನ ಪ್ರೇರಣೆ/ಒತ್ತಡದಿಂದ ನ್ಯೂಯಾರ್ಕ್‌ ಪೋಸ್ಟ್‌ ಸುಳ್ಳು ಸುದ್ದಿ ಪ್ರಕಟಿಸಿದರೆ, ಕೆಲವು ಲೇಖಕರು ತಮ್ಮ ವಾದಗಳಿಗೆ, ತತ್ವಗಳಿಗೆ, ರಾಜಕೀಯ ಧೋರಣೆಗಳಿಗೆ ಬದ್ಧವಾದದ್ದೆಲ್ಲಾ ಸತ್ಯ, ವಿರುದ್ಧವಾದದ್ದೆಲ್ಲಾ ಮಿಥ್ಯ ಎಂಬ ಮನೋಭಾವನೆಯಿಂದ ಓದುಗರನ್ನು ತಪ್ಪುದಾರಿಗೆಳೆಯುತ್ತಾರೆ. ಅಂಕಣಕಾರರಲ್ಲಿ ಇಂತಹ ಮನೋಭಾವನೆ ಸಾಮಾನ್ಯವಾಗಿ ಕಾಣಸಿಗುವುದಾದರೂ, ಕೆಲವೊಮ್ಮೆ ಸುದ್ದಿಗಳಲ್ಲೂ ಕಾಣುತ್ತದೆ. ಉದಾಹರಣೆಗೆ, thatskannada.com ಸಂಪಾದಕರಲ್ಲಿ ಮತ್ತು ಹಲವಾರು ಲೇಖಕರಲ್ಲಿ ಅಮೆರಿಕದ ಅಧ್ಯಕ್ಷ ಬುಶ್‌ ಬಗ್ಗೆ ಅಂತಹ ಒಲವೇನೂ ಇಲ್ಲ. ಈ ಧೋರಣೆ, ಮೈಕೇಲ್‌ ಮೂರ್‌ನ 'ಸಾಕ್ಷ್ಯಚಿತ್ರ"ದ ಕುರಿತಾದ ಈ ವರದಿಯಲ್ಲಿ ಎದ್ದು ಕಾಣುತ್ತದೆ. ಈ ಲೇಖನದ ಶೀರ್ಷಿಕೆಯೇ ವರದಿಗಾರರ/ಸಂಪಾದಕರ ಒಲವು ಯಾರಪರವಾಗಿದೆ ಎಂದು ನಿಚ್ಚಳವಾಗಿ ಸಾರುತ್ತದೆ: 'ಬುಶ್‌ ಆಡಳಿತದ ಕತ್ತಲನ್ನು ಬೆತ್ತಲು ಮಾಡಿದ...." ಅರೆಸತ್ಯ, innuendo ತುಂಬಿದ ಈ ಚಿತ್ರವನ್ನು ಪರಮ ಸತ್ಯವೆಂಬಂತೆ ಬಿಂಬಿಸುವ ಈ ಲೇಖನದಲ್ಲಿ , ಆತನ ಕುರಿತಾದ ಕನಿಷ್ಠ ಪರಿಚಯವೂ ಇಲ್ಲ.

ಮೈಕೇಲ್‌ ಮೂರ್‌, ಒಬ್ಬ ನಿರ್ಲಿಪ್ತ ರಾಜಕೀಯ ವೀಕ್ಷಕನಲ್ಲ. ಎಡಪಂಥೀಯ ತತ್ವಗಳುಳ್ಳ ಈತ ಹಲವಾರು ವರ್ಷಗಳಿಂದ ರಿಪಬ್ಲಿಕನ್‌ ಪಕ್ಷದ ವಿರೋಧಿ. ತನ್ನ ವಾದಕ್ಕೆ ಬೇಕಾದಷ್ಟೇ ವಾಸ್ತವವನ್ನು ತನ್ನ 'ಸಾಕ್ಷ್ಯ"ಚಿತ್ರಗಳಲ್ಲಿ ತೋರಿಸುವ ಈತ, ತನ್ನ ವಾದಕ್ಕೆ ಅಡ್ಡ ಬರುವ ಸತ್ಯಗಳನ್ನೆಲ್ಲಾ ಪಕ್ಕಕ್ಕಿಡುತ್ತಾನೆ. ಹೋಗಲಿ, ಈ ಲೇಖನದಲ್ಲಿ ಉಲ್ಲೇಖಿಸುವ (ಮೂರ್‌ ತನ್ನ ಚಿತ್ರದಲ್ಲಿ 'ಬೆತ್ತಲೆ" ಮಾಡಿರುವ) ಆರೋಪಗಳಲ್ಲಿ ಹುರುಳಿದೆಯೇ?! 'ಸೆಪ್ಟೆಂಬರ್‌ 11 ಘಟನೆ ನಡೆದ ಬೆರಳೆಣಿಕೆ ದಿನಗಳ ಒಳಗೆ.... ಅಮೆರಿಕದಿಂದ 7 ವಿಮಾನಗಳಲ್ಲಿ ಒಸಾಮ ಬಿನ್‌ ಲಾಡೆನ್‌ ಸೋದರ ಸಂಬಂಧಿಕರು ಹೋಗುತ್ತಾರೆ. ... ಎಫ್‌ಬಿಐ ಇದನ್ನು ಪ್ರಶ್ನಿಸುವುದಿಲ್ಲ." ಈ ವಿಷಯದ ಕುರಿತು ಜೂನ್‌ 20, ಭಾನುವಾರದ ನ್ಯೂಯಾರ್ಕ್‌ ಟೈಮ್ಸ್‌ ವರದಿ ಹೀಗಿದೆ :

... But while the film clearly suggests that the flights occurred at a time when all air traffic was grounded immediately after the attacks ("Even Ricky Martin couldn't fly," Mr. Moore says over video of the singer wandering in an airport lobby), the Sept. 11 commission said in a report this April that there was "no credible evidence that any chartered flights of Saudi Arabian nationals departed the United States before the reopening of national airspace" and that the F.B.I. had concluded that no one aboard the flights was involved in Sept. 11.

ಹೋಗಲಿ, ಬಿನ್‌ ಲಾಡೆನ್‌ ಸೋದರ ಸಂಬಂಧಿಗಳ ವಿಮಾನ ಯಾನಕ್ಕೆ ಅನುಮತಿ ಇತ್ತವರು ಯಾರು? ರಿಚರ್ಡ್‌ ಕ್ಲಾರ್ಕ್‌ ! ಈಗ ಬುಶ್‌ ವಿರೋಧಿಯಾಗಿರುವ ಈತ, ಅದರ ಹೊಣೆ ಸಂಪೂರ್ಣ ತನ್ನದೆಂದೆನ್ನುತ್ತಾನೆ. ಆದರೆ, ಮೈಕೇಲ್‌ ಮೂರನ ಚಿತ್ರದಲ್ಲಿ, ರಿಚರ್ಡ್‌ ಕ್ಲಾರ್ಕ್‌ ಒಬ್ಬ ಹೀರೊ! ಈ ಚಿತ್ರದಲ್ಲಿ (ಮತ್ತು ಲೇಖನದಲ್ಲಿ) ಬಿನ್‌ ಲ್ಯಾಡೆನ್‌ ಕುಟುಂಬ ಮತ್ತು ಬುಶ್‌ ಕುಟುಂಬದ ನಡುವಿನ 'ನಂಟಿನ" ಪ್ರಸ್ತಾಪವಿದೆ. ಈ 'ನಂಟು" ಅಂತಹ ಆಶ್ಚರ್ಯಕರವಾದದ್ದೇನೂ ಅಲ್ಲ. ಬುಶ್‌ ಕುಟುಂಬ ಪೆಟ್ರೋಲಿಯಂ ಉದ್ಯಮದಲ್ಲಿ ಹಲವಾರು ವರ್ಷಗಳಿಂದ ತೊಡಗಿದೆ. ಬಿನ್‌ ಲ್ಯಾಡೆನ್‌ ಕುಟುಂಬ, ಸೌದಿ ಅರೇಬಿಯದ ಪ್ರಮುಖ ಉದ್ದಿಮೆದಾರ-ಕುಟುಂಬಗಳಲ್ಲಿ ಒಂದು. ಇಂತಹ ಎರಡು ಕುಟುಂಬಗಳ ನಡುವೆ ನಂಟಿದ್ದರೆ, ಅದರಲ್ಲಿ 'ನಂಬಲಾರದಂತಹ" ಸಂಗತಿಯೇನೂ ಇಲ್ಲ. ತಪ್ಪೂ ಇಲ್ಲ. ಒಸಾಮನ ಸೋದರನಾಗಲೀ, ಸೋದರ ಸಂಬಂಧಿಗಳಾಗಲೀ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವುದಕ್ಕೆ ಸಾಕ್ಷ್ಯಾಧಾರಗಳು ಮೊದಲೇ ಇಲ್ಲ. ಹೀಗಿರುವಾಗ, ಈ ನಂಟಿಗೆ ಕಾನ್ಸ್ಪಿರಸಿಯ ಬಣ್ಣ ಕೊಡುವುದು ನಿಜಕ್ಕೂ ಸಲ್ಲ.

ವರದಿಗಾರರು 'ಸ್ಟೆನೊಗ್ರಾಫರು"ಗಳಾಗಿದ್ದರೆ ಸಾಕೆ ?

Credibility and Mass Media2003ರ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಹಿರಿಯ ಸಮಾಜವಾದಿ ಮುಖಂಡ ಚಂದ್ರಜಿತ್‌ ಯಾದವರ 'ಸೆಂಟರ್‌ ಫಾರ್‌ ಸೋಷಿಯಲ್‌ ಜಸ್ಟಿಸ್‌" ಮತ್ತು ಅಮೆರಿಕದ ಲಿಂಡನ್‌ ಲಾರೂಷ್‌ ನಾಯಕತ್ವದ 'ಷಿಲ್ಲರ್‌ ಇನ್ಸ್ಟಿಟ್ಯೂಟ್‌" ಆಶ್ರಯದಲ್ಲಿ ಒಂದು ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ, ಲಾರೂಷ್‌ನೊಂದಿಗೆ ಭಾರತದ ಮತ್ತು ಕರ್ನಾಟಕದ ಹಲವಾರು ಪ್ರಮುಖ ರಾಜಕೀಯ ನಾಯಕರು ಮಂಚವನ್ನೇರಿ ಭಾಷಣ ನೀಡಿದರು. ಈ ಸಮ್ಮೇಳನದ ಕುರಿತು ಸಚಿತ್ರ ವರದಿಗಳು ಭಾರತದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಪ್ರಕಟವಾದವು. ಈ ವರದಿಗಳ ಪ್ರಕಾರ ಲಾರೂಷ್‌ ಅಮೆರಿಕದ ಅಧ್ಯಕ್ಷ ಪದವಿಗೆ ಸೆಣಸುತ್ತಿರುವ ಡೆಮೊಕ್ರಾಟಿಕ್‌ ಪಕ್ಷದ ಅಭ್ಯರ್ಥಿಗಳಲ್ಲಿ ಒಬ್ಬ ಮತ್ತು ಅರ್ಥಶಾಸ್ತ್ರಜ್ಞ.

ಆದರೆ, ಈ ಲಿಂಡನ್‌ ಲಾರೂಷ್‌ ನಿಜಕ್ಕೂ ಯಾರು?! ಈತ ನಮ್ಮ ಹೊಟ್ಟೆಪಕ್ಷದ ರಂಗಸ್ವಾಮಿಯವರಂತೆ ಚುನಾವಣೆ ಬಂದಾಗೆಲ್ಲಾ ತನ್ನ ನಾಮಪತ್ರವನ್ನು ಸಲ್ಲಿಸುವ ಅವ್ಯಾಹತ ಅಭ್ಯರ್ಥಿ. ತನ್ನ ಸಂಘ ಸಂಸ್ಥೆಗಳನ್ನು cult ನಂತೆ ಚಲಾಯಿಸುವ ಈತನನ್ನು ಅಮೆರಿಕದ ಯಾವುದೇ main stream ಸುದ್ದಿ ಮಾಧ್ಯಮಗಳೂ ಸೀರಿಯಸ್ಸಾಗಿ ಪರಿಗಣಿಸುವುದಿಲ್ಲ. ಡೆಮೊಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗುವುದಿರಲಿ, ಡೆಮೊಕ್ರಟಿಕ್‌ ಪಕ್ಷ ಈತನನ್ನು ಪ್ರೈಮರಿ ಚುನಾವಣೆಗಳ ಮುಂಚಿನ ಚರ್ಚೆಗಳಲ್ಲಿ ಭಾಗವಹಿಸಲು ಸಹ ಬಿಡಲಿಲ್ಲ. ಅಮೆರಿಕದ ಅಧ್ಯಕ್ಷ ಪದವಿಯನ್ನೇರುವ ಕನಸು ಕಾಣುವ ಈತ, ಅಧ್ಯಕ್ಷ ಚುನಾವಣೆಯಲ್ಲಿ ಮತ ಚಲಾಯಿಸಲು ಸಹ ಲಾಯಖ್‌ ಇಲ್ಲ ; ಮೋಸ, ಪಿತೂರಿಗಳಲ್ಲಿ ತೊಡಗಿ, ಮುದುಕರಿಂದ ಹಣವಂಚಿಸಿ ಐದು ವರ್ಷ ಸೆರೆವಾಸವನ್ನೂ ಅನುಭವಿಸಿರುವ ಇವನು, ತನ್ನ ರಾಜ್ಯವಾದ ವರ್ಜೀನಿಯದಲ್ಲಿ ಮತ ಚಲಾಯಿಸುವ ಹಕ್ಕನ್ನೇ ಕಳೆದುಕೊಂಡಿದ್ದಾನೆ. ಅರ್ಥಶಾಸ್ತ್ರದಲ್ಲಿ ಯಾವುದೇ ವಿಧವಾದ ವಿಧ್ಯುಕ್ತ ಶಿಕ್ಷಣ ಅಥವಾ ಪರಿಣಿತಿಯನ್ನು ಪಡೆಯದ ಈತ, ಒಬ್ಬ self proclaimed economist. ಕಾನ್ಸ್ಪಿರಸಿ ಥಿಯರಿಗಳಿಗೆ ಕುಪ್ರಸಿದ್ಧನಾದ ಈತ ಅರ್ಥಶಾಸ್ತ್ರದ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಾನಾದರೂ, ಅವುಗಳನ್ನು ಈತನ ಹಿಂಬಾಲಕರನ್ನು ಬಿಟ್ಟರೆ ಉಳಿದವರಾರೂ ಸೀರಿಯಸ್ಸಾಗಿ ಪರಿಗಣಿಸಿಲ್ಲ.

ಹೋಗಲಿ, ಬೆಂಗಳೂರಿನಲ್ಲಿ ಈತ ಹೇಳಿದ್ದಾದರೂ ಏನು? ನಮ್ಮ ಬುದ್ಧಿಜೀವಿಗಳಿಗೆ, ಸಮಾಜವಾದಿಗಳಿಗೆ ಪ್ರಿಯವಾದ ಅಮೆರಿಕ-ವಿರೋಧಿ, ಇರಾಕ್‌ ಯುದ್ಧ ವಿರೋಧಿ ಮತ್ತು ಬುಶ್‌ ವಿರೋಧಿ ಹೇಳಿಕೆಗಳ ಜೊತೆಗೇ ಈ so called economist ಅಮೆರಿಕದ ಎಕಾನಮಿ ಕುರಿತು ಸಹ ಮಾತನಾಡಿದ. ಒನ್ ಇಂಡಿಯಾದಲ್ಲಿಿ ಪ್ರಕಟವಾದ ಪಿ.ಟಿ.ಐ. ವರದಿಯ ಪ್ರಕಾರ ಅವನು ಹೇಳಿದ ಮಾತಿದು: ಅಮೆರಿಕದ ಎಕಾನಮಿ seeing an hyper inflation (sic). ಆದರೆ, ವಾಸ್ತವದಲ್ಲಿ ಕಳೆದ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ಇರದ ಒಂದು problem ಎಂದರೆ inflation. ಹೋದ ವರ್ಷವಂತೂ, inflation ಮಾತಿರಲಿ ಹಲವಾರು ಅರ್ಥಶಾಸ್ತ್ರಜ್ಞರು deflation ಭಯ ವ್ಯಕ್ತಪಡಿಸುತ್ತಿದ್ದರು.

ಇಂತಹ ಮಹಾನುಭಾವನ ಆಶ್ರಯದಲ್ಲಿ ನಮ್ಮ ರಾಜಕೀಯ ನಾಯಕರು ಸಭೆ ಸೇರಿದ್ದಕ್ಕೆ ನನಗೆ ಆಶ್ಚರ್ಯವೇನೂ ಆಗುವುದಿಲ್ಲ. (ಇಂದಿನ ಮುಖ್ಯಮಂತ್ರಿ ಧರಂಸಿಂಗ್‌ ಜೊತೆಗೆ, ಆಗ ಸಚಿವರಾಗಿದ್ದ ಕೆ.ಹೆಚ್‌.ರಂಗನಾಥ್‌, ಡಿ.ಕೆ.ಶಿವಕುಮಾರ್‌, ಎ.ಕೃಷ್ಣಪ್ಪ, ಸಂಸದ್‌ ಸದಸ್ಯ ಜಾಫರ್‌ ಷರೀಫ್‌ ಮುಂತಾದವರು ಇದರಲ್ಲಿ ಭಾಗವಹಿಸಿದ್ದರು. ಲಾರೂಷ್‌ನ ಪರಿಚಯ ಭಾಷಣಮಾಡಿದವರು ಇಂದಿನ ವಿದೇಶಾಂಗ ಸಚಿವ ನಟವರ್‌ ಸಿಂಗ್‌!) ಆದರೆ, ಸ್ಟೆನೊಗ್ರಾಫರುಗಳಂತೆ ಲಾರೂಷ್‌ನ ಹೇಳಿಕೆಗಳನ್ನು ಚಾಚೂತಪ್ಪದೆ ವರದಿಮಾಡಿದ ವರದಿಗಾರರಲ್ಲಿ ಒಬ್ಬನಾದರೂ ಈತನ (ಅಂತಹ ರಹಸ್ಯವೇನೂ ಅಲ್ಲದ) ಒಳಗುಟ್ಟನ್ನು ಬಯಲು ಮಾಡದೇ ಇದ್ದಿದ್ದಕ್ಕೆ ಖೇದವಾಗುತ್ತದೆ. ಈತನ ಹಿಂದಿನ ಚರಿತ್ರೆ ತಿಳಿದಿದ್ದರೆ ನಮ್ಮ ರಾಜಕಾರಣಿಗಳು ಇವನೊಡನೆ ಒಡನಾಟವಾಡುತ್ತಿರಲಿಲ್ಲವೇನೋ...

ಅಂಕಣಕಾರರಿಗೆ ತಮ್ಮ ಲೇಖನಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಕೆಲವೊಮ್ಮೆ ಅತ್ಯುಕ್ತಿ - ಉತ್ಪ್ರೇಕ್ಷೆಗಳನ್ನು ಉಪಯೋಗಿಸುವ (ವರದಿಗಾರರಿಗಿಲ್ಲದ) ಸ್ವಾತಂತ್ರ್ಯ ಇರುತ್ತದೆ. ಅಮೆರಿಕನ್ನರು ಇತರೆ ದೇಶಿಗರಿಗೆ ಹೋಲಿಸಿದರೆ ನ್ಯಾಯಲಯದ ಕಟಕಟೆಯನ್ನು ಏರುವುದರಲ್ಲಿ ಮೊದಲಿಗರು ಎಂಬುದರಲ್ಲಿ ನಿಜವಿರಬಹುದು. (ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಮಾನ ನೀಡುವ ಅಮೆರಿಕನ್‌ ನ್ಯಾಯಾಂಗದ ಮೇಲಿನ ನಂಬಿಕೆಯೇ ಇದಕ್ಕೆ ಕಾರಣವಿರಬಹುದೇ?! ಇರಲಿ. ಆ ಚರ್ಚೆ ಇಲ್ಲಿ ಅಪ್ರಸ್ತುತ.) ಒಬ್ಬ ಅಂಕಣಕಾರ, ಇಂತಹ ಮೊಕದ್ದಮೆ-ಸಂಸ್ಕೃತಿ ವಿಚಾರವಾಗಿ ಬರೆಯುತ್ತಾ , ತನ್ನ ಅಭಿಪ್ರಾಯವನ್ನು ಒತ್ತಿ ಹೇಳಲು ಕೊಂಚ ಉತ್ಪ್ರೇಕ್ಷೆಯನ್ನು ಉಪಯೋಗಿಸಿದರೆ, ನನ್ನ ಮಟ್ಟಿಗೆ ಅದು ಅಂತಹ ತಪ್ಪೇನೂ ಅಲ್ಲ. ಉದಾಹರಣೆಗೆ, ಈ ಅಂಕಣಕಾರ, 'ಅಮೆರಿಕದಲ್ಲಿ ಅಳುತ್ತಿರುವ ಒಬ್ಬಳು ಹುಡುಗಿಯನ್ನು, ನೀನೇಕೆ ಅಳುತ್ತಿರುವೆ ಎಂದು ವಿಚಾರಿಸಿದರೆ, ಅದಕ್ಕೇ ಅವಳು sue ಮಾಡಿಬಿಡುತ್ತಾಳೋ ಏನೋ.." ಎಂದು ಬರೆದರೆ ಅದರಲ್ಲಿ ಅಂತಹ ದೊಡ್ಡ ತಪ್ಪಿಲ್ಲ. ಆದರೆ, ಇಂತಹ ಉತ್ಪ್ರೇಕ್ಷೆಯನ್ನೇ ನಿಜವೆಂದು ನಂಬಿ ಬರೆಯುವ ಮುನ್ನ, ಅಮೆರಿಕನ್ನರನ್ನು 'ತಿಕ್ಕಲುಗಳೆಂದು" ಜರೆಯುವ ಮುನ್ನ ಇಂತಹ ನಂಬಿಕೆಯ (ಅಥವಾ ಭಯದ) ಹಿಂದಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಡವೇ? ನಿಜವಾಗಿಯೂ ಇಂತಹ ಮೊಕದ್ದಮೆ ಹೂಡಿರುವ ನಿದರ್ಶನವಿದೆಯೇ? ಮುಖ ಸಪ್ಪಗಿರುವವರನ್ನು, ಅಳುತ್ತಿರುವವರನ್ನು, ಕೆಮ್ಮುತ್ತಿರುವವರನ್ನು ಅಪರಿಚಿತರು Are you OK? ಎಂದು ಕೇಳುವುದು ಅಮೆರಿಕದಲ್ಲಿ ಸಾಮಾನ್ಯ ದೃಶ್ಯವಲ್ಲವೇ? ವಾಸ್ತವದಲ್ಲಿ, Are you OK? ಎಂಬ ವಾಕ್ಯ ಅಮೆರಿಕದಲ್ಲಿ ಅಪರಿಚಿತರಲ್ಲೂ ಕೇಳಿಬರುವ ಅತೀ ಸಾಮಾನ್ಯ ವಾಕ್ಯಗಳಲ್ಲಿ ಒಂದಲ್ಲವೇ ? ಹಾಗಿದ್ದಮೇಲೆ, ಈ 'ತಿಕ್ಕಲುಗಳು" ಮೊಕದ್ದಮೆ ಹೂಡಿರುವುದಕ್ಕೆ ಹಲವಾರು ನಿದರ್ಶನಗಳು ಇರಲೇ ಬೇಕಲ್ಲವೇ?

'ತಿಕ್ಕಲುಗಳು" ಯಾವ ದೇಶದಲ್ಲಿ ಇರುವುದಿಲ್ಲ ? ಚಿತ್ರತಾರೆ ಶ್ರೀದೇವಿ, ಪ್ರಿಯಾಂಕ ಗಾಂಧಿಯವರನ್ನು ತನ್ನ ಹೆಂಡತಿಯರೆಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾತನ ನೆನಪಿಲ್ಲವೇ? ಒಬ್ಬ ಅಮೆರಿಕನ್‌ ಅಂಕಣಕಾರ ಇಂತಹ ಒಂದು ಪ್ರಸಂಗವನ್ನು ಸರ್ವೇಸಾಮಾನ್ಯವೆಂದು ಬಿಂಬಿಸಿ That's India ಎಂದರೆ ಓದುಗನು ಈ ಅಂಕಣಕಾರನಲ್ಲಿ ವಿಶ್ವಾಸವಿಡಬೇಕೆ? ಅಮೆರಿಕನ್ನರನ್ನು 'ತಿಕ್ಕಲುಗಳೆಂದು" ಕರೆದು, ಅವರನ್ನು 'ಹಿಟ್ಲರ್‌ ಆರಾಧಕ ನಾಜಿಗಳಿಗೆ" ಹೋಲಿಸಿ, ಕೊನೆಗೆ That's America ಎಂದೆನ್ನುವ ನಾಗತಿಹಳ್ಳಿ ಚಂದ್ರಶೇಖರರನ್ನು ಅಮೆರಿಕದಲ್ಲಿ ನೆಲೆಸಿರುವ, ಅದರ ಪರಿಚಯವಿರುವ ಓದುಗ ನಂಬುತ್ತಾನೆಯೇ? ಕೆಲವೊಮ್ಮೆ ಲೇಖಕನ ಅತಿ ಸಣ್ಣ ತಪ್ಪೂ ಸಹ ಓದುಗನ ವಿಶ್ವಾಸವನ್ನು ಪೂರ್ಣವಾಗಿ ಪಡೆಯುವಲ್ಲಿ ಅಡ್ಡವಾಗುತ್ತದೆ. ಉದಾಹರಣೆಗೆ, ಒಬ್ಬ ಸಾಹಿತಿಯ ಪರಿಚಯ ಮಾಡಿಕೊಡುವ ಲೇಖನದಲ್ಲಿ , ಆ ಸಾಹಿತಿಯ ಹೆಸರೇ ತಪ್ಪಾಗಿದ್ದರೇ ಹೇಗೆ? ಓದುಗನ ಕುರಿತು ಅಷ್ಟಾದರೂ ಹೊಣೆ ಬೇಡವೇ?

ಜಾನಕಿಯವರು ತಮ್ಮ 'ತೆರೆದ ಬಾಗಿಲು" ಅಂಕಣದಲ್ಲಿ ಬರೆಯುವ ನೊಬೆಲ್‌ ಪ್ರಶಸ್ತಿ ವಿಜೇತ ಸಾಹಿತಿಗಳ ಪರಿಚಯ ಲೇಖನಗಳನ್ನು ತಪ್ಪದೆ ಓದುತ್ತಿದ್ದ ನನಗೆ, 'ಜೋಸ್‌ ಇಚಗಾರೆ" ಕುರಿತಾದ ಲೇಖನ ಓದಿದ ತಕ್ಷಣ ಜಾನಕಿಯವರಲ್ಲಿ ವಿಶ್ವಾಸ ಕಡಿಮೆಯಾಯಿತು. 'ಜೋಸ್‌ ಇಚಗಾರೆ"ಯ (JosÉ Echegaray) ಹೆಸರು 'ಹೋಸೇ ಎಚೆಗಾರೈ". ಕೈ ಬೆರಳುಗಳ ತುದಿಯಲ್ಲೇ ಮಾಹಿತಿ ದೊರೆಯುವ ಈ ಇಂಟರ್‌ನೆಟ್‌ ಯುಗದಲ್ಲಿ ಇಂತಹ ತಪ್ಪುಗಳಾದಾಗ ಲೇಖಕನ credibility ಕುಂದುತ್ತದೆ. ಸಹಸ್ರಾರು ಓದುಗರು ಓದುವ ಅಂಕಣದಲ್ಲಿ ಇಂತಹ ತಪ್ಪುಗಳು ಕಂಡುಬಂದಾಗ ಈ ಲೇಖಕ ಓದುಗರನ್ನು ಹಗುರವಾಗಿ ಪರಿಗಣಿಸಿದ್ದಾನೇನೋ ಅನ್ನಿಸುತ್ತದೆ. ಈ ಲೇಖಕ ತನ್ನ ಹಗುರ ಪ್ರವೃತ್ತಿಯಿಂದ ತನ್ನ ಉಳಿದ ಲೇಖನಗಳಲ್ಲೂ ಇಂತಹುದೇ ತಪ್ಪು ಮಾಹಿತಿಗಳನ್ನು ನೀಡಿರಬಹುದೇ ಎಂಬ ಅನುಮಾನವಾಗುತ್ತದೆ.

ಸಂಪಾದಕನೇ ಅಂಕಣಕಾರನಾದರೆ.....

"ವಿಜಯ ಕರ್ನಾಟಕ" ಇಂದು ಕನ್ನಡದ ನಂ. 1 ದಿನಪತ್ರಿಕೆ. ಲಕ್ಷಾಂತರ ಓದುಗರಿರುವ ಈ ಪತ್ರಿಕೆಯ ವರದಿಗಾರರ/ಲೇಖಕರ ಹೊಣೆ ಅಪಾರ. ಇಂತಹ ಪತ್ರಿಕೆಯ ಸಂಪಾದಿಸುವ ಹೊಣೆ ಅದಕ್ಕಿಂತ ಹೆಚ್ಚು. ವಿಶ್ವೇಶ್ವರ ಭಟ್‌ ತಮ್ಮ "ವಿಜಯ ಕರ್ನಾಟಕ"ದಲ್ಲಿ ಈ ಎರಡೂ ಹೊಣೆಗಳನ್ನೂ ಒಟ್ಟಿಗೆ ಹೊತ್ತಿದ್ದಾರೆ. ಹೀಗಾಗಿ, ಅವರ ಲೇಖನಗಳಲ್ಲಿ ತಪ್ಪಿದ್ದರೆ ಅದು ಅವರ ಪತ್ರಿಕೆಯ ಕ್ರೆಡಿಬಿಲಿಟಿ ಕಡಿಮೆ ಮಾಡುವುದರಲ್ಲಿ ಸಂದೇಹವೇ ಇಲ್ಲ. ಲೈಂಗಿಕ ಹಗರಣದಲ್ಲಿ ಸಿಲುಕಿದ ಕ್ಲಿಂಟನ್‌ ವಿಶ್ವಸಂಸ್ಥೆಯ AIDS ಅಭಿಯಾನದ ರಾಯಭಾರಿಯಾಗಿರುವುದು ಭಟ್ಟರ ಅಭಿಪ್ರಾಯದಲ್ಲಿ 'ಶುದ್ಧ ನಾನ್‌ಸೆನ್ಸ್‌". ಈ ಅಭಿಪ್ರಾಯವನ್ನು ಹಲವರು ಒಪ್ಪಬಹುದು, ಒಪ್ಪದಿದ್ದವರು 'AIDS ಕೇವಲ ಲೈಂಗಿಕ ಸಂಬಂಧಗಳಿಂದ ಮಾತ್ರ ಹರಡುವಂತಹುದಲ್ಲ. ಜೊತೆಗೆ, ಕ್ಲಿಂಟನ್‌ ಖುದ್ದಾಗಿ ಮತ್ತು ತನ್ನ ಪ್ರತಿಷ್ಠಾನದ ಮೂಲಕ ಬಡ ರಾಷ್ಟ್ರಗಳಲ್ಲಿ ಈಗಾಗಲೇ ಈ ಮಾರಿಗೆ ತುತ್ತಾಗಿರುವವರ ಪರವಾಗಿ ಹಲವಾರು ಕಾರ್ಯಗಳಲ್ಲಿ ನಿರತನಾಗಿದ್ದಾನೆ. ಆದ್ದರಿಂದ, ಕ್ಲಿಂಟನ್‌ನನ್ನು ವಿಶ್ವಸಂಸ್ಥೆ ಆಯ್ಕೆಮಾಡಿದ್ದರಲ್ಲಿ ತಪ್ಪೇನೂ ಇಲ್ಲ" ಎಂದು ವಾದಿಸಬಹುದು. ಅಭಿಪ್ರಾಯಗಳು ಚರ್ಚಾಸ್ಪದ; facts ಗಳು ಅಲ್ಲ. ಈ ಲೇಖನದಲ್ಲಿ ಕ್ಲಿಂಟನ್‌, ಮೋನಿಕ ಲೆವಿನ್‌ಸ್ಕಿ ಕುರಿತು ಅವರು ಬರೆದಿರುವ ಹಲವಾರು ಸಂಗತಿಗಳು ಆಧಾರರಹಿತ.

'... ಮೋನಿಕಾ ಲೆವಿನ್‌ಸ್ಕಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಟಿವಿ ಸಂದರ್ಶಕನ ಮುಂದೆ ಕುಳಿತ ಆಕೆ ಚಿಕ್ಕ ಮಗುವಿನಂತೆ ಬಿಕ್ಕುತ್ತಿದ್ದರೆ,"

ಮೋನಿಕ ತನ್ನ ಏಕಾಂತದಲ್ಲಿ ಅಥವಾ ತನ್ನ ಆಪ್ತರೊಡನೆ ಅತ್ತಳೋ ಇಲ್ಲವೋ ತಿಳಿಯದು. ಆದರೆ, ಟಿವಿ ಸಂದರ್ಶಕನ ಮುಂದೆ ಆಕೆ ಅಳಲಿಲ್ಲ. 'ಬಿಕ್ಕಿ ಬಿಕ್ಕಿ"ಯಂತೂ ಅಳಲೇ ಇಲ್ಲ. (ಆಕೆಯಲ್ಲಿ ಮೆಚ್ಚಬೇಕಾದ ಒಂದು ಗುಣವೆಂದರೆ, ತಾನು ಒಬ್ಬ 'ಬಲಿಪಶು" ಎಂಬ ಮನೋಭಾವವಿಲ್ಲದಿರುವುದು. ಜನವರಿ 2000ದಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ಸಿಎನ್‌ಎನ್‌ನ Larry King ಗೆ ಆಕೆ ಇತ್ತ ಉತ್ತರ ಇದು:

KING: Do you feel a victim?

LEWINSKY: No, I don't.

'ಈ ಪುಸ್ತಕ ಬರೆದು ಕ್ಲಿಂಟನ್‌ ಲಕ್ಷಾಂತರ ಡಾಲರ್‌ ಸಂಪಾದಿಸಿದರೆ, ಮುಂದಿನ ಜೀವನ ಹೇಗೆ ಸಾಗಿಸಬೇಕೆಂಬುದನ್ನು ತಿಳಿಯದ ಮೋನಿಕಾ ಕಲ್ಲವಿಲಗೊಂಡು ಕುಳಿತಿದ್ದಳು"

ಪುಸ್ತಕ ಬರೆದಿರುವುದು ಕ್ಲಿಂಟನ್‌ ಮಾತ್ರ ಅಲ್ಲ . 1999ರಲ್ಲೇ ತನ್ನ ಪುಸ್ತಕ ಬಿಡುಗಡೆ ಮಾಡಿದ ಮೋನಿಕಾ, ವಾಷಿಂಗ್‌ಟನ್‌ ಪೋಸ್ಟ್‌ನಲ್ಲಿ ಪ್ರಕಟವಾದ ವರದಿಯಾಂದರ ಪ್ರಕಾರ, ಪುಸ್ತಕ, ಟಿವಿ, ಪತ್ರಿಕೆಗಳು ಇತ್ಯಾದಿಯಿಂದ 30 ಲಕ್ಷ ಡಾಲರ್‌ ಸಂಪಾದಿಸಿದ್ದಾಳೆ. ಇದಲ್ಲದೆ, Fox TV ಗಾಗಿ ಒಂದು ಕಾರ್ಯಕ್ರಮ ನಡೆಸಿಕೊಟ್ಟಿರುವ ಈಕೆ, ಜೆನ್ನಿ ಕ್ರೇಗ್‌ ಸಂಸ್ಥೆಯ ಪ್ರಚಾರಕರ್ತೆಯಾಗಿ ಸಹ ದುಡಿದಿದ್ದಾಳೆ. ಇವೆಲ್ಲವುಗಳ ಮಧ್ಯೆ ತನ್ನದೇ ಅದ desinger handbags ಉದ್ದಿಮೆಯಾಂದನ್ನು ಸಹ ತೆರೆದಿದ್ದಾಳೆ. ಇಂತಹವಳ ಕುರಿತು 'ಮುಂದಿನ ಜೀವನ ಹೇಗೆ ಸಾಗಿಸಬೇಕೆಂಬುದನ್ನು ತಿಳಿಯದೆ... ಕಲ್ಲವಿಲಗೊಂಡು ಕುಳಿತಿದ್ದಳು" ಎಂದು ಬರೆದರೆ ಅದು ಸತ್ಯಕ್ಕೆ ದೂರವಾದ ಮಾತು.

'.. ಮನಸೋ ಇಚ್ಛೆ ಪ್ರೀತಿಸಿದ ಸುಂದರಿಯ ಕುರಿತು .."

ಕ್ಲಿಂಟನ್‌ ಮೋನಿಕಾಳನ್ನು 'ಮನಸೋ ಇಚ್ಛೆ" ಪ್ರೀತಿಸಿದನೋ ಇಲ್ಲವೋ ಅದು ಅವರಿಬ್ಬರ ನಡುವಿನ ವಿಷಯ. ನಮಗೆ ಗೊತ್ತಿರುವುದಿಷ್ಟೇ: ಕ್ಲಿಂಟನ್‌ ಮತ್ತು ಮೋನಿಕಾ ಅವೈವಾಹಿಕ ಸಂಬಂಧ ಹೊಂದಿದ್ದರು. ಕ್ಲಿಂಟನ್‌ ಈ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಂತೆ ಇಲ್ಲ. ಈ ಸಂಬಂಧವನ್ನು ಲೈಂಗಿಕ ಸಂಬಂಧಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ಕಂಡ ಮೋನಿಕಾಗೆ, ಕ್ಲಿಂಟನ್‌ನ ಈ ಮನೋಭಾವನೆ ಬೇಸರ, ಕೋಪ ತಂದಿದೆ. ಇಷ್ಟನ್ನು ಬಿಟ್ಟು, ಕ್ಲಿಂಟನ್‌ 'ಮನಸೋ ಇಚ್ಛೆ ಪ್ರೀತಿಸುವುದು", ಮೋನಿಕಾ 'ಬಿಕ್ಕುವುದು", ಕ್ಲಿಂಟನ್‌ ನನ್ನ 'ಕೈ ಬಿಟ್ಟ"ನೆಂದು ಬಡಬಡಿಸುವುದು ಎಲ್ಲಾ ಭಟ್ಟರ ಮನಸ್ಸಿನಲ್ಲಿ ಮಾತ್ರ. 'ಕ್ಲಿಂಟನ್‌ ಈ ಕೃತಿಯಲ್ಲಿ ಒಂದೆಡೆ ಬರೆದುಕೊಂಡಿದ್ದಾನೆ. ಪತ್ರಕರ್ತರು ಆತನನ್ನ ನೀನ್ಯಾಕೆ ಇಂಥ ಅಕ್ರಮ ಸಂಬಂಧಕ್ಕೆ ಮನಸ್ಸುಮಾಡಿದೆ ಅಂತ ಕೇಳುತ್ತಾರೆ. ಅದಕ್ಕೆ ಆತ Because I could ಅಂತಾನೆ." ಕ್ಲಿಂಟನ್‌ ಈ ಮಾತು ಹೇಳಿದ್ದು ತನ್ನ ಪುಸ್ತಕದಲ್ಲಿ ಅಲ್ಲ . ಟಿವಿ ಸಂದರ್ಶನವೊಂದರಲ್ಲಿ. ಜೊತೆಗೆ, ಈ ಮಾತು ಕೆಲವರು (ಭಟ್ಟರಲ್ಲ) ಎಣಿಸಿದಂತೆ ದರ್ಪದಿಂದ ನುಡಿದಂತೆಯೂ ಇಲ್ಲ. ಆತನ ಪೂರ್ಣ ಉತ್ತರ ಹೀಗಿದೆ: for the worst possible reason: just because I could. I think that's just about the most morally indefensible reason that anybody could have for doing anything.

'ಜನರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಶ್ವೇತ ಭವನದ ಶ್ವೇತ ಸೂಳೆ, ಬಿಚ್‌, ಕ್ಲಿಂಟನ್‌ ಕೀಪು ಎಂದೆಲ್ಲ ಹೀಗಳೆಯುತ್ತಿದ್ದರು"

ಜನರು ಮೋನಿಕಾಳ ಹಿಂದೆ ಏನು ಮಾತನಾಡುತ್ತಿದ್ದರೋ ತಿಳಿಯದು. ಆದರೆ ಜನರು ಆಕೆಯ ಜೊತೆ ನಡೆದುಕೊಂಡ ರೀತಿಯ ಬಗ್ಗೆ, ಆಕೆಯೇ ಹೇಳುವ ಮಾತುಗಳಿವು:

KING: Have any people been rude to you?

LEWINSKY: No, no.

KING: Jokes, snide remarks, nothing?

LEWINSKY: Maybe once or twice, but not anything that even compares to how amazing people have been. And not just in the way people came up have come up to me now, sort of, that I'm actually able to go out in public and sometimes without a hat, but I think, too, with a lot of the letters that I received throughout the past two years and continue to receive, it's just it's heartwarming. I mean, for complete strangers to sit down and share something personal with you, it's touching.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more