ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ನೆನೆ ನೆನೆ...

ಧಾರವಾಡ : ಮಹಾರಾಷ್ಟ್ರಕ್ಕೆ ಲೋಕಮಾನ್ಯ ತಿಲಕರು ಏನು ಮಾಡಿದ್ದರೋ, ಅದನ್ನು ಆಲೂರು ವೆಂಕಟರಾಯರು ಕರ್ನಾಟಕಕ್ಕೆ ಮಾಡಿದರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗಿರಡ್ಡಿ ಗೋವಿಂದರಾಜು ಅಭಿಪ್ರಾಯಪಟ್ಟರು.

ಆಲೂರು ವೆಂಕಟರಾಯರ 38ನೇ ಪುಣ್ಯ ತಿಥಿಯಂದು ಅವರ ಸ್ಮರಣೆಗೆ ಸಾಧನಕೇರಿಯಲ್ಲಿ ಆಯೋಜಿತವಾಗಿದ್ದ ಸಮಾರಂಭವಿದು. ಕರ್ನಾಟಕ ಏಕೀಕರಣದಲ್ಲಿ ಆಲೂರು ವೆಂಕಟರಾಯರ ಪಾತ್ರ ಹಿರಿದು. ಅವರ ದೃಷ್ಟಿಕೋನ, ತತ್ತ್ವಗಳ ದೆಸೆಯಿಂದ ಕರ್ನಾಟಕ ಏಕೀಕರಣ ಸಾಧ್ಯವಾಯಿತು ಎಂಬುದು ಅತಿಶಯೋಕ್ತಿಯಲ್ಲ. ಕರ್ನಾಟಕ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳ ಸ್ಥಾಪನೆಯ ಹಿಂದೆಯೂ ಆಲೂರರ ಬೆವರ ಹನಿಗಳಿವೆ. ಇಂದಿನ ಯುವಜನತೆ ಆಲೂರರನ್ನು ಒಬ್ಬ ಮಾದರಿಯಾಗಿ ತೆಗೆದುಕೊಂಡು, ಅವರ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಗಿರಡ್ಡಿ ಗೋವಿಂದರಾಜು ಮಾರ್ಮಿಕವಾಗಿ ನುಡಿದರು.

ಸಾಹಿತಿ ಬಿ.ಆರ್‌.ವಾಡಪ್ಪಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರೀನಿವಾಸ ರಿತ್ತಿ ಕೂಡ ಆಲೂರು ವೆಂಕಟರಾಯರ ಕುರಿತು ಮಾತಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+