ಏಳನೇ ತರಗತಿಯ ಕನ್ನಡ ಕಸ್ತೂರಿಯಲ್ಲಿ ‘ಒಂದೇ ಮಾತರಂ’
*ಡ್ಯಾನಿ ಪೆರೇರಾ, ಹಳ್ಳಿ ಮೈಸೂರು
ಕರ್ನಾಟಕದ ಪಠ್ಯಪುಸ್ತಕ ರಚನಾ ಸಮಿತಿಯು ಗೊಂದಲ, ಅಧ್ವಾನಗಳಿಗೆ ಕುಖ್ಯಾತಿ ಪಡೆದಿರುವುದು ಎಲ್ಲರಿಗೂ ತಿಳಿದ ವಿಷಯ. ಈ ವರ್ಷದ 7 ನೇ ತರಗತಿ ಕನ್ನಡ ಕಸ್ತೂರಿ ಪಠ್ಯಪುಸ್ತಕದಲ್ಲಿ ತಪ್ಪು ಮಾಹಿತಿ ನೀಡುವುದರೊಂದಿಗೆ ತನ್ನ ಗೊಂದಲ ಮುಂದುವರಿಸಿದೆ.
‘ಭಾರತ ಸೇವಾದಳ’ ಎಂಬ ಪಾಠದಲ್ಲಿ ನಾ.ಸು.ಹರ್ಡೀಕರ್ ಬಗ್ಗೆ ಹೇಳುತ್ತಾ , ಸತ್ಯಾಗ್ರಹಿಗಳಲ್ಲಿ ಶಿಸ್ತು , ಆದರ್ಶ, ಗುರಿ ಮೂಡಿಸುವ ಸಲುವಾಗಿ 1973 ರಲ್ಲಿ ಹಿಂದೂಸ್ತಾನಿ ಸೇವಾದಳ ಆರಂಭಿಸಲಾಯಿತೆಂದು ಅದರ ಪ್ರಥಮ ಅಧ್ಯಕ್ಷ ಜವಾಹರ್‌ಲಾಲ್ ನೆಹರೂ ಅವರೆಂದೂ, 1931 ರಲ್ಲಿ ಹಿಂದೂಸ್ತಾನಿ ಸೇವಾದಳ ಭಾರತ ಸೇವಾದಳವಾಗಿ ಪುನರ್ ನಾಮಕರಣಗೊಂಡಿತೆಂದೂ ತಿಳಿಸಲಾಗಿದೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು 1947 ರಲ್ಲಿ . ಪಾಠದ ಪ್ರಕಾರ ಸೇವಾದಳ ಆರಂಭವಾದದ್ದು 1973 ರಲ್ಲಿ . ಹಾಗಾದರೆ ಹರ್ಡೀಕರರು ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ಶಿಸ್ತು, ಆದರ್ಶ, ಗುರಿ ಮೂಡಿಸಲು ಸೇವಾದಳ ಆರಂಭಿಸಿದರು? 1973 ರವರೆಗೆ ನೆಹರೂ ಬದುಕಿದ್ದರೆ? ಈ ಪ್ರಶ್ನೆಗಳಿಗೆ ಪಠ್ಯಪುಸ್ತಕ ಸಮಿತಿ ಉತ್ತರಿಸಬೇಕಿದೆ.
ಈ ದೇಶದ ಮಕ್ಕಳಿಗೆ ಮಾತೃಭೂಮಿಯ ಸ್ಪಷ್ಟ ಪರಿಚಯ ಮಾಡಿಕೊಡುವ ‘ವಂದೇ ಮಾತರಂ’ (ತಾಯೆ ವಂದಿಸುವೆ) ಇವರಿಗೆ ‘ಒಂದೇ ಮಾತರಂ’ ಆಗಿರುವುದು ಇನ್ನೊಂದು ಅಭಾಸ. ಸ್ವಾತಂತ್ರ್ಯೋತ್ತರ ಸೇವಾದಳ ರಾಜಕೀಯ ಪಕ್ಷವೊಂದರ ತುತ್ತೂರಿ ಎಂಬುದು ತಿಳಿದ ವಿಚಾರವೇ. ಭಾರತ ಸೇವಾದಳದ ಶಿಸ್ತು , ರಾಷ್ಟ್ರಪ್ರೇಮವನ್ನು ಹೊಗಳುವ ಭರದಲ್ಲಿ ರಾಷ್ಟ್ರೀಯ ಘೋಷಣೆಗೆ ಅಪಮಾನ ಮಾಡಬಾರದು.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications