ದಾಂಪತ್ಯ ಜೀವನ ಹಾಳಾಗುವುದು ಯಾವಾಗ? ಯಾಕೆ? ಇದನ್ನು ತಪ್ಪಿಸುವ ಸಲಹೆಗಳು ಇಲ್ಲಿದೆ..
ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಮಧುರವಾದ ಕ್ಷಣ. ಇದನ್ನು ಅದೆಷ್ಟೋ ಜನ ಸಿಕ್ಕಾಪಟ್ಟೆ ಖರ್ಚು ಮಾಡಿ ಆನಂದಿಸುತ್ತಾರೆ. ಆದರೆ ಇದರಲ್ಲಿ ಕೆಲವರು ಮಾತ್ರ ಯಶಸ್ವಿ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಬಹುತೇಕರ ಜೀವನ ಅಂದುಕೊಂಡಷ್ಟು ಸುಂದರವಾಗಿ ಇರುವುದಿಲ್ಲ. ಯಾಕೆ ಹೀಗೆ? ಮದುವೆಗೂ ಮುನ್ನ ಇದ್ದ ಖುಷಿ, ಪ್ರೀತಿ, ಸಂತೋಷ ಮದುವೆ ಆದ ಬಳಿಕ ಯಾಕೆ ಮಾಯವಾಗುತ್ತದೆ? ದಾಂಪತ್ಯ ಜೀವನ ಹಾಳಾಗುವುದು ಯಾವಾಗ? ಯಾಕೆ? ಇದನ್ನು ತಪ್ಪಿಸುವ ಹೇಗೆ ಎಂದು ತಿಳಿಯೋಣ.
ದಾಂಪತ್ಯ ಜೀವನ ಹಾಳಾಗುವುದು ಯಾಕೆ?
*ಕೆಲಸದ ಒತ್ತಡ
ಇದು ಕಲಿಯುಗ. ಗಂಡ ಹೆಂಡತಿ ಸಮನವಾಗಿ ದುಡಿಮೆ ಮಾಡುತ್ತಾರೆ. ಗಂಡ ಮನೆ ಹೊರಗಡೆ ದುಡಿಬೇಕು ಹೆಂಡತಿ ಮನೆಯಲ್ಲಿ ದುಡಿಯಬೇಕು ಅನ್ನೋ ಕಾಲ ಇದಲ್ಲ. ಹೀಗೆ ಗಂಡ-ಹೆಂಡತಿ ಹೊರಗಡೆ ದುಡಿಯುವುದರಿಂದ ಮನೆ ಜವಬ್ದಾರಿ ಯಾರ ತಲೆಗೆ ಎನ್ನುವುದು ದೊಡ್ಡ ಸಮಸ್ಯೆಯಾಗಿ ಕಾಡ ತೊಡಗುತ್ತದೆ. ಮನೆಯಲ್ಲಿ ವಯಸ್ಸಾದ ಪೋಷಕರು, ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದಾಗ ಸಮಸ್ಯೆಗಳು ಹೆಚ್ಚಾಗ ತೊಡಗುತ್ತವೆ. ಕಚೇರಿ ಕೆಲಸ ಕೊಂಚ ಹೆಚ್ಚಾದರೂ ಅದನ್ನು ನಿಭಾಯಿಸುವ ಸಹಿಸಿಕೊಳ್ಳುವ ಶಕ್ತಿ ದಂಪತಿಗಳಿಬ್ಬರಿಗೂ ಇರುವುದಿಲ್ಲ.

ಇದರಿಂದ ಪೋಷಕರನ್ನು ದೂರ ಮಾಡುವುದು ಅನಿವಾರ್ಯವಾಗುತ್ತದೆ. ಮಕ್ಕಳನ್ನು ಡೇ ಕೇರ್ ಹಾಗೂ ಹಾಸ್ಟೆಲ್‌ಗಳಲ್ಲಿ ಬೆಳಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ರಕ್ತ ಸಂಬಂಧಗಳನ್ನು ದೂರ ಮಾಡಿಕೊಂಡು ಮನುಷ್ಯ ಬದುಕಲು ಸಾಧ್ಯವಾಗುವುದಿಲ್ಲ. ಇದಲ್ಲದೇ ಖರ್ಚು ಹೆಚ್ಚಾದಂತೆ ಕೆಲಸ ಹೊರೆಯಾಗಲು ಆರಂಭವಾಗುತ್ತದೆ.
ಸಂಬಳ ಹೆಚ್ಚಾದಂತೆ ಕೆಲಸವೂ ಹೆಚ್ಚಾಗಿ ಒತ್ತಡದಿಂದ ಮನುಷ್ಯನಲ್ಲಿ ಕೋಪ ಸಿಟ್ಟು ಅಧಿಕವಾಗುತ್ತದೆ. ಆಗ ಸಂಸಾರದ ಜಂಜಾಟದಿಂದ ಮನುಷ್ಯನ ಮನಸ್ಸು ಹೊರ ಬರಲು ಹಾತೊರಿಯುತ್ತದೆ. ಇದಾದಾಗ ದಾಂಪತ್ಯದಲ್ಲಿ ಬಿರುಕು ಉಂಟು ಮಾಡುತ್ತದೆ.
*ಪರಸ್ಪರ ಅರ್ಥೈಸಿಕೊಳ್ಳುವಲ್ಲಿ ಎಡವುದು
ಕಾಲ ಅದೆಷ್ಟೇ ಬದಲಾದರೂ ಕೂಡ ಮದುವೆಗೂ ಮುನ್ನ ಅದೆಷ್ಟೋ ದಂಪತಿಗಳು ಪರಸ್ಪರ ತಿಳಿದಿರುವುದೇ ಇಲ್ಲ. ಇಬ್ಬರ ಇಷ್ಟ ಕಷ್ಟದ ಬಗ್ಗೆ ಇಬ್ಬರಿಗೂ ಮಾಹಿತಿ ಇರುವುದಿಲ್ಲ. ಯಾರಿಗೆ ಯಾವ ಆಹಾರ ಬೇಕು, ಯಾರಿಗೆ ಯಾರು ಹೇಗಿರಬೇಕು. ಇದೆಲ್ಲವೂ ತಿಳಿದುಕೊಳ್ಳದೇ ಇರುವುದು ದೊಡ್ಡ ಸಮಸ್ಯೆಯಾಗಬಹುದು.

ಸಣ್ಣ ಸಣ್ಣ ವಿಚಾರಗಳು, ಸಹಕಾರಗಳು, ತಾಳ್ಮೆ, ಸಹನೆ, ಹೊಂದಾಣಿಕೆ ಇವೆಲ್ಲವೂ ಸುಖ ದಾಂಪತ್ಯದ ಮೆಟ್ಟುಗಳಿದ್ದಂತೆ. ಇದೆಲ್ಲವನ್ನೂ ತಿಳಿದುಕೊಂಡು ಮುನ್ನಡೆದಾಗ ಮಾತ್ರ ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ. ಆದರೆ ಇದಾಗದೇ ಇದ್ದಲ್ಲಿ ಜೀವನ ನರಕವಾಗಲು ಶುರುವಾಗುತ್ತದೆ. ಸಣ್ಣ ತಪ್ಪುಗಳು ದೊಡ್ಡದಾಗಿ ದಂಪತಿಗಳು ಬೇರೆಯಾಗುವ ಘಟನೆಗಳು ಇವತ್ತಿಗೆ ಹೆಚ್ಚಾಗಿ ಕಂಡು ಬರುತ್ತಿವೆ.
*ಆಸೆಗಳಿಗೆ ಕಡಿವಾಣ
ಪ್ರತಿಯೊಬ್ಬರಿಗೂ ವಿಭಿನ್ನ ಆಸೆಗಳಿರುತ್ತವೆ. ಮನುಷ್ಯನ ಆಸೆಗಳಿಗೆ ಅಂತ್ಯವೇ ಇರುವುದಿಲ್ಲ. ಆದರೆ ಆಸೆಗಳು ಈಡೇರಿಸಿಕೊಳ್ಳುವತ್ತ ನಮ್ಮ ಪ್ರಯತ್ನ, ಶ್ರಮ ಇದ್ದಾಗ ಮಾತ್ರ ಅದರ ಫಲ ರುಚಿಸಲು ಸಾಧ್ಯ. ಕೆಲವರಿಗೆ ಆಸೆ ಇರುತ್ತದೆ ಆದರೆ ಶ್ರಮ ಪಡುವುದಿಲ್ಲ.
ಇನ್ನೂ ಕೆಲವರಿಗೆ ತಮ್ಮ ಕನಸು ನನಸಾಗಿಸುವ ಹಾದಿಗಳು ತಿಳಿದಿರುತ್ತವೆ ಆದರೆ ಸಹಕಾರ ಇರುವುದಿಲ್ಲ. ಇನ್ನೂ ಕೆಲವರಿಗೆ ಸಹಕಾರ ಶ್ರಮ ಎರಡೂ ತಿಳಿದಿರುವುದಿಲ್ಲ. ದಾಂಪತ್ಯದಲ್ಲಿ ಶ್ರಮ ಹಾಗೂ ಸಹಕಾರ ಇಲ್ಲದೇ ಇದ್ದಾಗ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.

*ಎರಡು ಕನಸು
ಕನಸು ಅಂದರೆ ನಿದ್ದೆಯಲ್ಲಿ ಬೀಳುವ ಕನಸು ಅಲ್ಲ. ಬದಲಾಗಿ 'ಎರಡು ಕನಸು' ಸಿನಿಮಾದಲ್ಲಿ ಡಾ ರಾಜುಕುಮಾರ್ ಅವರು ಮದುವೆ ಬಳಿಕ ಪ್ರೇಯಸಿ ನೆನಪಲ್ಲಿ ಇರುವಂತೆ ನಿಜ ಜೀವನದಲ್ಲೂ ಈ ರೀತಿ ತಪ್ಪು ಮಾಡಿದರೆ ಜೀವನ ಚೆನ್ನಾಗಿರಲು ಸಾಧ್ಯವೇ ಇಲ್ಲ. ಒಂದು ಪಕ್ಷ ಮೇಲಿನ ಎಲ್ಲಾ ಸಮಸ್ಯೆಗಳನ್ನು ಸಹಿಸಿಕೊಂಡರೂ ಯಾವ ಹೆಣ್ಣೇ ಆಗಲಿ ಅಥವಾ ಗಂಡೇ ಆಗಲಿ ಇದನ್ನು ಸಹಿಸಿಕೊಳ್ಳುವುದಿಲ್ಲ. ಇವು ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುವಂತಹ ಸಂಗತಿಗಳು. ಹಾಗಾದರೆ ಇದರಿಂದ ದೂರ ಇರುವುದು ಹೇಗೆ? ಇದನ್ನು ತಪ್ಪಿಸುವ ಸಲಹೆಗಳೇನು ನೋಡೋಣ.
* ಕೆಟ್ಟ ಚಟ
ಕೆಲವರಿಗೆ ಮಾತನಾಡುವ ಚಟ, ನಡುಗ ಚಟ, ಸುಳ್ಳು ಹೇಳುವ ಚಟ ಹೀಗೆ ನಾನಾ ಚಟಗಳು ಮನುಷ್ಯನಲ್ಲಿ ಇರುತ್ತವೆ. ಆದರೆ ಇವೆಲ್ಲವೂ ಅತಿಯಾದಾಗ ಏನಾಗುತ್ತದೆ ಎಂದು ಕೊಂಚ ಯೋಚನೆ ಮಾಡಿ. ಹಾಗೆ ಮದ್ಯಪಾನ, ಧೂಮಪಾನ ಇತ್ಯಾದಿ ಕೆಟ್ಟ ಚಟಗಳಿಗೆ ಒಳಗಾಗುವ ಮನುಷ್ಯ ಹಿಡಿತ ಕಳೆದುಕೊಂಡು ವರ್ತಿಸಲು ಆರಂಭಿಸುತ್ತಾನೆ.
ಕೆಟ್ಟ ಚಟಗಳಿಗೆ ದಾಸನಾಗಿ ಸುಳ್ಳು ಹೇಳುವುದು, ಹಣ ಕದಿಯುವುದು, ವರ್ತನೆಯ ಮೇಲೆ ಹಿಡಿತ ಕಳೆದುಕೊಳ್ಳುವುದಾಗಿ ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.

ದಾಂಪತ್ಯ ಜೀವನ ಹಾಳಾಗುವುದನ್ನು ತಪ್ಪಿಸುವ ಸಲಹೆಗಳು:-
* ಇತ್ತೀಚೆಗೆ ಕೆಲ ದಂಪತಿಗಳಿಬ್ಬರೂ ವಿಪರೀತ ಮದ್ಯಪಾನ, ಧೂಮಪಾನ ಇತ್ಯಾದಿ ಕೆಟ್ಟ ಚಟಗಳಿಗೆ ಒಳಗಾಗುತ್ತಿದ್ದಾರೆ. ಈ ದುರ್ಭ್ಯಾಸಗಳಿಂದಾಗಿ ಅವರ ಆರೋಗ್ಯ ಹಾಗೂ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಕೆಟ್ಟ ಚಟಗಳಿಂದ ದೂರವಾಗಿ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ಸುಖ ದಾಂಪತ್ಯಕ್ಕೆ ದಾರಿಯಾಗುತ್ತದೆ.
* ಕೆಲಸದ ಒತ್ತಡ ಹೆಚ್ಚಾದಂತೆ ಜಗಳ, ಮನಸ್ತಾಪ, ಬೇಸರ ಆಗುವುದು ಸಹಜ. ಈ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರು ತಾಳ್ಮೆಯಿಂದ ವರ್ತಿಸುವುದು ಉತ್ತಮ. ಇದು ನಿಮ್ಮ ಹಾಗೂ ನಿಮ್ಮ ಸಂಸಾರದ ಆರೋಗ್ಯವನ್ನು ಕಾಪಾಡುತ್ತದೆ.
* ಹುಟ್ಟುತ್ತಲೇ ಯಾರೂ ಯಾರನ್ನೂ ಅರ್ಥೈಯಿಸಿಕೊಂಡು ಬಂದಿರುವುದಿಲ್ಲ. ಆದರೆ ಕೆಲವೊಮ್ಮೆ ನಮ್ಮಲ್ಲಿರುವ ಅಂಹಕಾರ, ಅಹಂಯಿಂದ ನಾವು ಸಂಗಾತಿಯ ಭಾವನೆಗಳಿಗೆ ಸ್ಪಂದಿಸುವುದಿಲ್ಲ. ಅವರನ್ನು ಸರಿಯಾಗಿ ಅರ್ಥೈಸಿಕೊಳ್ಳುವುದಿಲ್ಲ. ಇದು ಸಂಸಾರದಲ್ಲಿ ಬಿರುಕು ಉಂಟು ಮಾಡುತ್ತದೆ. ಹೀಗಾಗಿ ನಮ್ಮಲ್ಲಿರುವ ಅಹಂಕಾರ ಅಹಂ ದಾಂಪತ್ಯದಲ್ಲಿ ತೋರಿಸುವುದು ಬಿಡಬೇಕು.
* ಪರಸ್ಪರ ಆಸೆಗಳಿಗೆ ಕನಸುಗಳಿಗೆ ಗೌರವ ಕೊಡಬೇಕು. ಕನಸು ನನಸಾಗಿಸುವಲ್ಲಿ ನಿಮ್ಮ ಸಂಗಾತಿಯ ಶ್ರಮವಿದ್ದರೆ ಅದಕ್ಕೆ ಸಹಕಾರ ನೀಡಬೇಕು. ಆದ ಮಾತ್ರ ದಾಂಪತ್ಯ ಸುಖಮಯವಾಗಿರುತ್ತದೆ.
* ಇನ್ನೂ ಸಂಸಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾದರೆ ಆ ಸಂಸಾರ ತುಂಬಾ ದಿನ ಉಳಿಯುವುದಿಲ್ಲ. ಆದರೆ ಮೂರನೇ ವ್ಯಕ್ತಿ ಸಂಸಾರದಲ್ಲಿ ಆಗಮಿಸಲು ಅವಕಾಶವನ್ನು ನೀಡಬೇಡಿ. ನಿಮ್ಮ ಸಂಗಾತಿ ನೀವು ನೀಡುವ ಪ್ರೀತಿಯಿಂದ ಮಾತ್ರ ಉಳಿಯಲು ಸಾಧ್ಯ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications