Happiness: ಜೀವನದಲ್ಲಿ ಖುಷಿಯಾಗಿರುವುದೇ ಆರೋಗ್ಯ: ಈ ವಿಚಾರ ನಿಮಗೆ ಗೊತ್ತಾ..?
ನಮ್ಮ ನಡುವೆ ಇರುವ ಹಲವರು ದೈಹಿಕವಾಗಿ ಆರೋಗ್ಯವಾಗಿದ್ದರೂ ಕೂಡ ಖುಷಿಯಾಗಿರುವುದನ್ನು ಮರೆತು ಸದಾ ಮುಖವನ್ನು ಗಂಟಿಕ್ಕಿಕೊಂಡು, ಯಾವುದೋ ಚಿಂತೆಯಲ್ಲಿ ಕಾಲ ಕಳೆಯುತ್ತಾ ಮಾನಸಿಕ ಅನಾರೋಗ್ಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ ಸಮಸ್ಯೆಗಳು ಬೆಟ್ಟದಷ್ಟಿದ್ದರೂ ಅದೆಲ್ಲವನ್ನು ಮರೆತು ನಗುನಗುತಾ ಇರುವುದೇ ಆರೋಗ್ಯ ಎಂಬುದನ್ನು ಬಹುತೇಕರು ಮರೆತು ಬಿಟ್ಟಿರುತ್ತಾರೆ. ಹೀಗಾಗಿಯೇ ಅವರು ಖುಷಿಯಿಂದ ವಂಚಿತರಾಗಿ ಜೀವನ ಸಾಗಿಸುತ್ತಾರೆ.
ಸಾಮಾನ್ಯವಾಗಿ ದೇಹದಲ್ಲಿ ಏನಾದರೊಂದು ಸಮಸ್ಯೆ ಕಾಣಿಸಿಕೊಂಡಾಗ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುತ್ತೇವೆ. ಮತ್ತೆ ಅದು ಕಾಣಿಸುತ್ತಿಲ್ಲ ಎಂಬ ಸಮಾಧಾನದಿಂದ ದಿನ ಕಳೆಯುತ್ತೇವೆ. ನಮ್ಮ ದೇಹವನ್ನು ಬಾಧಿಸುವ ಕೆಲವು ರೋಗಗಳೇ ಹಾಗೆ. ಅವು ಚಿಕಿತ್ಸೆ ಬಳಿಕ ಸಂಪೂರ್ಣ ಗುಣವಾಗಿಬಿಡುತ್ತವೆ. ಮತ್ತೆ ಕೆಲವು ರೋಗಗಳು ಒಮ್ಮೆ ನಮ್ಮ ದೇಹವನ್ನು ಪ್ರವೇಶಿಸಿದರೆ ಅವು ವಾಸಿಯಾಗುವುದಿಲ್ಲ ಆಗಾಗ್ಗೆ ಕಾಡುತ್ತಲೇ ಇರುತ್ತವೆ ಇವುಗಳ ನಿಯಂತ್ರಣವನ್ನಷ್ಟೆ ಮಾಡಿಕೊಳ್ಳಬಹುದು.

ಕಾಯಿಲೆಗಳು ಮನುಷ್ಯನಿಗೆ ಬಾರದೆ ಕಲ್ಲು, ಮರಕ್ಕೆ ಬರುತ್ತಾ ಎಂಬುದು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ಮಾತು. ಇದು ನಿಜ. ಕಾಯಿಲೆ ಬಂತೆಂದು ತಲೆಕೆಡಿಸಿಕೊಳ್ಳದೆ ಅದಕ್ಕೊಂದು ಕಡೆ ಚಿಕಿತ್ಸೆ ಮಾಡುತ್ತಾ ಅದನ್ನು ಮರೆತು ಖುಷಿಯಾಗಿ ಬದುಕೋದನ್ನು ರೂಢಿಸಿಕೊಳ್ಳಬೇಕು. ಆಗ ನಾವು ಸ್ವಲ್ಪ ಮಟ್ಟಿಗೆ ನಮ್ಮ ರೋಗದ ನೋವನ್ನು ಮರೆಯಲು ಸಾಧ್ಯವಿದೆ. ನಮ್ಮಲ್ಲಿ ಹೆಚ್ಚು ಜನ ದೇಹಕ್ಕೆ ಅನಾರೋಗ್ಯ ಬಾಧಿಸಿದರೆ ಮಾನಸಿಕವಾಗಿ ಜರ್ಜರಿತರಾಗಿ ಬಿಡುತ್ತಾರೆ. ಕಾಯಿಲೆಗಳು ವಾಸಿಯಾಗಬೇಕಾದರೆ ಮಾನಸಿಕ ಆರೋಗ್ಯ ಮುಖ್ಯ.
ಖುಷಿಯಾಗಿ ಇರುವ ಸಂಕಲ್ಪ ಮಾಡೋಣ
ಕಾಯಿಲೆ ಬಗ್ಗೆ ಯೋಚಿಸುತ್ತಾ ಕುಳಿತುಕೊಂಡರೆ ಮಾನಸಿಕ ಖಿನ್ನತೆಯುಂಟಾಗಿ ನಮ್ಮ ಮೇಲೆ ನಮಗೆ ಜಿಗುಪ್ಸೆ ಬಂದು ಅದರಿಂದ ಅನಾಹುತವೇ ಜಾಸ್ತಿ ಎಂದರೆ ತಪ್ಪಗಲಾರದು. ಆದ್ದರಿಂದ ಎಂತಹ ಪರಿಸ್ಥಿತಿಯಲ್ಲೂ ನಮ್ಮಲ್ಲಿ ಖಿನ್ನತೆ ಆವರಿಸಲು ಬಿಡಬಾರದು. ಸದಾ ನಮ್ಮಲ್ಲೊಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಇದು ನಮ್ಮಿಂದ ನಾವೇ ಮಾಡಿಕೊಳ್ಳಬೇಕಾದ ಕ್ರಿಯೆ ಆಗಿರುವುದರಿಂದ ಏನೇ ಆಗಲಿ ನಾನು ಖುಷಿಯಾಗಿಯೇ ಇರುತ್ತೇನೆ ಎಂಬ ಸಂಕಲ್ಪ ಮಾಡಬೇಕು.
ನಾನು ಅನುಭವಿಸುತ್ತಿರುವ ಸಮಸ್ಯೆ ನನ್ನದೊಬ್ಬನದಲ್ಲ. ಇದಕ್ಕಿಂತ ದೊಡ್ಡ ಸಮಸ್ಯೆಯನ್ನು ಇನ್ನೆಷ್ಟೋ ಮಂದಿ ಎದುರಿಸುತ್ತಿಲ್ಲವೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಸಮಾಧಾನವನ್ನು ನಮಗೆ ನಾವೇ ಮಾಡಿಕೊಂಡರೆ ನಮ್ಮದು ಸಮಸ್ಯೆ ಎನಿಸುವುದೇ ಇಲ್ಲ. ಮುಂಜಾನೆಯಿಂದಲೇ ನಾವು ಲವಲವಿಕೆಯಲ್ಲಿದ್ದಿದ್ದೇ ಆದರೆ ನಮ್ಮ ಮನಸ್ಸು ಪ್ರಾಂಜಲವಾಗಿದ್ದು, ಒಳ್ಳೆಯ ಕಾರ್ಯಗಳಲ್ಲಿ ತೊಡಗುವಂತೆ ಮಾಡುತ್ತದೆ. ಜತೆಗೆ ಆರೋಗ್ಯಕರ ಮನಸ್ಸನ್ನು ಹೊಂದಲು ಅನುಕೂಲ ಮಾಡಿಕೊಡುತ್ತದೆ.

ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿರುವುದೇಕೆ?
ಇವತ್ತು ನಮ್ಮಲ್ಲಿ ಎಲ್ಲ ರೀತಿಯ ಐಷಾರಾಮಿ ವಸ್ತುಗಳು ಇದ್ದರೂ ನಾವ್ಯಾರು ಸುಖಿಗಳಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಏಕೆಂದರೆ ನಾವು ಸೌಲಭ್ಯಗಳನ್ನು, ಅಧಿಕಾರಗಳನ್ನು ಪಡೆದಂತೆಲ್ಲ ಸೋಮಾರಿಗಳಾಗುತ್ತಾ ಹೋಗುತ್ತಿದ್ದೇವೆ. ಜತೆಗೆ ಇನ್ನಷ್ಟು ಬೇಕೆನ್ನುವ ತಹತಹಿಕೆ ಕೂಡ ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವಂತೆ ಮಾಡುತ್ತಿದೆ. ಈ ಹಪಾಹಪಿ ನಮ್ಮನ್ನು ಖುಷಿಯಾಗಿ ಇರಲು ಬಿಡದೆ ಕಾಡುತ್ತದೆ.
ಇವತ್ತು ನಮ್ಮಲ್ಲಿ, ನಮ್ಮ ಕುಟುಂಬಗಳಲ್ಲಿ ಆಹ್ಲಾದಕರ ವಾತಾವರಣವೇ ನಿರ್ಮಾಣವಾಗುತ್ತಿಲ್ಲ. ನಾವು ಯಾರೊಂದಿಗೂ ಬೆರೆಯುತ್ತಿಲ್ಲ. ನಾವು ನಮ್ಮ ಅಂತಸ್ತಿಗೆ ತಕ್ಕವರೊಂದಿಗೆ ಮಾತ್ರ ಒಡನಾಟ ಇಟ್ಟುಕೊಳ್ಳಬೇಕೆಂಬ ಮನೋಭಾವವೂ ಇದಕ್ಕೆ ಕಾರಣವಾಗಬಹುದು. ಇಂತಹ ಮನೋಭಾವ ನಮ್ಮ ಸಂಬಂಧಗಳ ನಡುವೆ ಅಂತರ ಸೃಷ್ಟಿಸಿ ಮುಂದೆ ಕಂದಕಗಳಾಗಿ ಪರಿಣಮಿಸಿದಾಗ ನಮ್ಮನ್ನು ಏಕಾಂಗಿತನ ಕಾಡುವುದಂತೂ ಸತ್ಯ.
-
Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ -
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications