ನೋ ಸ್ಪೆಂಡಿಂಗ್ ಮಂತ್! ಒಂದು ತಿಂಗಳು ಖರ್ಚು ನಿಲ್ಲಿಸಿ, ಜೀವಮಾನಕ್ಕೆ ಉಳಿಸಿ

ಹಣ ಉಳಿಸಬೇಕು ಎಂದುಕೊಳ್ಳುತ್ತೇವೆ. ಸಾಕಷ್ಟು ಸಂಬಳ ಬರುತ್ತದೆ. ಆದರೆ ತಿಂಗಳ ಕೊನೆಯಲ್ಲಿ ಬ್ಯಾಂಕ್ ಖಾತೆ ನೋಡಿದಾಗ, ಹಣ ಎಲ್ಲಿಗೆ ಹೋಯಿತು? ಎಂಬ ಪ್ರಶ್ನೆ ಕಾಡುತ್ತದೆ. ಸಂಬಳ ಬಂದರೂ ಉಳಿತಾಯ ಮಾತ್ರ ಹೆಚ್ಚಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಯತ್ನಿಸಬಹುದಾದ ಒಂದು ಸರಳ ವಿಧಾನವೇ ನೋ ಸ್ಪೆಂಡಿಂಗ್ ಮಂತ್.

ಹಾಗೆಂದರೇನು? ನೋ ಸ್ಪೆಂಡಿಂಗ್ ಮಂತ್ ಅಥವಾ ಖರ್ಚು ಮಾಡದ ತಿಂಗಳು ಎಂದರೆ, ಒಂದು ತಿಂಗಳ ಕಾಲ 'ಅಗತ್ಯವಿಲ್ಲದ ಖರ್ಚುಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು ಅಥವಾ ಸಾಧ್ಯವಾದಷ್ಟು ನಿಲ್ಲಿಸುವುದು.' ಇದರರ್ಥ ಒಂದು ತಿಂಗಳು ಹಣವನ್ನೇ ಖರ್ಚು ಮಾಡಬಾರದು ಎಂದಲ್ಲ. ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್, ಔಷಧಿ, ದಿನಸಿ, ಪ್ರಯಾಣದಂತಹ ಅಗತ್ಯ ಖರ್ಚುಗಳನ್ನು ಮಾಡಬೇಕಾಗುತ್ತದೆ.

No Spend Month

ಆದರೆ ಹೊರಗೆ ಊಟ, ಆನ್‌ಲೈನ್ ಶಾಪಿಂಗ್, ಅನಗತ್ಯ ವಸ್ತುಗಳ ಖರೀದಿ, ಹೆಚ್ಚುವರಿ ಒಟಿಟಿ ಸಬ್‌ಸ್ಕ್ರಿಪ್ಷನ್, ದುಬಾರಿ ಕಾಫಿ, ಮನಸ್ಸಿಗೆ ಬಂದಾಗಲೆಲ್ಲಾ ಮಾಡುವ ಸಣ್ಣಪುಟ್ಟ ಖರ್ಚುಗಳನ್ನು ನಿಯಂತ್ರಿಸುವುದು ಇದರ ಉದ್ದೇಶ.

ಎಷ್ಟು ಉಳಿಸಬಹುದು?

ಒಂದು ತಿಂಗಳು ಹೀಗೆ ಮಾಡಿದರೆ ಸಾಕೆ? ಇದು ಎಷ್ಟು ಉಳಿಸಬಹುದು? ಇದು ಪ್ರತಿಯೊಬ್ಬರ ಆದಾಯ ಮತ್ತು ಖರ್ಚಿನ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಪ್ರತಿ ತಿಂಗಳು ಈ ರೀತಿಯ ಅನಗತ್ಯ ಖರ್ಚು ಮಾಡುತ್ತಿದ್ದಾನೆ ಎಂದುಕೊಳ್ಳಿ:

* ಹೊರಗಿನ ಊಟ ಮತ್ತು ಫುಡ್ ಡೆಲಿವರಿ: ₹3,000
* ಆನ್‌ಲೈನ್ ಶಾಪಿಂಗ್: ₹2,500
* ಕಾಫಿ, ಸ್ನ್ಯಾಕ್ಸ್: ₹1,500
* ಸಿನಿಮಾ, ಮನರಂಜನೆ: ₹1,500
* ಅನಗತ್ಯ ಸಣ್ಣ ಖರ್ಚುಗಳು: ₹1,500
* ಒಟ್ಟು ಅನಗತ್ಯ ಖರ್ಚು ₹10,000

ಒಂದು ತಿಂಗಳು ಇವುಗಳನ್ನು ನಿಯಂತ್ರಿಸಿದರೆ, ಕೇವಲ 30 ದಿನಗಳಲ್ಲಿ ಸುಮಾರು ₹10,000 ಉಳಿಸಬಹುದು. ನಿಮ್ಮ ಖರ್ಚು ಲೆಕ್ಕ ಹಾಕಿ ನೋಡಿ. ನಿಮ್ಮ ವೆಚ್ಚಗಳು ಇದಕ್ಕೂ ಹೆಚ್ಚಿರಬಹುದು ಅಥವಾ ಕಡಿಮೆ ಇರಬಹುದು. ಆ ಹಣವನ್ನು ಖರ್ಚು ಮಾಡುವ ಬದಲು ಪ್ರತ್ಯೇಕ ಉಳಿತಾಯ ಖಾತೆಗೆ ಹಾಕಿದರೆ, ನಿಮ್ಮ ಉಳಿತಾಯದ ಅಭ್ಯಾಸಕ್ಕೆ ಅದು ಉತ್ತಮ ಆರಂಭವಾಗಬಹುದು.

ಹೇಗೆ ಮಾಡಬೇಕು?

ಮೊದಲು ಕಳೆದ 2-3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಯುಪಿಐ ಖರ್ಚುಗಳನ್ನು ನೋಡಿ. ಹಣ ಯಾವೆಲ್ಲಾ ಕಡೆಗೆ ಹೋಗುತ್ತಿದೆ ಎಂಬುದನ್ನು ಗಮನಿಸಿ. ನಂತರ ಖರ್ಚುಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ:

ಅಗತ್ಯ ಖರ್ಚು: ಮನೆ ಬಾಡಿಗೆ, ದಿನಸಿ, ವಿದ್ಯುತ್, ಔಷಧಿ, ಮಕ್ಕಳ ಅಗತ್ಯಗಳು, ಪ್ರಯಾಣ ಮುಂತಾದವು.

ಅಗತ್ಯವಿಲ್ಲದ ಖರ್ಚು: ಆನ್‌ಲೈನ್ ಶಾಪಿಂಗ್, ಫುಡ್ ಡೆಲಿವರಿ, ಅನಗತ್ಯ ಸಬ್‌ಸ್ಕ್ರಿಪ್ಷನ್, ಹೊರಗಿನ ಕಾಫಿ, ಮನರಂಜನೆ, ಓದದಿದ್ದರೂ ಮಾಡುವ ಪುಸ್ತಕ ಖರೀದಿ ಮುಂತಾದವು.

ಒಂದು ತಿಂಗಳ ಕಾಲ ಎರಡನೇ ವಿಭಾಗದ ಖರ್ಚುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

'ಏನನ್ನೂ ಖರೀದಿಸಬಾರದು' ಎಂಬ ಕಠಿಣ ನಿಯಮ ಮಾಡುವ ಬದಲು, 'ನನಗೆ ಇದು ನಿಜವಾಗಿಯೂ ಬೇಕೇ?' ಎಂದು ಖರೀದಿಸುವ ಮೊದಲು ನಿಮ್ಮನ್ನೇ ಕೇಳಿಕೊಳ್ಳಿ. ಉದಾಹರಣೆಗೆ, ಆನ್‌ಲೈನ್‌ನಲ್ಲಿ ₹2,000 ಬೆಲೆಯ ವಸ್ತು ಇಷ್ಟವಾಯಿತು ಎಂದಿಟ್ಟುಕೊಳ್ಳಿ. ತಕ್ಷಣ ಖರೀದಿಸುವ ಬದಲು 48 ಗಂಟೆ ಕಾಯಿರಿ. ಎರಡು ದಿನಗಳ ನಂತರವೂ ಅದು ಬೇಕೆನಿಸಿದರೆ ಖರೀದಿಸುವ ಬಗ್ಗೆ ಯೋಚಿಸಿ. ಬಹಳಷ್ಟು ಬಾರಿ ತಕ್ಷಣದ ಖರೀದಿಯ ಆಸೆ ಎರಡು ದಿನಗಳಲ್ಲಿ ಕಡಿಮೆಯಾಗಿರುತ್ತದೆ.

ಉಳಿಸಿದ ಹಣವನ್ನು ಏನು ಮಾಡಬೇಕು?

ನೋ ಸ್ಪೆಂಡ್ ಮಂತ್‌ನ ದೊಡ್ಡ ಉದ್ದೇಶ ಕೇವಲ ಒಂದು ತಿಂಗಳು ಹಣ ಉಳಿಸುವುದಲ್ಲ. ಉಳಿತಾಯದ ಅಭ್ಯಾಸ ಬೆಳೆಸುವುದು. ಒಂದು ತಿಂಗಳಲ್ಲಿ ₹10,000 ಉಳಿಸಿದರೆ ಅದನ್ನು ಮತ್ತೆ ಖರ್ಚು ಮಾಡಬೇಡಿ. ಅದನ್ನು ತುರ್ತು ನಿಧಿ, ಹೂಡಿಕೆ ಅಥವಾ ಭವಿಷ್ಯದ ಪ್ರಮುಖ ಗುರಿಗಾಗಿ ಪ್ರತ್ಯೇಕವಾಗಿ ಇಡಬಹುದು. ಒಂದು ತಿಂಗಳ ಪ್ರಯೋಗ ಯಶಸ್ವಿಯಾದರೆ, ಮುಂದಿನ ತಿಂಗಳಲ್ಲೂ ಕೆಲವು ನಿಯಮಗಳನ್ನು ಮುಂದುವರಿಸಬಹುದು.

ನೋ ಸ್ಪೆಂಡ್ ಮಂತ್ ಜೀವನಪೂರ್ತಿ ಅನುಸರಿಸಬೇಕಾದ ನಿಯಮ ಎಂದು ನೋಡಬೇಕಿಲ್ಲ. ಇದು ನಿಮ್ಮ ಖರ್ಚಿನ ಅಭ್ಯಾಸವನ್ನು ಅರ್ಥ ಮಾಡಿಕೊಳ್ಳಲು ಮಾಡುವ ಒಂದು ಪ್ರಯೋಗ. ಒಂದು ತಿಂಗಳು ಅನಗತ್ಯ ಖರ್ಚುಗಳನ್ನು ಗಮನಿಸಿದರೆ, ನಾನು ಎಷ್ಟು ಖರ್ಚು ಮಾಡುತ್ತಿದ್ದೇನೆ ಎಂಬುದಕ್ಕಿಂತ 'ನನಗೆ ನಿಜವಾಗಿಯೂ ಎಷ್ಟು ಖರ್ಚು ಬೇಕು?' ಎಂಬುದು ಅರ್ಥವಾಗುತ್ತದೆ. ಅದೇ ಅರಿವು ಮುಂದಿನ ತಿಂಗಳುಗಳಲ್ಲೂ ಮುಂದುವರಿದರೆ, ಒಂದು ತಿಂಗಳ ಉಳಿತಾಯದ ಪ್ರಯೋಗವೇ ದೀರ್ಘಕಾಲದ ಹಣಕಾಸಿನ ಅಭ್ಯಾಸವಾಗಿ ಬದಲಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+