ಮನುಷ್ಯರ ಸ್ವಭಾವದ ಹಿಂದಿನ ಆ ಗುಣಗಳ ರಹಸ್ಯವೇನು..?
ಒಬ್ಬ ವ್ಯಕ್ತಿಯನ್ನು ಆತನ ಸ್ವಭಾವದಿಂದಲೇ ನಾವು ಒಳ್ಳೆಯವನೋ ಅಥವಾ ಕೆಟ್ಟವನೋ ಎಂಬುದನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಏಕೆಂದರೆ ಮನುಷ್ಯನ ಸ್ವಭಾವವು ಸತ್ವ, ರಜ, ತಮ ಎಂಬ ಮೂರು ಗುಣಗಳಿಂದ ಉಂಟಾಗಿದ್ದು ಇದರಲ್ಲಿ ಯಾವುದೇ ಒಂದು ಅಥವಾ ಎರಡು ಗುಣಗಳ ಪ್ರಾಧಾನ್ಯದಿಂದ ಒಬ್ಬ ವ್ಯಕ್ತಿಯ ಸ್ವಭಾವವು ನಿಂತಿರುವುದನ್ನು ನಾವು ಕಾಣಬಹುದಾಗಿದೆ.
ಆಧ್ಯಾತ್ಮಿಕ ಚಿಂತಕರು ಮನುಷ್ಯರ ಸ್ವಭಾವದ ಹಿಂದಿರುವ ಮೂರು ಗುಣಗಳ ಬಗ್ಗೆ ಮನದಟ್ಟಾಗುವ ಹಾಗೆ ವಿವರಿಸಿದ್ದಾರೆ. ಅವರ ಪ್ರಕಾರ ಕ್ರಿಯಾತ್ಮಕವಾದ ವಿಕ್ಷೇಪ ಶಕ್ತಿಯು ರಜೋಗುಣಕ್ಕೆ ಸಂಬಂಧಪಟ್ಟಿದ್ದೆಂದೂ ಇದರಿಂದ ಪುರಾತನವಾದ ಪ್ರವೃತ್ತಿಗಳು ಹರಡಿಕೊಂಡಿವೆಯಂತೆ. ಮನಸ್ಸಿಗೆ ಸೇರಿದ ರಾಗ ಹಾಗೂ ದುಃಖಾದಿಗಳೂ ಈ ವಿಕ್ಷೇಪ ಶಕ್ತಿಯಿಂದಲೇ ಸದಾ ಉಂಟಾಗುತ್ತಿರುತ್ತವೆಯಂತೆ. ಕಾಮ, ಕ್ರೋಧ, ಲೋಭ, ಅಸೂಯೆ, ಅಹಂಕಾರ, ಈರ್ಷ್ಯೆ ಇತ್ಯಾದಿ ಯಾವ ಪುರುಷ ಪ್ರವೃತ್ತಿಯಿಂದ ಉಂಟಾಗಿರುವುದೋ ಅದು ರಜೋಗುಣಕ್ಕೆ ಸಂಬಂಧಪಟ್ಟದ್ದಾಗಿದ್ದು ಆದುದರಿಂದ ಈ ರಜೋ ಗುಣವು ಬಂಧನಕ್ಕೆ ಕಾರಣವಾಗಿದೆಯಂತೆ.

ತಮೋಗುಣದ ಆವೃತ್ತಿ ಎಂಬ ಶಕ್ತಿಯು ಇದೇ ಮನುಷ್ಯನ ಸಂಸಾರಕ್ಕೂ ಮತ್ತು ವಿಕ್ಷೇಪ ಶಕ್ತಿಯ ಕಾರ್ಯೋನ್ಮುಖಕ್ಕೂ ಕಾರಣವಾಗಿದೆ. ವಸ್ತುವಿನ ಸ್ವರೂಪವನ್ನು ಸರಿಯಾಗಿ ತಿಳಿಯದಿರುವುದು (ಅಭಾವನೆ) ವಸ್ತುವು ಇರುವುದೇ ಒಂದಾದರೆ ಅದನ್ನು ಬೇರೊಂದಾಗಿ ಅರಿಯುವುದು (ವಿಪರೀತ ಭಾವನೆ) ಆ ವಸ್ತುವು ಆ ವಿಧವಾಗಿ ಇಲ್ಲವೆಂಬ ಭಾವನೆಯನ್ನು ತಾಳುವುದು (ಅಸಂಭಾವನೆ) ಮತ್ತು ಸಂದೇಹಗಳ ಸಂಬಂಧದಿಂದ ಕೂಡಿರುವ ಮನುಷ್ಯನನ್ನು ವಿಕ್ಷೇಪ ಶಕ್ತಿಯು ನಿರಂತರವಾಗಿ ಬಾಧಿಸುತ್ತದೆ.
ಸತ್ವ ಗುಣವು ನೀರಿನ ಹಾಗೆ ನಿರ್ಮಲ
ಸತ್ವ ಗುಣವು ನೀರಿನ ಹಾಗೆ ನಿರ್ಮಲವಾದುದು. ಆದರೂ ರಜಸ್ತಮೋ ಗುಣಗಳ ಸಂಸರ್ಗದಿಂದ ಅದು ಸಂಸಾರಕ್ಕೆ ಕಾರಣವಾಗುತ್ತದೆ. ಆದರೆ ಸತ್ವ ಗುಣದಲ್ಲಿ ಆತ್ಮ ಸ್ವರೂಪವೂ ಪ್ರತಿಬಿಂಬಿಸಿ ಸೂರ್ಯನಂತೆ ಜಡ ಜಗತ್ತನ್ನು ಪ್ರಕಾಶಪಡಿಸುತ್ತದೆ. ಅಮಾನ್ವಿತವೇ, ಯಮ ನಿಯಮಗಳೇ ಮೊದಲಾದವುಗಳು ಶ್ರದ್ಧೆ, ಭಕ್ತಿ ಮುಮುಕ್ಷುತ್ವ, ದೈವಿ ಸಂಪತ್ತು ಹಾಗೂ ಅಸುರ ಸಂಪತ್ತಿನ ತ್ಯಾಗ ಇವು ಮಿಶ್ರ ಸತ್ವದ ಲಕ್ಷಣಗಳು, ಪ್ರಸನ್ನತೆ, ಆತ್ಮಾನುಭವ, ಪರಮಶಾಂತಿ, ತೃಪ್ತಿ ಆಹ್ಲಾದ, ಯಾವಾಗಲೂ ಆನಂದವನ್ನು ಹೊಂದಿಸುವ ಪರಮಾತ್ಮ ನಿಷ್ಠೆ ಇವು ವಿಶುದ್ಧ ಸತ್ವದ ಲಕ್ಷಣಗಳಾಗಿವೆ.
ಯಾವ ಮನಸ್ಸು ರಜೋಗುಣ ಹಾಗೂ ತಮೋಗುಣಗಳ ಪ್ರಾಬಲ್ಯಕ್ಕೆ ವಶವಾಗಿದೆಯೋ ಅದು ರಜೋಗುಣದ ವಿಕ್ಷೇಪ ಶಕ್ತಿಯ ಮತ್ತು ತಮೋಗುಣದ ಅಚ್ಚಾದನ ಶಕ್ತಿಯ ಪರಿಣಾಮವಾಗಿ ಯಾವುದೇ ಬಗೆಯ ನಿಯಂತ್ರಣಕ್ಕೆ ಒಳಗಾಗುವುದು ಕಷ್ಟವೇ ಎನ್ನಬೇಕು. ಆದುದರಿಂದ ಸತ್ವ ಗುಣ (ಒಳ್ಳೆಯ ಗುಣ) ಪ್ರಧಾನವಾಗುವಂತೆ ನಮ್ಮ ಮನಃ ಪ್ರಕೃತಿಯೊಳಗಣ ಗುಣಗಳ ಸಮತೋಲನವನ್ನು ನಾವು ಮಾಡಿಕೊಳ್ಳಬೇಕು.
ಯಾವುದು ಆ ಮೂರು ಗುಣಗಳು?
ಹಾಗೆನೋಡಿದರೆ ಮನುಷ್ಯ ಸ್ವಭಾವದ ಹಿಂದಿನ ಮೂರು ಗುಣಗಳಾದ ಸತ್ವ, ರಜ ತಮ ಇವುಗಳಲ್ಲಿ ಮೊದಲನೆಯದು ಅಂದರೆ ಸತ್ವ, ರಜ ತಮ ಇವುಗಳಲ್ಲಿ ಮೊದಲನೆಯದು ಅಂದರೆ ಸತ್ವ ಇದು ಪರಿಶುದ್ಧತೆ, ದೀಪ್ತಿ ಮತ್ತು ಆನಂದಕ್ಕೆ, ಎರಡನೆಯದಾದ ರಜ ದುಃಖದಾಯಕವಾದ ಕ್ಷಣಿಕ ಸುಖಗಳಿಗೆ, ಮೊದಲನೆಯದು ತಮ್ಮ ಜ್ಞಾನ ಹಾಗೂ ವಿಶೇಷವಾದ ಬಂಧನಕ್ಕೆ ಎಳೆಯುವಂತದಾಗಿವೆ. ಯಾವುದನ್ನು ಜ್ಞಾನಿಗಳು ಹೊಗಳುತ್ತಾರೆಯೋ ಅವು ಸಾತ್ವಿಕವೆಂದೂ, ಯಾವುದನ್ನು ತೆಗೆಳುತ್ತಾರೆಯೋ ಅವು ತಾಮಸಿಕ, ಯಾವುದರ ಬಗ್ಗೆ ಉದಾಸೀನರಾಗುತ್ತಾರೆನೋ ಅವು ರಾಜಸಿಕವಾಗಿವೆ.

ಮನುಷ್ಯನ ಸ್ವಭಾವದ ಹಿಂದಿನ ಗುಣಗಳ ಬಗ್ಗೆ ವಿವರಿಸಿರುವ ಶ್ರೀ ರಾಮಪರಮಹಂಸರು ಮನುಷ್ಯನಲ್ಲಿರುವ ಮೂರು ಗುಣಗಳು ಮೂರು ಜನ ದರೋಡೆಕೋರರು ಸತ್ಯ ಜ್ಞಾನವನ್ನರಸಿಕೊಂಡು ನಡೆಯುವ ಮನುಷ್ಯನನ್ನು ದರೋಡೆ ಮಾಡುವವರೇ ಇವರು, ತಮಸ್ಸು ಈ ಮನುಷ್ಯನನ್ನು ಕೊಲ್ಲೋಣ ಎನ್ನುತ್ತದೆ. ರಜಸ್ಸು ಆತನನ್ನು ಜಗತ್ತಿಗೆ ಕಟ್ಟಿಹಾಕುತ್ತದೆ. ಆದರೆ ಸತ್ವ ಆತನನ್ನು ಬಿಡುಗಡೆ ಮಾಡುತ್ತದೆ.
ಗುಣಗಳ ಬಗ್ಗೆ ಶಂಕರಚಾರ್ಯರು ಹೇಳುವುದೇನು?
ಸತ್ಯದ ರಕ್ಷಣೆಯಿಂದಾಗಿ ಮನುಷ್ಯ ಅಪಾಯದಿಂದ ಎಂದರೆ ಕ್ರೋಧ, ಮೋಹ ಇತ್ಯಾದಿ ತಮೋಗುಣ ಪ್ರಧಾನವಾದ ಕೇಡುಗಳಿಂದ ಪಾರಾಗುತ್ತಾನೆ. ಮುಂದೆ ಸತ್ವ ಕೂಡ ದರೋಡೆಕೋರನೇ. ಅದು ಅವನಿಗೆ ಹೇಳುತ್ತದೆ, ಅದೋ ನೋಡು ಅಲ್ಲಿದೆ ನಿನ್ನ ಮನೆ ಸತ್ವ ಕೂಡ ಬ್ರಹ್ಮಜ್ಞಾನದಿಂದ ಈಚೆಗೆ ನಿಂತು ಬಿಡುತ್ತದೆ.
ಶಂಕರಾಚಾರ್ಯರ ಪ್ರಕಾರ ತಮೋಗುಣವು ಸತ್ವ ರಜಸ್ಸುಗಳಿಮದಲೂ, ರಜೋ ಗುಣವು ಸತ್ವ ಗುಣದಿಂದಲೂ ನಾಶ ಹೊಂದುತ್ತದೆ. ಆದ ಕಾರಣ ಶುದ್ಧ ಸತ್ವವನ್ನು ಅವಲಂಬಿಸಿಕೊಂಡು ನಿನ್ನಲ್ಲಿ ಉಂಟಾಗಿರುವ ಅಭ್ಯಾಸವನ್ನು (ಅನಾತ್ಮವಾದ ದೇಹೇಂದ್ರಿಯಗಳೇ, ನಾನು ನನ್ನದು ಎಂಬ ಭಾವನೆಯನು) ಹೋಗಲಾಡಿಸಿಕೋ... ಎಂದಿದ್ದಾರೆ.
ನಾವು ಸದಾ ಜ್ಞಾಪಕದಲ್ಲಿರಿಸಿಕೊಳ್ಳಬೇಕಾದ ವಿಷಯವೇನೆಂದರೆ; ಎಲ್ಲಿಯವರೆಗೆ ನಮ್ಮ ಸ್ವಭಾವದಲ್ಲಿ ರಜಸ್ಸು ಮತ್ತು ತಮಸ್ಸುಗಳು ಆಧಿಪತ್ಯವನ್ನು ಸ್ಥಾಪಿಸಿರುತ್ತವೋ ಅಲ್ಲಿಯವರೆಗೆ ನಾವು ಎಷ್ಟೇ ಪ್ರಯತ್ನಪಟ್ಟರೂ ಸಮಾಜದಲ್ಲಿ ಒಳ್ಳೆಯವರಾಗಿ ಗುರುತಿಸಿಕೊಳ್ಳುವುದು ದುಸ್ತರವೇ.
-
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
ಕಣ್ಣು ಸಮಸ್ಯೆಗಳು ಹೆಚ್ಚುತ್ತಿವೆಯೇ? ಈ ಆಹಾರಗಳು ನಿಮ್ಮ ದೃಷ್ಟಿಯನ್ನು ರಕ್ಷಿಸುತ್ತವೆ -
Powerful Vastu Plants: ಮನೆಗೆ ಪಾಸಿಟಿವ್ ಎನರ್ಜಿ ಬೇಕಾ? ಈ ಸಸ್ಯಗಳನ್ನು ಇಡಿ, ಜೀವನವೇ ಬದಲಾಗುತ್ತದೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications