Village Style Chicken Fry Recipe: ಊಟಕ್ಕೆ ಮನೆಗೆ ಬನ್ನಿ ಎಂದು ಸ್ನೇಹಿತರನ್ನ ಕರೆದರೆ, ಹಳ್ಳಿ ಶೈಲಿಯ ಚಿಕನ್ ಫ್ರೈ ಟ್ರೈ ಮಾಡಿ
ಇವತ್ತು ಭಾನುವಾರ. ಈ ದಿನ ಬೆಳಿಗ್ಗೆ ತಿಂಡಿ ಮಾಡುವವರಿಗಿಂತ ನೇರವಾಗಿ ಮಧ್ಯಾಹ್ನದ ಊಟ ಮಾಡುವವರೇ ಹೆಚ್ಚು. ಅದರಲ್ಲೂ ವೀಕೆಂಡ್‌ನಲ್ಲಿ ಮಾಂಸಾಹಾರವನ್ನು ಸೇವಿಸಲು ಹೆಚ್ಚು ಜನ ಇಷ್ಟಪಡುತ್ತಾರೆ. ಅಡುಗೆ ಮಾಡುವುದು ತಡವಾದರೂ ಪರವಾಗಿಲ್ಲ, ಹೋಟೆಲ್ ಶೈಲಿ, ಹಳ್ಳಿ ಶೈಲಿಯಲ್ಲಿ ಅಥವಾ ಸಂಥಿಂಗ್ ಸ್ಪೆಷಲ್ ಟೇಸ್ಟ್ ಆಗಿರುವ ಚಿಕನ್ ಇದ್ರೆ ಸಾಕು. ಇದಕ್ಕಿಂತ ಸಂತೃಪ್ತಿಯ ಊಟ ಮತ್ತೊಂದಿಲ್ಲ ಅನ್ನೋರೇ ಹೆಚ್ಚು.
ಹೀಗೆ ಮನೆಯಲ್ಲಿ ಹಳ್ಳಿ ಶೈಲಿಯ ಚಿಕನ್ ತಯಾರಿಸಲು ನೀವು ಇಷ್ಟಪಟ್ಟಿದ್ದರೆ, ನಾವು ನಿಮಗೆ ಸಂಥಿಂಗ್ ಸ್ಪೆಷಲ್ ಚಿಕನ್ ಫ್ರೈ ಮಾಡುವುದನ್ನು ಹೇಳಿಕೊಡುತ್ತೇವೆ. ಇದನ್ನು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ಈ ವಾರಾಂತ್ಯವನ್ನು ನೀವು ಆನಂದಿಸಬಹುದು. ಜೊತೆಗೆ ಕುಟುಂಬ ಸದಸ್ಯರ ಮೆಚ್ಚುಗೆಯನ್ನೂ ಸಹ ಪಡೆಯಬಹುದು. ಹಾಗಾದರೆ ಹಳ್ಳಿ ಶೈಲಿಯ ಚಿಕನ್ ಫ್ರೈ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.

ಸಾಮಾನ್ಯವಾಗಿ ಹಳ್ಳಿಯಲ್ಲಿ ಚಿಕನ್ ಖಾದ್ಯಗಳನ್ನು ಮಾಡಬೇಕಾದರೆ ಮಸಾಲೆಗಳನ್ನು ಕೊಂಡು ತರುವುದಿಲ್ಲ. ಅದನ್ನು ಮನೆಯಲ್ಲೇ ತಯಾರಿಸಿ ಅಡುಗೆ ಮಾಡುವುದರಿಂದ ಹಳ್ಳಿ ಮನೆಗಳ ಆಹಾರ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಎನ್ನುವುದನ್ನು ನೀವು ಗಮನಿಸಬೇಕು. ಹಾಗಾದರೆ ತಡ ಮಾಡುವುದು ಬೇಡ ವಿಲೇಜ್ ಸ್ಟೈಲ್ ಚಿಕನ್ ಫ್ರೈ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.
ವಿಲೇಜ್ ಸ್ಟೈಲ್ ಚಿಕನ್ ಫ್ರೈ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
* ಬೋನ್ ಲೆಸ್ ಚಿಕನ್ - 500 ಗ್ರಾಂ
* ಮೆಣಸಿನ ಪುಡಿ - 2 ಟೇಬಲ್ಸ್ಪೂನ್
* ಜೀರಿಗೆ ಪುಡಿ - 2 ಟೇಬಲ್ಸ್ಪೂನ್
* ಕೊತ್ತಂಬರಿ ಪುಡಿ - 1 ಟೇಬಲ್ಸ್ಪೂನ್
* ಅರಿಶಿನ ಪುಡಿ - 1 ಟೇಬಲ್ಸ್ಪೂನ್
* ಗರಂ ಮಸಾಲಾ - 2 ಟೇಬಲ್ಸ್ಪೂನ್
* ಮೈದಾ - 4 ಟೇಬಲ್ಸ್ಪೂನ್
* ಅಕ್ಕಿ ಹಿಟ್ಟು - 4 ಟೇಬಲ್ಸ್ಪೂನ್
* ಕೆಂಪು ಕೇಸರಿ ಪುಡಿ - ಸ್ವಲ್ಪ
* ಎಣ್ಣೆ - ಹುರಿಯಲು ಬೇಕಾದಷ್ಟು ರುಬ್ಬಲು..
* ಬೆಳ್ಳುಳ್ಳಿ - 10 ಲವಂಗ
* ಶುಂಠಿ - 2 ಇಂಚು
* ಕರಿಬೇವಿನ ಎಲೆ - ಸ್ವಲ್ಪ
ವಿಲೇಜ್ ಸ್ಟೈಲ್ ಚಿಕನ್ ಫ್ರೈ ತಯಾರಿಸುವ ವಿಧಾನ:
* ಮೊದಲು ಮಿಕ್ಸರ್ ಜಾರ್‌ಗೆ ಶುಂಠಿ, ಬೆಳ್ಳುಳ್ಳಿ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ ನೀರು ಹಾಕದೆ ಚೆನ್ನಾಗಿ ರುಬ್ಬಿಕೊಳ್ಳಿ.
* ನಂತರ ಚಿಕನ್ ಅನ್ನು ಅರಿಶಿನ ಪುಡಿಯಿಂದ ಚೆನ್ನಾಗಿ ತೊಳೆಯಿರಿ.
* ಚಿಕನ್ ತೊಳೆದ ನಂತರ ರುಬ್ಬಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ಮೆಣಸಿನ ಪುಡಿ, ನಿಂಬೆ ರಸ, ಮೈದಾ, ಅಕ್ಕಿ ಹಿಟ್ಟು, ಕೇಸರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮತ್ತು 1-2 ಗಂಟೆಗಳ ಕಾಲ ನೆನೆಸಿ. * ನಂತರ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
* ಎಣ್ಣೆ ಬಿಸಿಯಾದಾಗ ಚಿಕನ್ ತುಂಡುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ. ಮಂದ ಉರಿಯಲ್ಲಿ ಚಿಕನ್ ಬೇಯಿಸುವುದನ್ನು ಮರೆಯಬೇಡಿ.
* ಫೈ ಮಾಡಿದ ರುಚಿಕರವಾದ ಕುರುಕಲು ಚಿಕನ್ ಬ್ರೀ ರೆಡಿ.












Click it and Unblock the Notifications