ಮದುವೆಯ ಫೋಟೋವನ್ನು ಮನೆಯ ಈ ಜಾಗದಲ್ಲಿ ಇಡಬೇಡಿ.. ಇಲ್ಲದಿದ್ದರೆ ಜಗಳಗಳು ಹೆಚ್ಚಾಗುತ್ತವೆ...
ಪ್ರತಿಯೊಬ್ಬ ವಿವಾಹಿತ ವ್ಯಕ್ತಿಯೂ ತಮ್ಮ ವೈವಾಹಿಕ ಜೀವನ ಸುಖಮಯವಾಗಿರಬೇಕೆಂದು ಬಯಸುತ್ತಾರೆ. ದಾಂಪತ್ಯ ಜೀವನ ಸುಖಕರವಾಗಿರಬೇಕಾದರೆ ದಂಪತಿಗಳು ಪರಸ್ಪರ ಸಾಕಷ್ಟು ಸಮಯ ಕಳೆಯಬೇಕು.
ಇಂದಿನ ಹಣದಾಹದ ಪ್ರಪಂಚದಲ್ಲಿ ದಂಪತಿಗಳಿಬ್ಬರೂ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ದಂಪತಿಗಳು ತಮ್ಮ ಪಾಲುದಾರರೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಹೆಚ್ಚಿನ ಒತ್ತಡದಿಂದಾಗಿ ಸಂಗಾತಿಯ ಕಡೆಗೆ ಆಕರ್ಷಣೆ ಕ್ಷೀಣಿಸಲು ಪ್ರಾರಂಭಿಸುತ್ತದೆ.

ಇದಕ್ಕೆ ಕಾರಣ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳು ಮಾತ್ರವಲ್ಲದೆ ವಾಸಿಸುವ ಮನೆಯಲ್ಲಿ ಕೆಲವು ವಾಸ್ತು ದೋಷಗಳು ಇರಬಹುದು. ಹೌದು ವಾಸಿಸುವ ಮನೆಯಲ್ಲಿ ವಾಸ್ತು ಸಮಸ್ಯೆಗಳಿದ್ದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ. ಇದರಿಂದ ಮನೆಯಲ್ಲಿ ನಾನಾ ಸಮಸ್ಯೆಗಳು ಬರಲಾರಂಭಿಸುತ್ತವೆ.
ಕೆಲ ಬಾರಿ ನಾವು ಮನೆಯಲ್ಲಿ ಮಾಡುವ ಕೆಲವು ತಪ್ಪು ಕೆಲಸಗಳು ವಾಸ್ತು ದೋಷಗಳನ್ನು ಉಂಟುಮಾಡಬಹುದು ಮತ್ತು ದಾಂಪತ್ಯ ಜೀವನಕ್ಕೆ ತೊಂದರೆ ಉಂಟುಮಾಡಬಹುದು. ಹೀಗಿರುವಾಗ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲು ಮತ್ತು ಆ ತಪ್ಪುಗಳನ್ನು ತಪ್ಪಿಸಲು ವಾಸ್ತು ಶಾಸ್ತ್ರ ಹೇಳುವ ಕೆಲವು ವಿಷಯಗಳನ್ನು ತಿಳಿದುಕೊಂಡರೆ ನಿಮ್ಮ ದಾಂಪತ್ಯ ಜೀವನ ಮಧುರವಾಗಿರುವುದು ಖಂಡಿತ.
ತಪ್ಪು ದಿಕ್ಕಿನಲ್ಲಿ ಹಾಸಿಗೆ
ವಾಸ್ತು ಶಾಸ್ತ್ರವು ವೈವಾಹಿಕ ಜೀವನದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ. ವಾಸ್ತು ಪ್ರಕಾರ ವಾಯುವ್ಯ ಮತ್ತು ಉತ್ತರ ದಿಕ್ಕುಗಳು ಸಂತೋಷದ ದಾಂಪತ್ಯ ಜೀವನಕ್ಕೆ ಸಂಬಂಧಿಸಿವೆ. ಮದುವೆಯಾದ ದಂಪತಿಗಳ ಜೀವನ ಸುಖಮಯವಾಗಿರಬೇಕಾದರೆ ದಂಪತಿಗಳ ಹಾಸಿಗೆ ಈ ದಿಕ್ಕಿನಲ್ಲೇ ಇರಬೇಕು. ಹೀಗಾದರೆ ದಾಂಪತ್ಯ ಜೀವನದಲ್ಲಿ ಮಧುರತೆ, ಸಂತೃಪ್ತಿ ಮೂಡುತ್ತದೆ.
ಮಲಗುವ ಕೋಣೆ ಸ್ವಚ್ಛವಾಗಿರಬೇಕು
ಸಂತೋಷದ ದಾಂಪತ್ಯ ಜೀವನಕ್ಕಾಗಿ, ಮಲಗುವ ಕೋಣೆಯಲ್ಲಿ ಪುಸ್ತಕಗಳು, ಲ್ಯಾಪ್‌ಟಾಪ್‌ನಂತಹ ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಇಡಬೇಡಿ. ಮಲಗುವ ಕೋಣೆ ಸ್ವಚ್ಛವಾಗಿರಬೇಕು. ಅಲ್ಲದೆ, ಮಲಗುವ ಕೋಣೆಯಲ್ಲಿ ಸೂಕ್ಷ್ಮವಾದ ಹೂವುಗಳನ್ನು ಇಟ್ಟರೆ ಅದು ದಂಪತಿಗಳ ನಡುವಿನ ಬಾಂಧವ್ಯ ಮತ್ತು ಸಂಬಂಧವನ್ನು ಬಲಪಡಿಸುತ್ತದೆ.
ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬೇಡಿ
ಸಾಮಾನ್ಯವಾಗಿ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು. ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಉತ್ತರಕ್ಕೆ ತಲೆ ಇಟ್ಟು ಮಲಗುವುದು ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಆರೋಗ್ಯ ಸಮಸ್ಯೆಗಳನ್ನೂ ಉಂಟುಮಾಡುತ್ತದೆ. ಪತಿ ಪತ್ನಿಯರಿಬ್ಬರೂ ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ವಿಪರೀತ ಆಯಾಸ ಉಂಟಾಗಿ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಯಾವ ದಿಕ್ಕಿನಲ್ಲಿ ಮಲಗಬೇಕು?
ಯಶಸ್ವಿ ದಾಂಪತ್ಯ ಜೀವನಕ್ಕಾಗಿ ವಿವಾಹಿತ ದಂಪತಿಗಳು ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಕು. ಇದು ದಂಪತಿಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಮತ್ತು ಹೀಗೆ ಮಲಗಿದರೆ ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ಹೆಚ್ಚುತ್ತದೆ.
ಮದುವೆಯ ಫೋಟೋಗಳನ್ನು ಎಲ್ಲಿ ಹಾಕಬೇಕು?
ಹೆಚ್ಚಿನವರು ತಮ್ಮ ಮದುವೆಯ ಫೋಟೋಗಳನ್ನು ಮನೆಯಲ್ಲಿಯೇ ಚೌಕಟ್ಟಿನಲ್ಲಿ ಇಡುವ ಅಭ್ಯಾಸವನ್ನು ಹೊಂದಿರುತ್ತಾರೆ. ನೀವು ಕೂಡ ಹೀಗೆ ಮಾಡಿದ್ದರೆ ಆ ಮದುವೆಯ ಫೋಟೋವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ. ಇಲ್ಲದಿದ್ದರೆ ದಂಪತಿಗಳ ನಡುವೆ ಸಮಸ್ಯೆಗಳು ಹೆಚ್ಚಾಗುತ್ತವೆ. ಮಲಗುವ ಕೋಣೆಯಲ್ಲಿ ಮದುವೆಯ ಫೋಟೋಗಳನ್ನು ಇರಿಸಲು ಪೂರ್ವವು ಅತ್ಯುತ್ತಮ ದಿಕ್ಕು. ಕುಟುಂಬದ ಫೋಟೋಗಳನ್ನು ಇರಿಸಲು ಸೌತ್ ವೆಸ್ಟ್ ಅತ್ಯುತ್ತಮ ದಿಕ್ಕು. ಹೀಗೆ ಇಟ್ಟರೆ ಮಲಗುವ ಕೋಣೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ದಂಪತಿಗಳ ನಡುವೆ ಬಾಂಧವ್ಯ ಹೆಚ್ಚುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications