Vastu Tips: ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಇಲ್ಲದಿದ್ದರೆ ಹೀಗೆ ಮಾಡಿ
ಮಕ್ಕಳು ಅಧ್ಯಯನದ ಮೇಲೆ ಗಮನಹರಿಸುವುದು ಬಹಳ ಮುಖ್ಯ. ನಿಮ್ಮ ಮಗು ಅಧ್ಯಯನದಲ್ಲಿ ನಿರಂತರವಾಗಿ ಹಿಂದುಳಿದಿದ್ದರೆ, ಅಧ್ಯಯನದ ಮೇಲೆ ಗಮನಹರಿಸಲು ಸಾಧ್ಯವಾಗದಿದ್ದರೆ, ಇಂತಹ ಸಮಯದಲ್ಲಿ ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಪಾಲಿಸಬೇಕು. ಯಾಕೆಂದರೆ ವಾಸ್ತು ದೋಷಗಳಿಂದಾಗಿ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಿ ಅಧ್ಯಯನದಲ್ಲಿ ಮಕ್ಕಳು ಏಕಾಗ್ರತೆ ಕಳೆದುಕೊಳ್ಳಬಹುದು. ಇದರಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಲು ಪ್ರಾರಂಭಿಸುತ್ತದೆ.
ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನಹರಿಸಲು ಸಹಾಯ ಮಾಡುವ ಕೆಲವು ಕ್ರಮಗಳನ್ನು ವಾಸ್ತು ಶಾಸ್ತ್ರದಲ್ಲಿ ಸೂಚಿಸಲಾಗಿದೆ. ಮಕ್ಕಳು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಾರೆ ಅಥವಾ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ನಿಮ್ಮ ಮಕ್ಕಳು ಒತ್ತಡದಲ್ಲಿಯೇ ಇರುತ್ತಾರೆ ಎಂತಾದರೆ ಈ ವಾಸ್ತು ನಿಯಮಗಳನ್ನು ಪಾಲಿಸಿ ನೋಡಿ. ಹಾಗಾದರೆ ಮಕ್ಕಳ ಸ್ಮರಣ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಸುಧಾರಿಸುವ ಕೆಲವು ವಾಸ್ತು ಪರಿಹಾರಗಳನ್ನು ಈಗ ತಿಳಿಯೋಣ.

ಮಕ್ಕಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದೇಕೆ?
ಸನಾತನ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳಲ್ಲಿಯೂ ವಾಸ್ತು ನಿಯಮಗಳನ್ನು ಪಾಲಿಸಲಾಗುತ್ತಾ ಬರಲಿದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮಾನಸಿಕ ಒತ್ತಡ ಮತ್ತು ಆರ್ಥಿಕ ನಷ್ಟವಾಗದಂತೆ ಕಾಪಾಡುತ್ತದೆ. ಇದಕ್ಕಾಗಿ ಜ್ಯೋತಿಷಿಗಳು ಯಾವಾಗಲೂ ಮನೆಯಲ್ಲಿ ಮತ್ತು ಮನೆಯ ಎಲ್ಲಾ ಕೋಣೆಗಳಲ್ಲಿ ವಾಸ್ತು ನಿಯಮಗಳನ್ನು ಪಾಲಿಸಲು ಸಲಹೆ ನೀಡುತ್ತಾರೆ.
ಮನೆ ಕಟ್ಟುವಾಗ ಕೆಲ ಜನರು ವಾಸ್ತು ನಿಯಮಗಳನ್ನು ಪಾಲಿಸುತ್ತಾರೆ. ಆದರೆ ಮನೆಯ ಕೋಣೆಗಳಲ್ಲಿ ಅವರು ವಾಸ್ತು ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವುದಿಲ್ಲ. ವಿಶೇಷವಾಗಿ ಅಧ್ಯಯನ ಕೋಣೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸದ ಕಾರಣ, ಮಗುವು ಅಧ್ಯಯನದತ್ತ ಗಮನಹರಿಸುವುದಿಲ್ಲ. ಇದು ಮಕ್ಕಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಅರಿಯದೆ ಅನೇಕ ಪೋಷಕರು ಮಕ್ಕಳನ್ನು ದೂಷಿಸಲು ಪ್ರಾರಂಭಿಸುತ್ತಾರೆ.

ಮಕ್ಕಳು ಇದ್ದಕ್ಕಿದ್ದಂತೆ ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳುವುದು ಮತ್ತು ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ತೊಂದರೆ ಅನುಭವಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಅಲ್ಲದೆ ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ, ಮಕ್ಕಳು ಹೆಚ್ಚಾಗಿ ಒತ್ತಡದಲ್ಲಿ ಇರುತ್ತಾರೆ. ಮಕ್ಕಳ ಈ ಸಮಸ್ಯೆಗಳಿಗೆ ಒಂದು ಕಾರಣ ಎಲ್ಲೋ ವಾಸ್ತು ದೋಷಗಳಾಗಿರಬಹುದು.
ದಿಕ್ಕಿನತ್ತ ಗಮನ ಹರಿಸಿ
*ಮಕ್ಕಳ ಅಧ್ಯಯನ ಕೊಠಡಿ ಈಶಾನ್ಯ ದಿಕ್ಕಿನಲ್ಲಿರಬೇಕು. ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಅಧ್ಯಯನ ಕೊಠಡಿ ಇದ್ದರೆ ಮಗುವು ಅಧ್ಯಯನದತ್ತ ಗಮನ ಹರಿಸುವುದಿಲ್ಲ.
*ಅಧ್ಯಯನ ಕೋಣೆಯಲ್ಲಿ ಮಗುವಿನ ಮುಖ ದಕ್ಷಿಣದ ಕಡೆಗೆ ಇರಬಾರದು. ಸರಳವಾಗಿ ಹೇಳುವುದಾದರೆ, ದಕ್ಷಿಣಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಡಿ. ಈ ದಿಕ್ಕಿನಲ್ಲಿ ಬೆಂಕಿ ಪ್ರಧಾನವಾಗಿರುತ್ತದೆ. ಇದರಿಂದಾಗಿ ಮಗುವಿಗೆ ಅಧ್ಯಯನದಲ್ಲಿ ಆಸಕ್ತಿ ಇರುವುದಿಲ್ಲ. ಅಲ್ಲದೆ ಮಗುವು ಕಿರಿಕಿರಿಗೊಳ್ಳುತ್ತದೆ.
*ಅಧ್ಯಯನ ಕೋಣೆಯಲ್ಲಿ ಶಾರದಾ ಮಾತೆ, ಹನುಮಂತಜಿ ಮತ್ತು ಗಣೇಶಜಿಯವರ ಚಿತ್ರಗಳನ್ನು ಇಡಲು ಮರೆಯಬೇಡಿ.
*ಅಧ್ಯಯನ ಕೋಣೆಯಲ್ಲಿ ಸ್ನಾನ ಮಾಡಿದ ನಂತರ ಮಗುವಿಗೆ ಪ್ರತಿದಿನ ಹನುಮಾನ್ ಮತ್ತು ಸರಸ್ವತಿ ಚಾಲೀಸಾ ಪಠಿಸಲು ಪ್ರೋತ್ಸಾಹಿಸಿ.

ವಾರ್ಡ್ರೋಬ್ ಎಲ್ಲಿ ಹಾಕಬೇಕು
ಅಧ್ಯಯನ ಕೋಣೆಯಲ್ಲಿ ಯಾವಾಗಲೂ ಕಪಾಟನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಿ. ಮಕ್ಕಳು ಅಧ್ಯಯನ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು. ಜ್ಯೋತಿಷ್ಯದ ಪ್ರಕಾರ, ಮಗುವಿನ ಭುಜದ ಮೇಲೆ ಬೆಳಕು ಮತ್ತು ಗಾಳಿ ಬಂದಾಗ ಮನಸ್ಸು ತೊಂದರೆಗೊಳಗಾಗುತ್ತದೆ. ಇದಕ್ಕಾಗಿ, ದೀಪಗಳ ಜೋಡಣೆಯನ್ನು ಸಹ ನೋಡಿಕೊಂಡು ಮಾಡಿ. ಮಗುವಿಗೆ ರಸ್ತೆಯಲ್ಲಿ ಅಥವಾ ಅದರ ಮುಂದೆ ಕುಳಿತು ಅಧ್ಯಯನ ಮಾಡಲು ಸಲಹೆ ನೀಡಬೇಡಿ. ಇದು ಮಗುವಿನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ.
ಅಧ್ಯಯನ ಕೋಣೆಯಲ್ಲಿ ಮೇಣದಬತ್ತಿ
ವಾಸ್ತು ತಜ್ಞರ ಪ್ರಕಾರ, ಮಕ್ಕಳ ಅಧ್ಯಯನ ಕೋಣೆಯಲ್ಲಿ ಮೇಣದಬತ್ತಿಗಳನ್ನು ಬೆಳಗಿಸಬೇಕು. ಇದು ಅವರ ಅಧ್ಯಯನದತ್ತ ಗಮನಹರಿಸುವಂತೆ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳ ಕೋಣೆಯ ಈಶಾನ್ಯ ಅಥವಾ ದಕ್ಷಿಣ ಭಾಗದಲ್ಲಿ ಮೇಣದಬತ್ತಿಯನ್ನು ಬೆಳಗಿಸುವುದರಿಂದ ಮಕ್ಕಳು ಅಧ್ಯಯನದಲ್ಲಿ ಆಸಕ್ತಿ ವಹಿಸುತ್ತಾರೆ.

ಓದುವ ಟೇಬಲ್ ಈ ದಿಕ್ಕಿನಲ್ಲಿ ಇರಲಿ
ಅಧ್ಯಯನ ಮೇಜಿನ ಆಕಾರವು ಆಯತಾಕಾರದಲ್ಲಿರಬೇಕು. ಅನಿಯಮಿತ ಆಕಾರವು ಕೆಲವು ಜನರನ್ನು ಆಕರ್ಷಿಸುತ್ತದೆ, ಆದರೆ ಇದು ಮಕ್ಕಳ ಅಧ್ಯಯನಕ್ಕೆ ಹಾನಿಕಾರಕವಾಗಿದೆ. ಅಧ್ಯಯನ ಮೇಜು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಕೇಸರಿ ತಿಲಕ ಹಚ್ಚಿ
ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಇಲ್ಲದಿದ್ದರೆ, ಅವರ ಜೇಬಿನಲ್ಲಿ ಪಟಿಕದ ತುಂಡನ್ನು ಇಡಿ. ಮಗುವಿನ ಹಣೆ ಮೇಲೆ ಪ್ರತಿದಿನ ಕೇಸರಿ ತಿಲಕವನ್ನು ಹಚ್ಚಿ. ಟಿವಿ, ವಿಡಿಯೋ ಗೇಮ್‌ಗಳು ಮತ್ತು ಸಿಡಿ ಪ್ಲೇಯರ್‌ಗಳಂತಹ ವಸ್ತುಗಳನ್ನು ಅಧ್ಯಯನ ಕೋಣೆಯಲ್ಲಿ ಇಡಬಾರದು. ಇವು ಮನಸ್ಸನ್ನು ಅಧ್ಯಯನದಿಂದ ವಿಚಲಿತಗೊಳಿಸುತ್ತವೆ.
ಬಣ್ಣದ ಗೋಡೆಗಳು
ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳು ಅಧ್ಯಯನ ಮಾಡುವ ಸ್ಥಳದ ಗೋಡೆಗಳು ಯಾವಾಗಲೂ ಆಕಾಶ ನೀಲಿ, ಬಿಳಿ ಬಣ್ಣದ್ದಾಗಿರಬೇಕು. ಮಕ್ಕಳ ಅಧ್ಯಯನ ಮೇಜುಗಳು ಸಹ ಒಂದೇ ಬಣ್ಣದಲ್ಲಿದ್ದರೆ ಇನ್ನೂ ಉತ್ತಮ. ಮಕ್ಕಳ ಅಧ್ಯಯನ ಕೊಠಡಿಗಳಿಗೆ ಕಡು ನೀಲಿ, ಕಪ್ಪು ಅಥವಾ ಕೆಂಪು ಬಣ್ಣ ಬಳಿಯಬಾರದು, ಹಾಗೆ ಮಾಡುವುದರಿಂದ ಮಕ್ಕಳ ಅಧ್ಯಯನಕ್ಕೆ ಹಾನಿಯಾಗುತ್ತದೆ.
ಅಧ್ಯಯನ ಕೋಣೆಯಲ್ಲಿ ಬೆಳಕು
ಅಲ್ಲದೆ ಮಕ್ಕಳ ಅಧ್ಯಯನ ಕೋಣೆಯಲ್ಲಿ ಸಾಕಷ್ಟು ಬೆಳಕು ಇರಬೇಕು. ಕಡಿಮೆ ಬೆಳಕು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ, ಇದರಿಂದಾಗಿ ಮಕ್ಕಳ ಮನಸ್ಸು ಅಸ್ಥಿರವಾಗಿರುತ್ತದೆ ಮತ್ತು ಅವರ ಅಧ್ಯಯನವು ಮಂದವಾಗುತ್ತದೆ. ಅಲ್ಲದೆ, ಟಿವಿ, ನಿಯತಕಾಲಿಕೆಗಳು, ಸಿಡಿ ಪ್ಲೇಯರ್, ವಿಡಿಯೋ ಗೇಮ್‌ಗಳು, ಜಂಕ್ ಮುಂತಾದ ಅನುಪಯುಕ್ತ ವಸ್ತುಗಳನ್ನು ಅಧ್ಯಯನ ಕೋಣೆಯಲ್ಲಿ ಇಡಬೇಡಿ. ಇವುಗಳು ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ.
ಗಣೇಶನ ಚಿತ್ರ ಅಥವಾ ವಿಗ್ರಹ
ಶಿಕ್ಷಣದ ದೇವತೆ ಮತ್ತು ಬುದ್ಧಿವಂತಿಕೆಯ ದೇವತೆಯಾದ ಸರಸ್ವತಿ ದೇವಿಯನ್ನು ಮಕ್ಕಳ ಅಧ್ಯಯನ ಕೋಣೆಯಲ್ಲಿ ಇರಿಸಬೇಕು. ಮಕ್ಕಳ ಅಧ್ಯಯನ ಮೇಜು ಚೌಕಾಕಾರವಾಗಿರಬೇಕು ಮತ್ತು ಮೇಜನ್ನು ಎಂದಿಗೂ ಗೋಡೆ ಅಥವಾ ಬಾಗಿಲಿನ ಪಕ್ಕದಲ್ಲಿ ಇಡಬಾರದು. ಅಲ್ಲದೆ ಬೆಳಕಿನ ಕೆಳಗೆ ಅಥವಾ ಅದರ ನೆರಳಿನಲ್ಲಿ ಮೇಜನ್ನು ಇಡಬೇಡಿ, ಇದು ಮಕ್ಕಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ.
ಅಧ್ಯಯನ ಕೊಠಡಿ ದಿಕ್ಕು
ಮಕ್ಕಳ ಅಧ್ಯಯನ ಕೊಠಡಿ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿರಬೇಕು. ಈ ದಿಕ್ಕಿನ ಅಧಿಪತಿ ಸೂರ್ಯದೇವ. ಸೂರ್ಯದೇವನನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಈಶಾನ್ಯ ದಿಕ್ಕು ಮಕ್ಕಳ ಮನಸ್ಸು, ಬುದ್ಧಿಶಕ್ತಿ ಮತ್ತು ವಿವೇಚನೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಅಧ್ಯಯನ ಕೊಠಡಿ ಎಂದಿಗೂ ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ದಿಕ್ಕಿನಲ್ಲಿ ಕೋಣೆ ಇರುವುದರಿಂದ ಮಕ್ಕಳು ಅಧ್ಯಯನದಲ್ಲಿ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಾರೆ.
ಹೀಗೆ ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಮಕ್ಕಳು ಓದಿನಲ್ಲಿ ಚುರುಕಾಗುತ್ತಾರೆ. ಅವರ ಬುದ್ಧಶಕ್ತಿ ಹೆಚ್ಚಾಗಿ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಮಗು ಈ ಎಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಈ ವಾಸ್ತು ನಿಯಮಗಳನ್ನು ಫಾಲೋ ಮಾಡಿ ನೋಡಿ.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications