ಸಾಕಷ್ಟು ಸಂಪಾದಿಸಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದಾದಲ್ಲಿ ಈ 6 ಪರಿಹಾರಗಳನ್ನು ಪ್ರಯತ್ನಿಸಿ

ಹೆಚ್ಚಿನ ಜನರು ತಮ್ಮ ಖರ್ಚಿನ ಬಗ್ಗೆ ಚಿಂತೆ ಮಾಡುತ್ತಾರೆ. ಲಕ್ಷಗಟ್ಟಲೆ ಸಂಪಾದನೆ ಮಾಡಿದರೂ ತಿಂಗಳ ಕೊನೆಯಲ್ಲಿ ಹಣಕ್ಕಾಗಿ ಬೇರೆಯವರ ಮುಂದೆ ಕೈ ಚಾಚಬೇಕು. ಈ ಟ್ರೆಂಡ್ ವರ್ಷಾನುಗಟ್ಟಲೆ ಚಾಲ್ತಿಯಲ್ಲಿದ್ದು ಸ್ವಲ್ಪ ಜಾಗರೂಕರಾಗಿದ್ದರೆ ಹಣವನ್ನು ಉಳಿಸಬಹುದು. ನಿಮ್ಮ ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಕೆಲವು ವಾಸ್ತು ಪರಿಹಾರಗಳಿವೆ. ಇದನ್ನು ಅನುಸರಿಸಿದರೆ ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತದೆ.

ಈಶಾನ್ಯ ದಿಕ್ಕು

ಮನೆಯಲ್ಲಿ ಈಶಾನ್ಯವನ್ನು ಮುಖ್ಯವಾದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನ ಕಾರಣದಿಂದಾಗಿ ನಿಮ್ಮ ಮನೆಯಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಇದಕ್ಕಾಗಿ ನಿಮ್ಮ ಮನೆಯ ಈಶಾನ್ಯ ದಿಕ್ಕಿಗೆ ಪ್ರಾಮುಖ್ಯತೆಯನ್ನು ನೀವು ನೀಡಬೇಕು. ಅದೆಂದರೆ, ಈಶಾನ್ಯ ಮೂಲೆಯನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸುವುದು ತುಂಬಾ ಮುಖ್ಯ. ಈಶಾನ್ಯ ದಿಕ್ಕನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳು ದೂರವಾಗಿ ಕೆಲದ ಮೇಲೆ ನಿಗಾ ಇಡುವಿರಿ.

Try these 6 solutions if you are earning a lot but you are not getting enough money

ಸಮುದ್ರ ಉಪ್ಪಿನ ಬಳಕೆ

ವಾಸ್ತುದಲ್ಲಿ ಸಮುದ್ರದ ಉಪ್ಪುಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸಮುದ್ರದ ಉಪ್ಪು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡಲು, ನಿಮ್ಮ ಮನೆಯ ಮೂಲೆಗಳಲ್ಲಿ ಸಮುದ್ರದ ಉಪ್ಪನ್ನು ಇಡಬೇಕು. ಅಲ್ಲದೆ ನೆಲವನ್ನು ಒರೆಸುವಾಗ ಆ ನೀರಿಗೆ ಸಮುದ್ರದ ಉಪ್ಪನ್ನು ಕೂಡ ಸೇರಿಸಬೇಕು. ಇದರಿಂದ ಮನೆಯಲ್ಲಿ ಸಮಸ್ಯೆಗಳು ದೂರವಾಗಿ ಮನಶಾಂತಿ ನೆಲೆಸುತ್ತದೆ. ಕೆಲಸದಲ್ಲಿ ಗಮನ ಹೆಚ್ಚಾಗುತ್ತದೆ. ಶ್ರದ್ಧೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ. ಹಣದ ಹಲವಾರು ಮೂಲಗಳ ಬಗ್ಗೆ ನೀವು ಆಲೋಚನೆಯನ್ನು ಮಾಡುವಿರಿ.

ಗಾಜು

ಬಹುಶಃ ವಾಸ್ತು ಶಾಸ್ತ್ರದಲ್ಲಿ ಕನ್ನಡಿಯ ಮಹತ್ವ ಏನೆಂದು ಹೇಳಬೇಕಾಗಿಲ್ಲ. ಇದು ಯಾರ ಅದೃಷ್ಟವನ್ನು ಬೇಕಾದರೂ ಬದಲಾಯಿಸಬಹುದು. ಕನ್ನಡಿಯನ್ನು ಎಂದಿಗೂ ಮುಖ್ಯ ಬಾಗಿಲಿನ ಮುಂದೆ ಇಡಬಾರದು. ಇದರಿಂದಾಗಿ ಮನೆಯಲ್ಲಿ ನಕಾರಾತ್ಮಕತೆ ಬರುತ್ತದೆ ಮತ್ತು ಮನೆಯ ಜನರು ತಮ್ಮ ಆರೋಗ್ಯದ ಬಗ್ಗೆ ಚಿಂತಿತರಾಗಿರುತ್ತಾರೆ. ಈ ಬಗ್ಗೆ ಗಮನ ಹರಿಸುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.

Try these 6 solutions if you are earning a lot but you are not getting enough money

ಹರಳಿನ ಚೆಂಡು (ಕ್ರಿಸ್ಟಲ್ ಬಾಲ್)

ವಾಸ್ತು ಪ್ರಕಾರ ಕ್ರಿಸ್ಟಲ್ ಬಾಲ್ ಕೂಡ ತುಂಬಾ ಅದೃಷ್ಟವೆಂದು ಪರಿಗಣಿಸಲಾಗಿದೆ. ಆದ್ದರಿಂದ ನೀವು ಅವುಗಳನ್ನು ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಇಡಬೇಕು. ಇದು ನಿಮ್ಮ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಭಾವನೆ ಮೂಡಿಸುತ್ತದೆ ಮತ್ತು ನಿಮ್ಮ ಕಾರ್ಯಕ್ಷಮತೆ ಸುಧಾರಿಸುತ್ತದೆ. ಸ್ಫಟಿಕ ಚೆಂಡುಗಳು ನಿಮ್ಮೊಳಗೆ ಧನಾತ್ಮಕ ಶಕ್ತಿಯನ್ನು ತರುತ್ತವೆ. ನಿಮ್ಮ ಯೋಚನಾ ಶಕ್ತಿಯನ್ನು ಎಹಚ್ಚಿಸುತ್ತವೆ. ಇದರಿಂದ ನಿಮಗೆ ಉದ್ಯೋಗದಲ್ಲಿ ಹೆಚ್ಚಿನ ಸಹಾಯವಾಗಬಹುದು.

ಲೋಹದ ಆಮೆ

ವಾಸ್ತು ಪ್ರಕಾರ ನೀವು ಮನೆಯಲ್ಲಿ ಲೋಹದ ಆಮೆಯನ್ನು ಇಟ್ಟುಕೊಂಡರೆ, ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಜೊತೆಗೆ ತಾಯಿ ಲಕ್ಷ್ಮಿಯ ಆಶೀರ್ವಾದವೂ ಉಳಿಯುತ್ತದೆ. ಲೋಹದ ಆಮೆಯನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ.

ಕಮಲದ ಮಾಲೆ

ನಿಮ್ಮ ಮನೆಯಲ್ಲಿ ನಿರಂತರ ಹಣದ ಕೊರತೆಯಿದ್ದರೆ ಮತ್ತು ನಿಮ್ಮ ಕುಟುಂಬ ಸದಸ್ಯರು ಅನೇಕ ಸಮಸ್ಯೆಗಳಿಂದ ಸುತ್ತುವರೆದಿದ್ದರೆ, ನೀವು ಕಮಲದ ಮಾಲೆಯಿಂದ ದೇವರನ್ನು ಪೂಜಿಸಬಹುದು. ಕಮಲದ ಮಾಲೆಯನ್ನು ಮನೆಯಲ್ಲಿ ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ, ಕಮಲದ ಜಪಮಾಲೆಯನ್ನು ಬಳಸಿಕೊಂಡು ನಿಮ್ಮ ಇಚ್ಛೆಯ ಮಂತ್ರವನ್ನು 108 ಬಾರಿ ಪಠಿಸಿ. ಇದರಿಂದ ಮನೆಯಲ್ಲಿ ಹಣದ ಸಮಸ್ಯೆಗಳು ದೂರವಾಗಿ ಆರ್ಥಿಕ ಅಭಿವೃದ್ಧಿ ಕಾಣುವಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+