ನಾವು ಮಾಡಲಾಗದ್ದು ಮಕ್ಕಳು ಮಾಡಲಿ ಎಂದು ಪೋಷಕರು ಬಯಸುವುದೆಷ್ಟು ಸರಿ?
ಮಕ್ಕಳ ಮನಸ್ಸು ಸೂಕ್ಷ್ಮವಾಗಿರುವುದರಿಂದ ಅವರನ್ನು ದಂಡಿಸುವ ಮುನ್ನ ಪೋಷಕರು ಎಚ್ಚರಿಕೆ ವಹಿಸಬೇಕಾಗುತ್ತದೆ. ಜತೆಗೆ ಆಟ ಆಡುವ ವಯಸ್ಸಿನಲ್ಲಿ ಆಟಕ್ಕೂ ಅವಕಾಶ ಕೊಡದೆ ಅವರಿಗೆ ಇಲ್ಲ ಸಲ್ಲದ ಚಟುವಟಿಕೆಗಳಿಗೆ ದೂಡಿ ಮಾನಸಿಕ ಒತ್ತಡ ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ. ಮಕ್ಕಳನ್ನು ಮಕ್ಕಳಂತೆಯೇ ಬೆಳೆಸುವತ್ತ ಗಮನಹರಿಸುವುದು ಈಗಿನ ಅಗತ್ಯತೆಯಾಗಿದೆ.
ನಿಜ ಹೇಳಬೇಕೆಂದರೆ ಪ್ರತಿಯೊಬ್ಬ ತಂದೆ ತಾಯಿಗೂ ಮಕ್ಕಳೇ ಆಸ್ತಿ. ಅವರನ್ನು ಓದಿಸಬೇಕು, ಉನ್ನತ ಹುದ್ದೆಗೆ ಕಳುಹಿಸಬೇಕು, ಹೀಗೆ ಹತ್ತಾರು ಕನಸುಗಳನ್ನು ಮಕ್ಕಳಲ್ಲಿ ಕಾಣುತ್ತಿರುತ್ತಾರೆ. ಅಷ್ಟೇ ಅಲ್ಲದೆ, ತಾವೇನು ಮಾಡಲಾಗಲಿಲ್ಲವೋ ಅವುಗಳೆಲ್ಲವನ್ನು ಮಕ್ಕಳಲ್ಲಿ ಮಾಡಿಸುವತ್ತ ಒತ್ತು ನೀಡುತ್ತಾರೆ. ಇದು ಕೆಲವೊಮ್ಮೆ ಮಕ್ಕಳಿಗೆ ಮಾನಸಿಕ ಹಿಂಸೆಯಾಗಿ ಕಾಡಿದರೂ ಅಚ್ಚರಿಪಡಬೇಕಾಗಿಲ್ಲ.

ಇನ್ನು ನಮ್ಮ ಮಕ್ಕಳು ಬೇರೆಯವರಿಗಿಂತ ಯಾವುದರಲ್ಲೂ ಕಡಿಮೆಯಾಗಬಾರದೆಂಬ ಉದ್ದೇಶದಿಂದಲೇ ತಮ್ಮ ಅತೃಪ್ತ ಆಸೆ ಆಕಾಂಕ್ಷೆಗಳನ್ನೆಲ್ಲ ಮಕ್ಕಳ ಮೇಲೆ ಹೇರಿ ಅವರ ಮೂಲಕ ತಾವು ಮಾಡಲಾಗದನ್ನು ಈಡೇರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಕೆಲವೊಮ್ಮೆ ಪೋಷಕರು ಇಷ್ಟಪಡುವ ವಿಚಾರ ಮಕ್ಕಳಿಗೆ ಇಷ್ಟವಾಗದೆ ಹೋಗ ಬಹುದು ಇಂತಹ ಸಂದರ್ಭದಲ್ಲಿ ಫೋಷಕರ ಒತ್ತಡಕ್ಕೆ ಕಟ್ಟು ಬಿದ್ದು ಮಕ್ಕಳು ಅನಿವಾರ್ಯವಾಗಿ ಅದನ್ನು ಒಪ್ಪಿಕೊಂಡರೂ ಅದರಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇಲ್ಲದಿಲ್ಲ.
ಮಕ್ಕಳ ತಲೆ ಮೇಲೆ ಹೊಡೆಯಬೇಡಿ
ಕೆಲವು ಸಂದರ್ಭಗಳಲ್ಲಿ ತಮ್ಮ ಮಕ್ಕಳಿಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡದೆ ತಮ್ಮ ಅಭಿಲಾಷೆಯಂತೇ ಆಗಬೇಕೆಂದು ಹಠ ಹಿಡಿಯುತ್ತಾರೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಿದ್ದರೂ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುವ ತವಕದಲ್ಲಿ ಕೆಲವೊಮ್ಮೆ ಮಕ್ಕಳ ಭವಿಷ್ಯವನ್ನೇ ಹಾಳು ಮಾಡಿಬಿಡುತ್ತಾರೆ. ಇನ್ನು ತಮ್ಮ ಮಕ್ಕಳು ಹೆಚ್ಚು ಅಂಕ ತೆಗೆಯಬೇಕೆಂದು ಪೋಷಕರು ಸರ್ಕಸ್ ಮಾಡುತ್ತಾರೆ. ಮಕ್ಕಳಿಗೆ ವಿದ್ಯೆಯನ್ನು ಇಷ್ಟಪಟ್ಟು ಕಲಿಯಲು ಬಿಡದೆ ಒತ್ತಡ ಹೇರುತ್ತಾರೆ. ಕಲಿಯದಿದ್ದರೆ ಹೊಡೆದು ಕಲಿಸುತ್ತಾರೆ.

ಇದೆಲ್ಲದರ ನಡುವೆ ತುಂಟ ಮಕ್ಕಳು, ಪೋಷಕರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುವ ಮಕ್ಕಳು ಇಲ್ಲದಿಲ್ಲ. ಇಂತಹ ಸಂದರ್ಭಗಳಲ್ಲಿ ಕೋಪದಿಂದ ಮಕ್ಕಳಿಗೆ ಎಲ್ಲೆಂದರಲ್ಲಿ ಹೊಡೆಯುವ ತಂದೆತಾಯಿಗಳಿದ್ದಾರೆ. ಆದರೆ ಹಾಗೆ ಹೊಡೆಯುವ ಮುನ್ನ ಹೆತ್ತವರು ಎಚ್ಚರ ವಹಿಸುವುದು ಅಗತ್ಯ. ಮಕ್ಕಳು ಕಲಿಯಲಿಲ್ಲ ಅಂದ್ರೆ ತಲೆ ಮೇಲೆ ಎರಡೇಟು ಹೊಡೆಯಿರಿ ಕಲಿಯುತ್ತಾರೆ ಎಂಬ ಮಾತಿದೆ. ಆದರೆ ಹಾಗೆ ಯಾವತ್ತೂ ಮಾಡಬೇಡಿ. ಏಕೆಂದರೆ ಹಾಗೆ ಮಾಡುವುದರಿಂದ ಏನೆಲ್ಲ ಸಮಸ್ಯೆಗಳಿವೆ ಎಂಬುದರ ಬಗ್ಗೆ ದೊಡ್ಡದೊಂದು ಅಧ್ಯಯನವೇ ನಡೆದಿದ್ದು, ಅದು ಹಲವು ವಿಷಯಗಳನ್ನು ಹೊರ ಹಾಕಿದೆ.
ಮಕ್ಕಳ ಕುರಿತಂತೆ ಐದು ದಶಕಗಳ ಅಧ್ಯಯನ
ಕೆಲವು ಪೋಷಕರಿಗೆ ಕೆಟ್ಟದೊಂದು ಅಭ್ಯಾಸವಿದೆ. ಮಕ್ಕಳ ಮೇಲೆ ಕೋಪ ಬಂದರೆ ಮುಖಮೂತಿ, ತಲೆ ಯಾವುದೂ ನೋಡದೆ ಬಾರಿಸಿ ಬಿಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ತಲೆಗೆ ಹೊಡೆಯುವುದೇ ಜಾಸ್ತಿ. ಆದರೆ ಹೀಗೆ ಮಕ್ಕಳ ತಲೆ ಮೇಲೆ ಹೊಡೆಯುವ ಪೋಷಕರು ಇನ್ಮುಂದೆ ಆ ರೀತಿ ಮಾಡಬೇಡಿ. ಏಕೆಂದರೆ ನೀವು ಹೊಡೆಯುವ ಎರಡೇಟು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆಯಂತೆ.
ಈ ಕುರಿತಂತೆ ಸತತ ಐದು ದಶಕಗಳ ಕಾಲ ಅಧ್ಯಯನ ನಡೆಸಲಾಗಿದ್ದು, ಮಕ್ಕಳ ತಲೆ ಮೇಲೆ ಅಥವಾ ಹಿಂದೆ ಹೊಡೆಯುವುದರಿಂದ ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ಈ ಅಧ್ಯಯನ ಹೇಳಿದೆ. ತಲೆ ಮೇಲೆ ಹೊಡೆಯುವುದರಿಂದ ಮಾನಸಿಕ ಖಿನ್ನತೆ ಹಾಗೂ ಗ್ರಹಣ ಶಕ್ತಿಯನ್ನು ಮಕ್ಕಳು ಕಳೆದುಕೊಳ್ಳುತ್ತಾರಂತೆ. ಈ ಬಗ್ಗೆ 1,60,000 ಮಕ್ಕಳನ್ನು ಸಂಶೋಧನೆಗೊಳಪಡಿಸಲಾಗಿದ್ದು, ಈ ವೇಳೆ ಈ ವಿಚಾರಗಳು ಹೊರಬಂದಿವೆ.

ಮೊದಲಿಗೆ ಮನೆಗೆ ಒಳ್ಳೆಯ ಮಕ್ಕಳಾಗಲಿ
ಮಕ್ಕಳು ತಪ್ಪು ಮಾಡಿದಾಗ ತಿಳಿ ಹೇಳಿ ಅವರನ್ನು ತಿದ್ದಬೇಕು. ಆದರೆ ಅವರಿಗೆ ಹೊಡೆಯುವ ಮುನ್ನ ಸ್ವಲ್ಪ ಯೋಚಿಸಿ ಯಾವತ್ತೂ ತಲೆಗೆ ಹೊಡೆಯಲೇ ಬೇಡಿ. ಅಷ್ಟೇ ಅಲ್ಲದೆ ಯಾರದ್ದೋ ಮಕ್ಕಳಿಗೆ ಹೋಲಿಸಿ ನಿಮ್ಮ ಮಕ್ಕಳಿಗೆ ಬಯ್ಯುವುದನ್ನು ನಿಲ್ಲಿಸಿ. ಮಕ್ಕಳಲ್ಲಿ ಏನು ಆಸಕ್ತಿ ಇದೆಯೋ ಅದರತ್ತ ಗಮನಹರಿಸಿ. ಅದನ್ನು ಹೊರತುಪಡಿಸಿ ನಾವೇನು ಆಗಲಿಲ್ಲವೋ ಅದೇ ಆಗಬೇಕೆಂದು ಮಕ್ಕಳ ಮೇಲೆ ಒತ್ತಡ ತರಬೇಡಿ. ಬಾಲ್ಯದಲ್ಲಿ ಮೊದಲಿಗೆ ಅವರು ಮನೆಗೆ ಒಳ್ಳೆಯ ಮಕ್ಕಳಾಗಲಿ ಆ ನಂತರ ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಲಿ... ಮುಂದೆ ಬೆಳೆಯುತ್ತಾ ಅವರಿಗೆ ಏನು ಆಸಕ್ತಿ ಇದೆಯೋ ಅದನ್ನು ಅರಿತು ಅತ್ತ ಗಮನಹರಿಸಿ.
-
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications