Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು
ಭಾರತದಲ್ಲಿ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅನೇಕ ಕಡೆಗಳಲ್ಲಿ ಬಿಸಿಲಿನ ತಾಪಮಾನ 35°C ಮೀರಿಸುತ್ತಿದೆ. ಬೇಸಿಗೆ ರಜೆಗಳು ಬಂದಾಗ ಮಕ್ಕಳಿಗೆ ಆಟ, ಮೋಜು ಮತ್ತು ಮನೆಯ ಹೊರಗಿನ ಆಟಗಳು ಮುಖ್ಯವಾಗಿರುತ್ತವೆ. ಆದರೆ ಇದೇ ಸಮಯದಲ್ಲಿ ಬಿಸಿಲಿನ ತಾಪಮಾನವೂ ಹೆಚ್ಚಾಗಿರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುವುದು ಅಗತ್ಯ. ಸರಿಯಾದ ಯೋಜನೆ ಮತ್ತು ಕೆಲವು ಸರಳ ಕ್ರಮಗಳಿಂದ ಮಕ್ಕಳು ಸುರಕ್ಷಿತವಾಗಿಯೂ ಮತ್ತು ಉತ್ಸಾಹದಿಂದಲೂ ಮಕ್ಕಳು ರಜೆಗಳನ್ನು ಆನಂದಿಸಬಹುದು.
ಶಾಲಾ ಸಮಯದಲ್ಲಿ ಬದಲಾವಣೆ
ಬೇಸಿಗೆಯಲ್ಲಿ ಬೆಳಗಿನ ಸಮಯದಲ್ಲಿ ಶಾಲೆ ನಡೆಸುವುದು ಉತ್ತಮ. ಈ ಸಮಯದಲ್ಲಿ ತಾಪಮಾನ ಕಡಿಮೆ ಇರುತ್ತದೆ. ಅನೇಕ ಶಾಲೆಗಳು ಬೇಸಿಗೆಯಲ್ಲಿ ಬೇಗ ಆರಂಭಿಸಿ ಮಧ್ಯಾಹ್ನದ ಬಿಸಿಲಿನ ಮೊದಲು ಮುಗಿಸುವುದು ಒಳ್ಳೆಯದು. ಪೋಷಕರು ಮಕ್ಕಳನ್ನು ಸಮಯಕ್ಕೆ ಶಾಲೆಗೆ ಕಳುಹಿಸುವುದು ಮುಖ್ಯವಾಗಿರುತ್ತದೆ.

ಬೆಳಿಗ್ಗೆ ಮತ್ತು ಸಂಜೆ ವೇಳೆ ಆಟದ ಸಮಯ
ಶಾಲೆಗಳು ರಜೆ ಇರುವುದರಿಂದ ಮಕ್ಕಳು ಹೆಚ್ಚು ಸಮಯವನ್ನು ಆಟವನ್ನು ಆಡಲು ಹೊರಗೆ ಕಳೆಯಲು ಇಷ್ಟಪಡುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬಿಸಿಲು ತಿವ್ರವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಮನೆಯ ಹೊರಾಂಗಣದ ಆಟಗಳನ್ನು ಆಡದೆ ಇರುವುದು ಒಳ್ಳೆಯದು. ಬೆಳಿಗ್ಗೆ ಬೇಗ ಅಥವಾ ಸಂಜೆ ಸಮಯದಲ್ಲಿ ಆಟಕ್ಕೆ ಅವಕಾಶ ನೀಡುವುದು ಮಕ್ಕಳಿಗೆ ಸುರಕ್ಷಿತ ಎಂದು ಹೇಳಬಹುದು.
ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು ಮುಖ್ಯ
ಮಕ್ಕಳನ್ನು ಆಟವಾಡಲು ಬಿಟ್ಟಾಗ ಅವರು ಆಟದಲ್ಲಿ ಮಗ್ನರಾಗಿ ನೀರು ಕುಡಿಯುವುದನ್ನು ಮರೆತುಬಿಡುತ್ತಾರೆ. ಆದ್ದರಿಂದ ಪೋಷಕರಾದ ನಾವುಗಳು ಮಕ್ಕಳಿಗೆ ನಿರಂತರವಾಗಿ ನೀರು ಕುಡಿಯಲು ಹೇಳಬೇಕು. ಎಳನೀರು, ಮಜ್ಜಿಗೆ ಅಥವಾ ನಿಂಬೆ ಹಣ್ಣಿನ ಜ್ಯೂಸ್ ಇತರ ಆರೋಗ್ಯಕರ ಪಾನೀಯಗಳನ್ನು ಕೊಡಬೇಕು.

ಬೇಸಿಗೆಯ ಉಡುಪು
ಬೇಸಿಗೆಯಲ್ಲಿ ಮಕ್ಕಳಿಗೆ ತೆಳುವಾದ ಅಥವಾ ಹತ್ತಿಯ ಬಟ್ಟೆಗಳನ್ನು ಮಕ್ಕಳಿಗೆ ಹಾಕಬೇಕು. ಹೊರಗೆ ಹೋಗುವಾಗ ಟೋಪಿ ಅಥವಾ ಕ್ಯಾಪ್ ಬಳಸುವುದರಿಂದ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ.
ಬೇಸಿಗೆ ಕಾಲದಲ್ಲಿ ಸೂಕ್ತವಾದ ಆಹಾರ
ಬೇಸಿಗೆಯಲ್ಲಿ ಎಣ್ಣೆಯಿಂದ ಮಾಡಿದ ಆಹಾರಗಳನ್ನು ಮಕ್ಕಳಿಗೆ ನೀಡಬಾರದು, ಹೆಚ್ಚಾಗಿ ಈ ಸಮಯದಲ್ಲಿ ಹಣ್ಣುಗಳು, ಸಲಾಡ್, ಮೊಸರು ಮತ್ತು ಮಜ್ಜಿಗೆಯಂತಹ ಪದಾರ್ಥಗಳನ್ನು ಮಕ್ಕಳಿಗೆ ನೀಡುವುದು ಒಳ್ಳೆಯದು.

ಹೀಟ್ ಸ್ಟ್ರೆಸ್ ಲಕ್ಷಣಗಳು
ಅತಿಯಾಗಿ ಬೆವರುವುದು, ದಣಿವು, ತಲೆ ಸುತ್ತುವುದು ಮತ್ತು ವಾಕರಿಕೆ ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಮರದ ಕೆಳಗೆ ಅಥವಾ ನೆರಳಿನ ಕಡೆ ಕರೆದೊಯ್ದು ನೀರು ನೀಡುವುದು ಮುಖ್ಯ.
ಪ್ರಯಾಣದಲ್ಲಿ ಜಾಗ್ರತೆ
ರಜೆಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಬಿಸಿಲಿನಿಂದ ರಕ್ಷಣೆ ಮುಖ್ಯ. ಮಕ್ಕಳು ಪ್ರಯಾಣ ಮಾಡುವಾಗ ಜೊತೆಗ ಟೋಪಿಯನ್ನು ಧರಿಸುವುದು ಮತ್ತು ನೀರು ಸಹ ಜೊತೆಯಲ್ಲಿ ಇರುವುದು ಒಳ್ಳೆಯದು.
ಜಾಗೃತಿ ಮತ್ತು ಅಭ್ಯಾಸ ಬೆಳೆಸುವುದು
ಮಕ್ಕಳಿಗೆ ನೀರು ಕುಡಿಯುವುದು, ಹಣ್ಣುಗಳನ್ನು ತಿನ್ನುವುದು, ಹೆಚ್ಚಾಗಿ ನೆರಳಿನಲ್ಲಿ ಇರಲು ಪ್ರಯತ್ನಿಸುವುದು, ಸರಿಯಾದ ಉಡುಪು ಧರಿಸುವುದು ಮುಂತಾದ ಅಭ್ಯಾಸಗಳನ್ನು ಕಲಿಸಬೇಕು. ಶಾಲೆ ಮತ್ತು ಮನೆ ಎರಡೂ ಕಡೆ ಈ ಅಭ್ಯಾಸಗಳನ್ನು ಪಾಲಿಸುವುದು ಮುಖ್ಯ.
ಬೇಸಿಗೆಯಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಲು ಸಣ್ಣ ಕ್ರಮಗಳೇ ಸಾಕು. ಸರಿಯಾದ ಸಮಯ ನಿರ್ವಹಣೆ, ಆಹಾರ ಪದ್ಧತಿ ಮತ್ತು ಜಾಗೃತಿಯಿಂದ ಮಕ್ಕಳು ಸುರಕ್ಷಿತವಾಗಿಯೂ ಸಂತೋಷದಿಂದಲೂ ಬೇಸಿಗೆಯನ್ನು ಅನುಭವಿಸಬಹುದು.












Click it and Unblock the Notifications