ಕಾಡುವ ಬ್ರೇಕಪ್ ನೋವಿನಿಂದ ಹೊರಬರುವುದು ಹೇಗೆ? ಇಲ್ಲಿದೆ ಸರಳ ಸಲಹೆಗಳು
ಪ್ರೀತಿಯಲ್ಲಿ ಬೀಳುವುದು ತಪ್ಪಲ್ಲ, ಪ್ರೀತಿ ಮಾಡುವುದು ತಪ್ಪಲ್ಲ, ಆದರೆ ಪ್ರೀತಿ ಎನ್ನುವ ಸಂಬಂಧದಲ್ಲಿ ತಪ್ಪು ಆಯ್ಕೆಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವುದು ತಪ್ಪಾಗಿರುತ್ತದೆ. ಒಲ್ಲದ ಮನಸ್ಸಿನಲ್ಲಿ ಇಷ್ಟ ಇಲ್ಲದ ಸಂಬಂಧದಲ್ಲಿ ಜೀವಿಸುವುದಕ್ಕಿಂತ ಕೆಲವೊಮ್ಮೆ ಬ್ರೇಕಪ್ ಉತ್ತಮ ಆಯ್ಕೆಯಾಗಿರುತ್ತದೆ. ಪ್ರೀತಿಯಲ್ಲಿ ಮೋಸ ಮಾಡುವುದು, ಹೋಗುವುದು, ಎರಡು ಸಾಮಾನ್ಯ ಆದರೆ ಪ್ರೀತಿ ಹೆಸರಿನಲ್ಲಿ ನಿಮಗೆ ನೀವೇ ಮೋಸ ಮಾಡಿಕೊಳ್ಳಬಾರದು.
ಬ್ರೇಕಪ್ ಕೇವಲ ಗರ್ಲ್‌ಫ್ರೆಂಡ್, ಬಾಯ್ ಫ್ರೆಂಡ್ ಸಂಬಂಧಕ್ಕಷ್ಟೇ ಅಲ್ಲ. ಮದುವೆಯಾದ ಸಂಬಂಧದಲ್ಲಿಯೂ ಹೊಂದಾಣಿಕೆ ಇರದಿದ್ದರೆ ಅಂತಹ ಸಂಗಾತಿಯಿಂದ ದೂರ ಇರುವುದರಲ್ಲಿ ತಪ್ಪೇನಿದೆ..? ಕಾನೂನು ಪ್ರಕಾರವಾಗಿ ದೂರಾಗ ಬೇಕಾದರೆ ವಿಚ್ಛೇದನ ಪಡೆಯಬೇಕಾಗುತ್ತದೆ. ಆದರೆ ಒಂದು ದಿನ, ಒಂದು ಕ್ಷಣಕ್ಕಾದರೂ ನೀವು ಅವರನ್ನು ಮನಸಾರೆ ಇಷ್ಟ ಪಟ್ಟಿರುತ್ತೀರಿ. ಇಂತವರನ್ನು ದೂರ ಮಾಡುವುದು ತುಂಬಾ ಕಷ್ಟ. ಹೀಗಾಗಿ ವಿಚ್ಛೇದನ ಅಥವಾ ಬ್ರೇಕಪ್ ನಂತರ ಕೆಲವರು ತಮ್ಮ ಜೀವನ ಮುಗಿಯಿತು ಎಂದುಕೊಳ್ಳುತ್ತಾರೆ.

ಆಗಿದೆಲ್ಲಾ ಒಳ್ಳೆಯದಕ್ಕೆ ಎಂದುಕೊಂಡು ಮುಂದೆ ಸಾಗುವವರೂ ಇದ್ದಾರೆ. ಆಗಿದ್ದೇಲ್ಲ ನನ್ನಿಂದಲೇ ನನ್ನ ಜೀವನ ಇಷ್ಟೇ ಎಂದು ಕೊರಗುವವರು ಸಹ ಇದ್ದಾರೆ. ಇಂತವರಿಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ನೀವು ಇಷ್ಟಪಟ್ಟ ವ್ಯಕ್ತಿ ಅಥವಾ ನಿಮ್ಮ ಜೀವನ ಸಂಗಾತಿಯಿಂದ ದೂರಾದಾಗ ಕಾಡುವ ಒಂಟಿತನವನ್ನು ನೀಗಿಸಿಕೊಳ್ಳುವುದು ಹೇಗೆ..? ಬ್ರೇಕಪ್‌ನಿಂದ ಆಗುವ ನೋವಿನಿಂದ ಹೊರ ಬರುವುದು ಹೇಗೆ ಎನ್ನುವುದಕ್ಕೆ ಇಲ್ಲಿ ಕೆಲವು ಸರಳ ಸಲಹೆಗಳನ್ನು ನೀಡಲಾಗಿದೆ.
ನಿಮ್ಮ ಆತ್ಮವಿಶ್ವಾಸ ಹೆಚ್ಚುವ ಕೆಲಸಗಳನ್ನು ಮಾಡಿ
ಬ್ರೇಕಪ್ ನಂತರ ಮೊದಲು ನೀವು ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳಿ. ದಿನದ ಹೆಚ್ಚಿನ ಸಮಯ ಮೊಬೈಲ್ ನೋಡುವುದನ್ನು ಬಿಟ್ಟು ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ನೀವು ಈವರೆಗೂ ಭಯಪಡುತ್ತಿದ್ದ ಕೆಲಸಗಳನ್ನು ಮಾಡಲು ಯತ್ನಿಸಿ. ಕೆಟ್ಟ ಅಭ್ಯಾಸಗಳತ್ತ ಗಮನ ಹರಿಯದಂತೆ ನಿಮ್ಮನ್ನು ನೀವು ಬ್ಯೂಸಿ ಮಾಡಿಕೊಳ್ಳಿ. ನಿಮ್ಮಲ್ಲಿನ ಕೊರತೆಯ ಬಗ್ಗೆ ಯೋಚಿಸುತ್ತಾ ಕೂರುವ ಬದಲು ನಿಮ್ಮ ಬಲ ಏನು ಎನ್ನುವುದರ ಬಗ್ಗೆ ಗಮನ ಹರಿಸಿ. ಅದರ ಮೇಲೆ ಕೆಲಸ ಮಾಡಿ. ಯಾರೂ ಇಲ್ಲದೇ ನಾನು ಬದುಕ ಬಲ್ಲೆ ಎನ್ನುವ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳನ್ನು ಮಾಡಿ.

ನಿಮ್ಮ ಮಾಜಿ ಪ್ರೀತಿಯ ನೆನಪುಗಳಿಗೆ ಗುಡ್ ಬೈ ಹೇಳಿ
ಬ್ರೇಕಪ್‌ನ ನಂತರ ಮೊದಲು ನೀವು ನಿಮ್ಮ ಮಾಜಿ ಪ್ರೀತಿಯ ನೆನಪುಗಳಿಗೆ ಗುಡ್‌ಬೈ ಹೇಳಬೇಕು. ಅವರಿಂದ ಪಡೆದ ಉಡುಗೊರೆಯನ್ನು ನಿಮ್ಮಿಂದ ದೂರ ಮಾಡಿ. ಅವರೊಂದಿಗಿನ ಫೋಟೋಗಳನ್ನು ಡಿಲೀಟ್ ಮಾಡಿ, ಅವರೊಂದಿಗೆ ಕಳೆದ ಕ್ಷಣಗಳನ್ನು ಮರೆಯಲು ಯತ್ನಿಸಿ, ಅವರ ಯಾವ ಸಂಪರ್ಕವೂ ಇಲ್ಲದಂತೆ ಬದುಕಲು ಯತ್ನಿಸಿ. ಬ್ರೇಕಪ್ ನಂತರವೂ ಅವರ ನೆನಪುಗಳನ್ನು ಮೆಲುಕು ಹಾಕುತ್ತಿದ್ದರೆ ಇನ್ನಷ್ಟು ನೋವು ನಿಮ್ಮನ್ನು ಆವರಿಸುತ್ತದೆ. ಹೀಗಾಗಿ ಮೊದಲು ಅವರೊಂದಿಗಿನ ಎಲ್ಲಾ ರೀತಿಯ ಸಂಬಂಧಗಳನ್ನು ಕಳೆದುಕೊಳ್ಳುವುದು ಉತ್ತಮ.
ಹೊಸ ಸ್ಥಳಗಳಿಗೆ ಪ್ರವಾಸ
ಪ್ರವಾಸವು ಮನುಷ್ಯನ ಎಂತಹ ಮನಸ್ಥಿತಿಯನ್ನಾದರೂ ಬದಲಿಸಿ ಬಿಡುತ್ತದೆ. ಹೀಗಾಗಿ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಿ. ಅಲ್ಲಿನ ವಾತಾವರಣ, ಹೊಸ ಜನರ ಒಡನಾಟ, ಪ್ರಯಾಣ ನಿಮ್ಮನ್ನು ಬ್ಯೂಸಿಯಾಗಿರಿಸುತ್ತದೆ. ಇದರಿಂದ ಒಂಟಿತನ ನಿಮಗೆ ಕಾಡುವುದಿಲ್ಲ. ಮೊದಲು ನಿಮ್ಮಿಷ್ಟದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಟ್ರಿಪ್ ಪ್ಲಾನ್ ಮಾಡಿ. ಕೆಲವರಿಗೆ ಸೋಲೋ ಟ್ರಿಪ್ ಹಿತ ಎನಿಸಿದರೆ, ಇನ್ನೂ ಕೆಲವರಿಗೆ ಗೆಳೆಯರೊಂದಿಗೆ ಸುತ್ತುವುದು ಸಂತೋಷ ಕೊಡುತ್ತದೆ. ಆದ್ದರಿಂದ ನೋವುಗಳನ್ನು ಮರೆಯಲು ಪ್ರವಾಸಕ್ಕಿಂತ ಉತ್ತಮವಾದ ಚಿಕಿತ್ಸೆ ಮತ್ತೊಂದಿಲ್ಲ.

ಆತ್ಮೀಯರ ಜೊತೆ ಸಮಯ ಕಳೆಯಿರಿ
ಬ್ರೇಕಪ್‌ನ ನಂತರ ಜೀವನವೇ ಮುಗಿಯಿತು ಎಂದಕೊಂಡವರು ಒಮ್ಮೆ ನಿಮ್ಮ ಆತ್ಮೀಯರ, ಪ್ರೀತಿ ಪಾತ್ರರ ಬಗ್ಗೆ ಯೋಚಿಸಿ. ತಂದೆ-ತಾಯಿ, ಒಡಹುಟ್ಟಿದವರು, ನಿಮ್ಮ ಆತ್ಮೀಯ ಸ್ನೇಹಿತರು, ಕುಟುಂಬಸ್ಥರು ನಿಮ್ಮ ಖುಷಿಯನ್ನಷ್ಟೇ ಬಯಸುವವರ ಜೊತೆಗೆ ಸಮಯ ಕಳೆಯಿರಿ. ನಿಮಗೆ ತುಂಬಾ ಆತ್ಮೀಯ ಹಾಗೂ ನಂಬಿಕೆ ಇರುವ ವ್ಯಕ್ತಿಗಳೊಂದಿಗೆ ನಿಮ್ಮ ನೋವು ಹಂಚಿಕೊಳ್ಳಿ. ಇದರಿಂದ ನಿಮ್ಮ ಮನಸ್ಸಿನ ಭಾರ ಕಡಿಮೆಯಾಗುತ್ತದೆ. ನಿಮಗೆ ಇಷ್ಟ ಆಗುವವರ ಜೊತೆಗೆ ಹೆಚ್ಚು ಸಮಯ ಕಳೆಯಿರಿ. ಇದು ನಿಮ್ಮ ಜೀವನದ ಮತ್ತೊಂದು ಭಾಗವನ್ನು ತೋರಿಸುತ್ತದೆ.
ಆತುರದ ನಿರ್ಧಾರಗಳಿಂದ ದೂರ ಇರಿ
ಕೆಲವರು ಬ್ರೇಕಪ್ ಆಗುತ್ತಿದ್ದಂತೆ ಕೆಲವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ಕೂದಲು ಕತ್ತರಿಸುವುದು, ಟ್ಯಾಟೂ ಹಾಕಿಸಿಕೊಳ್ಳುವುದು ಹೀಗೆ. ಆತುರ ಕೋಪ ನಿರಾಸೆಯಲ್ಲಿ ತೆಗೆದುಕೊಂಡ ಈ ನಿರ್ಧಾರಗಳಿಗೆ ಮುಂದಿನ ದಿನಗಳಲ್ಲಿ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ. ಅಲ್ಲದೇ ಕೆಲವರು ದುಷ್ಚಟಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದರಿಂದ ನಿಮ್ಮನ್ನು ಬಿಟ್ಟು ಹೋದ ವ್ಯಕ್ತಿಗಾಗಿ ನೀವೇ ಕೈಯಾರೆ ನಿಮ್ಮ ಜೀವನ ಬಲಿಕೊಟ್ಟಂತಾಗುತ್ತದೆ. ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ಮಾಡದಿರಿ. ಇಂತಹ ಸಮಯದಲ್ಲಿ ಕೇವಲ ಉತ್ತಮ ಹಾಗೂ ಖುಷಿಯ ಜೀವಷ್ಟೇ ನಿಮ್ಮ ಆಯ್ಕೆಯಾಗಿರಬೇಕು.
ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಬ್ರೇಕಪ್‌ನ ನಂತರ ಖಂಡಿತ ಜೀವನ ಬದಲಾಗುತ್ತದೆ. ನಿಮಗೆ ನಿಮ್ಮದೇ ಆದ ಸಮಯ ಸಿಗುತ್ತದೆ. ಈ ಸಮಯದಲ್ಲಿ ಒಂಟಿಯಾಗಿ ಯೋಚಿಸುತ್ತಾ ಹಾಳು ಮಾಡುವ ಬದಲು, ಹೊಸ ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಉದಾಹರಣೆಗೆ ಪುಸ್ತಕಗಳನ್ನು ಓದುವುದು, ಜಿಮ್‌ಗೆ ಹೋಗುವುದು, ಅಡುಗೆ ಮಾಡುವುದು, ಗಾರ್ಡನ್ ಮಾಡುವುದು, ಮನೆಯಲ್ಲಿ ಪೆಟ್‌ಗಳನ್ನು ಸಾಕಿ ಅವುಗಳ ಆರೈಕೆ ಮಾಡುವುದು, ಡ್ರೈವಿಂಗ್ ಕಲಿಯುವುದು, ಹೀಗೆ ನಿಮಗೆ ಗೊತ್ತಿರದ ಕೆಲಸಗಳನ್ನು ಕಲಿಯುವತ್ತ ನಿಮ್ಮನ್ನು ನೀವು ಬ್ಯೂಸಿಯಾಗಿಸಿಕೊಳ್ಳಿ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications