Ugadi Festival: ಯುಗಾದಿ ಹಬ್ಬದ ದಿನ ಈ ದೇವರ ಪೂಜೆ ಮಾಡಿ: ಎಲ್ಲಾವೂ ಶುಭವಾಗುತ್ತೆ!
ಹಿಂದುಗಳಿಗೆ ಹೊಸ ವರ್ಷ ಅಂದ್ರೆ ಯುಗಾದಿ. ಯುಗಾದಿ ಹಬ್ಬ ಅಂದರೆ ಅದು ಹಿಂದೂಗಳ ಪಾಲಿನ ಅತಿ ದೊಡ್ಡ ಹಬ್ಬ, ಈ ಹಬ್ಬವನ್ನ ತುಂಬಾ ಸಡಗರ ಸಂಭ್ರಮದಿಂದ ಮನೆ ಮಂದಿಯೆಲ್ಲಾ ಸೇರಿ ಖುಷಿ ಖುಷಿಯಿಂದ ಆಚರಣೆ ಮಾಡುತ್ತಾರೆ. ಹೊಸ ವರ್ಷದ ಆರಂಭದ ದಿನವನ್ನ ಮನೆ ಮಂದಿ ಹಾಗೂ ಸ್ನೇಹಿತರು ಸೇರಿದಂತೆ ಅತ್ಯಂತ ಸಂಭ್ರಮದಿಂದ ವಿವಿಧ ಸಿಹಿ ತಿಂಡಿಗಳ ಮಾಡುವ ಮೂಲಕ ಖುಷಿಯಾಗಿ ಯುಗಾದಿ ಹಬ್ಬವನ್ನ ಆಚರಿಸುತ್ತೇವೆ. ಹಾಗಾದರೆ ಈ ಹಬ್ಬದ ದಿನ ಯಾವ ದೇವರ ಪೂಜೆ ಮಾಡಿದರೆ ಶುಭವಾಗುತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಚಂದ್ರಮಾನ ಯುಗಾದಿ ಇದು ಹಿಂದೂಗಳ ಹಬ್ಬ. ಇದನ್ನ ಹಿಂದೂಗಳು ಹೊಸ ವರ್ಷ ಅಂತ ಕೂಡ ಕರೆಯುತ್ತಾರೆ. ಯುಗಾದಿ ಹಬ್ಬಕ್ಕೆ ಎರಡ್ಮೂರು ದಿನಗಳ ಮುನ್ನವೇ ಹಬ್ಬದ ಸಿದ್ಧತೆ ಜೋರಾಗಿರುತ್ತದೆ. ಈ ಹಬ್ಬಕ್ಕೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬೇಕು. ಹಬ್ಬದ ದಿನ ಮಾವಿನ ಎಲೆ, ಬೇವು, ಹೂಗಳಿಂದ ತೋರಣ ಕಟ್ಟಬೇಕು. ಮನೆಯನ್ನ ವರ್ಣರಂಜಿತ ರಂಗೋಲಿಗಳನ್ನು ಬಿಡಿಸಬೇಕು.ಮನೆ ಹಾಗೂ ಸುತ್ತಮುತ್ತ ಹಸುವಿನ ಸಗಣಿಯಿಂದ ಶುದ್ಧ ಮಾಡಬೇಕು. ಹಿಂದೂಗಳಿಗೆ ಹೊಸ ವರ್ಷ ಅಂದರೆ ಹೊಸ ಸಂವತ್ಸರ ಶುರುವಾಗುವುದು. ಯುಗಾದಿ ದಿನದಿಂದ ವಸಂತ ಋತು ಆರಂಭವಾಗುತ್ತದೆ. ಯುಗಾದಿ ಹಬ್ಬದ ದಿನ ಹೊಸ ವರ್ಷದಲ್ಲಿ ಬರುವ ಖುಷಿ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತೇವೆ ಎಂಬ ಉದ್ದೇಶದಿಂದ ಬೇವು ಬೆಲ್ಲವನ್ನು ಸವಿಯುತ್ತೇವೆ.

ಇನ್ನೂ ಹಬ್ಬದ ದಿನ ಸೂರ್ಯೋದಯಕ್ಕೆ ಮುನ್ನ ಎದ್ದೇಳಬೇಕು. ಈ ದಿನ ಬ್ರಹ್ಮ (ಬ್ರಾಹ್ಮೀ) ಮುಹೂರ್ತದಲ್ಲಿ ಎದ್ದರೆ ಮಂಗಳಕರ ಎಂಬ ನಂಬಿಕೆ ಇದೆ. ಇನ್ನೂ ಯುಗಾದಿ ಹಬ್ಬದ ದಿನ ಸ್ನಾನ ಮಾಡುವಾಗ ಕಡಲೆಹಿಟ್ಟು ಹಚ್ಚಿಕೊಂಡು ಎಣ್ಣೆ-ಸ್ನಾನ ಮಾಡಿ ಹೊಸ ಬಟ್ಟೆ ಧರಿಸಬೇಕು. ಇನ್ನೂ ಯುವಾಗಿ ಅಂದ್ರೆ ಎಲ್ಲಾರಿಗೂ ನೆನಪಾಗುವುದೇ ಬೇವು -ಬೆಲ್ಲ. ಯುಗಾದಿ ಹಬ್ಬದ ದಿನ ಸ್ನಾನದ ಬಳಿಕ ಮೊದಲುಸೂರ್ಯ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು.ಯುಗಗಳ ಸೃಷ್ಟಿಕರ್ತ ವಿಷ್ಣುವಿಗೆ ಪೂಜೆ ಸಲ್ಲಿಸಬೇಕು. ಈ ದಿನ ವಿಷ್ಣು ಹಾಗೂ ಬ್ರಹ್ಮ ದೇವನಿಗೆ ವಿಶೇಷ ಪೂಜೆ ಸಲ್ಲಿಸಬೇಕು.
ಯುಗಾದಿ ಸಂದರ್ಭದಲ್ಲಿ ಸಮಯದಲ್ಲಿ ಪ್ರಕೃತ್ತಿಯಲ್ಲೂ ಹೊಸತನವಿರುತ್ತದೆ. ಒಣಲೆಗಳು ಉದುರಿ ಚಿಗುರೆಲೆಗಳು ಮೂಡಿರುತ್ತವೆ. ಆ ಬ್ರಹ್ಮ ಇಂಥ ಸುಂದರ ಪ್ರಪಂಚವನ್ನು ಯುಗಾದಿಯಂದು ಸೃಷ್ಟಿಸಿದ ಎಂದು ಹೇಳಲಾಗುವುದು. ಹೀಗಾಗಿ ಆ ದಿನ ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸಲಾಗುವುದು. ಇನ್ನೂ ಯಾವುದೇ ಪೂಜೆಯಿರಲಿ ಮೊದಲು ಶ್ರೀ ಗಣೇಶನನ್ನು ಆರಾಧಿಸುವ ಮೂಲಕವೇ ಪ್ರಾರಂಭಿಸಬೇಕು ಎಂಬ ನಿಯಮವಿದೆ. ಮೊದಲು ಗಣೇಶನಿಗೆ ತೆಂಗಿನಕಾಯಿ ಒಡೆದು ನಂತರ ತಮ್ಮ ಇಷ್ಟ ದೈವವನ್ನು ಪೂಜಿಸುತ್ತಾರೆ. ಇನ್ನೂ ಯುಗಾದಿ ಹಬ್ಬದಂದು ಶಿವನ ದೇವಾಲಯ, ಶ್ರೀ ವಿಷ್ಣು ದೇವಾಲಯ, ಲಕ್ಷ್ಮಿ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿದರು ಶುಭವಾಗಲಿದೆ.
ಇನ್ನೂ ಯುಗಾದಿಯಂದು ಅಯೋಧ್ಯೆಯಲ್ಲಿ ಇಂದಿಗೂ ರಾಮನಿಗೆ ವಿಶೇಷ ಪೂಜೆ ನೆರವೇರುತ್ತದೆ. ಏಕೆಂದರೆ ರಾಮಾಯಣದಲ್ಲಿ ಯುಗಾದಿಯಂದು ಅಯೋಧ್ಯೆಯ ರಾಜನಾಗಿ ರಾಮನನ್ನು ಪಟ್ಟಾಭಿಷೇಕ ಮಾಡಲಾಯಿತು ಎಂದು ಹೇಳಲಾಗಿದೆ. ಶ್ರೀರಾಮ ರಾವಣನ ಸಂಹರಿಸಿ ವಿಜಯದೊಂದಿಗೆ ಅಯೋಧ್ಯೆಗೆ ಹಿಂತಿರುಗಿದಾಗ ಅಯೋಧ್ಯೆಯ ಜನರು ರಂಗೋಲಿ ಹಾಕಿ, ಹಣತೆಗಳನ್ನು ಹಚ್ಚಿ ಶ್ರೀರಾಮ, ಸೀತೆ, ಲಕ್ಷ್ಮಣರನ್ನು ಸ್ವಾಗತಿಸಿದರು ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಇದೇ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತಿತ್ತು ಎಂಬ ನಂಬಿಕೆ ಇದೆ.












Click it and Unblock the Notifications