ದೈಹಿಕ ಶ್ರಮ ಹಾಕೋ ಹಳ್ಳಿಗರಿಗೂ ಕಾಡುತ್ತೆ ಡಯಾಬಿಟೀಸ್, NFHS-6 ರಿಪೋರ್ಟ್ ಹೇಳುತ್ತಿರುವುದೇನು?
ಹಿಂದೆ ಡಯಾಬಿಟೀಸ್ ಅಥವಾ ಮಧಮೇಹ ಅಥವಾ ಶುಗರ್ ಅನ್ನೋ ಸಿಂಪಲ್, ಸೈಲೆಂಟ್ ಕಿಲ್ಲರ್ ಕೇವಲ ಸಿರಿವಂತರಿಗೆ, ಸ್ಟ್ರೆಸ್-ಸ್ಟ್ರೆಸ್ ಅನ್ನೋ ನಗವಾಸಿಗಳಿಗೆ ಮಾತ್ರ ಕಾಡೋ ರೋಗ ಎಂಬಂತೆ ಇತ್ತು. ಆದರೀಗ ಮೈ ಮುರಿದು, ಬೆವರು ಸುರಿಸಿ ಕೆಲಸ ಮಾಡೋ ಹಳ್ಳಿಗರನ್ನೂ ಕಾಡುತ್ತಿದ್ದು, ಇದಕ್ಕೆ ಕಾರಣವನ್ನು ಎನ್‌ಎಫ್‌ಎಚೇಎಸ್ ವರದಿಯಲ್ಲಿ ಬಹಿರಂಗಗೊಂಡಿದೆ.
ಅಸಮರ್ಪಕ ಜೀವನಶೈಲಿ ಕಾರಣದಿಂದ ಕರ್ನಾಟಕ ಸೇರಿ ಭಾರತದಲ್ಲಿ ಸ್ಕೂಲಕಾಯ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುವವರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಈ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (ಎನ್‌ಎಫ್‌ಎಚ್‌ಎಸ್-6)ರ ವರದಿಯಲ್ಲಿ ಈ ಆತಂಕಕಾರಿ ಅಂಶ ಬಹಿರಂಗಗೊಂಡಿದ್ದು, ಇಷ್ಟು ವರ್ಷ ಕೆಲವು ರೋಗಗಳಿಂದ ಮುಕ್ತರಾಗಿದ್ದ ಹಳ್ಳಿಗರಿಗೂ ಶುಗರ್‌ನಂಥ ರೋಗಗಳು ಕಾಡುತ್ತಿರುವುದೇಕೆ ಎಂಬ ಅಂಶವನ್ನು ಬಹಿರಂಗಗೊಳಿಸಲಾಗಿದೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಂತಹ ನಗರ ಹಾಗೂ ಸುತ್ತಲ ಗ್ರಾಮೀಣ ಪ್ರದೇಶಗಳಲ್ಲೂ ಫಿಟೈಸ್, ವೆಲ್‌ನೆಸ್ ಸೆಂಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತಿರುವುದರ ಜತೆಗೆ, ಸ್ಕೂಲ ಕಾಯದ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದರೂ, ರಾಜ್ಯದಲ್ಲಿ ಬೊಜ್ಜು ಮತ್ತು ಸಾಂಕ್ರಾಮಿಕವಲ್ಲದ ಅನೇಕ ರೋಗಗಳು ಹೆಚ್ಚುತ್ತಿವೆ. ಇನ್ನೊಂದೆಡೆ ಗ್ರಾಮೀಣ ಭಾಗದಲ್ಲಿ ಅಪೌಷ್ಠಿಕತೆಯ ನೆರಳು ಇನ್ನೂ ಪೂರ್ಣವಾಗಿ ಮರೆಯಾಗಿಲ್ಲ ಎಂಬುದನ್ನೂ ಈ ವರದಿ ಹೇಳುತ್ತಿದೆ.
ಸ್ತ್ರೀಯರಲ್ಲಿ ಸ್ಕೂಲಕಾಯ ಶೇ.51.7: ಗಂಭೀರ ವಿಚಾರವೆಂದರೆ, ವರದಿ ಪ್ರಕಾರ ನಗರ ಪ್ರದೇಶದ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು. ಎನ್‌ಎಫ್‌ಎಚ್‌ಎಸ್ -6 ವರದಿ ರಾಜ್ಯದಲ್ಲಿ ಮಹಿಳೆಯರು ತಮ್ಮ ಸಂಗಾತಿಯಿಂದ ಎದುರಿಸುತ್ತಿರುವ ಹಿಂಸೆ ಆಶ್ಚರ್ಯಕರ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳಿದೆ. 2019-21ರ ಅವಧಿಯಲ್ಲಿ ಶೇ. 44.4ರಷ್ಟು ಮಹಿಳೆಯರು ಈ ಸಮಸ್ಯೆ ಎದುರಿಸಿದ್ದರು. ಆದರೆ, 2023-24ರಲ್ಲಿ ಇದು ಶೇ. 14.1ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಹಿಂಸಾ ಪ್ರಮಾಣ ಹೆಚ್ಚಾಗಿಯೇ ಇದೆ.
ಅಂದರೆ ಶೇ. 51.7ರಷ್ಟು ಮಹಿಳೆಯರು ಸ್ಕೂಲಕಾಯದ ಸಮಸ್ಯೆಗೆ ಒಳಗಾಗಿದ್ದಾರೆ.ಗ್ರಾಮೀಣ ಭಾಗದಲ್ಲೂ ಶೇ.33ರಷ್ಟು ಮಹಿಳೆ ಯರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ಒಟ್ಟಾರೆ ರಾಜ್ಯದ ಮಹಿಳೆಯರ ಬೊಜ್ಜಿನ ಪ್ರಮಾಣವು ಎನ್‌ಎಫ್‌ಎಚ್‌ಎಸ್-5ರಲ್ಲಿದ್ದ ಶೇ. 30.2ರಿಂದ ಶೇ. 41.2ಕ್ಕೆ ಏರಿಕೆ ಕಂಡಿದೆ. ನಗರದ ಶೇ. 42.9 ಮತ್ತು ಗ್ರಾಮೀಣ ಭಾಗದ ಶೇ. 31.1ರಷ್ಟು ಜನ ಅತಿಯಾದ ತೂಕ ಹೊಂದಿದ್ದು, ರಾಜ್ಯದ ಒಟ್ಟು ಪುರುಷರು ನಗರ ಪ್ರದೇಶದ ಮಹಿಳೆಯರಲ್ಲಿ ಮಲ್ಟಿ ಟಾಸ್ಕಿಂಗ್ ಹೊಣೆಗಾರಿಕೆಯೇ ಶುಗರ್, ಬಿಪಿ ಹೆಚ್ಚಾಗಲು ಕಾರಣವಾಗುತ್ತಿರುವ ಶಂಕೆಯಿದೆ. ಆಹಾರ ಶೈಲಿ ನಗರ ಮಾತ್ರವಲ್ಲದೆ, ಗ್ರಾಮೀಣ ಭಾಗದಲ್ಲೂನಕಾರಾತ್ಮಕವಾಗಿ ಬದಲಾಗಿರುವುದು ಸ್ಕೂಲಕಾಯಕ್ಕೆ ಎಡೆಮಾಡಿಕೊಡುತ್ತಿದೆ. ನಗರ ಪ್ರದೇಶದಲ್ಲಿ ಎದುರಿಸುತ್ತಿರುವ ಬೊಜ್ಜಿನ ಸಮಸ್ಯೆ ಪ್ರಮಾಣವು ಶೇ. 30.9ರಿಂದ ಶೇ. 36.4ಕ್ಕೆ ಹೆಚ್ಚಳವಾಗಿದೆ.
ಇದೇ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ. 18.6ರಷ್ಟು ಮಹಿಳೆಯರು ಮತ್ತು ಶೇ. 18.4ರಷ್ಟು ಪುರುಷರು ಇಂದಿಗೂ ಅಗತ್ಯಕ್ಕಿಂತ ಕಡಿಮೆ ತೂಕ ಹೊಂದಿದ್ದು, ಅಪೌಷ್ಟಿಕತೆಯ ಸವಾಲು ಜೀವಂತವಾಗಿದೆ. ರಾಜ್ಯದ ಸರಾಸರಿಯಲ್ಲಿ ಅಪೌಷ್ಟಿಕತೆ ಕೊಂಚ ಸುಧಾರಿಸಿದ್ದು, ಮಹಿಳೆಯರಲ್ಲಿ ಶೇ. 15.1ಕ್ಕೆ ಹಾಗೂ ಪುರುಷರಲ್ಲಿ ಶೇ.14ಕ್ಕೆ ಇಳಿಕೆಯಾಗಿದೆ ಎಂಬುದನ್ನೂ ವರದಿ ಉಲ್ಲೇಖಿಸಿದೆ. ಇದು ರಾಜ್ಯದ ಜನತೆಯಲ್ಲಿ ತೂಕದ ಸಮತೋಲನ ತಪ್ಪಿದೆ ಎಂಬುದಕ್ಕೆ ನಿದರ್ಶನ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಬಿಪಿ/ಶುಗರ್, ಪುರುಷರೇ ಮುಂಚೂಣಿ: ಬೊಜ್ಜು ಹೆಚ್ಚಾದಂತೆ ಮಧುಮೇಹ, ಅಧಿಕ ರಕ್ತದೊತ್ತಡವೂ ಹೆಚ್ಚಾಗಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚು. 2023-24ರಲ್ಲಿ ಪುರುಷರಲ್ಲಿ ಅತಿ ಹೆಚ್ಚು ಸಕ್ಕರೆ ಮಟ್ಟ ಇರುವವರ ಪ್ರಮಾಣ ಶೇ. 7.6 ರಿಂದ ಶೇ. 17.8 ರಷ್ಟಕ್ಕೆ ಏರಿಕೆಯಾಗಿದೆ. ಮಹಿಳೆಯರಲ್ಲಿ ಈ ಪ್ರಮಾಣ ಶೇ. 6.8ರಿಂದ . 14.8 ರಷ್ಟಿದೆ.
ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಔಷಧ ತೆಗೆದುಕೊಳ್ಳುತ್ತಿರುವ ಅಥವಾ ಹೈ-ಶುಗರ್ ಹೊಂದಿರುವ ಒಟ್ಟು ಪುರುಷರ ಪ್ರಮಾಣ ಶೇ.29.7ರವರೆಗೆ ಶೇ.15.6ರಿಂದ ದಾಖಲಾಗಿದ್ದರೆ, ಮಹಿಳೆಯರಲ್ಲಿ ಇದು ಶೇ.25.0ರಿಂದ ಶೇ. 27.8ರಷ್ಟಿದೆ. ಮಧುಮೇಹದಂತೆಯೇ ರಕ್ತದೊತ್ತಡ ಅಥವಾ ಹೈಪರ್‌ಟೆನ್ನನ್ ಸಮಸ್ಯೆಯಲ್ಲೂ ಪುರುಷರೇ ಮುಂಚೂಣಿಯಲ್ಲಿದ್ದಾರೆ. ನಗರದಲ್ಲಿ ಹೈ ಬಿಪಿ ಇರುವ ಒಟ್ಟು ಪುರುಷರ ಪ್ರಮಾಣ ಗರಿಷ್ಠ ಶೇ. 32.4ರಷ್ಟಿದ್ದು, ಮಹಿಳೆಯರ ಗರಿಷ್ಠ ಪ್ರಮಾಣ ಶೇ. 27.8 ರಷ್ಟಿದೆ.
ಯಾಕೆ ಹೀಗೆ:
ದೈಹಿಕ ಕಾರ್ಯಕ್ಷಮತೆ ಹಾಗೂ ಚಟುವಟಿಕೆಗಳ ಜೊತೆಗೆ ಪ್ರತಿಯೊಬ್ಬರೂ ತಮ್ಮ ಮಾನಸಿಕ ಆರೋಗ್ಯದ ಕಡೆ ಹೆಚ್ಚಿಗೆ ಗಮನ ಹರಿಸುವ ಅಗತ್ಯತೆಯನ್ನು ಈ ವರದಿ ಹೇಳಿದಂತಾಗಿದೆ. ರಕ್ತದೊತ್ತಡ ಹಾಗೂ ಡಯಾಬಿಟೀಸ್‌ನಂಥ ರೋಗಗಳು ಮಾನಸಿಕ ಒತ್ತಡ, ಖಿನ್ನತೆ ಹಾಗೂ ಇತರೆ ಕಾರಣಗಳಿಂದ ಬರುವ ಸಾಧ್ಯತೆ ಇದ್ದು, ಇವನ್ನು ಕಡಿಮೆ ಮಾಡಿ ಕೊಳ್ಳಲು ಯೋಗ, ಧ್ಯಾನದ ಮೊರೆ ಹೋಗುಬೇಕೆಂದು ಹೇಳುತ್ತದೆ. ಮನಸ್ಸು ಸದಾ ಕಾಣದ ಕಡಲಿಗೇ ಹಂಬಲಿಸುತ್ತದೆ. ಅದು ಬಿಟ್ಟು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ನಮ್ಮ ಪೂರ್ವಿಕರ ಹಿತವಚನವನ್ನು ಈಗಲೂ ಕೇಳಬೇಕೆಂಬುದನ್ನು ಒತ್ತಿ ಹೇಳುತ್ತದೆ.












Click it and Unblock the Notifications