Vastu Dosha: ರಾತ್ರಿ ಮಲಗುವಾಗ ಯಾರೋ ಗುಟ್ಟಾಗಿ ನಿಮ್ಮನ್ನು ನೋಡುತ್ತಿದ್ದಾರೆ ಅನಿಸುತ್ತಾ? ಇದಕ್ಕೆ ಕಾರಣ ಇದೇ.....
ಕೆಲವೊಮ್ಮೆ ನಾವು ರಾತ್ರಿಯಲ್ಲಿ ಮಲಗಿದಾಗ ಯಾರಾದರೂ ನಮ್ಮನ್ನು ರಹಸ್ಯವಾಗಿ ನೋಡುತ್ತಿದ್ದಾರೆ ಅಥವಾ ಯಾರಾದರೂ ನಮ್ಮ ಹಾಸಿಗೆಯ ಸುತ್ತಲೂ ಅಲೆದಾಡುತ್ತಿದ್ದಾರೆ ಎಂದು ನಮಗೆ ಭಾಸವಾಗುತ್ತದೆ. ರಾತ್ರಿಯಲ್ಲಿ ಇಂತಹ ಆಲೋಚನೆ ಬರುವುದು ಸಾಮಾನ್ಯ. ಆದರೆ ನಿಮಗೆ ಯಾವಾಗಲೂ ಈ ರೀತಿ ಭಾಸವಾಗುತ್ತಿದ್ದರೆ ಮನೆಯಲ್ಲಿ ನಕಾರಾತ್ಮಕತೆಯು ನೆಲೆಸಿದೆ ಎಂದು ಅರ್ಥ.
ಹೀಗಾದಲ್ಲಿ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುವುದು ಅತ್ಯಾವಶ್ಯಕ. ವಾಸ್ತವವಾಗಿ ವಾಸ್ತು ದೋಷಗಳು ಮನೆಯೊಳಗೆ ಬರುವ ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತವೆ. ಈ ವಾಸ್ತು ದೋಷಕ್ಕೆ ಮನೆಯಲ್ಲಿರುವ ಕೆಲ ವಸ್ತುಗಳೂ ಕಾರಣವಾಗಿರಬಹುದು. ಹಾಗಾದರೆ ಆ ವಾಸ್ತು ದೋಷಗಳಿಗೆ ಕಾರಣವಾಗುವ ಕೋಣೆಯಲ್ಲಿ ಇರಿಸಲಾಗಿರುವ ವಸ್ತುಗಳು ಯಾವುವು ಎಂದು ತಿಳಿಯೋಣ.

ವಾಸ್ತು ದೋಷಗಳಿಗೆ ಕಾರಣವಾಗುವ ವಸ್ತುಗಳು:-
*ಕೋಣೆಯಲ್ಲಿ ಒಡೆದು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಮನೆಯಲ್ಲಿ ಚಿತ್ರ, ಶೋ ಪೀಸ್ ಅಥವಾ ಇನ್ನಾವುದೇ ವಸ್ತು ಮುರಿದು ಬಿದ್ದರೆ ನಾವು ಅದರತ್ತ ಗಮನ ಹರಿಸುವುದಿಲ್ಲ. ಈ ವಸ್ತುಗಳು ಕೋಣೆಯಲ್ಲಿ ನಕರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಈ ವಸ್ತುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ. ಆದ್ದರಿಂದ ಇಂತಹ ಬೇಡದ ವಸ್ತುಗಳನ್ನು ತೆಗೆದುಹಾಕುವುದು ಉತ್ತಮ.
*ಕೋಣೆಯಲ್ಲಿ ಇರಿಸಲಾದ ಸತ್ತ ಕುಟುಂಬ ಸದಸ್ಯರ ಫೋಟೋ ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಸತ್ತ ಸಂಬಂಧಿಕರ ಫೋಟೋಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಈ ಫೋಟೋಗಳನ್ನು ಹಾಲ್ನಲ್ಲಿ ಹಾಕುವುದು ಒಳ್ಳೆಯದು. ಮೃತ ಸಂಬಂಧಿಕರ ಫೋಟೋಗಳನ್ನು ಮಲಗುವ ಕೋಣೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಬಹುದು. ಈ ಕಾರಣದಿಂದಾಗಿ ನೀವು ಮಲಗಲು ಭಯಪಡಬಹುದು.

*ಕೋಣೆಯಲ್ಲಿ ಇಟ್ಟಿರುವ ನಿರುಪಯುಕ್ತ ಬಾಕ್ಸ್ ಕೂಡ ವಾಸ್ತು ದೋಷಕ್ಕೆ ಕಾರಣವಾಗಬಹುದು. ನಿರುಪಯುಕ್ತ ಗೃಹೋಪಯೋಗಿ ವಸ್ತುಗಳನ್ನು ಬಾಕ್ಸ್ ಅಥವಾ ಗೋಣಿಚೀಲದಲ್ಲಿ ಸಂಗ್ರಹಿಸಿ ಮನೆಯಲ್ಲಿಟ್ಟಿದ್ದರೆ ಅದನ್ನು ತೆಗೆದು ಹಾಕುವುದು ಅತ್ಯಾವಶ್ಯಕ. ಯಾಕೆಂದರೆ ಈ ನಿರುಪಯುಕ್ತ ವಸ್ತುಗಳನ್ನು ತುಂಬಿದ ಪೆಟ್ಟಿಗೆಯನ್ನು ಸ್ಟೋರ್ ರೂಂನಲ್ಲಿ ಇಡದೆ ಮಲಗುವ ಕೋಣೆಯಲ್ಲಿ ಇಟ್ಟರೆ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಬಳಕೆಯಾಗದ ವಸ್ತುಗಳಿಂದ ಮನೆಯಲ್ಲಿ ವಾಸ್ತು ದೋಷದ ಸಮಸ್ಯೆ ಉಂಟಾಗುತ್ತದೆ.
*ದಕ್ಷಿಣಾಭಿಮುಖವಾಗಿ ಪಾದಗಳನ್ನು ಇಟ್ಟು ಮಲಗುವುದರಿಂದ ವಾಸ್ತು ದೋಷಗಳು ಉಂಟಾಗಬಹುದು. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೂ ತನ್ನದೇ ಆದ ಮಹತ್ವವಿದೆ. ಉದಾಹರಣೆಗೆ, ಪೂರ್ವ ಮತ್ತು ಉತ್ತರ ದಿಕ್ಕನ್ನು ಮಂಗಳ ಕಾರ್ಯಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕನ್ನು ಹಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದಕ್ಷಿಣ ದಿಕ್ಕಿಗೆ ಎದುರಾಗಿ ಯಾವುದೇ ಶುಭ ಕಾರ್ಯವನ್ನು ಮಾಡಲಾಗುವುದಿಲ್ಲ. ಮಲಗುವಾಗ ನಿಮ್ಮ ಪಾದಗಳು ದಕ್ಷಿಣ ದಿಕ್ಕಿನಲ್ಲಿ ಇರಬಾರದು. ವಾಸ್ತು ದೋಷಗಳು ಉಂಟಾಗಲು ಇದೂ ಒಂದು ಕಾರಣ.
*ನಿಂತುಹೋದ ಗಡಿಯಾರಗಳು ವಾಸ್ತು ದೋಷಗಳನ್ನು ಉಂಟುಮಾಡಬಹುದು. ನಿಮ್ಮ ಕೋಣೆಯಲ್ಲಿ ಗಡಿಯಾರಗಳು ಸ್ಥಗಿತಗೊಂಡಿದ್ದರೆ, ಈ ಗಡಿಯಾರಗಳನ್ನು ನೀವು ಮಲಗುವ ಕೋಣೆಯಿಂದ ತೆಗೆದುಹಾಕುವುದು ಅಥವಾ ಅವುಗಳನ್ನು ಸರಿಪಡಿಸುವುದು ಉತ್ತಮ. ಇದರಿಂದ ನಿಮ್ಮ ಮನೆಯಲ್ಲಿರುವ ವಾಸ್ತು ದೋಷಗಳು ದೂರವಾಗುತ್ತವೆ. ನೀವು ಮಲಗುವ ಕೋಣೆಯಲ್ಲಿ ಮುಚ್ಚಿದ ಗಡಿಯಾರಗಳನ್ನು ಇಡಬೇಡಿ. ಅದರಲ್ಲೂ ನಿಮ್ಮ ಮನೆಯ ಗೋಡೆಯ ಮೇಲೆ ಗಡಿಯಾರ ನಿಂತು ಹೋಗಿದ್ದರೆ ತಕ್ಷಣ ಸರಿಪಡಿಸಿ.












Click it and Unblock the Notifications