ಪರದೆ, ಕಾಯಿಲ್‌ ಯಾವುದೂ ಬೇಡ, ಈ ಎಣ್ಣೆಯ ಒಂದು ಹನಿ ಸಾಕು ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು

ಮಳೆ ಆರಂಭವಾಗುತ್ತಿದ್ದ ಹಾಗೆಯೇ ಸೊಳ್ಳೆಗಳ ಕಾಟವೂ ಶುರುವಾಗುತ್ತದೆ. ಮಳೆಗಾಲದಲ್ಲಿ, ಸೊಳ್ಳೆಗಳಿಂದ ರಕ್ಷಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಸೊಳ್ಳೆಗಳು ನಿದ್ರೆಗೆ ಭಂಗ ತರುವುದು ಮಾತ್ರವಲ್ಲ, ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ಅಪಾಯಕಾರಿ ಕಾಯಿಲೆಗಳಿಗೂ ಕಾರಣವಾಗುತ್ತವೆ. ಆದ್ದರಿಂದ, ಜನರು ಸೊಳ್ಳೆ ನಿವಾರಕ ಬತ್ತಿಗಳು, ಸ್ಪ್ರೇ, ಕಾಯಿಲ್‌, ಹೀಗೆ ನಾನಾ ರೀತಿಯ ಪರಿಹಾರಗಳತ್ತ ಮೊರೆ ಹೋಗುತ್ತಾರೆ. ಆದರೆ, ಇವುಗಳಲ್ಲಿರುವ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು. ಇದರ ಬದಲಿಗೆ ಮನೆಯಲ್ಲಿ ಲಭ್ಯವಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸುವ ಮೂಲಕ ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು. ಸೊಳ್ಳೆಯ ಸಮಸ್ಯೆಯನ್ನು ಪರಿಹರಿಸಬಹುದಾದ ಕೆಲವು ತೈಲಗಳಿವೆ. ಸೊಳ್ಳೆಗಳು ಈ ಎಣ್ಣೆಗಳ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಸೊಳ್ಳೆಗಳು ಹತ್ತಿರ ಬರುವುದೇ ಇಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಇದು ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ. ಮಕ್ಕಳಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.

ಬೇವಿನ ಎಣ್ಣೆ:

ಬೇವಿನ ಎಣ್ಣೆಯು ಔಷಧೀಯ ಗುಣಗಳಿಂದ ಕೂಡಿದೆ. ಇದರ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳಿಂದ ಸಮೃದ್ಧವಾಗಿದೆ. ಸೊಳ್ಳೆಗಳು ಅದರ ವಾಸನೆಯನ್ನು ಸಹಿಸುವುದಿಲ್ಲ. ಕೆಲವು ಹನಿ ಬೇವಿನ ಎಣ್ಣೆಯನ್ನು ಪರದೆಗಳು, ದಿಂಬು ಅಥವಾ ಕೋಣೆಯ ಮೂಲೆಗಳಲ್ಲಿ ಹಾಕಿದರೆ ಸೊಳ್ಳೆಗಳು ಹೇಳ ಹೆಸರಿಲ್ಲದಂತೆ ಓಡಿಹೋಗುತ್ತವೆ. ಅದನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ದೇಹದ ಮೇಲೆಯೂ ಹಚ್ಚಬಹುದು. ಹೀಗೆ ಹಚ್ಚಿದರೆ ಮನೆಯ ಹೊರಗೆ ಇರುವಾಗಲೂ ಸೊಳ್ಳೆ ಕಚ್ಚದಂತೆ ತಡೆಯಬಹುದು.

Natural Mosquito Repellent Oils

ಲೆಮನ್‌ ಗ್ರಾಸ್‌ ಆಯಿಲ್:

ಲೆಮನ್‌ ಗ್ರಾಸ್‌ ಆಯಿಲ್‌ ನಿಂಬೆಹಣ್ಣಿನಂತಹ ತಾಜಾ ಪರಿಮಳವನ್ನು ಹೊಂದಿರುತ್ತದೆ. ಆದರೆ ಇದು ಸೊಳ್ಳೆಗಳಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಕೋಣೆಯ ಮೂಲೆಗಳಲ್ಲಿ ಕೆಲವು ಹನಿ ಲೆಮನ್‌ ಗ್ರಾಸ್‌ ಎಣ್ಣೆಯನ್ನು ಸಿಂಪಡಿಸುವುದರಿಂದ ಅಥವಾ ರೂಮ್‌ ಫ್ರೆಶ್ನರ್ ನೊಂದಿಗೆ ಇದನ್ನು ಬೆರೆಸುವುದರಿಂದ ಸೊಳ್ಳೆಗಳು ತಕ್ಷಣವೇ ದೂರ ಓಡುತ್ತವೆ. ಅನೇಕರು ಈ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ, ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ, ಸಂಜೆ ತಮ್ಮ ಕೋಣೆಯ ಸುತ್ತಲೂ ಸಿಂಪಡಿಸುತ್ತಾರೆ. ಈ ರೀತಿ ಮಾಡುವುದರಿಂದ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯುವುದರ ಜೊತೆಗೆ ಮನೆಯನ್ನು ತಾಜಾವಾಗಿರಿಸಬಹುದು.

Natural Mosquito Repellent Oils

ಸಿಟ್ರಸ್ ಎಣ್ಣೆ:

ಕಿತ್ತಳೆ, ನಿಂಬೆ ಮತ್ತು ಮೊಸಂಬಿಯಂತಹ ಹಣ್ಣುಗಳ ಸಿಪ್ಪೆಗಳಿಂದ ತಯಾರಿಸಿದ ಸಿಟ್ರಸ್ ಎಣ್ಣೆಯು ಪ್ರಮುಖ ಸೊಳ್ಳೆ ನಿವಾರಕವಾಗಿದೆ. ಇದರ ಪರಿಮಳವು ಮನೆಯನ್ನು ರಿಫ್ರೆಶ್ ಮಾಡುತ್ತದೆ ಮತ್ತು ತಕ್ಷಣ ಸೊಳ್ಳೆಗಳಿಂದ ಪರಿಹಾರ ನೀಡುತ್ತದೆ. ಇದನ್ನು ಡಿಫ್ಯೂಸರ್‌ನಲ್ಲಿ ಬಳಸುವ ಮೂಲಕ ಕೋಣೆಯ ತುಂಬಾ ಈ ಪರಿಮಳ ಹರಡುವಂತೆ ಮಾಡಬಹುದು. ಅಥವಾ ಹತ್ತಿ ಉಂಡೆಯ ಮೇಲೆ ಈ ಎಣ್ಣೆಯ ಕೆಲವು ಹನಿಗಳನ್ನು ಹಾಕಿ ಕಿಟಕಿ ಅಥವಾ ಬಾಗಿಲಿನ ಬಳಿ ಇಡಬಹುದು. ಹೀಗೆ ಮಾಡುವುದರಿಂದಲೂ ಸೊಳ್ಳೆಗಳನ್ನು ಮನೆಯಿಂದ ಓಡಿಸಬಹುದು.

ಮಳೆ ಆರಂಭವಾಗುತ್ತಿದ್ದಂತೆಯೇ ಮಕ್ಕಳನ್ನು ಕಾಡುವ ಆರೋಗ್ಯ ಸಮಸ್ಯೆಗೆ ಇದುವೇ ಸುಲಭ ಪರಿಹಾರ
ಮಳೆ ಆರಂಭವಾಗುತ್ತಿದ್ದಂತೆಯೇ ಮಕ್ಕಳನ್ನು ಕಾಡುವ ಆರೋಗ್ಯ ಸಮಸ್ಯೆಗೆ ಇದುವೇ ಸುಲಭ ಪರಿಹಾರ

ಬಳಸಲು ಸುಲಭವಾದ ಮಾರ್ಗ:

- ಪರದೆಗಳು ಮತ್ತು ದಿಂಬುಗಳ ಮೇಲೆ 2-3 ಹನಿ ಬೇವು, ಲೆಮನ್‌ ಗ್ರಾಸ್ ಅಥವಾ ಸಿಟ್ರಸ್ ಎಣ್ಣೆಯನ್ನು ಹಾಕಿ.
- ಬೇಕಾದರೆ ಅದನ್ನು ನೀರಿನೊಂದಿಗೆ ಬೆರೆಸಿ ಮನೆಯ ಮೂಲೆಗಳಲ್ಲಿ ಸಿಂಪಡಿಸಬಹುದು.
- ಇದನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಚರ್ಮಕ್ಕೆ ನೇರವಾಗಿ ಹಚ್ಚಬಹುದು.
- ಡಿಫ್ಯೂಸರ್ ಅಥವಾ ಧೂಪದ್ರವ್ಯ ಬರ್ನರ್‌ನಲ್ಲಿಯೂ ಬಳಸಿ ಮನೆಯ ತುಂಬಾ ಇದರ ಸುಗಂಧ ಹರಡುವಂತೆ ಮಾಡಬಹುದು.

Money: ಕೈ ತುಂಬಾ ಹಣ - ಐಷಾರಾಮಿ ಜೀವನ ನಡೆಸಬೇಕೇ, ಈ ಐದು ವಾಸ್ತು ಸಲಹೆಗಳನ್ನು ಅನುಸರಿಸಿದರೆ ಸಾಕು
Money: ಕೈ ತುಂಬಾ ಹಣ - ಐಷಾರಾಮಿ ಜೀವನ ನಡೆಸಬೇಕೇ, ಈ ಐದು ವಾಸ್ತು ಸಲಹೆಗಳನ್ನು ಅನುಸರಿಸಿದರೆ ಸಾಕು

ಪ್ರಯೋಜನಗಳು:

ಈ ಎಣ್ಣೆ ಅಥವಾ ತೈಲಗಳು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಅವು ಮಕ್ಕಳು ಮತ್ತು ವೃದ್ಧರಿಗೂ ಸುರಕ್ಷಿತವಾಗಿದೆ. ಈ ತೈಲ ನಿಮ್ಮ ಮನೆಯ ತುಂಬೆಲ್ಲಾ ತಾಜಾ ಸುಗಂಧ ಹರಡುವಂತೆ ಮಾಡುತ್ತದೆ. ಇದು ಸೊಳ್ಳೆಗಳನ್ನು ತೊಡೆದುಹಾಕಲು ಅನುಸರಿಸಬಹುದಾದ ಅಗ್ಗದ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+