Nati Koli Saaru Recipe: ರಾತ್ರಿ ಊಟಕ್ಕೆ ವಿಭಿನ್ನ ರುಚಿಯಲ್ಲಿ ತಯಾರಿಸಿ ನಾಟಿ ಕೋಳಿ ಸಾರು: ರೆಸಿಪಿ ಇಲ್ಲಿದೆ....
ನೀವು ಮಾಂಸಾಹಾರಿಯಾಗಿದ್ದರೆ ಪ್ರತಿ ವಾರ ಹೊಸ ಪಾಕವಿಧಾನವನ್ನು ಪ್ರಯತ್ನಿಸಿರುತ್ತೀರಿ. ವಿಶೇಷ ಹಾಗೂ ರಜಾ ದಿನಗಳಲ್ಲಿ ಮನೆಯಲ್ಲಿ ಚಿಕನ್ ಅಥವಾ ಮಟನ್ ಖರೀದಿಸಿ ತಯಾರಿಸಿರುತ್ತೀರಿ.
ನೀವು ಮನೆಯಲ್ಲಿ ಚಿಕನ್ ಮಾಡಲು ಬಯಸಿದ್ದರೆ ನಾವು ನಿಮಗೆ ಸ್ವಲ್ಪ ವಿಭಿನ್ನವಾಗಿ ನಾಟಿ ಕೋಳಿ ಸಾರು ಮಾಡೋದನ್ನು ಹೇಳಿಕೊಡುತ್ತೇವೆ. ಈ ನಾಟಿ ಕೋಳಿ ಸಾರು ಅನ್ನದೊಂದಿಗೆ ತಿನ್ನಲು ಅದ್ಭುತವಾಗಿರುತ್ತದೆ. ಮತ್ತು ಇದನ್ನು ಮಾಡುವುದು ಕೂಡ ಸುಲಭ. ಮಾತ್ರವಲ್ಲದೆ ಈ ಸಾರು ಮಾಡಿದರೆ ಮನೆಯವರ ಮೆಚ್ಚುಗೆ ಖಂಡಿತಾ ಸಿಗುತ್ತದೆ.

ಹಾಗಾದರೆ ವಿಭಿನ್ನ ರುಚಿಯಲ್ಲಿ ನಾಟಿ ಕೋಳಿ ಸಾರು ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ, ರುಚಿ ನೋಡಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಬೇಕಾಗುವ ಸಾಮಾಗ್ರಿಗಳು:
* ನಾಟಿ ಕೋಳಿ ಚಿಕನ್ - 1/2 ಕೆಜಿ
* ಎಣ್ಣೆ - 1/4 ಕಪ್
* ಚಕ್ಕೆ - 1 ತುಂಡು
* ಬಿರಿಯಾನಿ ಎಲೆಗಳು - 1
* ಏಲಕ್ಕಿ - 4
* ಈರುಳ್ಳಿ - 2 (ಹೆಚ್ಚಿದ)
* ಕರಿಬೇವಿನ ಎಲೆಗಳು - ಸ್ವಲ್ಪ
* ಉಪ್ಪು - ರುಚಿಗೆ ತಕ್ಕಂತೆ
* ಅರಿಶಿನ ಪುಡಿ - 1 tsp
* ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 tbsp
* ಚಿಕನ್ ಮಸಾಲಾ ಪುಡಿ - 3-4 tbsp
* ದೊಡ್ಡ ಟೊಮ್ಯಾಟೊ - 4 (ಕತ್ತರಿಸಿದ)
* ತೆಂಗಿನಕಾಯಿ - 1 ಕಪ್
* ಸೋಂಪು - 1 tbsp
* ನೀರು - ಅಗತ್ಯಕ್ಕೆ
* ಕೊತ್ತಂಬರಿ - ಸ್ವಲ್ಪ
ಪಾಕವಿಧಾನ:
* ಮೊದಲು ಮಿಕ್ಸರ್ ಜಾರ್ ಗೆ ತೆಂಗಿನತುರಿ ಮತ್ತು ಸೋಂಪು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಂಡು ಪಕ್ಕಕ್ಕೆ ಇಡಿ.

* ನಂತರ ಚಿಕನ್ ಅನ್ನು ಅರಿಶಿನ ಪುಡಿಯಿಂದ ಚೆನ್ನಾಗಿ ತೊಳೆದು ಪಕ್ಕಕ್ಕೆ ಇರಿಸಿ.
* ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಚಕ್ಕೆ, ಬಿರಿಯಾನಿ ಎಲೆ, ಏಲಕ್ಕಿ ಹಾಕಿ ಒಗ್ಗರಣೆ ಮಾಡಿ.
* ನಂತರ ಈರುಳ್ಳಿ ಮತ್ತು ಕರಿಬೇವಿನ ಸೊಪ್ಪು ಹಾಕಿ 5 ನಿಮಿಷ ಚೆನ್ನಾಗಿ ಹುರಿಯಿರಿ.
* ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಈರುಳ್ಳಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
* ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಹುರಿಯಿರಿ, ಇದಕ್ಕೆ ಚಿಕನ್ ಮಸಾಲಾ ಸೇರಿಸಿ ಮತ್ತು ಒಂದು ನಿಮಿಷ ಬೆರೆಸಿ.
* ನಂತರ ಟೊಮೆಟೊ ಹಾಕಿ ಮೃದುವಾಗುವವರೆಗೆ ಹುರಿಯಿರಿ.
* ನಂತರ ತೊಳೆದ ಚಿಕನ್ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಚಿಕನ್ ಜೊತೆ ಎಲ್ಲಾ ಮಸಾಲೆಗಳು ಸೇರಿಕೊಳ್ಳುವವರೆಗೆ ಚೆನ್ನಾಗಿ ಬೆರೆಸಿ.
* ನಂತರ ಸ್ವಲ್ಪ ನೀರು ಸುರಿಯಿರಿ, ಪಾತ್ರೆ ಮುಚ್ಚಿ ಮತ್ತು 30-35 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಚಿಕನ್ ಅನ್ನು ಬೇಯಿಸಿ.
* ನಂತರ ತುರಿದ ತೆಂಗಿನಕಾಯಿಯನ್ನು ಬೆರೆಸಿ ಮತ್ತೆ ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ 15 ನಿಮಿಷ ಬೇಯಿಸಿ.
* 15 ನಿಮಿಷಗಳ ನಂತರ ನೀವು ಮುಚ್ಚಳವನ್ನು ತೆರೆದಾಗ ಎಣ್ಣೆಯು ಮೇಲಕ್ಕೆ ತೇಲುವಂತಿರಬೇಕು. ಹೀಗಾಗಿದ್ದರೆ ಸ್ಟವ್ ಆಫ್ ಮಾಡಿ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಕರವಾದ ನಾಟಿ ಕೋಳಿ ಗ್ರೇವಿ ಸವಿಯಲು ರೆಡಿ.












Click it and Unblock the Notifications