Monsoon Fashion Tips: ಮಳೆಗಾಲದಲ್ಲಿ ಎಲ್ಲರಿಗಿಂತ ಚಂದ ಕಾಣಬೇಕಾ? ಈ ಟಿಪ್ಸ್ ಫಾಲೋ ಮಾಡಿ
ಮಳೆಗಾಲ ಶುರುವಾಗಿದೆ. ಮಳೆಗಾಲದಲ್ಲಿ ನಮ್ಮ ಜೀವನ ಶೈಲಿ ಬದಲಾಗುತ್ತದೆ. ನಾವು ತಿನ್ನುವ ಆಹಾರ ಉಡುಪು ಬಟ್ಟೆ ಎಲ್ಲವೂ ಬದಲಾಗುತ್ತದೆ. ಸೌಂದರ್ಯ ಪ್ರಿಯರಾದ ನಮಗೆ ಮಳೆಗಾಲದಲ್ಲಿ ಎಂಥಹ ಉಡುಪು ಸೂಕ್ತ ಅನ್ನೋ ಕುತೂಹಲ ಇದ್ದೇ ಇರುತ್ತದೆ. ಈ ಕುತೂಹಲ ನಿಮಗೂ ಇದ್ದರೆ ಮಹಿಳೆಯರಿಗಾಗಿ ಮಾನ್ಸೂನ್ ಫ್ಯಾಷನ್ ಸಲಹೆಗಳು ಇಲ್ಲಿದೆ.
ಮಾನ್ಸೂನ್ ಸಮಯದಲ್ಲಿ ಮಹಿಳೆಯರು ಆರಾಮದಾಯಕ ಮತ್ತು ಸ್ಟೈಲಿಶ್ ಆಗಿ ಕಾಣಲು ಸರಿಯಾದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂತಹ ಉಡುಪುಗಳು ಯಾವವು? ಮಳೆಗಾಲದಲ್ಲಿ ಯಾವ ಉಡುಪು ಹಾಕಿಕೊಂಡರೆ ಮಹಿಳೆಯರು ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ? ಇದರೊಂದಿಗೆ ಮಹಿಳೆಯರಿಗಾಗಿ ಮಾನ್ಸೂನ್ ಫ್ಯಾಷನ್ ಸಲಹೆಗಳು ಇಲ್ಲಿದೆ.

ಹತ್ತಿ ಮತ್ತು ಲಿನಿನ್ ಬಟ್ಟೆಗಳನ್ನು ಆರಿಸಿ
ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮಳೆ ಸಾಕಷ್ಟು ತೊಂದರೆಯನ್ನುಂಟು ಮಾಡುತ್ತದೆ. ಇದರಿಂದ ಮಳೆಗಾಲದಲ್ಲಿ ಮನೆ ಬಿಟ್ಟು ಹೊರ ಬರುವುದು ಕಷ್ಟವಾಗಿಬಿಡುತ್ತದೆ. ಹೀಗಾಗಿ ಹೊರ ಓಡಾಡುವ ಮಹಿಳೆಯರು ಮಳೆಗಾಲದಲ್ಲಿ ಹತ್ತಿ ಮತ್ತು ಲಿನಿನ್‌ನಂತಹ ಹಗುರವಾದ ಬಟ್ಟೆಗಳನ್ನು ಧರಿಸುವುದು ಉತ್ತಮ.
ಈ ರೀತಿಯ ಬಟ್ಟೆಗಳು ಬೇಗನೆ ಒಣಗುತ್ತವೆ. ಅಲ್ಲದೆ ನಿಮ್ಮ ಚರ್ಮಕ್ಕೆ ಉಸಿರಾಡಲು ಅನುವು ಮಾಡಿಕೊಡುತ್ತವೆ. ಈ ಸಮಯದಲ್ಲಿ ಡೆನಿಮ್‌ನಂತಹ ಭಾರವಾದ ಬಟ್ಟೆಗಳನ್ನು ಹಾಕಿಕೊಳ್ಳಬೇಡಿ, ಇದು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಗಾಢ ಬಣ್ಣಗಳನ್ನು ಬಳಸಿ
ಈ ಸಮಯದಲ್ಲಿ ಪ್ರಕಾಶಮಾನವಾದ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ರೂಢಿಸಿಕೊಳ್ಳಿ. ಯಾಕೆಂದರೆ ಮಳೆಯ ದಿನದಲ್ಲಿ ಈ ಗಾಢವಾದ ಬಣ್ಣದ ಬಟ್ಟೆಗಳು ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿರಿಸುತ್ತವೆ. ಹಳದಿ, ಕಿತ್ತಾಳೆ ಮತ್ತು ಗುಲಾಬಿಯಂತಹ ಬಣ್ಣಗಳನ್ನು ಆರಿಸಿ. ಈ ಬಣ್ಣಗಳು ಮಳೆಗಾಲದಲ್ಲಿ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತದೆ. ಅಲ್ಲದೆ ನೋಡುಗರನ್ನು ಆಕರ್ಷಿಸುತ್ತವೆ.
ಮಳೆಗಾಲದಲ್ಲಿ ಪಾದರಕ್ಷೆಗಳು ಹೇಗಿರಬೇಕು?
ಮಳೆಗಾಲದಲ್ಲಿ ಪಾದರಕ್ಷೆಗಳು ಬಹಳ ಮುಖ್ಯ. ರಬ್ಬರ್ ಸ್ಯಾಂಡಲ್ ಅಥವಾ ಫ್ಲಿಪ್-ಫ್ಲಾಪ್‌ಗಳಂತಹ ಜಲನಿರೋಧಕ ಬೂಟುಗಳನ್ನು ಧರಿಸಿ. ಮಳೆಗಾಲದಲ್ಲಿ ಚರ್ಮದ ಬೂಟುಗಳನ್ನು ಹಾಕುವುದನ್ನು ತಪ್ಪಿಸಿ. ಏಕೆಂದರೆ ಅವು ನೀರಿನಿಂದ ಹಾನಿಗೊಳಗಾಗಬಹುದು. ಅಲ್ಲದೆ ಜಾರಿಬೀಳುವುದನ್ನು ತಡೆಯಲು ನಿಮ್ಮ ಪಾದರಕ್ಷೆಗಳು ಉತ್ತಮ ಹಿಡಿತವನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳಿ.

ಸೊಗಸಾದ ಛತ್ರಿಯನ್ನು ಒಯ್ಯಿರಿ
ಛತ್ರಿ ಮಳೆಗಾಲದಲ್ಲಿ ಇರಲೇಬೇಕಾದ ವಸ್ತು. ನಿಮ್ಮ ನೋಟವನ್ನು ಪ್ರದರ್ಶಿಸಲು ಸೊಗಸಾದ ಛತ್ರಿಯನ್ನು ಆಯ್ಕೆಮಾಡಿ. ಚಿಕ್ಕದಾದ, ಮಡಚಬಹುದಾದ ಛತ್ರಿ ನಿಮ್ಮ ಬ್ಯಾಗ್‌ನಲ್ಲಿ ಎಲ್ಲಿಗೆ ಬೇಕಾದರೂ ಸಾಗಿಸಲು ಸುಲಭವಾಗಿರುತ್ತದೆ. ಇದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.
ಹಗುರವಾದ ಆಭರಣ ಆರಿಸಿ
ಮಳೆ ವಾತಾವರಣದಲ್ಲಿ ಭಾರವಾದ ಆಭರಣಗಳು ಅಹಿತಕರವಾಗಿರುತ್ತವೆ. ಕಡಿಮೆ ಆಭರಣಗಳು ಮತ್ತು ಹಗುರವಾದ ಜ್ಯೂವೆಲರಿಗಳನ್ನು ಆರಿಸಿಕೊಳ್ಳಿ. ಇದು ನಿಮ್ಮ ಉಡುಪಿನ ಶೈಲಿಯನ್ನು ಮತ್ತುಷ್ಟು ಚಂದಗೊಳಿಸುತ್ತದೆ.
ವಾಟರ್‌ಪ್ರೂಫ್ ಬ್ಯಾಗ್ ಬಳಸಿ
ಮಳೆಗಾಲದಲ್ಲಿ ನಿಮ್ಮ ಬಳಿ ಇರುವ ಬ್ಯಾಗ್ ನಿಮ್ಮ ವಸ್ತುಗಳನ್ನು ಮಳೆಯಿಂದ ರಕ್ಷಿಸುವಂತಿರಬೇಕು. ಅದಕ್ಕಾಗಿ ನೈಲಾನ್ ಅಥವಾ PVCನಂತಹ ವಾಟರ್‌ಪ್ರೂಫ್ ಬ್ಯಾಗ್‌ಗಳನ್ನು ಆರಿಸಿ. ಇದು ಬೇಗ ಒಣಗುತ್ತದೆ. ಅಲ್ಲದೆ ವಸ್ತುಗಳನ್ನು ಒಣಗಲು ಸಹಾಯ ಮಾಡುತ್ತದೆ.

ಚಿಕ್ಕದಾದ ಸ್ಕರ್ಟ್ ಧರಿಸಿ
ಉದ್ದನೆಯ ಸ್ಕರ್ಟ್‌ಗಳು ಅಥವಾ ಪ್ಯಾಂಟ್‌ಗಳು ಮಳೆಗಾಲದಲ್ಲಿ ಕೆಸರುಮಯವಾಗುತ್ತವೆ. ಜೊತೆಗೆ ಸುಲಭವಾಗಿ ಒದ್ದೆಯಾಗುತ್ತವೆ. ಆದ್ದರಿಂದ ಮೊಣಕಾಲಿನವರೆಗಿನ ಸ್ಕರ್ಟ್‌ಗಳು ಅಥವಾ ಕ್ಯಾಪ್ರಿಸ್‌ನಂತಹ ಚಿಕ್ಕ ಹೆಮ್‌ಲೈನ್(Hemline)ಗಳನ್ನು ಆರಿಸಿಕೊಳ್ಳಿ. ಇದು ನಿಮಗೆ ಆರಾಮದಾಯಕವಾಗಿರುತ್ತದೆ. ನಿಮ್ಮ ಬಟ್ಟೆಗಳನ್ನು ಕೊಳಕು ಆಗದಂತೆ ತಡೆಯುತ್ತದೆ.
ಲೈಟ್ ಜಾಕೆಟ್ ಅಥವಾ ಶ್ರಗ್ ಧರಿಸಿ
ಮಾನ್ಸೂನ್ ಸಮಯದಲ್ಲಿ ತಾಪಮಾನ ಏರಿಳಿತವಾಗುವುದರಿಂದ ನಿಮ್ಮ ಬಟ್ಟೆಗಳ ಮೇಲೆ ಲೈಟ್ ಜಾಕೆಟ್ ಧರಿಸಿ. ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಉಡುಪಿಗೆ ಇದು ಹೊಸ ಲುಕ್ ನೀಡುತ್ತದೆ.
ಭಾರೀ ಮೇಕ್ಅಪ್ ತಪ್ಪಿಸಿ
ಭಾರೀ ಮೇಕ್ಅಪ್ ಮಳೆ ವಾತಾವರಣದಲ್ಲಿ ಅಳಿಸಿ ಹೋಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಉಳಿಯುವಂತ ವಾಟರ್‌ಪ್ರೂಫ್ ಮೇಕಪ್ ಉತ್ಪನ್ನಗಳನ್ನು ಆರಿಸಿಕೊಳ್ಳಿ. ಲೈಟ್ ಫೌಂಡೇಶನ್, ವಾಟರ್ ಪ್ರೂಫ್ ಮಸ್ಕರಾ ಮತ್ತು ಟಿಂಟೆಡ್ ಲಿಪ್ ಬಾಮ್ ಉತ್ತಮ ಆಯ್ಕೆಗಳಾಗಿವೆ.
ಕೂದಲ ರಕ್ಷಣೆ
ತೇವಾಂಶವು ಕೂದಲು ಉದುರುವಂತೆ ಮಾಡುತ್ತದೆ ಮತ್ತು ನಿರ್ವಹಿಸಲಾಗದಂತಾಗುತ್ತದೆ. ನಿಮ್ಮ ಕೂದಲನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳಲು ಬನ್ ಅಥವಾ ಪೋನಿಟೇಲ್‌ನಲ್ಲಿ ಹಾಕಿ. ಗುಣಮಟ್ಟದ ಕ್ಲಿಪ್‌ಗಳು ಅಥವಾ ಬ್ಯಾಂಡ್‌ಗಳನ್ನು ಬಳಸಿ.
ಹೀಗೆ ಮೇಲೆ ನೀಡಲಾದ ಸಲಹೆಗಳು ಮಳೆಗಾಲದಲ್ಲಿ ಆರಾಮದಾಯಕವಾಗಿರಲು ಸಹಾಯ ಮಾಡುತ್ತವೆ. ಯಾವುದೇ ತೊಂದರೆಯಿಲ್ಲದೆ ಮಳೆಯ ದಿನಗಳನ್ನು ಆನಂದಿಸಲು ಮೇಲಿನದನ್ನು ಸಲಹೆಗಳನ್ನು ಅನುಸರಿಸಿ.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications