Mint Chutney Recipe: ದೋಸೆ ಇಡ್ಲಿಯ ರುಚಿ ಹೆಚ್ಚಿಸುವ ಪುದೀನ ಚಟ್ನಿ ರೆಸಿಪಿ

ಪ್ರತಿ ಮನೆಯಲ್ಲೂ ಸಾಮಾನ್ಯವಾಗಿ ಉಪಾಹಾರಕ್ಕೆಂದು ಇಡ್ಲಿ ದೋಸೆಯನ್ನು ತಯಾರಿಸಲಾಗುತ್ತದೆ. ಈ ಇಡ್ಲಿ ಮತ್ತು ದೋಸೆಯ ರುಚಿಯನ್ನು ಅದರೊಂದಿಗೆ ಬಡಿಸುವ ಚಟ್ನಿಯ ರುಚಿಯಿಂದ ನಿರ್ಧರಿಸಲಾಗುತ್ತದೆ. ಇತ್ತೀಚೆಗೆ ಗೃಹಿಣಿಯರು ಬಗೆ ಬಗೆಯ ಚಟ್ನಿಯನ್ನು ತಯಾರಿಸಿ ಮನೆ ಮಂದಿಗೆಲ್ಲಾ ಸವಿಯಲು ಬಡಿಸುತ್ತಾರೆ. ವಿಶೇಷವಾಗಿ ಇದಕ್ಕೆ ಹೆಚ್ಚಾಗಿ ತೆಂಗಿನಕಾಯಿ ಚಟ್ನಿ ತಯಾರಿಸುವುದು ಹೆಚ್ಚು. ಆದರೆ ಕೊಂಚ ವಿಭಿನ್ನವಾಗಿ ಚಟ್ನಿ ತಯಾರಿಸಬೇಕು ಅಂದುಕೊಂಡಿದ್ದರೆ ಒಮ್ಮೆ ಪುದೀನಾ ಚಟ್ನಿಯನ್ನು ತಯಾರಿಸಿ ನೋಡಿ.

ಇದನ್ನು ತಯಾರಿಸಿದರೆ ಒಂದೆರೆಡು ಇಡ್ಲಿ ಹಾಗೂ ಒಂದೆರೆಡು ದೋಸೆ ಹೆಚ್ಚಾಗಿ ಸವಿಯುವುದು ಮಾತ್ರ ಗ್ಯಾರಂಟಿ. ಹಾಗಾದರೆ ತಡ ಮಾಡುವುದು ಬೇಡ. ಪುದೀನ ಚಟ್ನಿ ರುಚಿಯಾಗಿ ತಯಾರಿಸುವುದು ಹೇಗೆ ಎಂದು ತಿಳಿಯೋಣ. ನೀವು ಒಮ್ಮೆ ಇದನ್ನು ಮನೆಯಲ್ಲಿ ತಯಾರಿಸಿ ನೋಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Mint chutney recipe this pudina chutney increase the taste of dosa idli

ಬೇಕಾಗುವ ಪದಾರ್ಥಗಳು:

- ಪುದೀನ ಎಲೆಗಳು ½ ಕಪ್

- ಎಣ್ಣೆ - 1 ಚಮಚ

- ಕರಿಬೇವು ಅರ್ಧ ಹಿಡಿ

- ಶುಂಠಿ- 1 ತುಂಡು

- ತುರಿದ ತೆಂಗಿನಕಾಯಿ- 1 ಕಪ್

- ಹಸಿರು ಮೆಣಸಿನಕಾಯಿಗಳು - 3

- ಕಡಲೆಕಾಯಿ - 2 ಚಮಚ

- ನೀರು - ಅಗತ್ಯವಿರುವಂತೆ

ಒಗ್ಗರಣೆಗೆ

- ಸಾಸಿವೆ- 1 ಚಮಚ

- ಕರಿಬೇವು - ಸ್ವಲ್ಪ

- ಉದ್ದಿನ ಬೇಳೆ - 1 ಚಿಟಿಕೆ

ತಯಾರಿಸುವ ವಿಧಾನ:-

- ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ.

- ಪುದೀನ, ಕರಿಬೇವು ಮತ್ತು ಶುಂಠಿಯನ್ನು ಸೇರಿಸಿ. ಪುದೀನ ಮತ್ತು ಕರಿಬೇವು ಎಲೆಗಳನ್ನು ಗರಿಗರಿಯಾಗುವವರೆಗೆ ಹುರಿಯಿರಿ, ಕಡಿಮೆ ಉರಿಯಲ್ಲಿ ಆಗಾಗ್ಗೆ ಬೆರೆಸಿ.

- ಪುದೀನಾ ಚೆನ್ನಾಗಿ ಹುರಿದ ನಂತರ, ಅದನ್ನು ಮತ್ತೊಂದು ಬಟ್ಟಲಿಗೆ ವರ್ಗಾಯಿಸಿ. ಅದೇ ರೀತಿ ಎಣ್ಣೆಯನ್ನು ಮತ್ತೊಂದು ಪಾತ್ರೆಗೆ ವರ್ಗಾಯಿಸಿ. ಪುದೀನ ಚೆನ್ನಾಗಿ ತಣ್ಣಗಾಗುವವರೆಗೆ ಬಿಟ್ಟು ಬಿಡಿ.

- ಒಂದು ಮಿಕ್ಸರ್ ಜಾರ್ ತೆಗೆದುಕೊಂಡು ತುರಿದ ತೆಂಗಿನಕಾಯಿ, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಗೋಡಂಬಿ ಸೇರಿಸಿ.

- ನಂತರ ಹುರಿದ ಪುದೀನ ಎಲೆಗಳು ಮತ್ತು ಶುಂಠಿ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಸೇರಿಸಿ.

- ನಂತರ ಅಗತ್ಯವಿರುವ ಪ್ರಮಾಣದ ಉಪ್ಪು ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ. ಯಾವುದೇ ಉಂಡೆಗಳಿಲ್ಲದೆ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.

- ಚಟ್ನಿಗೆ ಎಷ್ಟು ಬೇಕೋ ಅಷ್ಟು ನೀರು ಸೇರಿಸಿ.

ಒಗ್ಗರಣೆ ಹಾಕಿ:-

- ಎರಡು ಟೇಬಲ್ ಸ್ಪೂನ್ ಎಣ್ಣೆಯನ್ನು ಬಾಣಲೆಗೆ ಹಾಕಿ ಬಿಸಿ ಆದ ಬಳಿಕ ಸಾಸಿವೆ ಹಾಕಿ ಚಟಪಟ ಎನ್ನುವವರೆಗೂ ಬಿಡಿ.

- ಸಾಸಿವೆ ಚೆನ್ನಾಗಿ ಬೆಂದ ನಂತರ, ಕರಿಬೇವು ಸೇರಿಸಿ ನಂತರ ಕೊತ್ತಂಬರಿ ಸೊಪ್ಪು ಹಾಕಿ.

- ನಂತರ ಈ ಪ್ಯಾನ್‌ಗೆ ಚಟ್ನಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

(ಗಮನಿಸಿ: ಚಟ್ನಿಗೆ ತಾಜಾ ಪುದೀನ ಎಲೆಗಳನ್ನು ಬಳಸಬೇಕು. ಕಾಂಡಗಳಿಲ್ಲದೆ ಎಲೆಗಳನ್ನು ಮಾತ್ರ ಬಳಸಿ. ಕಾಂಡಗಳನ್ನು ಸೇರಿಸುವುದರಿಂದ ಚಟ್ನಿಯ ರುಚಿ ಕಹಿಯಾಗಬಹುದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+