Life Tips: ಜೀವನದಲ್ಲಿ ಸೋಲಿಗೆ ಹೆದರಿ ಸ್ಪರ್ಧೆಗಿಳಿಯದಿದ್ದರೆ ಹೇಗೆ..?
ಈ ಜಗತ್ತಿನಲ್ಲಿ ಸೋತು ಗೆದ್ದವರ ಸಂಖ್ಯೆ ದೊಡ್ಡದಾಗಿದೆ. ಕೆಲವೇ ಕೆಲವು ಮಂದಿ ಸೋಲನ್ನು ಕಾಣದೆ ಗೆಲುವಿನ ಶಿಖರವೇರಿರಬಹುದು. ಆದರೆ ಅಂತಹವರಿಗೆ ಸೋಲನ್ನು ಅರಗಿಸಿಕೊಳ್ಳುವ ಶಕ್ತಿಯಿರುವುದಿಲ್ಲ. ಹೀಗಾಗಿ ಅವರೇನಾದರೂ ಒಮ್ಮೆ ಸೋಲು ಎದುರಾಯಿತೆಂದರೆ ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯವಿಲ್ಲದೆ ಕುಗ್ಗಿ ಹೋಗಬಹುದು ಅಥವಾ ಬದುಕಿಗೆ ಗುಡ್ ಬೈ ಹೇಳಿದರೂ ಅಚ್ಚರಿಯಿಲ್ಲ.
ಯಶಸ್ವಿ ಉದ್ಯಮಿಗಳು, ಪ್ರಭಾವಿ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಆಗ ಸಾಮಾನ್ಯ ಜನರಾದ ನಾವು ಅವರ ಸಾವಿನ ಕುರಿತಂತೆ ದಿನಗಟ್ಟಲೆ ಮಾತಾಡುತ್ತೇವೆ. ಆತನಿಗೇನಾಗಿತ್ತು? ಆಸ್ತಿ, ಅಂತಸ್ತು, ಗೌರವ ಎಲ್ಲವೂ ಇತ್ತು ಆದರೂ ಆತ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ಅಚ್ಚರಿಯ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಉತ್ತರವೂ ಸಿಗದೆ ಮೌನಕ್ಕೆ ಶರಣಾಗುತ್ತೇವೆ.

ಬಹುಶಃ ಹಿಂದಿನವರು ಅದಕ್ಕಾಗಿಯೇ ಸೋತು ಗೆಲ್ಲಬೇಕು ಎಂಬ ಮಾತನ್ನು ಹೇಳಿರುವುದು. ಒಂದು ವೇಳೆ ಸೋತು ಅಭ್ಯಾಸವಿಲ್ಲದೆ ಹೋದರೆ ಅಥವಾ ಸೋಲಿನ ಅನುಭವ ಇಲ್ಲದೆ ಹೋದರೆ ನಮಗೆ ಗೆಲುವನ್ನು ಆಸ್ವಾದಿಸಲು ಕಷ್ಟವಾಗುತ್ತದೆ. ಅಷ್ಟೇ ಅಲ್ಲದೆ ಮುಂದೆ ಯಾವತ್ತಾದರೂ ಸೋಲು ಎದುರಾದಾಗ ಅದನ್ನು ನಿಭಾಯಿಸಲು ಸಾಧ್ಯವಾಗದೆ ಹೋಗಬಹುದು. ಆದರೆ ಸೋತು ಗೆದ್ದವರು ಎಲ್ಲವನ್ನು ನಿಭಾಯಿಸಲು ತಯಾರಾಗಿ ಬಿಟ್ಟಿರುತ್ತಾರೆ.
ಸೋಲಿಗೆ ಹೆದರಿ ಸ್ಪರ್ಧೆಗಿಳಿಯದಿದ್ದರೆ ಹೇಗೆ?
ನಾವು ಏನು ಮಾಡುತ್ತಿದ್ದೇವೆಯೋ ಅದನ್ನು ಪ್ರಾಮಾಣಿಕವಾಗಿ ಮಾಡಬೇಕು, ನಮಗಿಂತ ಮೇಲಿನವರನ್ನು ನೋಡಿ ಹಲಬುವುದಕ್ಕಿಂತ ನಮಗಿಂತ ಕೆಳಗಿನವರನ್ನು ನೋಡಿ ಕನಿಕರ ಪಡೋಣ. ಆಗ ಅವರಿಗಿಂತ ನಮ್ಮನ್ನು ದೇವರು ಚೆನ್ನಾಗಿಟ್ಟಿದ್ದಾನೆಂಬ ಭಾವ ನಮಗೆ ನೆಮ್ಮದಿ ನೀಡುತ್ತದೆ. ಅದು ನಮಗೇನು ಇಲ್ಲವಲ್ಲ ಎಂಬ ನಿರಾಸೆಯನ್ನು ದೂರ ಸರಿಸಲು ಸಹಕಾರಿಯಾಗಬಹುದು. ಬಹಳಷ್ಟು ಸಾರಿ ನಾವು ಬೇರೆಯವರ ಬಗ್ಗೆ ಮಾತನಾಡುತ್ತಾ ಅವರ ಶಕ್ತಿ ಸಾಮರ್ಥ್ಯವನ್ನು ವಿಜೃಂಭಿಸುತ್ತಾ ನಮ್ಮಲ್ಲಿನ ಶಕ್ತಿಯನ್ನು ಕುಗ್ಗಿಸಿ ಬಿಡುತ್ತೇವೆ.

ದೇವರು ಪ್ರತಿಯೊಬ್ಬನಿಗೂ ಅವನದೇ ಆದ ಪ್ರತಿಭೆ, ಶಕ್ತಿ, ಸಾಮರ್ಥ್ಯ ಎಲ್ಲವನ್ನು ಕೊಟ್ಟಿರುತ್ತಾನೆ. ಆದರೆ ನಮ್ಮಲ್ಲಿನ ಶಕ್ತಿಯನ್ನು ನಾವು ಗುರುತಿಸಿಕೊಳ್ಳಲಾಗದೆ ನಮಲ್ಲಿ ಏನೂ ಇಲ್ಲವೆಂಬಂತೆ ಬದುಕುತ್ತಿರುತ್ತೇವೆ. ಹೀಗಾಗಿ ಸೋಲಿಗೆ ಹೆದರಿ ಸ್ಪರ್ಧೆಗಿಳಿಯದ ಬದುಕು ನಮ್ಮದಾಗಿದೆ. ಒಂದು ಸೋಲು ನಿರಾಶೆಯನ್ನು ತರಬಹುದಷ್ಟೆ. ಆದರೆ ಅಷ್ಟು ಮಾತ್ರಕ್ಕೆ ನಿರಾಶವಾದಿಗಳಾಗುವುದು ಎಷ್ಟು ಸರಿ? ಪ್ರಯತ್ನ ಮುಂದುವರೆಸಬೇಕಷ್ಟೆ.
ಏನು ಮಾಡದೆ ನಿರಾಶವಾದಿಗಳಾಗುವುದೆಷ್ಟು ಸರಿ?
ಕೆಲಸ ಮಾಡಿ ಅದು ಫಲಕೊಡದೆ ನಿರಾಸವಾದಿಗಳಾದರೆ ಅದನ್ನು ಒಪ್ಪಿಕೊಳ್ಳಬಹುದು. ಆದರೆ ಏನನ್ನೂ ಮಾಡದೆ ನಿರಾಶವಾದಿಗಳಾಗುವುದೆಷ್ಟು ಸರಿ? ನಮ್ಮ ಒಳ ಪ್ರವೇಶಿಸಿ ನಮ್ಮ ಶಕ್ತಿಯನ್ನು ನೋಡದೇ ಬದಲಾಗಿ ಹೊರಗೆ ಕಾಣುವ ನಮ್ಮ ದೇಹವನ್ನು ಮಾತ್ರ ನೊಡಿಕೊಳ್ಳುತ್ತೇವೆ. ದೇಹದ ಪೋಷಣೆಗೆ ಕಾಳಜಿ ತೋರುತ್ತೇವೆ. ಬುದ್ದಿ, ಮನಸ್ಸಿನ ಶಕ್ತಿ ಪೋಷಣೆಗೆ ಕಾಳಜಿ ವಹಿಸುವುದೇ ಇಲ್ಲ. ನಾವೆಂದರೆ ಬರೀ ಶರೀರವಲ್ಲ ಅದರ ಒಳಗೂ ಅಪಾರವಾದ ಚೈತನ್ಯವಿದೆ ಎಂಬುವುದನ್ನು ಅರಿತಾಗ ನಿರಾಶವಾದಿತನ ದೂರವಾಗುತ್ತದೆ.
ಜಗತ್ತಿನಲ್ಲಿ ಪ್ರತಿಯೊಬ್ಬರಲ್ಲೂ ಪ್ರತಿಭೆಯಿದೆ. ಅದಕ್ಕೆ ಮಾರ್ಗದರ್ಶನ ಹಾಗೂ ಶ್ರಮದ ಕೊರತೆಯಿಂದಾಗಿ ಹೆಚ್ಚಿನವರ ಪ್ರತಿಭೆ ಪಲಾಯನಗೊಂಡು ನಿರಾಶವಾದಿಗಳಾಗಿ ಬಿಡುತ್ತಾರೆ. ಬುದ್ದಿಯ ಜೊತೆಗೆ ಮನಸ್ಸು ಮುಖ್ಯವಾಗಿದೆ. ಮನಸ್ಸು ಸರಿಯಾಗಿದ್ದರೆ ನಿರಾಶೆ ಉಂಟಾಗುವುದಿಲ್ಲ. ನಿರಾಶೆಗೆ ಮನಸ್ಸಿನ ದೌರ್ಬಲ್ಯವೇ ಮುಖ್ಯ ಕಾರಣವಾಗಿದೆ.
ಬ್ರಹ್ಮಾಂಡದ ಸರ್ವ ಶಕ್ತಿಯೂ ನಮ್ಮ ಮನಸ್ಸಿನಲ್ಲಿದೆ. ಬ್ರಹ್ಮಾಂಡದಲ್ಲಿ ಮನಸ್ಸಿಗಿಂತ ದೊಡ್ಡದಾದುದು ಯಾವುದೂ ಇಲ್ಲ. ಮನಸ್ಸು ಏನನ್ನು ನಿರ್ಧರಿಸುತ್ತದೆಯೋ ಅದನ್ನು ಪೂರೈಸಲು ಸಾಧ್ಯವಾಗುತ್ತದೆ. ಅಂತಹ ಪ್ರಚಂಡ ಶಕ್ತಿ ನಮ್ಮ ಮನಸ್ಸಿನಲ್ಲಿದೆ. ಅದನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ನಮಗಿರಬೇಕಷ್ಟೆ.
ಮನೋಬಲವಿದ್ದರೆ ಏನೂ ಬೇಕಾದರೂ ಆಗಬಹುದು
ಮನಸ್ಸನ್ನು ಏಕಾಗ್ರತೆಗೆ ತಂದು ಧ್ಯಾನದಿಂದ ಮನಸ್ಸನ್ನು ಸರಿಯಾದ ದಾರಿಯಲ್ಲಿ ರೂಪುಗೊಳಿಸಿದರೆ, ಮನೋಬಲವನ್ನು ಬೆಳೆಸಿಕೊಂಡರೆ ನಾವು ಮಹಾತ್ಮರಾಗಬಹುದು, ಯೋಗಿಯಾಗಬಹುದು, ಪರಮಾತ್ಮನ ಸಾಕ್ಷಾತ್ಕಾರ ಪಡೆಯಬಹುದು, ಸಾಮಾಜಿಕ ಜೀವನದಲ್ಲಿ ಮಹಾವಿಜ್ಞಾನಿಯಾಗಬಹುದು, ದೊಡ್ಡ ಕಲಾವಿದನಾಗಬಹುದು, ಸಾಹಿತಿಯಾಗಬಹುದು, ಹೀಗೆ ತಮ್ಮ ಪ್ರತಿಭೆಗೆ ತಕ್ಕಂತೆ ಏನಾದರೊಂದನ್ನು ಮಾಡಬಹುದು.
ಮನುಷ್ಯನ ಜೀವನವೇ ಅಪೂರ್ವವಾದುದು. ಮನುಷ್ಯ ಜನ್ಮ ದೊರೆತಿದ್ದೊಂದು ಸುವರ್ಣಾವಕಾಶ. ಮನುಷ್ಯ ಜೀವನವು ಅದ್ಭುತವಾಗಿದೆ. ಹೊರ ಕಾಣುವ ಶರೀರಕ್ಕಿಂತಲೂ ಒಳಗಿರುವ ಶಕ್ತಿ ಮಹಾನ್ ಶಕ್ತಿಯಾಗಿದೆ. ಆದರೆ ಅದನ್ನು ಅರಿಯದೆ ಎಲ್ಲ ಇದ್ದರೂ ಏನೂ ಇಲ್ಲವೆಂದು ತೆಪ್ಪಗಿರುವುದು ನಿರಾಶವಾದಿತನವನ್ನು ಬೆಳೆಸುತ್ತದೆ. ಆದರೆ ಅದಕ್ಕೆ ಅವಕಾಶ ನೀಡದೆ ಸದಾ ಆಶಾವಾದಿತನ ನಮ್ಮಲ್ಲಿ ಮೂಡಬೇಕು. ಅದಕ್ಕೆ ಪೂರಕ ಕಾರ್ಯಗಳನ್ನು ಮಾಡಬೇಕು ಎನ್ನುವುದು ಆಧ್ಯಾತ್ಮಿಕ ಚಿಂತಕರ ಅಭಿಪ್ರಾಯವಾಗಿದೆ.
ಆಶಾಭಾವನೆಯಿಲ್ಲದಿದ್ದರೆ ಮನುಷ್ಯರಾಗುವುದಿಲ್ಲ
ಪರಮಾತ್ಮನ ಶಕ್ತಿ ಚೈತನ್ಯ ಬೆಳಕು ನನ್ನಲ್ಲಿದೆ. ನಾನು ಏನನ್ನಾದರೂ ಸಾಧಿಸಬಲ್ಲೆ, ಸಾಧಿಸಿಯೇ ತಿರುತ್ತೇನೆ. ಯಾವುದೇ ಸಮಸ್ಯೆ ತಲೆದೋರಿದರೂ ಸಮಸ್ಯೆಗಳನ್ನು ಪರಿಹರಿಸಿಕೊಂಡು ಗೆಲ್ಲಬಲ್ಲೆನೆಂಬ ಸಕಾರಾತ್ಮಕ ನಿಲುವಿನ ಚಿಂತನೆಯೇ ಆಶಾಕಿರಣ. ಜೀವನದಲ್ಲಿ ಆಶಾಭಾವನೆಯಿಲ್ಲದವರು ಮನುಷ್ಯನೇ ಅಲ್ಲ. ಜೀವನದಲ್ಲಿ ಸಾವಿರಾರು ಯಶಸ್ಸಿನ ಬಾಗಿಲುಗಳಿವೆ. ಹಾಗಾಗಿ ಒಂದೇ ಸೋಲಿಗೆ ಯಶಸ್ಸಿನ ಬಾಗಿಲು ಮುಚ್ಚಿತೆಂಬ ನಿರಾಶವಾದಿತನ ಏಕೆ? ಮತ್ತೊಂದು ಮಾರ್ಗವಿದೆ. ಅದನ್ನು ಗುರುತಿಸಿ ಮುನ್ನಡೆಯುವ ಪ್ರಯತ್ನ ನಮ್ಮದಾಗಬೇಕು.
ವಿವೇಕಿಗಳು, ಬುದ್ದಿವಂತರು ತಮ್ಮ ಒಳಗಿನ ಶಕ್ತಿ ಚೈತನ್ಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಆಶಾಜ್ಯೋತಿಯ ಬೆಳಕಲ್ಲಿ ನಡೆಯುತ್ತಾರೆ. ಅಷ್ಟೇ ಅಲ್ಲ ಮಾನವ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ. ಆಧ್ಯಾತ್ಮಿಕ ಜ್ಞಾನಿಗಳು ಹೇಳುವ ಪ್ರಕಾರ ಈ ಮಾನವ ಜೀವನ ನಿರಾಶೆಯಿಂದ ನರಳಾಡುವುದಕ್ಕಲ್ಲ. ಅಪಾರವಾದ ಶಕ್ತಿ, ಅನಂತವಾದ ಚೈತನ್ಯ, ಪರಮಾತ್ಮನ ಬೆಳಕು ಎಲ್ಲವನ್ನೂ ಬಳಸಿಕೊಂಡು ಸಾರ್ಥಕ ಜೀವನ ನಡೆಸುವುದರಿಂದ ನಿನಗೂ ನಿನ್ನ ಸುತ್ತಲಿನವರಿಗೂ ಒಳ್ಳೆದಾಗುತ್ತದೆ. ನಿನ್ನಿಂದ ಮತ್ತೊಬ್ಬರಿಗೆ ಒಳ್ಳೆಯದಾದರೆ ಅದಕ್ಕಿಂತ ಇನ್ನೇನು ಬೇಕು? ಮತ್ತೊಬ್ಬರ ಸಂತಸದಲ್ಲಿ ಪಾಲ್ಗೊಳ್ಳುವುದು ಸಹ ನಿರಾಶವಾದಿತನವನ್ನು ದೂರ ಮಾಡಿ ಆಶಾಕಿರಣ ತುಂಬುತ್ತದೆ ಎಂಬುದು ನಮ್ಮ ನೆನಪಿನಲ್ಲಿರಬೇಕಷ್ಟೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications