Sabja Seeds Juice: ಬಿರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಆರೋಗ್ಯಕರ ನಿಂಬೆ-ಸಬ್ಜಾ ಬೀಜಗಳ ಜ್ಯೂಸ್
ಇದು ಬಿರು ಬೇಸಿಗೆಯ ಸಮಯ. ಈ ವರ್ಷ ಬೇಸಿಗೆ ತುಸು ಜಾಸ್ತಿಯೇ ಇದೆ. ಮಳೆ ಬರದೆ ರಾಜ್ಯದಲ್ಲಿ ಬರಗಾಲ ಹೆಚ್ಚಾಗಿದೆ. ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳು ಆಗದ ಸ್ಥಿತಿ ಬಂದಿದೆ. ಈ ವೇಳೆ ದೇಹಕ್ಕೆ ಹೆಚ್ಚು ಆರೋಗ್ಯಕರ ಮತ್ತು ದೇಹವನ್ನು ಹೆಚ್ಚು ತಂಪಾಗಿ ಇಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಇಂತಹ ಆಹಾರ ಪದಾರ್ಥಗಳಲ್ಲಿ ನಿಂಬೆ ಹಣ್ಣು ಮತ್ತು ಸಬ್ಜಾ ಬೀಜಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. ಈ ಎರಡೂ ಹೆಲ್ತಿ ಪದಾರ್ಥಗಳನ್ನು ಬಳಸಿ ಒಂದು ಉತ್ತಮ ಜ್ಯೂಸ್ ತಯಾರಿಸಿದರೇ ಆರೋಗ್ಯ ಮತ್ತಷ್ಟು ಉತ್ತಮವಾಗಿರುತ್ತದೆ. ಈ ಅತ್ಯಂತ ಆರೋಗ್ಯಕರ ಮತ್ತು ಟೇಸ್ಟಿ ಜ್ಯೂಸ್ ರೆಸಿಪಿ ಮಾಡಲು ನಿಂಬೆ, ಸಬ್ಜಾ ಬೀಜಗಳು, ಸಕ್ಕರೆ ಅಥವಾ ಬೆಲ್ಲ ಮತ್ತು ಐಸ್ ಕ್ಯೂಬ್ ಇದ್ದರೆ ಸಾಕು.

ಸಬ್ಜಾ ಬೀಜಗಳು ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತವೆ. ಇದನ್ನು ಕನ್ನಡ ಭಾಷೆಯಲ್ಲಿ "ಕಾಮಕಸ್ತೂರಿ ಬೀಜ" ಎಂದೂ ಕರೆಯಲಾಗುತ್ತದೆ. ಈ ವರ್ಷ ಬೇಸಿಗೆ ತುಂಬಾ ಹೆಚ್ಚಾಗಿದ್ದು. ನಿಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಹಣ್ಣುಗಳು, ತರಕಾರಿಗಳು ಮತ್ತು ದೇಹವನ್ನು ತಂಪಾಗಿ ಇರಿಸುವ ಪದಾರ್ಥಗಳನ್ನು ಸೇವಿಸಬೇಕು. ಹೀಗಾಗಿಯೇ ಬೇಗ ಜೀರ್ಣವಾಗುವ ಜ್ಯೂಸ್‌ಗಳು ಬೇಸಿಗೆಗೆ ಹೆಚ್ಚು ಸಹಕಾರಿ.
ನಿಂಬೆ ಹಣ್ಣು ಮತ್ತು ಸಬ್ಜಾ ಬೀಜಗಳ ಜ್ಯೂಸ್ ಮಾಡಲು ಬೇಕಾದ ಪದಾರ್ಥಗಳು
1. 2 ನಿಂಬೆ ಹಣ್ಣು
2. 2 ಟೇಬಲ್ ಸ್ಪೂನ್ ಸಬ್ಜಾ ಬೀಜಗಳು ಅಥವಾ ಕಾಮಕಸ್ತೂರಿ ಬೀಜ
3. ಅರ್ಧ ಕಪ್ ಸಕ್ಕರೆ ಅಥವಾ ಬೆಲ್ಲ
4. ಅಗತ್ಯಕ್ಕೆ ತಕ್ಕಂತೆ ನೀರು
5. ಬೇಕಿದ್ದರೇ ಐಸ್ ಕ್ಯೂಬ್‌ಗಳು
6. ಸ್ವಲ್ಪ ಏಲಕ್ಕಿ ಪುಡಿ
7. ಪುಡಿಮಾಡಿದ ಪುದೀನ ಮತ್ತು ಶುಂಠಿ
8. ಅವಶ್ಯಕತೆಯಿದ್ದರೇ ಕಿತ್ತಳೆ ರಸ
9. ಅವಶ್ಯಕತೆಯಿದ್ದರೇ ಅನಾನಸ್ ರಸ

ನಿಂಬೆ ಮತ್ತು ಸಬ್ಜಾ ಬೀಜಗಳ ಜ್ಯೂಸ್ ಮಾಡುವ ವಿಧಾನ
ಮೊದಲು ಅರ್ಧ ಕಪ್ ಸಕ್ಕರೆ ಅಥವಾ ಬೆಲ್ಲ ಮತ್ತು ಅರ್ಧ ಕಪ್ ನೀರು ಹಾಕಿ ಒಂದು ಪ್ಯಾನ್ ಅಥವಾ ಪಾತ್ರೆಯಲ್ಲಿ ಬಿಸಿ ಮಾಡಿ. ಸಕ್ಕರೆ ಕರಗುವವರೆಗೆ ಕಾಯಿರಿ ಮತ್ತು ಒಲೆ ಆಫ್ ಮಾಡಿ. ಇದರ ನಡುವೆ ಎರಡು ಚಮಚ ಸಬ್ಜಾ ಬೀಜಗಳನ್ನು ಅರ್ಧ ಕಪ್ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ.
ಜ್ಯೂಸ್ ಮಿಕ್ಸ್ ಮಾಡಲು ಸಾಧ್ಯವಾಗುವಂತೆ ಒಂದು ಬಾಟಲಿ ಅಥವಾ ಪಾತ್ರೆ ತೆಗೆದುಕೊಳ್ಳಿ. ಇದಕ್ಕೆ ನೆನೆಸಿದ ಸಬ್ಜಾ ಬೀಜಗಳನ್ನು ಸೇರಿಸಿ. ಬಳಿಕ ಅದಕ್ಕೆ ನಿಂಬೆ ರಸ ಬೆರೆಸಿ. ಐಸ್ ಕ್ಯೂಬ್‌ಗಳನ್ನು ಸೇರಿಸಿ. ಅಗತ್ಯವಿರುವಷ್ಟು ನೀರನ್ನು ಸಹ ಸೇರಿಸಿ. ಬಳಿಕ ಅವಶ್ಯಕತೆ ಇದ್ದರೇ ಕಿತ್ತಳೆ ರಸ ಅಥವಾ ಅನಾನಸ್ ರಸವನ್ನು ಬೆರೆಸಿಕೊಳ್ಳಿ. ಬಳಿಕ ತಣ್ಣಗೆ ಕುಡಿಯಲು ಕೊಡಿ.












Click it and Unblock the Notifications