Vastu Dosha: ಮನೆಯಲ್ಲಿ ವಾಸ್ತು ದೋಷವಿದ್ದರೆ ಪತ್ತೆ ಮಾಡುವುದು ಹೇಗೆ?

ಪ್ರತಿಯೊಬ್ಬರಿಗೂ ಮನೆ ಕಟ್ಟಬೇಕು ಅಥವಾ ಖರೀದಿ ಮಾಡಬೇಕು ಎನ್ನುವ ಆಸೆ ಇರುತ್ತದೆ. ಹೀಗೆ ಹೊಸ ಮನೆ ಕಟ್ಟಬೇಕು ಅಥವಾ ಖರೀದಿ ಮಾಡಬೇಕು ಅನ್ನೋ ಆಸೆ ಇರುವ ಪ್ರತಿಯೊಬ್ಬರೂ ಆ ಮನೆಯ ವಾಸ್ತು ಬಗ್ಗೆ ಕೊಂಚ ವಿಚಾರಿಸಿಯೇ ಇರುತ್ತಾರೆ. ಅಂದರೆ ಹೊಸ ಮನೆಯಲ್ಲಿ ವಾಸ್ತು ದೋಷವಿದ್ದರೆ ಆ ಮನೆಯಲ್ಲಿ ನೆಮ್ಮದಿಯ ಜೀವನ ಕಂಡುಕೊಳ್ಳುವುದು ತುಂಬಾ ಕಷ್ಟ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ರಚನೆ ಹೇಗಿರುತ್ತದೆ? ಯಾವ ದಿಕ್ಕಿನಿಂದ ಮನೆಗೆ ಬೆಳಕು ಬರುತ್ತದೆ? ಮನೆಯೊಳಗೆ ಯಾವ್ಯಾವ ವಸ್ತುಗಳನ್ನು ಇಡಲಾಗುತ್ತದೆ? ಪ್ರತಿಯೊಂದು ವಿಷಯವೂ ವಾಸ್ತುಗೆ ಸಂಬಂಧಿಸಿದೆ. ಅನೇಕ ಬಾರಿ ಮಾಹಿತಿಯ ಕೊರತೆಯಿಂದಾಗಿ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ.

Learn how to findout Vastu Dosha at home in Kannada

ಇದರಿಂದಾಗಿ ನಾವು ನಮ್ಮ ಜೀವನದುದ್ದಕ್ಕೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳೆರಡೂ ಮನೆಯ ವಿವಿಧ ದಿಕ್ಕುಗಳಿಂದ ಹೊರಬರುತ್ತವೆ. ಮನೆಯ ದಿಕ್ಕುಗಳಿಂದ ನಕಾರಾತ್ಮಕ ಶಕ್ತಿ ಹೊರಹೊಮ್ಮಿದರೆ ವಾಸ್ತು ದೋಷವಿದೆ ಎಂದರ್ಥ. ಈ ದಿಕ್ಕುಗಳಿಂದ ಹೊರಹೊಮ್ಮುವ ಶಕ್ತಿಯು ಮನೆಯ ಎಲ್ಲಾ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ವಾಸ್ತು ದೋಷವನ್ನು ಗುರುತಿಸುವುದು ಹೇಗೆ? ಎಂದು ತಿಳಿಯೋಣ.

ವಾಸ್ತು ದೋಷದ ಲಕ್ಷಣಗಳು:-

* ಮನೆಯಲ್ಲಿ ವಾಸ್ತು ದೋಷವಿದ್ದರೆ ಅದನ್ನು ಸುಲಭವಾಗಿ ಗುರುತಿಸಬಹುದು. ಮನೆಯಲ್ಲಿ ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಇಲ್ಲದಿದ್ದರೆ ಅಥವಾ ಅವನ ಅಧ್ಯಯನದಲ್ಲಿ ಪದೇ ಪದೇ ಅಡಚಣೆಗಳು ಎದುರಾದರೆ, ಆಗ ಮನೆಯ ಪಶ್ಚಿಮ ದಿಕ್ಕಿನಿಂದ ವಾಸ್ತು ದೋಷವಿರಬಹುದು.

* ಇನ್ನೂ ಮನೆಯ ಮುಖ್ಯ ಬಾಗಿಲು ಪಶ್ಚಿಮ ದಿಕ್ಕಿನಲ್ಲಿದ್ದರೆ ಅಥವಾ ಮನೆಯ ಪಶ್ಚಿಮ ಭಾಗವು ಕೆಳಕ್ಕೆ ವಾಲಿದ್ದರೆ, ಮಕ್ಕಳು ಅಧ್ಯಯನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

*ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಸದಸ್ಯರ ಆರ್ಥಿಕ ಸ್ಥಿತಿಯು ಹದಗೆಡಲು ಪ್ರಾರಂಭಿಸಿದರೆ ಮತ್ತು ಮನೆಯಲ್ಲಿ ವಾಸಿಸುವ ಸದಸ್ಯರು ನಿರಂತರವಾಗಿ ಹಣದ ಕೊರತೆಯನ್ನು ಎದುರಿಸುತ್ತಿದ್ದರೆ, ಇದಕ್ಕೆ ಕಾರಣ ಛಾವಣಿಯ ಮೂಲೆಯು ಕೆಳಕ್ಕೆ ವಾಲಿರುವುದು. ಮನೆಯ ಪೂರ್ವ ದಿಕ್ಕಿನಲ್ಲಿ ದೋಷವಿದ್ದರೆ, ಮನೆಯ ಸದಸ್ಯರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅವರ ಚಿಕಿತ್ಸೆಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ.

*ಮನೆಯಲ್ಲಿರುವ ಮಂಚ ಇಳಿಜಾರು ಪಶ್ಚಿಮದ ಕಡೆಗೆ ಇದ್ದರೆ, ಕುಟುಂಬದ ಮುಖ್ಯಸ್ಥರು ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಅವರು ಅನೇಕ ರೀತಿಯ ಕಾಯಿಲೆಗಳಿಂದ ಬಳಲಬೇಕಾಗಬಹುದು.

ಇದನ್ನು ಹೇಗೆ ಪರಿಹರಿಸುವುದು?

*ಪೂರ್ವ ದಿಕ್ಕಿನ ವಾಸ್ತು ದೋಷಗಳನ್ನು ಹೋಗಲಾಡಿಸಲು ಈ ಬದಿಯ ಗೋಡೆಯ ಮೇಲೆ ಸೂರ್ಯ ಯಂತ್ರವನ್ನು ಸ್ಥಾಪಿಸಬೇಕು.

*ಮನೆಯ ಪಶ್ಚಿಮ ದಿಕ್ಕಿನ ವಾಸ್ತು ದೋಷಗಳನ್ನು ನಿವಾರಿಸಲು, ವರುಣ ಯಂತ್ರವನ್ನು ಮನೆಯ ಪಶ್ಚಿಮ ಗೋಡೆಯ ಮೇಲೆ ಸ್ಥಾಪಿಸಬೇಕು.

*ಮನೆಯ ಪಶ್ಚಿಮ ಭಾಗದಲ್ಲಿ ಅಶೋಕ ಮರವನ್ನು ನೆಟ್ಟರೆ ವಾಸ್ತು ದೋಷಗಳು ನಿವಾರಣೆಯಾಗುತ್ತದೆ.

*ಮನೆಯ ದಿಕ್ಕಿಗೆ ಸಂಬಂಧಿಸಿದ ವಾಸ್ತು ದೋಷಗಳನ್ನು ತಪ್ಪಿಸಲು, ಪೂಜಾ ಕೋಣೆಯಲ್ಲಿ ಹನುಮಂತ ಯಂತ್ರವನ್ನು ಸ್ಥಾಪಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+