Digital Condom: ಬಂದೇ ಬಿಡ್ತು ಪವರ್‌ಫುಲ್ 'ಡಿಜಿಟಲ್ ಕಾಂಡೋಮ್'-ಹೇಗೆ ಕಾರ್ಯನಿರ್ವಹಿಸಲಿದೆ ಗೊತ್ತಾ.?
Digital Condom: ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಕಾಂಡೋಮ್ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಇದೀಗ ಡಿಜಿಟಲ್ ಯುವ ಆಗಿದ್ದು, ಈ ಕಾಲಕ್ಕೆ ತಕ್ಕಂತೆ ಜನರು ಚೇಂಜ್ ಕೇಳುತ್ತಿದ್ದಾರೆ. ಅದರಂತೆಯೇ ಈಗ ಜರ್ಮನಿ ಮೂಲದ ಕಂಪನಿಯೊಂದು ಡಿಜಿಟಲ್ ಕಾಂಡೋಮ್ ಅನ್ನು ಬಿಡುಗಡೆಗೊಳಿಸಿದೆ. ಹಾಗಾದರೆ ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಪ್ರತಿನಿತ್ಯವೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ, ಹೊಸ ಸಂಶೋಧನೆಳ ಮೂಲಕ ಬದಲಾವಣೆಗಳು ಆಗುತ್ತಲೇ ಇರುತ್ತವೆ.
ಹಾಗೆಯೇ ಇದೀಗ ಜರ್ಮನಿ ಮೂಲದ ಕಂಪೆನಿಯೊಂದು ಸಂಗಾತಿಗಳು ಬೆರೆಯುವ ಖಾಸಗಿ ಕ್ಷಣಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಡಿಜಿಟಲ್ ಕಾಂಡೋಮ್ ಅನ್ನು ಬಿಡುಗಡೆಗೊಳಿಸಿದೆ.

ತಮ್ಮ ಸಂಗಾತಿಯೊಂದಿಗೆ ಕಳೆಯುವ ಖಾಸಗಿ ಕ್ಷಣಗಳನ್ನು ಅನುಮತಿ ಇಲ್ಲದೆ ವಿಡಿಯೋ ಮಾಡಿ, ಫೋಟೋ ಕ್ಲಿಕ್ಕಿಸಿ ಅವುಗಳನ್ನೇ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವ ಮೂಲಕ ಹಣ ಪೀಕುವುದಲ್ಲದೆ, ಕೊಲೆಯ ಹಂತಕ್ಕೆ ಹೋಗಿರುವ ಉದಾಹರಣೆಗಳಿವೆ. ಇಂತಹ ಕೆಟ್ಟ ದಾರಿಗಳಿಗೆ ಕಡಿವಾಣ ಹಾಕಲೆಂದೇ ಜರ್ಮನ್ ಮೂಲದ ಕಂಪೆನಿಯೊಂದು ಡಿಜಿಟಲ್ ಕಾಂಡೋಮ್ ಬಿಡುಗಡೆಗೊಳಿಸಿದೆ.
ಹೇಗೆ ಕಾರ್ಯ ನಿರ್ವಹಿಸುತ್ತದೆ?: ಡಿಜಿಟಲ್ ಕಾಂಡೋಮ್ ಬರೀ ಕಾಂಡೋಮ್ ಅಲ್ಲ, ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಹೆಸರು 'ಕ್ಯಾಮ್ಡೋಮ್' ಅಂತಾ. ಇದು ನೀವು ನಿಮ್ಮ ಸಂಗಾತಿಯೊಂದಿಗೆ ಖಾಸಗಿ ಕ್ಷಣವನ್ನು ಕಳೆಯುವಾಗ ನಿಮ್ಮ ಫೋನ್ ಅನ್ನು ರಹಸ್ಯ ಮೋಡ್‌ನಲ್ಲಿ ಇರಿಸಲು ಸಹಾಯ ಮಾಡುತ್ತದೆ. ಅಂದರೆ ಈ ಸಂದರ್ಭದಲ್ಲಿ ನಿಮ್ಮ ಅನುಮತಿ ಇಲ್ಲದೆ, ನಿಮ್ಮ ಸ್ಮಾರ್ ಟ್‌ಫೋನ್‌ನಲ್ಲಿ ಕ್ಯಾಮೆರಾ ಅಥವಾ ಮೈಕ್ರೋಫೋನ್ ರೆಕಾರ್ಡಿಂಗ್ ಮಾಡಲು ಸಾಧ್ಯವಾಗುವುದಿಲ್ಲ.
ಈ ಮೂಲಕ ಸಂಗಾತಿ ಜೊತೆ ಬೆರೆಯುವ ಖಾಸಗಿ ಕ್ಷಣದ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡಲಿದೆ. ಈ ವಿಶೇಷ ಪ್ಲಾನ್ ಅನ್ನು ಜರ್ಮನಿಯ ಸೆಕ್ಶುವಲ್ ಹೆಲ್ತ್ ಕಂಪೆನಿಯಾದ ಬಿಲ್ಲಿ ಬಾಯ್ ಕಂಪನಿ ಇನ್ನೋಸಿಯನ್ ಬರ್ಲಿನ್ ಸಂಸ್ಥೆಯ ಸಹಯೋಗದೊಂದಿಗೆ CAMDOM ಆಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
ನೀವು ಈ ಅಪ್ಲಿಕೇಶನ್ ಅನ್ನು ಬಳಸಲು ತುಂಬಾ ಸುಲಭ ಮತ್ತು ಇದು ಜನರ ಗೌಪ್ಯತೆಯನ್ನು ಕಾಪಾಡುತ್ತದೆ ಎಂದು ಬಿಲ್ಲಿ ಬಾಯ್ ಕಂಪನಿ ಮೂಲಗಳು ತಿಳಿವೆ. ಇನ್ನು ಇದನ್ನು ಬಳಸಲು ಮೊದಲು ಬಳಕೆದಾರರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಬಳಿಕ ಅದರಲ್ಲಿ ವರ್ಚುವಲ್ ಬಟನ್ ಅನ್ನು ಸ್ವೈಪ್ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಫೋನ್‌ನ ಮೈಕ್ರೋಫೋನ್ ಮತ್ತು ಕ್ಯಾಮೆರಾ ಆಫ್ ಆಗುತ್ತದೆ.
ಒಂದು ವೇಳೆ ನಿಮ್ಮ ಸಂಗಾತಿ ಏನಾದರೂ ಕ್ಯಾಮೆರಾ ಆನ್ ಮಾಡಲು ಪ್ರಯತ್ನಿಸಿದರೆ, ಈ ಅಪ್ಲಿಕೇಷನ್ ಎಚ್ಚರಿಕೆಯನ್ನು ಕಳುಹಿಸಲು ಅಲಾರಾಂ ಅನ್ನು ಧ್ವನಿಸುತ್ತದೆ. ಅಷ್ಟೇ ಅಲ್ಲದೆ, ಈ ಆಪ್ ತನ್ನ ಬ್ಲೂಟೂತ್ ವ್ಯಾಪ್ತಿಯಲ್ಲಿ ಯಾವುದಾದರೂ ಕ್ಯಾಮೆರಾ ಆನ್ ಆಗಿದ್ದರೆ, ಅದರ ಬಗ್ಗೆಯೂ ಎಚ್ಚರಿಕೆಯನ್ನು ನೀಡುತ್ತದೆ. ಈ ಅಪ್ಲಿಕೇಶನ್ ಅನ್ನು 30ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ಬಿಲ್ಲಿ ಬಾಯ್ ಕಂಪೆನಿ ಹೇಳಿದೆ.
ಈ ಅಪ್ಲಿಕೇಶನ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಲ್ಲಿ ಲಭ್ಯ ಇದ್ದು, ಮುಂದಿನ ದಿನಗಳಲ್ಲಿ ಐಒಎಸ್ ಸಾಧನಗಳಲ್ಲೂ ಲಭ್ಯ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ಡಿಜಿಟಲ್ ಯುಗದಲ್ಲಿ ಒಬ್ಬ ಹುಡುಗಿ ಅಥವಾ ಹುಡುಗನ ಖಾಸಗಿ ಕ್ಷಣದ ಗೌಪ್ಯತೆಯನ್ನು ಕಾಪಾಡುವಲ್ಲಿ ಇದು ತುಂಬಾ ಉಪಯುಕ್ತವಾಗಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.












Click it and Unblock the Notifications