ಮರ್ಕಟದಂತಹ ಮನಸ್ಸನ್ನು ಕಟ್ಟಿಹಾಕಲು ಆಂತರಿಕ ಶಿಸ್ತು ಅಗತ್ಯ: ರೂಢಿಸಿಕೊಳ್ಳುವುದು ಹೇಗೆ?
ಎಲ್ಲೆಲ್ಲೋ ಅಲೆಯುತ್ತಾ ಏನೇನೋ ಆಲೋಚನೆಗಳನ್ನು ಹುಟ್ಟು ಹಾಕುತ್ತಾ ನಮ್ಮನ್ನು ನೆಮ್ಮದಿಯಾಗಿರಲು ಬಿಡದೆ ಕಾಡುವ ಮನಸ್ಸನ್ನು ಹಿಡಿತಕ್ಕೆ ತರುವುದು ಸುಲಭವೇನಲ್ಲ. ಇಂತಹ ಮನಸ್ಸಿಗೊಂದು ಶಿಸ್ತು ಅಳವಡಿಸಿಕೊಂಡು ಅದನ್ನು ಕಟ್ಟಿ ಹಾಕದೆ ಹೋದರೆ ಮಾನಸಿಕ ನೆಮ್ಮದಿಯನ್ನು ಕಿತ್ತುಕೊಂಡು ಬಿಡುತ್ತದೆ. ಹೀಗಾಗಿಯೇ ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಸದಾ ಧ್ಯಾ ನದ ಮೊರೆ ಹೋಗುತ್ತಿದ್ದರು. ಅದರಿಂದ ಎಲ್ಲೆಲ್ಲೋ ಅಂಡಲೆಯುವ ಮನಸ್ಸನ್ನು ಸ್ಥಿಮಿತಕ್ಕೆ ತರುತ್ತಿದ್ದರು.
ಮನಸ್ಸು ಅಷ್ಟು ಸುಲಭಕ್ಕೆ ನಮ್ಮ ಹಿಡಿತಕ್ಕೆ ಸಿಲುಕುವುದಿಲ್ಲ. ಅದು ಎಲ್ಲೆಲ್ಲೋ ಅಲೆಯುತ್ತಲೇ ಇರುತ್ತದೆ. ಹೀಗಾಗಿ ನಾವು ಅನುಭವಿಸುವ ಕಷ್ಟನಷ್ಟಗಳಿಗೆ ನಮ್ಮ ಮನಸ್ಸು ಕೂಡ ಕಾರಣವಾಗಿ ಬಿಡುತ್ತದೆ. ಹೀಗಾಗಿಯೇ ಆಧ್ಯಾತ್ಮಿಕ ಚಿಂತಕರು ಮನಸ್ಸನ್ನು ಮರ್ಕಟಕ್ಕೆ ಹೋಲಿಸಿದ್ದಾರೆ. ಅಷ್ಟೇ ಅಲ್ಲದೆ ಆ ಕುರಿತಂತೆ ಕಥೆಯೊಂದನ್ನು ಹೇಳಿದ್ದಾರೆ. ಅದೇನೆಂದರೆ, ಒಂದು ಕೊತಿ ಇತ್ತು. ಅದು ಸ್ವಭಾವತಃ ಚಂಚಲವಾಗಿತ್ತು. ಅಷ್ಟೇ ಸಾಲದೆಂಬಂತೆ ಯಾರೋ ಒಬ್ಬರು ಆ ಕೋತಿಗೆ ಯಥೇಚ್ಚವಾಗಿ ಹೆಂಡವನ್ನು ಕುಡಿಸಿದರು. ಸರಿ, ಅದು ಮತ್ತಷ್ಟು ಚಂಚಲವಾಯಿತು. ಆಗ ಅದನ್ನು ಒಂದು ಚೇಳು ಕುಟುಕಿತು.

ಮನುಷ್ಯನಿಗೆ ಚೇಳು ಕಚ್ಚಿದಾಗ ಹೇಗೆ ಚೀರಾಡುತ್ತಾನೆಯೋ ಹಾಗೆಯೇ ಎರಡು ಪಟ್ಟು ಜಾಸ್ತಿಯಾಗಿಯೇ ಕೋತಿಯು ಚೀರಾಡಿತು. ಇದು ಸಾಲದೆಂಬಂತೆ ಆ ಕೋತಿಯು ಮೈಯನ್ನು ಒಂದು ದೆವ್ವ ಅಮರಿಕೊಂಡಿತು. ಆಗ ಕೋತಿಯ ಸ್ಥಿತಿ ಚಿಂತಾಜನಕವಾಯಿತು. ಈ ಕಥೆಯ ದೃಷ್ಟಾಂತವನ್ನು ಆಧ್ಯಾತ್ಮಿಕ ಚಿಂತಕರು ಹೀಗೆಯೇ ವಿವರಿಸುತ್ತಾರೆ. ಅದು ಏನೆಂದರೆ ಮನುಷ್ಯನ ಮನಸ್ಸು ಚಂಚಲವಾದ ಕೋತಿಯಂತೆ. ಆಸೆಯ ಹೆಂಡವನ್ನು ಕುಡಿದು, ಅದು ತನ್ನ ತಳಮಳವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತದೆಯಂತೆ.
ಮನಸ್ಸು ಮಾಲಿನ್ಯವಾಗದಂತೆ ನೋಡಿಕೊಳ್ಳಿ
ಆಸೆಗಳು ಮನಸ್ಸನ್ನು ಸ್ವಾಧೀನಪಡಿಸಿಕೊಂಡ ಮೇಲೆ ಇತರರ ಅಭ್ಯುದಯವನ್ನು ಕುರಿತು ಕರುಬುವ ಈರ್ಷ್ಯೆ ಎಂಬ ಚೇಳು ಅದನ್ನು ಕುಟುಕುತ್ತದೆ. ಕೊನೆಗೆ ತನಗೆ ಸರಿ ಸಮಾನರು ಯಾರಿದ್ದಾರೆ? ಎಂಬ ಅಹಂಕಾರವೆಂಬ ದೆವ್ವ ಅದನ್ನು ಮುತ್ತಿಕೊಳ್ಳುತ್ತದೆ. ಇಂತಹುಗಳಿಗೆ ಸಿಕ್ಕಿ ಹಾಕಿಕೊಂಡ ಮನಸ್ಸನ್ನು ಹಿಡಿತಕ್ಕೆ ತರುವುದು ಕಷ್ಟವಾಗುತ್ತದೆ. ಮನಸ್ಸಿನ ಚಂಚಲತೆಗಳನ್ನು ತಡೆಯುವ ಮೊದಲು ಮನಸ್ಸು ಹೀಗಾಗಲು ಕಾರಣಗಳೇನು ಎಂಬುದನ್ನು ಕುರಿತು ವಿಚಾರ ಮಾಡಬೇಕು. ನಿಜವಾಗಿ ಯೋಚಿಸಿದರೆ ಗೊತ್ತಾಗುತ್ತದೆ ಮನಸ್ಸಿನ ಚಾಂಚಲ್ಯಕ್ಕೆ ಕಾರಣ ಅದರ ಮಾಲಿನ್ಯಗಳೇ ಎಂದು.
ಯಾರಿಗೆ ನೈತಿಕವಾದ ಅಥವಾ ಇನ್ನಾವುದೇ ನಿಯಮಗಳಿಲ್ಲವೋ ಮತ್ತು ಬದುಕಿಗೆ ಒಂದು ವ್ಯವಸ್ಥೆ ಇಲ್ಲವೋ ಅಂತಹವರು ಮನಸ್ಸನ್ನು ಹತೋಟಿಗೆ ತರುವುದು ಅಸಾಧ್ಯವಂತೆ. ಆದರೂ ಮೊದಲಿಗೆ ನಾವು ಮನಸ್ಸನ್ನು ಪರಿಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಮನಸ್ಸು ಪರಿಶುದ್ಧವಾದರೆ ಶಿಸ್ತು ರೂಢಿಸಿಕೊಳ್ಳುವುದು ನಮಗೆ ಕಷ್ಟವಾಗುವುದಿಲ್ಲ. ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಉತ್ತಮ ಹಾದಿಯಲ್ಲಿ ಹೇಗೆ ಕೊಂಡೊಯ್ಯಲು ಸಾಧ್ಯವೋ ಹಾಗೆಯೇ ನಮ್ಮ ಹಿಡಿತಕ್ಕೆ ಸಿಗದೆ ಚಂಚಲವಾಗಿರುವ ಮನಸ್ಸಿಗೂ ಒಂದು ಕ್ರಮ ಬದ್ಧವಾದಂತಹ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಒಂದು ಹತೋಟಿಗೆ ಬರುವಂತೆ ಮಾಡಬಹುದು ಎಂಬುವುದನ್ನು ಆಧ್ಯಾತ್ಮಿಕ ಚಿಂತಕರು ವಿವರಿಸುತ್ತಾರೆ.
ಆಂತರಿಕ ಶಿಸ್ತುಗಳನ್ನು ಅಳವಡಿಸಿಕೊಳ್ಳಿ
ನಮ್ಮ ಮನಸ್ಸನ್ನು ಹಿಡಿತಕ್ಕೆ ತರಬೇಕಾದರೆ ಆಧ್ಯಾತ್ಮದ ಮೂಲಕವೇ ಸಾಧ್ಯ. ದೇವರ ಬಗ್ಗೆ ಯಾರಿಗೆ ನಂಬಿಕೆಯಿದೆಯೋ ಅವರು ಸುಲಭವಾಗಿ ಮನಸ್ಸನ್ನು ಹಿಡಿತಕ್ಕೆ ತರಬಹುದು. ಮನಸ್ಸು ದುರ್ಮಾಗದತ್ತ ಸೆಳೆಯುತ್ತಿದೆ ಎಂಬುದು ನಮ್ಮ ಅನುಭವಕ್ಕೆ ಬಂದಾಗ ತಕ್ಷಣ ದೇವರ ಧ್ಯಾನದಲ್ಲಿ ತೊಡಗಿದ್ದೇ ಆದರೆ ಮನಸ್ಸು ಆ ಕಡೆಯಿಂದ ಹಿಂತಿರುಗಿ ಬಿಡುತ್ತದೆ ಎಂಬುದನ್ನು ಆಧ್ಯಾತ್ಮ ಹೇಳುತ್ತದೆ.

ಇದೆಲ್ಲರ ನಡುವೆ ಮನಸ್ಸನ್ನು ಹತೋಟಿಗೆ ತರುವಲ್ಲಿ ಎರಡು ರೀತಿಯ ಆಂತರಿಕ ಶಿಸ್ತುಗಳನ್ನು ರೂಢಿಸಿಕೊಳ್ಳುವುದು ಬಹುಮುಖ್ಯವಾಗಿದೆ. ಅವುಗಳೆಂದರೆ ಮೊದಲನೆಯದಾಗಿ ಸ್ಥಾಯಿಯಾದ ಮೂಲಭೂತ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು. ಎರಡನೆಯದಾಗಿ ಅತ್ಯಂತ ಪ್ರಬಲವಾದ ನಿರೋಧಕಗಳನ್ನು ಅಣಿಗೊಳಿಸುವುದು. ಈ ಎರಡು ಪ್ರಕಾರದ ಶಿಸ್ತುಗಳಲ್ಲಿ ಮೊದಲನೆಯದು ಮನಸ್ಸಿಗೆ ಆರೋಗ್ಯ ಪೂರ್ಣವಾದ ನಿರ್ದೇಶನವನ್ನು ಒದಗಿಸಿದರೆ, ಎರಡನೆಯದು ತುರ್ತುಪರಿಸ್ಥಿತಿಗಳಲ್ಲಿ ಮನಸ್ಸನ್ನು ದಿಕ್ಕೆಡದಂತೆ ಕಾಪಾಡುತ್ತದೆ.
ಆಂತರಿಕ ಶಿಸ್ತು ರೂಢಿಸಿಕೊಳ್ಳುವುದು ಹೇಗೆ?
ಇದೆರಡು ಆಂತರಿಕ ಶಿಸ್ತುಗಳು ಅತ್ಯುತ್ತಮವಾಗಿದ್ದು, ಮೊದಲನೆಯ ಪ್ರಕಾರದ ಶಿಸ್ತನ್ನು ರೂಢಿಸಿಕೊಳ್ಳದಿದ್ದರೆ, ಎರಡನೆಯದನ್ನು ರೂಢಿಸಿಕೊಳ್ಳಲು ಸಾಧ್ಯವಾಗದು. ಮೊದಲನೆಯದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದಿದ್ದರೆ ಎರಡನೆಯದಕ್ಕೆ ಅಗತ್ಯವಾದ ಶಕ್ತಿ ಸಾಮರ್ಥ್ಯ ದೊರೆಯಲಾರದು. ಮನಸಿಗೆ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಮನಸನ್ನು ಹತೋಟಿಗೆ ತರಬೇಕಾದರೆ ಸ್ಥಾಯಿಯಾದ ಮತ್ತು ಮೂಲಭೂತವಾದ ಕೆಲವು ವಿಧಾನಗಳನ್ನು ರೂಪಿಸಿಕೊಳ್ಳುವಲ್ಲಿ ನಮ್ಮ ಬದುಕನ್ನು ಒಂದು ರಚನಾತ್ಮಕ ಚಿಂತನೆಯ ಚೌಕಟ್ಟಿನೊಳಕ್ಕೆ ತಂದುಕೊಳ್ಳುವುದು ಅಷ್ಟೇ ಮುಖ್ಯ.
ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಪೂರ್ವಾಪರ ವಿವೇಚನೆಯಿಂದ ಕೂಡಿದ ಒಂದು ವ್ಯವಸ್ಥೆಯಿರುವಂತೆ ನೋಡಿಕೊಳ್ಳಬೇಕು ಮತ್ತು ಒಂದು ನೈತಿಕ ಹೊಣೆಗಾರಿಕೆಯಿಂದ ನಿರ್ದೇಶಿತವಾಗಿರಬೇಕು. ಮನಸ್ಸನ್ನು ಹಿಡಿತಕ್ಕೆ ತಂದುಕೊಳ್ಳಬೇಕಾದರೆ ಮನಸ್ಸಿನ ಮಾಮೂಲಿ ಸ್ವಭಾವವಾದ ಚಾಂಚಲ್ಯವನ್ನು ತಡೆಗಟ್ಟುವುದು ಅಗತ್ಯ. ಈ ಬಗ್ಗೆ ಸ್ವಾಮಿ ವಿವೇಕಾನಂದರು ತಮ್ಮ ರಾಜಯೋಗದಲ್ಲಿ ಮನಸ್ಸಿನ ಚಂಚಲ ಸ್ವಭಾವದ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ವರ್ಣಿಸಿದ್ದನ್ನು ನಾವು ಕಾಣಬಹುದಾಗಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications