Get Updates
Get notified of breaking news, exclusive insights, and must-see stories!

Animals: ನಮ್ಮಿಂದ ದೂರವಾಗುತ್ತಿರುವ ಜೀವಸಂಕುಲಗಳ ಸಂರಕ್ಷಣೆ ಹೇಗೆ?

ಈ ಭೂಮಿ ಮೇಲೆ ನಮ್ಮೊಂದಿಗೆ ಬದುಕಿಕೊಂಡು ಬಂದಿದ್ದ ಸಸ್ಯ ಮತ್ತು ಜೀವಸಂಕುಲಗಳ ಪೈಕಿ ಹಲವು ನಮಗೆ ಗೊತ್ತೇ ಆಗದಂತೆ ನಾಶವಾಗಿ ಹೋಗಿವೆ. ಒಂದಷ್ಟು ಜೀವ ಸಂಕುಲಗಳು ವಿನಾಶದ ಅಂಚಿಗೆ ಬಂದು ತಲುಪಿವೆ. ಇವುಗಳ ಸಂರಕ್ಷಣೆಯನ್ನು ಮಾಡಿ ನಮ್ಮೊಂದಿಗೆ ಉಳಿಸಿಕೊಳ್ಳದೇ ಸವಾಲ್ ಆಗಿದೆ.

ಇತ್ತೀಚೆಗಿನ ಅಧ್ಯಯನಗಳನ್ನು ಗಮನಿಸಿದ್ದೇ ಆದರೆ ಸಸ್ಯಗಳಲ್ಲಿ ಸೀತಾ ಅಶೋಕ, ಮರದರಶಿನ, ಭೂತಾಳಗಿಡ, ಎಣ್ಣೆಮರ, ನೀರನೇರಳೆ ಸೇರಿದಂತೆ, ಒಟ್ಟು 16 ಪ್ರಬೇಧಗಳಲ್ಲದೆ, ಇದರ ಜೊತೆಗೆ, ಮಾಮೂಲಿ ಹೂಬಿಡುವ ಸಸ್ಯ ಪ್ರಬೇಧಗಳು 94, ಬಹಳ ಸೀಮಿತವಾಗಿ ಹೂಬಿಡುವ ಸಸ್ಯ ಪ್ರಬೇಧಗಳು 11, ಕರ್ನಾಟಕದಲ್ಲಿ ಮಾತ್ರ ಸಿಗುವ ಹೂಬಿಡುವ ಸಸ್ಯ ಪ್ರಭೇಧಗಳು 106, ರಾಜ್ಯ ಹಾಗೂ ನೆರೆಹೊರೆಯ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಪ್ರಬೇಧಗಳು ಸೇರಿ 666 ಸಸ್ಯಗಳು ವಿನಾಶದತ್ತ ಮುಖ ಮಾಡಿವೆ.

How To Preserve The Animals And Birds That Are Getting Away From Us

ಕರ್ನಾಟಕದಲ್ಲಿ ವಿನಾಶದಂಚಿನಲ್ಲಿರುವ ಸಸ್ತನಿಗಳನ್ನು ನೋಡುವುದಾದರೆ, ಪುನಗಿನಬೆಕ್ಕು, ಕಾಡುಪಾಪ, ನೀರಾನೆ, ಬಾವಲಿ, ತಿಮಿಂಗಲ ಪ್ರಬೇಧಗಳು ಸೇರಿದಂತೆ, ಒಟ್ಟು 40 ಸಸ್ತನಿಗಳು, ಜತೆಗೆ ಕಶೇರುಕ ಗುಂಪಿನ ಇತರ ಪ್ರಾಣಿವರ್ಗಗಳಲ್ಲಿನ ವಿನಾಶದಂಚಿನ ಪ್ರಬೇಧಗಳನ್ನು ಕೂಡ ತಜ್ಞರ ಸಮಿತಿಯು ಸೂಚಿಸಿದ್ದು, ಒಟ್ಟು ಅಪಾಯದಂಚಿನಲ್ಲಿರುವ ಪಕ್ಷಿ ಪ್ರಬೇಧಗಳು 23, ಅಪಾಯದಂಚಿನಲ್ಲಿರುವ ಸರಿಸೃಪ ಪ್ರಬೇಧಗಳು 26, ಅಪಾಯದಂಚಿನಲ್ಲಿರುವ ಉಭಯವಾಸಿ ಪ್ರಬೇಧಗಳು 21, ಅಪಾಯದಂಚಿನಲ್ಲಿರುವ ಸಿಹಿನೀರು ಮೀನು ಪ್ರಬೇಧಗಳು 53, ಅಪಾಯದಂಚಿನಲ್ಲಿರುವ ಸಮುದ್ರ ಮೀನಿನ 35 ಪ್ರಭೇಧಗಳು ಇವೆ ಎಂದು ಹೇಳಲಾಗುತ್ತಿದೆ.

ಜೀವಸಂಕುಲದ ಅಳಿವಿನ ಬಗ್ಗೆ ವಿಶೇಷ ಅಧ್ಯಯನ

ಇವುಗಳು ವಿನಾಶಕ್ಕೆ ತೆರಳಲು ಹಲವು ಕಾರಣಗಳಿವೆ. ಅದಕ್ಕೆ ಬೇಕಾದ ಪರಿಹಾರಗಳನ್ನು ಕಂಡುಕೊಂಡು ಮುಂದಿನ ದಿನಗಳಲ್ಲಿ ಅಳಿನಂಚಿನಲ್ಲಿರುವ ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಪತ್ತನ್ನು ನಾವು ಉಳಿಸಿಕೊಳ್ಳುವತ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

How To Preserve The Animals And Birds That Are Getting Away From Us

ಕೆಲ ವರ್ಷಗಳ ಹಿಂದೆಯೇ ಜೀವವೈವಿಧ್ಯ ಮಂಡಳಿಯು ಕರ್ನಾಟಕದಲ್ಲಿ ವಿನಾಶದ ಅಂಚಿನ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಕುರಿತು ವಿಶೇಷ ಅಧ್ಯಯನ ಮಾಡಿ ಆ ಸಂಬಂಧದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ನಮ್ಮ ನಡುವೆಯಿದ್ದು, ಇದೀಗ ನಾಶವಾಗಿರುವ ಮತ್ತು ನಾಶವಾಗುತ್ತಿರುವ ಪ್ರಾಣಿ, ಪಕ್ಷಿ ಮತ್ತು ಸಸ್ಯಗಳನ್ನು ಬಗ್ಗೆ ಮಾಹಿತಿಗಳನ್ನು ನೀಡಲಾಗಿದೆ.

ರಾಜ್ಯದ 40 ಸಸ್ತನಿಗಳು ವಿನಾಶದಲ್ಲಿವೆ

ಇನ್ನು 2020ರಲ್ಲಿ ಜೀವವೈವಿಧ್ಯ ಮಂಡಳಿ ರಚಿಸಲಾಗಿದ್ದು, ಇದರಲ್ಲಿ ಸಸ್ಯ ವರ್ಗೀಕರಣ ಶಾಸ್ತ್ರಜ್ಞರ ಸಮಿತಿ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದ ನಿವೃತ್ತ ನಿರ್ದೇಶಕ ಡಾ.ಎಂ.ಸಂಜಪ್ಪ ಹಾಗೂ ಪ್ರಾಣಿಶಾಸ್ತ್ರಜ್ಞರ ಸಮಿತಿ ಅಧ್ಯಕ್ಷರಾಗಿ ಹಿರಿಯ ಪ್ರಾಣಿ ವಿಂಗಡನಾ ಶಾಸ್ತ್ರಜ್ಞ ಡಾ.ಎ.ರಾಮಕೃಷ್ಣ ಕಾರ್ಯ ನಿರ್ವಹಿಸಿದ್ದು, ಇವರ ನೇತೃತ್ವದ ಸಮಿತಿಯು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾರ್ಗದರ್ಶನದಲ್ಲಿ ವರದಿಯನ್ನು ಸಿದ್ದಪಡಿಸಿ ಹಿಂದಿನ ಸರ್ಕಾರಕ್ಕೆ ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ.

How To Preserve The Animals And Birds That Are Getting Away From Us

ವಿನಾಶದ ಅಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಪ್ರಬೇಧಗಳನ್ನು ಗಮನಿಸಿದ್ದೇ ಆದರೆ 2010ರಲ್ಲಿ 16 ವಿನಾಶದ ಅಂಚಿನ ಸಸ್ಯ ಪ್ರಭೇದ ಗುರುತಿಸಿದ್ದರೆ, 2021ರಲ್ಲಿ ಇದೀಗ ಹಿಂದಿನ 16 ಪ್ರಭೇದ ಸೇರಿ ಒಟ್ಟು 32 ಪ್ರಭೇದಗಳನ್ನು ವಿನಾಶದ ಅಂಚಿನಲ್ಲಿದೆ ಎಂದು ಗುರುತಿಸಲಾಗಿದೆ. ವ್ಯಾಪಕ ವಾಣೀಜ್ಯೀಕರಣಕ್ಕೆ ಒಳಗಾಗಿರುವ ಕಾಡಿನ ಸಸ್ಯ ಪ್ರಭೇದಗಳ ಸಂಖ್ಯೆ 7 ಆಗಿದೆ. ಹಾಗೆಯೇ ರಾಜ್ಯದ 40 ಸಸ್ತನಿಗಳನ್ನು 2021ರಲ್ಲಿ ವಿನಾಶದ ಅಂಚಿನ ಪ್ರಭೇದಗಳು ಎಂದು ಗುರುತಿಸಿರುವುದು ಕಂಡು ಬಂದಿದೆ.

ಮೂರು ವಿಭಾಗದಲ್ಲಿ ನಡೆಸಿದ ಅಧ್ಯಯನ

ಅಪಾಯದ ಅಂಚಿನ ಪಕ್ಷಿ ಪ್ರಭೇದಗಳು 23, ಅಪಾಯದ ಅಂಚಿನ ಸರೀಸೃಪ ಪ್ರಭೇದಗಳು 26, ಅಪಾಯದ ಅಂಚಿನ ಉಭಯವಾಸಿ ಪ್ರಭೇದಗಳು 21, ಅಪಾಯದ ಅಂಚಿನ ಸಿಹಿನೀರು ಮೀನು ಪ್ರಭೇದಗಳು 53, ಅಪಾಯದ ಅಂಚಿನ ಸಮುದ್ರ ಮೀನಿನ ಪ್ರಭೇದಗಳು 35. ವಿನಾಶದ ಅಂಚಿನ ಅಕಶೇರುಕ ಪ್ರಭೇದಗಳನ್ನು ಗುರುತಿಸಬೇಕು ಎಂದು ತಜ್ಞರ ಸಮಿತಿ ಹೇಳಿದೆ.

ಸಂಶೋಧನೆಯ ವರದಿಯಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ ಮೂರು ವಿಧದಲ್ಲಿ ಜೀವ ಸಂಕುಲಗಳನ್ನು ಗುರುತಿಸಲಾಗಿದೆ. ಅದು ಏನೆಂದರೆ ವಿನಾಶದಂಚಿಗೆ ಜಾರಿದ, ವಿನಾಶದಂಚಿನಲ್ಲಿರುವ ಮತ್ತು ವಿನಾಶದೆಡೆಗೆ ಸಾಗುತ್ತಿರುವ ಹೀಗೆ ಮೂರು ಗುಂಪುಗಳ ಪ್ರಭೇಧಗಳನ್ನು ಒಟ್ಟಾಗಿ "ಅಪಾಯದಂಚಿನಲ್ಲಿರುವ ಸಸ್ಯವರ್ಗ ಎಂದು ಹೆಸರಿಸಲಾಗಿದೆ.

ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಶಿಫಾರಸ್ಸು

ಇವುಗಳಲ್ಲಿ, "ಗಂಭೀರವಾಗಿ ವಿನಾಶದಂಚಿಗೆ ಜಾರಿದ" ಹೂಬಿಡುವ ಸಸ್ಯ ಪ್ರಬೇಧಗಳನ್ನು "ಜೀವವೈವಿಧ್ಯ ಕಾಯ್ದೆ, 2002" ರ ಸೆಕ್ಷನ್ 38 ರಅನ್ವಯ, "ಕರ್ನಾಟಕದ ವಿನಾಶದಂಚಿನ ಸಸ್ಯಪ್ರಬೇಧ" ಗಳ ಪಟ್ಟಿಗೆ ಸೇರಿಸಲು ತಜ್ಞರ ಸಮಿತಿಯು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಶಿಫಾರಸ್ಸು ಮಾಡಿತ್ತು.

ಇನ್ನೊಂದೆಡೆ ತಜ್ಞ ಸಮಿತಿ ನೀಡಿದ ವರದಿಯನ್ನು ಜೀವವೈವಿಧ್ಯ ಮಂಡಳಿ ಜನವರಿ 2021ರಲ್ಲಿ ಅಂಗೀಕರಿಸಿದ್ದು. ಪರಿಷ್ಕರಿಸಿರುವ ಪಟ್ಟಿಯನ್ನು ಕೇಂದ್ರ ಅರಣ್ಯ ಪರಿಸರ ಮಂತ್ರಾಲಯಕ್ಕೆ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರಕ್ಕೆ ಸಲ್ಲಿಸಿದೆ. ಇದೆಲ್ಲದರ ನಡುವೆ ಅಳಿವಿನಂಚಿನಲ್ಲಿರುವ ಪ್ರಾಣಿಪಕ್ಷಿ, ಸಸ್ಯಗಳ ಉಳಿವಿಗೆ ಏನು ಮಾಡಬಹುದು ಎಂಬುದಕ್ಕೆ ಕೆಲವೊಂದು ಪ್ರಮುಖ ಸಲಹೆಗಳನ್ನು ಜೀವವೈವಿಧ್ಯ ಮಂಡಳಿ ನೀಡಿದೆ.

ಜೀವವೈವಿಧ್ಯ ಮಂಡಳಿ ನೀಡಿದ ಸಲಹೆಗಳೇನು?

ಕರ್ನಾಟಕ ಜೀವವೈವಿದ್ಯ ಮಂಡಳಿಯು ಕೈಗೊಳ್ಳುವ ಎಲ್ಲ ಬಗೆಯ ಸಂರಕ್ಷಣೆ, ಸಂವರ್ಧನೆ ಹಾಗೂ ಬಳಕೆಯ ನ್ಯಾಯಯುತ ಹಂಚಿಕೆ ಕುರಿತ ಕಾರ್ಯಯೋಜನೆಗಳಿಗೆ ಸಾರ್ವಜನಿಕರು ಕೈಜೋಡಿಸುವುದು, ಈಗಾಗಲೇ ರಾಜ್ಯಾದ್ಯಂತ ರಚಿಸಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಗಳು ತಮ್ಮ ವ್ಯಾಪ್ತಿಯ ಜನತಾ ಜೀವವೈವಿಧ್ಯ ದಾಖಲಾತಿಗಳ ಪರಿಷ್ಕರಣೆ ಹಾಗೂ ಅದರ ಆಧಾರದಲ್ಲಿ ಕೈಗೊಳ್ಳುವ ಎಲ್ಲ ಸಂರಕ್ಷಣಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.

ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ, ಕೃಷಿ ಇಲಾಖೆ, ತೊಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ- ಇವುಗಳ ವ್ಯಾಪ್ತಿಯಲ್ಲಿನ ವಿವಿಧ ಸಂರಕ್ಷಣೆ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಬೇಕು. ಅರಣ್ಯ ಇಲಾಖೆಯು ನಿರ್ವಹಿಸುವ ಗಿಡಗಳ ನರ್ಸರಿಯಲ್ಲಿ ಹಾಗೂ ವನೀಕರಣ ಯೋಜನೆಗೆ ಆದ್ಯತೆ ನೀಡಬೇಕು.

ವಿಶ್ವವಿದ್ಯಾನಿಲಯ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಈ ಕುರಿತಂತೆ ಸಂಶೋಧನಾ ಕಾರ್ಯಕ್ರಮಗಳು ನಡೆಯಬೇಕು. ಶಾಲೆ ಹಾಗೂ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕುರಿತ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಹೀಗೆ ಹತ್ತಾರು ಸಲಹೆಗಳನ್ನು ನೀಡಲಾಗಿದೆ.

ಜೀವ ಸಂಕುಲಗಳನ್ನು ಉಳಿಸಿಕೊಳ್ಳೋಣ

ಇವತ್ತಿನ ವೇಗದ ಬದುಕಿನಲ್ಲಿ ಮನುಷ್ಯ ಅಭಿವೃದ್ಧಿಯತ್ತ ಮುಖ ಮಾಡಿದ್ದಾರೆ. ಈ ಅಭಿವೃದ್ಧಿ ಕೆಲವೊಮ್ಮೆ ಸುತ್ತಮುತ್ತಲಿನ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡುತ್ತಿದೆ. ಆ ಬಗ್ಗೆ ಈಗಿನಿಂದಲೇ ನಿಗಾವಹಿಸುವುದು ಅಗತ್ಯವಾಗಿದೆ. ಇಲ್ಲದೆ ಹೋದರೆ ಭವಿಷ್ಯದಲ್ಲಿ ಬಹಳಷ್ಟು ಜೀವ ಸಂಕುಲಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+