Lotus Seeds Recipe: ಸುಲಭವಾಗಿ, ಆರೋಗ್ಯಕರ ಕಮಲದ ಬೀಜಗಳ ಪಾಯಸ ಮಾಡುವುದು ಹೇಗೆ?
ಕಮಲದ ಬೀಜ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ನಮ್ಮ ದೇಹಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ನೀಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಕಮಲದ ಬೀಜಗಳ ಸ್ನ್ಯಾಕ್ಸ್ ಎಲ್ಲಾ ಕಡೆ ಸಿಗುತ್ತದೆ. ಮಖಾನ ಬೀಜಗಳನ್ನು ಆರೋಗ್ಯದ ದೃಷ್ಠಿಯಿಂದ ಹೆಚ್ಚು ಜನರು ಬಳಸುವುದನ್ನು ಅಳವಡಿಸಿಕೊಂಡಿದ್ದಾರೆ.
ಈ ಬರಹದಲ್ಲಿ ಕಮಲದ ಬೀಜದ ಪಾಯಸ (ಮಖಾನ ಖೀರ್) ಮಾಡುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಈ ಸಿಹಿ ತಿಂಡಿಯನ್ನು ಕಮಲದ ಬೀಜಗಳು, ಹಾಲು ಮತ್ತು ಸಕ್ಕರೆಯನ್ನು ಬಳಸಿ ತಯಾರಿಸಲಾಗುತ್ತದೆ. ಮಖಾನಾ ಖೀರು ತುಂಬಾ ಟೇಸ್ಟಿ, ಆರೋಗ್ಯಕರ ಮತ್ತು ತಯಾರಿಸಲು ಕೂಡ ತುಂಬಾ ಸುಲಭ.

ಕಮಲದ ಬೀಜಗಳು ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಇದು ದೇಹವನ್ನು ಅನೇಕ ರೋಗಗಳಿಂದ ಸುರಕ್ಷಿತವಾಗಿರಿಸುವಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನೋವನ್ನು ನಿವಾರಿಸಲು, ತೂಕವನ್ನು ನಿರ್ವಹಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿವೆ.
ಮಖಾನ ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಅವುಗಳನ್ನು ಬಳಸಬಹುದು. ಲೋಟಸ್ ಬೀಜಗಳನ್ನು ಸೂಕ್ಷ್ಮಜೀವಿಯ ಸೋಂಕುಗಳು, ಕ್ಯಾನ್ಸರ್ ಕಾಯಿಲೆಗಳ ಚಿಕಿತ್ಸೆಯಲ್ಲಿಯೂ ಬಳಸಬಹುದು. ಹೆಚ್ಚುವರಿಯಾಗಿ, ಲಿವರ್ ಮತ್ತು ಹೃದಯವನ್ನು ರಕ್ಷಿಸಲು ಕಮಲದ ಬೀಜಗಳನ್ನು ಬಳಸಲಾಗುತ್ತದೆ. ಆರೋಗ್ಯದ ಕಣಜವಾಗಿರುವ ಈ ಕಮಲದ ಬೀಜಗಳನ್ನು ಬಳಸಿ ಪಾಯಸ ತಯಾರಿಸಲಾಗುತ್ತದೆ. ಕೇವಲ 3 ಮುಖ್ಯ ಪದಾರ್ಥಗಳನ್ನು ಬಳಸಿ ಇದನ್ನು ಸುಲಭವಾಗಿ ತಯಾರಿಸಬಹುದು.

ಮಖಾನ ಖೀರ್ ಮಾಡಲು ಬೇಕಾದ ಪದಾರ್ಥಗಳು
1. 1 ಕಪ್ ಕಮಲದ ಬೀಜ ಅಥವಾ ಮಖಾನ ಬೀಜಗಳು
2. 2 ಕಪ್ ಅಥವಾ ಅರ್ಧ ಲೀಟರ್ ಹಾಲು
3. ನಿಮ್ಮ ಸಿಹಿಗೆ ತಕ್ಕಂತೆ ಸಕ್ಕರೆ
4. ಒಂದು ಅಥವಾ ಎರಡು ಟೇಬಲ್ ಸ್ಪೂನ್ ತುಪ್ಪ
5. ಐದರಿಂದ ಆರು ಗೋಡಂಬಿ
6. ಸ್ವಲ್ಪ ಒಣದ್ರಾಕ್ಷಿ
7. ಬೇಕಿದ್ದರೆ ಕೇಸರಿಯ ಕೆಲವು ಎಳೆಗಳು
8. ಸುವಾಸನೆಗೆ ಏಲಕ್ಕಿ
ಮಖಾನ ಖೀರ್ ತಯಾರಿಸುವ ವಿಧಾನ
ಮಖಾನ್ ಖೀರ್ ತಯಾರಿಸಲು, ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಫ್ರೈ ಮಾಡಿ. ಅವನ್ನು ತೆಗೆದ ನಂತರ ಅದೇ ಬಾಣಲೆಯಲ್ಲಿ ಕಮಲದ ಬೀಜಗಳನ್ನು ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ಹುರಿದ ಕಮಲದ ಬೀಜಗಳನ್ನು ಅರ್ಧ ಪುಡಿಮಾಡಿ, ಉಳಿದವುಗಳಲ್ಲಿ ಕಾಲ ಭಾಗವನ್ನು ಪಕ್ಕಕ್ಕೆ ಇರಿಸಿ. ಮುಂದೆ ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ.
ಹಾಲು ಉಕ್ಕು ಬಂದ ಬಳಿಕ ಹುರಿದ ಕಮಲದ ಬೀಜಗಳನ್ನು ಸೇರಿಸಿ ಮತ್ತು ಕುದಿಸುವುದನ್ನು ಮುಂದುವರಿಸಿ. ಇದಕ್ಕೆ ಸಕ್ಕರೆ ಸೇರಿಸಿ. ಪುಡಿ ಮಾಡಿದ ಕಮಲದ ಬೀಜಗಳನ್ನು ಸೇರಿಸಿ, ಮಿಶ್ರಣವನ್ನು ಮಾಡಿ, ಕೇಸರಿ ದಳಗಳನ್ನು ಸೇರಿಸಿ ಕುದಿಸಲು ಆರಂಭಿಸಿ. ಬಳಿಕ ಇದಕ್ಕೆ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿ ಸೇರಿಸಿ. ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿ. ಸ್ಟವ್ ಆಫ್ ಮಾಡಿ. ಈಗ ಕಮಲದ ಬೀಜದ ಪಾಯಸ ಸವಿಯಲು ಸಿದ್ಧ.












Click it and Unblock the Notifications