Harive Soppina Chutney Recipe: ಹರಿವೆ ಸೊಪ್ಪಿನ ಸಾಂಬಾರ್ ತಿಂದು ಬೇಜಾರ್ ಆಗಿದ್ರೆ ಒಮ್ಮೆ ಚಟ್ನಿ ಟ್ರೈ ಮಾಡಿ
ಪೋಷಕಾಂಶಗಳ ಖನಿಜವಾಗಿರುವ ಸೋಪ್ಪು ಎಲ್ಲರಿಗೂ ಇಷ್ಟವಾಗುತ್ತದೆ. ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ನೀಡುವ ಸೊಪ್ಪನ್ನು ಹಲವು ವಿಧಗಳಲ್ಲಿ ಬಳಸಬಹುದು. ದಿನ ಸೋಪ್ಪನ್ನು ಒಂದಲ್ಲ ಒಂದು ರೀತಿಯಲ್ಲಿ ಆಹಾರದಲ್ಲಿ ಬಳಸಿದರೇ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೋಪನ್ನು ಸಾಂಬಾರ್, ಪಲ್ಯ ಆಗಿ ಹೆಚ್ಚು ಬಳಕೆ ಮಾಡಲಾಗುತ್ತದೆ.
ಹರಿವೆ ಸೊಪ್ಪಿನ ಸಾಂಬಾರ್, ಪಲ್ಯ ತಿಂದು ಬೇಜಾರ್ ಆಗಿದ್ದರೆ ಒಮ್ಮೆ ಈ ಚಟ್ನಿ ಟ್ರೈ ಮಾಡಿ ನೋಡಿ. ಈ ಲೇಖನದಲ್ಲಿ ಚಟ್ನಿ ಅಥವಾ ಹರಿವೆ ಸೊಪ್ಪಿನ ಬಜ್ಜಿಯನ್ನು ಮಾಡುವ ವಿಧಾನವನ್ನು ವಿವರಿಸಲಾಗಿದೆ. ಈ ರುಚಿಕರವಾದ ಹರಿವೆ ಸೊಪ್ಪಿನ ಚಟ್ನಿ ಮಾಡುವುದು ತುಂಬಾ ಸುಲಭ ಮತ್ತು ಕೆಲವೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಸೊಪ್ಪು, ಸಾಸಿವೆ, ಕೆಂಪು ಮೆಣಸಿನಕಾಯಿ, ಹುಣಸೆಹಣ್ಣು, ಬೆಲ್ಲ, ಉಪ್ಪು ಬಳಸಿ ತಯಾರಿಸಲಾಗುತ್ತದೆ. ಇದನ್ನು ಅನ್ನ, ರೊಟ್ಟಿ, ದೋಸೆ ಅಥವಾ ಚಪಾತಿಯೊಂದಿಗೆ ಬಡಿಸಬಹುದು.

ಹರಿವೆ ಸೊಪ್ಪಿನ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
* 1 ಕಟ್ಟು ಹರಿವೆ ಸೊಪ್ಪು
* ಅರ್ಧ ಟೀಸ್ಪೂನ್ ಸಾಸಿವೆ ಕಾಳುಗಳು
* 2 ಅಥವಾ 4 ಕೆಂಪು ಮೆಣಸಿನಕಾಯಿಗಳು
* ಕಾಲು ಕಪ್ ತುರಿದ ತೆಂಗಿನಕಾಯಿ
* ಸಣ್ಣ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು
* ಒಂದು ಚಮಚ ಬೆಲ್ಲ
* ಒಂದು ಚಮಚ ಅಡುಗೆ ಎಣ್ಣೆ
* ರುಚಿಗೆ ತಕ್ಕಂತೆ ಉಪ್ಪು

ಒಗ್ಗರಣೆಗೆ ಬೇಕಾದ ಪದಾರ್ಥಗಳು:
* 2 ಚಮಚ ಎಣ್ಣೆ ಅಥವಾ ತುಪ್ಪ
* ಅರ್ಧ ಟೀಸ್ಪೂನ್ ಸಾಸಿವೆ ಕಾಳುಗಳು
* ಅರ್ಧ ಚಮಚ ಜೀರಿಗೆ
* ಚಿಟಿಕೆ ಅರಿಶಿನ
* ಚಿಟಿಕೆ ಇಂಗು
ಹರಿವೆ ಸೊಪ್ಪಿನ ಚಟ್ನಿ ಮಾಡುವ ವಿಧಾನಗಳು
ಹರಿವೆ ಸೊಪ್ಪುನ್ನು ಸ್ವಚ್ಛಗೊಳಿಸಿ ಮತ್ತು ಸಣ್ಣದಾಗಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಸಾಸಿವೆ ಮತ್ತು ಕೆಂಪು ಮೆಣಸಿನಕಾಯಿಯನ್ನು ಫ್ರೈ ಮಾಡಿ. ಕತ್ತರಿಸಿದ ಎಲೆಗಳನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಫ್ರೈ ಮಾಡಿ, ಉಪ್ಪು ಸೇರಿಸಿ ಮತ್ತು ಮೃದುವಾಗುವವರೆಗೆ ಬಾಡಿಸಿಕೊಳ್ಳಿ.
ಬಳಿಕ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ, ತೆಂಗಿನಕಾಯಿಗೆ ಸೇರಿಸಿ. ಜೊತೆಗೆ ಬೆಲ್ಲ ಮತ್ತು ಹುಣಸೆಹಣ್ಣು ಹಾಕಿಕೊಳ್ಳಿ ರುಬ್ಬಲು ಬೇಕಾದಷ್ಟು ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಎಣ್ಣೆ ಅಥವಾ ತುಪ್ಪ, ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅರಿಶಿನ ಮತ್ತು ಇಂಗು ಸೇರಿಸಿ. ರುಬ್ಬಿದ ಪೇಸ್ಟ್ ಮತ್ತು ಅಗತ್ಯವಿರುವ ನೀರನ್ನು ಹಾಕಿ ಮಿಕ್ಸ್ ಮಾಡಿ. ಬಳಿಕ ಸ್ಟವ್ ಅಫ್ ಮಾಡಿ. ಇದನ್ನು ಅನ್ನ, ದೋಸೆ, ಚಪಾತಿಯಿಂದಿಗೆ ಬಡಿಸಿ.












Click it and Unblock the Notifications