ಬಕ್ರೀದ್ ಹಬ್ಬದಂದು ರುಚಿಕರವಾದ ಮಟನ್ ಬಿರಿಯಾನಿ ಮಾಡಿ ಸವಿಯಿರಿ: ಸುಲಭ ವಿಧಾನ ಇಲ್ಲಿದೆ
ಬಕ್ರೀದ್ ಹಬ್ಬ ಎಂದರೆ ಮಟನ್ ಬಿರಿಯಾನಿಯ ಘಮವನ್ನು ಹೇಗೆ ಮರೆಯಲು ಸಾಧ್ಯ. ಒಂದು ಪ್ಲೇಟ್ ಬಿರಿಯಾನಿ ಇಲ್ಲದೆ ಈದ್ ಆಚರಣೆಯೇ ಮುಗಿಯುವುದಿಲ್ಲ. ಈದ್ ಹಬ್ಬದ ವಿಶೇಷ ತಿಂಡಿಗಳ ಸಾಲಿನಲ್ಲಿ ಮೊದಲ ಸ್ಥಾನ ಇರುವುದು ಬಿರಿಯಾನಿಗೆ. ಜೂನ್ 16 ರಂದು ಮುಸ್ಲಿಂ ಸಮುದಾಯದಿಂದ ವಿಶ್ವದಾದ್ಯಂತ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ.
ಭಾರತದಲ್ಲಿ ಜೂನ್ 16 ಅಥವಾ ಜೂನ್ 17 ರಂದು ಹಬ್ಬವನ್ನು ಆಚರಿಸಲಾಗುತ್ತೆ. ಈದ್ ಉಲ್ ಅಧಾವನ್ನು ತ್ಯಾಗದ ಹಬ್ಬ ಎಂದೂ ಕರೆಯುತ್ತಾರೆ. ಇದನ್ನು ಭಾರತದಲ್ಲಿ ಬಕ್ರೀದ್ ಎಂದು ಕರೆಯಲಾಗುತ್ತದೆ. ಈ ದಿನದಂದು, ಮುಸ್ಲಿಂ ಆರಾಧಕರು ಮಸೀದಿಗೆ ಭೇಟಿ ನೀಡುವ ಮೂಲಕ ಬೆಳಗ್ಗೆ ಪ್ರಾರ್ಥನೆಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ.

ಈದ್ ಹಬ್ಬದಲ್ಲಿ ರುಚಿಕರವಾದ ಖಾದ್ಯಗಳಾದ ಶೀರ್ ಕೊರ್ಮಾ, ಖೀರ್, ಬಿರಿಯಾನಿ ಮತ್ತು ಕಬಾಬ್‌ಗಳನ್ನು ತಯಾರಿಸಿ ಪ್ರೀತಿಪಾತ್ರರೊಂದಿಗೆ ಸವಿಯುತ್ತಾರೆ. ವಿಶೇಷ ದಿನವನ್ನು ಆಚರಿಸಲು ಮುಸ್ಲಿಂ ಬಾಂಧವರು ಸಜ್ಜಾಗುತ್ತಿರುವಾಗ ಹೈದರಾಬಾದಿ ಮಟನ್ ಬಿರಿಯಾನಿಯನ್ನು ಮನೆಯಲ್ಲಿಯೇ ಮಾಡಲು ಸುಲಭವಾದ ಪಾಕವಿಧಾನ ಇಲ್ಲಿದೆ.
ಮಟನ್ ಬಿರಿಯಾನಿ ಮಾಡಲು ಬೇಕಾದ ಪದಾರ್ಥಗಳು:
ಚಿಕನ್ ಮ್ಯಾರಿನೇಟ್ ಮಾಡಲು
ಮಟನ್ - 500 ಗ್ರಾಂ (ಅರ್ಧ ಕೆಜಿ)
ಶಾಹಿ ಜೀರಾ - 2 ಟೀಸ್ಪೂನ್
ಏಲಕ್ಕಿ - 4-5
ದಾಲ್ಚಿನ್ನಿ - 1 ಸಣ್ಣ ತುಂಡು
ಅರಿಶಿನ - 1 1/2 ಟೀಸ್ಪೂನ್
ಮೆಣಸಿನ ಪುಡಿ - 1 ಟೀಸ್ಪೂನ್
ಏಲಕ್ಕಿ ಪುಡಿ - 1 ಟೀಸ್ಪೂನ್
ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
ಶುಂಠಿ ಪೇಸ್ಟ್ - 1 ಟೀಸ್ಪೂನ್
ಹಸಿರು ಮೆಣಸಿನಕಾಯಿ - 2
ಈರುಳ್ಳಿ - 3/4 ಕಪ್
ಪುದೀನ ಎಲೆಗಳು - 1 ಕಪ್
ಮೊಸರು - 1 1/2 ಕಪ್
ಎಣ್ಣೆ - 1/4 ಕಪ್
ರುಚಿಗೆ ಉಪ್ಪು
ಅನ್ನ ಮಾಡಲು
ನೆನೆಸಿದ ಬಾಸುಮತಿ ಅಕ್ಕಿ - 2 ಕಪ್ಪು
ನೀರು - 3 ಲೀ
ಉಪ್ಪು - 3 ಟೀಸ್ಪೂನ್
ಏಲಕ್ಕಿ - 3-4
ಹಸಿರು ಮೆಣಸಿನಕಾಯಿ - 1
ಕೇಸರಿ - ಬಹಳ ಚಿಕ್ಕ ಚಿಟಿಕೆ
ದೇಸಿ ತುಪ್ಪ - 2 ಟೀಸ್ಪೂನ್
ಗೋದಿ ಹಿಟ್ಟು - ಹಬೆ ಕಟ್ಟಲು

ಬಿರಿಯಾನಿ ಮಾಡುವ ವಿಧಾನ:
ಮಟನ್ ಮ್ಯಾರಿನೇಟ್ ಮಾಡಲು, ಎಲ್ಲಾ ಮ್ಯಾರಿನೇಟ್ ಪದಾರ್ಥಗಳನ್ನು ಮಿಶ್ರಣ ಮಾಡಿ ಮತ್ತು ಅವುಗಳನ್ನು ಒಂದು ಪಾತ್ರೆಯಲ್ಲಿ ಇರಿಸಿ. ನಂತರ ಕಡಿಮೆ ಉರಿಯಲ್ಲಿ ಬೇಯಿಸಿ. ಮಾಂಸ ಡ್ರೈ ಎನಿಸಿದರೆ, ಸ್ವಲ್ಪ ನೀರು ಸೇರಿಸಿ. ಇನ್ನೊಂದು ಪಾತ್ರೆಯಲ್ಲಿ, ನೀರನ್ನು ಕುದಿಸಿ ಮತ್ತು ಉಪ್ಪು, ಏಲಕ್ಕಿ ಮತ್ತು ಮೆಣಸು ಸೇರಿಸಿ. ಮೆಣಸಿನಕಾಯಿ ಮತ್ತು ಮಸಾಲೆಗಳನ್ನು ಸ್ಕಿಮ್ ಮಾಡಿ ಮತ್ತು ನೆನೆಸಿದ ಅಕ್ಕಿ ಸೇರಿಸಿ.
ಅಕ್ಕಿಯನ್ನು ಅರ್ಧ ಬೇಯಿಸಿ. ಈ ಹಂತದಲ್ಲಿ ಬೇಯಿಸಿದ ಮಾಂಸದ ಮೇಲೆ ಅರ್ಧ ಬೆಂದ ಅನ್ನ ಸೇರಿಸಿ. ಒಂದು ಲೋಟದೊಂದಿಗೆ ಮಾಂಸದ ಮೇಲೆ ಅನ್ನವನ್ನು ಹರಡಿ ಮತ್ತು ಅಕ್ಕಿಯಿಂದ ಸೋಸಿರುವ ಬಿಸಿನೀರನ್ನು ಸೇರಿಸಿ. ಎರಡು ಚಮಚ ತುಪ್ಪವನ್ನು ಸೇರಿಸಿ ಇದಕ್ಕೆ ಫ್ರೈ ಮಾಡಿರುವ ಈರುಳ್ಳಿ ಜೊತೆಗೆ ನೆನೆಸಿದ ಕೇಸರಿ ಚಿಮುಕಿಸಿ.
ಪಾತ್ರೆಯನ್ನು ಹಿಟ್ಟು ಮತ್ತು ಬಿಗಿಯಾದ ಮುಚ್ಚಳದಿಂದ ಮುಚ್ಚಿ. ಹೆಚ್ಚಿನ ಉರಿಯಲ್ಲಿ ಒಂದು ನಿಮಿಷ ಬೇಯಿಸಿ, ನಂತರ ಉರಿಯನ್ನು ಕಡಿಮೆ ಮಾಡಿ ಮತ್ತು ಸುಮಾರು ಹದಿನೈದು ನಿಮಿಷಗಳ ಕಾಲ ದಮ್ ಕಟ್ಟಿ. ಪಾತ್ರೆ ಇಳಿಸಿದ ಮೇಲೆ ಹತ್ತು ನಿಮಿಷಗಳ ಕಾಲ ಸೆಟ್ ಆಗಲು ಬಿಡಿ. ಬಳಿಕ ರಾಯ್ತಾದೊಂದಿಗೆ ಬಿಸಿಯಾಗಿ ಬಡಿಸಿ.












Click it and Unblock the Notifications