Swapna Shastra: ಮನೆಯಲ್ಲಿ ಈ ಸೂಚನೆಗಳಿದ್ದರೆ ದೈವ ಶಕ್ತಿ ಇದೆ ಎಂದು ಅರ್ಥ

ಅದೆಷ್ಟೋ ಜನ ಮನೆಯಲ್ಲಿ ನಿತ್ಯ ಪೂಜೆ ಮಾಡಿದರೂ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಈ ರೀತಿ ಅಂದುಕೊಳ್ಳುವುದು ತಪ್ಪು. ಯಾಕೆಂದರೆ ಯಾವುದೋ ಒಂದು ಸಮಯದಲ್ಲಿ ನೀವು ಮಾಡುವ ಪೂಜೆಗೆ ಫಲ ಸಿಕ್ಕೇ ಸಿಗುತ್ತದೆ. ನಿಮಗೆ ಅದೃಷ್ಟ ಬರುವ ಮೊದಲು ಆ ದೇವರು ಕೆಲ ಸೂಚನೆಗಳನ್ನು ನೀಡುತ್ತಾನೆ. ನಿಮಗೆ ಒಳ್ಳೆಯ ದಿನಗಳು ಬರುವ ಮೊದಲು ದೇವತೆಗಳು ಮನೆಯಲ್ಲಿ ಸಂಚರಿಸುತ್ತಿರುತ್ತಾರೆ. ಹಾಗಾದರೆ ಮನೆಯಲ್ಲಿ ದೈವ ಶಕ್ತಿ ಇದೆ ಎನ್ನುವ ಸೂಚನೆಗಳು ಯಾವುವು ಎಂದು ಈಗ ತಿಳಿಯೋಣ.

ಹಾಲು ಉಕ್ಕುವುದು

ಮನೆಯಲ್ಲಿ ಹಾಲು ಉಕ್ಕುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇದರ ಅರ್ಥ ಹತ್ತಿರದಲ್ಲಿ ನಿಮಗೆ ಒಳ್ಳೆಯ ದಿನ ಬರಲಿದೆ ಎನ್ನುವ ಸಂಕೇತವಾಗಿದೆ. ಹಾಗೆಯೇ ಹಾಲು ಉಕ್ಕಿ ಸೀದಿ ಹೋದರೆ ಅದು ಅಶುಭ ಎನ್ನಲಾಗುತ್ತದೆ. ನಿಮ್ಮ ಮನೆಯಲ್ಲಿ ನಕರಾತ್ಮಕ ಶಕ್ತಿ ಇದ್ದು ಏನೋ ಕೆಟ್ಟದಾಗಲಿದೆ ಎನ್ನುವ ಸಂಕೇತವಾಗಿದೆ.

how to findout there is divine power in house

ಬ್ರಾಹ್ಮೀ ಮುಹೂರ್ತದಲ್ಲಿ ಎಚ್ಚರ

ರಾತ್ರಿ ಮಲಗಿ ಬ್ರಾಹ್ಮೀ ಮುಹೂರ್ತದಲ್ಲಿ (3:30 ರಿಂದ 5:30) ಇದ್ದಕ್ಕಿದ್ದಂತೆ ಎಚ್ಚರವಾದರೆ ಭಯ ಪಡಬೇಡಿ. ಇದು ಶುಭ ಸಂಕೇತವಾಗಿದೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗುವವರು ಅದೃಷ್ಟವಂತರು ಎಂದು ಅರ್ಥೈಸಿಕೊಳ್ಳಬೇಕು ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.

ದೀಪಾರಾಧನೆ

ಮನೆಯಲ್ಲಿ ಗೃಹಿಣಿಯರು ಪ್ರತಿನಿತ್ಯ ದೀಪಾರಾಧನೆ ಮಾಡುತ್ತಾರೆ. ಇದನ್ನು ಮಾಡುವಾಗ ದೀಪ ಪ್ರಶಾಂತವಾಗಿ ಉರಿದರೆ ಅದನ್ನು ಮನೆಯಲ್ಲಿ ದೇವತೆಗಳ ಅನುಗ್ರಹ ಇದೆ ಎಂದು ಭಾವಿಸಬೇಕು. ದೀಪ ಹೆಚ್ಚು ಪ್ರಕಾಶಮಾನವಾಗಿ ಉರಿದರೆ ಅದರಿಂದ ಶೀರ್ಘದಲ್ಲೇ ಕೆಟ್ಟದ್ದು ಸಂಭವಿಸುತ್ತದೆ.

ಹಲ್ಲಿಗಳ ಓಡಾಟ

ನಿಮ್ಮ ಮನೆಯಲ್ಲಿ ಅಥವಾ ದೇವರ ಮನೆಯಲ್ಲಿ ಹಲ್ಲಿಗಳು ಹೆಚ್ಚಾಗಿ ಓಡಾಡಿದರೆ ನಿಮ್ಮ ಮನೆಯ ಮೇಲೆ ಲಕ್ಷ್ಮೀ ಕೃಪಕಟಾಕ್ಷ ಇರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಹಲ್ಲಿಗಳು ಮನೆಗೆ ಬಂದಾಗ ಗಾಬರಿ ಬೀಳುವುದು ಭಯ ಬೀಳುವುದು ಮಾಡಬೇಡಿ. ಅದು ನಿಮ್ಮ ಒಳಿತಿನ ಸಂಕೇತವಾಗಿದೆ.

how to findout there is divine power in house

ಕಾಗೆ ಬಂದು ಕೂಗಿದರೆ

ಇನ್ನೂ ಕಾಗೆಗಳು ಮನೆಯ ಮುಂದು ಕೂಗುವುದು ಸಾಮಾನ್ಯ. ಹೀಗೆ ಆದಾಗ ಅದನ್ನು ಕಿರಿಕಿರಿಯಾಗಿ ಪರಿಗಣಿಸಬೇಡಿ. ಅದನ್ನು ತಕ್ಷಣಕ್ಕೆ ಓಡಿಸುವ ಪ್ರಯತ್ನ ಮಾಡಬೇಡಿ. ಕಾಗೆ ಮನೆಯ ಮುಂದೆ ಕೂಗುವುದು ಅದೃಷ್ಟದ ಸಂಕೇತವಾಗಿದೆ. ನಿಮ್ಮ ಮನೆಯ ಮುಂದೆ ಬಂದು ಕಾಗೆ ಕೂಗಿದರೆ ನಿಮ್ಮ ಮನೆಯ ಮೇಲೆ ದೇವರ ಆಶೀರ್ವಾದ ಇರುತ್ತದೆ.

ರಾತ್ರಿ ಹೊತ್ತು ಗೆಜ್ಜೆ ಶಬ್ದ

ಇನ್ನೂ ರಾತ್ರಿ ಹೊತ್ತು ಗೆಜ್ಜೆ ಶಬ್ದ ಕೇಳಿದರೆ ಭಯಪಡಬೇಡಿ. ನಿಮ್ಮ ಮನೆಗೆ ಲಕ್ಷ್ಮೀ ಆಗಮಿಸುತ್ತಿದ್ದಾಳೆ ಎಂದರ್ಥ. ಹಾಗಂತ ಗೆಜ್ಜೆ ಶಬ್ದ ಕೇಳಿದಾಗ ರಾತ್ರಿ ಹೊತ್ತು ಮನೆಯ ಬಾಗಿಲು ತೆರೆಯುವುದನ್ನು ಮಾಡಬೇಡಿ. ದೇವರ ಅನುಗ್ರಹ ನಿಮ್ಮ ಮೇಲಿದ್ದರೆ ನಿಮ್ಮ ಮನೆಗೆ ಯಾವುದೋ ಒಂದು ರೂಪದಲ್ಲಿ ಲಕ್ಷ್ಮೀ ದೇವಿ ಆಗಮಿಸುತ್ತಾಳೆ.

ಕಪ್ಪು ಇರುವೆಗಳು

ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಮನೆಗೆ ಅದು ಶುಭ ಎಂದು ಅರ್ಥವಾಗುತ್ತದೆ. ಕಪ್ಪು ಇರುವೆಗಳನ್ನು ಶುಭ ಸೂಚನೆ ಎಂದು ಪರಿಗಣಿಸಬೇಕು. ಕಪ್ಪು ಇರುವೆ ಕಾಣಿಸಿಕೊಂಡರೆ ಶೀರ್ಘದಲ್ಲೇ ಮನೆಗೆ ಹಣ ಬರುತ್ತದೆ ಎಂದು ಅರ್ಥ. ನಿಮ್ಮ ಮನೆಯ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಇದೆ ಎಂದು ಹೇಳಲಾಗುತ್ತದೆ. ಹೀಗಾಇ ಅದನ್ನು ಸಾಯಿಸುವುದು, ಮನೆಯಿಂದ ಹೊರ ಹಾಕುವುದನ್ನು ಮಾಡಬೇಡಿ. ಬದಲಿಗೆ ಅದಕ್ಕೆ ಸಕ್ಕರೆಯನ್ನು ಹಾಕಿ.

how to findout there is divine power in house

ಇದೆಲ್ಲದರ ಹೊರತಾಗಿ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟ ಬೀಳದೇ ಇರಲು ಸೋಮವಾರ ಶಿವನ ದೇವಸ್ಥಾನಕ್ಕೆ ತೆರಳಿ ಶಿವ ಪೂಜೆಯನ್ನು ಮಾಡಿ. ಶುಕ್ರವಾರ ಮನೆಯಲ್ಲಿ ಲಕ್ಷ್ಮೀ ದೇವಿ ಪೂಜೆಯನ್ನು ಮಾಡಿ. ಇದು ತುಂಬಾ ಉತ್ತಮ ಫಲಗಳನ್ನು ನೀಡುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+