ಕಾನನದಲ್ಲಿ ಅರಳಿ ಸೌರಭ ಬೀರುವ ಸುಂದರ ಸೀತೆ ಹೂ: ಈ ಕುಸುಮದ ಬಗ್ಗೆ ನಿಮಗೆಷ್ಟು ಗೊತ್ತು?
ಮಡಿಕೇರಿ, ಜೂನ್ 21: ಮಲೆನಾಡಿನಲ್ಲಿ ಮಳೆಗಾಲದ ದಿನಗಳಲ್ಲಿ ಮುಗಿಲೆತ್ತರಕ್ಕೆ ಬೆಳೆದ ಮರಗಳ ಕೊಂಬೆಗಳಲ್ಲಿ ಆಕರ್ಷಕ ಹೂ ಗೊಂಚಲುಗಳೊಂದಿಗೆ ಕಂಗೊಳಿಸುವ ಸೀತೆಹೂವನ್ನು ನೋಡದವರು ವಿರಳವೇ ಎನ್ನಬೇಕು. ಕಾನನದೊಳಗೆ ತನ್ನಪಾಡಿಗೆ ಹೂ ಬಿಟ್ಟು ಒಂದಷ್ಟು ದಿನಗಳ ಕಾಲ ಚೆಲುವನ್ನು ಪ್ರದರ್ಶಿಸಿ ಉದುರಿ ಹೋಗುವ ಈ ಹೂವನ್ನು ದೂರದಿಂದಲೇ ನೋಡಿ ಸಂತೋಷಪಡಬೇಕಾಗುತ್ತದೆ.
ಸುಂದರವಾಗಿ ಆಕರ್ಷಣೀಯವಾಗಿ ಹೂಗೊಂಚಲಿನೊಂದಿಗೆ ಸೌರಭ ಬೀರುವ ಈ ಹೂವಿನ ನೋಟ ಮಲೆನಾಡಿನವರಿಗೆ ಹೊಸತೇನೂ ಅಲ್ಲ. ಬಂಡೆಕಲ್ಲುಗಳ, ಮರಗಳ ಮೇಲೆ ಕಾಣಸಿಗುವ ಇದರ ಸೌಂದರ್ಯವನ್ನು ಆಗಾಗ್ಗೆ ನೋಡಿ ಖುಷಿಪಡುತ್ತಾರೆ. ಇದನ್ನು ಸ್ಥಳೀಯವಾಗಿ ಸೀತೆಹೂ, ಸೀತಾಳೆ ದಂಡೆ ಎಂದು ಕರೆಯುತ್ತಾರೆ. ಆದರೆ ಈಗೀಗ ಮನೆಯಂಗಳದಲ್ಲಿ ಬೆಳೆಸಲು ಆರಂಭಿಸಿದ್ದಾರೆ. ಕಾಡಿನಲ್ಲಿ ಹೂ ಬಿಟ್ಟು ಕಂಗೊಳಿಸುವ ಪ್ರಬೇಧವನ್ನು ನಾಡಿನಲ್ಲಿ ಬೆಳೆಸುವುದು ಸವಾಲ್ ಆಗಿದೆ.

ಈಗ ಮನೆಯ ಹೂ ಕುಂಡಗಳಲ್ಲಿ ಬೆಳೆಸುವ ಸಲುವಾಗಿಯೇ ಹಲವು ಸುಧಾರಿತ ತಳಿಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇವು ಬಹುವಾರ್ಷಿಕ ಸಸ್ಯಗಳಾಗಿರುವುದರಿಂದ ಒಮ್ಮೆ ನೆಟ್ಟರೆ ಬಳಿಕ ಅವುಗಳ ನಿರ್ವಹಣೆ ಮಾಡಿಕೊಂಡು ಹೋದರೆ ಸಾಕಾಗುತ್ತದೆ. ಇನ್ನು ಕಾಡಿನಿಂದ ನಾಡಿನವರೆಗೆ ಬಹು ವಿಧದಲ್ಲಿ ಪಸರಿಸಿ ಪುಷ್ಪಪ್ರೇಮಿಗಳ ಮನಸೆಳೆದಿರುವ ಸೀತೆಹೂವಿನ ಬಗ್ಗೆ ಹೇಳಬೇಕೆಂದರೆ ಇದು ಆರ್ಕಿಡ್ ಎಂದೇ ಪರಿಚಿತವಾಗಿದೆ. ಮತ್ತು ಆರ್ಕಿಡೇಸಿಯ ಕುಟುಂಬಕ್ಕೆ ಸೇರಿದೆ.
ನಾಡಿನಲ್ಲಿ ಗಿಡಗಳನ್ನು ಬೆಳೆಸುವುದು ಹೇಗೆ
ಇವು ಬಹುವಾರ್ಷಿಕ ಪರ್ಣ ಸಸ್ಯಗಳಾಗಿದ್ದು, ಇವುಗಳ ಕುಟುಂಬದಲ್ಲಿ ಸುಮಾರು ಐವತ್ತಾರು ಸಾವಿರಕ್ಕೂ ಹೆಚ್ಚು ಹೂ ಬಿಡುವಂತಹ ಸಸ್ಯಗಳಿದ್ದು, ಮೂವತ್ತು ಸಾವಿರ ಪ್ರಭೇಧಗಳಿವೆ ಎನ್ನಲಾಗಿದೆ. ಇವುಗಳಲ್ಲಿ ಕಾಡಿನಲ್ಲಿ ಸ್ವೇಚ್ಛೆಯಾಗಿ ಬೆಳೆಯುವ ಜಾತಿಯ ಸಸ್ಯಗಳ ಸಂಖ್ಯೆ ಮೂವತ್ತೆರಡು ಸಾವಿರವಿದೆ ಎಂದರೆ ಅಚ್ಚರಿಯಾಗುತ್ತದೆ. ಇದು ಎಲ್ಲಾ ವಲಯಗಳಲ್ಲಿ ಬೆಳೆಯುತ್ತವೆಯಾದರೂ ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಆರ್ಕಿಡ್ ಗಳಲ್ಲಿ ಒಂದು ಸಸ್ಯದಿಂದ ಮತ್ತೊಂದು ಸಸ್ಯಕ್ಕೆ ಹೂ ಎಲೆ ಆಕಾರಗಳಲ್ಲಿಯೂ ವೈವಿಧ್ಯತೆ ಇರುವುದು ಗಮನಾರ್ಹವಾಗಿದೆ.

ಆರ್ಕಿಡ್ ಗಳನ್ನು ಬೀಜ, ಬೇರು, ತುಂಡು ಅಥವಾ ನಕಲಿ ಲಶುನಗಳಿಂದ ವೃದ್ಧಿ ಮಾಡಬಹುದಾಗಿದೆ. ಸಸ್ಯಾಭಿವೃದ್ಧಿ ಸಾಮಾನ್ಯವಾಗಿ ಆಯಾಯ ಜಾತಿಯ ಮೇಲೆ ಅವಲಂಬಿತವಾಗಿದೆ. ಆರ್ಕಿಡ್ ಗಳನ್ನು ಕೃಷಿಗೆ ಉಪಯೋಗಿಸಲು ಅವು ಸುಪ್ತಾವಸ್ಥೆಯಲ್ಲಿರುವ ಕಾಲವು ಯೋಗ್ಯವಾಗಿದ್ದು, ಮಧ್ಯೆ ಸುಪ್ತಾವಸ್ಥೆ ಕಾಲದಲ್ಲಿ ಈ ಆರ್ಕಿಡ್ ಗಳನ್ನು ಬೇರೆ ಸ್ಥಳಗಳಿಗೆ ಸಾಗಿಸಿ ಸುಲಭವಾಗಿ ವೃದ್ಧಿಸಬಹುದಾಗಿದೆ.
ಆರ್ಕಿಡ್ ಗಳನ್ನು ನೆಡಲು ಉಪಯೋಗಿಸುವ ಮೊದಲು ಬೇರು, ಕಾಂಡ ಅಥವಾ ನಕಲಿ ಲಶುನಗಳನ್ನು ಶುದ್ಧ ಮಾಡಿ ಅವುಗಳಲ್ಲಿರುವ ರೋಗ ಪೀಡಿತ ಮತ್ತು ಒಣಗಿದ ಭಾಗಗಳನ್ನು ತೆಗೆಯಬೇಕು ಹಾಗೂ ತೇವ ಮಾಡಿದ ಸ್ಪಂಜಿನಿಂದ ಒರೆಸಿ ಕೆಲವು ದಿನಗಳ ಕಾಲ ತೇವಾಂಶವಿರುವ ಸ್ಥಳಗಳಲ್ಲಿ ತೂಗು ಹಾಕಬೇಕಾಗುತ್ತದೆ.
ಆರ್ಕಿಡ್ ಬೆಳೆಸುವುದು ತುಸು ಕಷ್ಟಕರ
ಇತರೆ ಪುಷ್ಪಗಿಡಗಳಿಗೆ ಹೋಲಿಸಿದರೆ ಆರ್ಕಿಡ್ಗಳನ್ನು ಬೆಳೆಸುವುದು ಸ್ವಲ್ಪ ಮಟ್ಟಿಗೆ ಕಷ್ಟಕರ ಎನ್ನಬೇಕು. ಆದರೂ ಆರ್ಕಿಡ್ಗಳಲ್ಲಿ ಕೆಲವನ್ನು ಒಣ ಮರದ ತುಂಡಿನಲ್ಲಿ ಬೆಳೆಸಬಹುದಾಗಿದೆ. ಇನ್ನು ಕೆಲವು ಆರ್ಕಿಡ್ ಗಿಡಗಳನ್ನು ಕುಂಡದಲ್ಲಿ ಬೆಳೆಸಲು ಸಾಧ್ಯವಿದೆ. ಕುಂಡದಲ್ಲಿ ಬೆಳೆಸಲು ತೊಡಗುವವರು ಕುಂಡದ ತಳಭಾಗದಲ್ಲಿ ಅನೇಕ ರಂಧ್ರ ಮಾಡಬೇಕು. ರಂಧ್ರದ ಮೇಲೆ ತೆಂಗಿನನಾರು ಅಥವಾ ಪಾಚಿಯನ್ನು ಹಾಕಬೇಕು. ನಾಲ್ಕು ಭಾಗ ಒಣ ಪಾಚಿ, ಎರಡು ಭಾಗ ಸಣ್ಣ ಇಟ್ಟಿಗೆ ಚೂರು, ಒಂದು ಭಾಗ ಗೋಡು ಮಣ್ಣು, ಒಂದು ಭಾಗ ಇದ್ದಿಲು ಪುಡಿ, ಒಂದು ಭಾಗ ಎಲೆಗೊಬ್ಬರದ ಮಿಶ್ರಣ ಮಾಡಿ ಕುಂಡಗಳಿಗೆ ತುಂಬಬೇಕು. ನಂತರ ಗಿಡನೆಟ್ಟು ತೇವಾಂಶ ನೋಡಿಕೊಂಡು ನೀರು ಹಾಕಬೇಕು.
ಆರ್ಕಿಡ್ ಗಳ ಬೆಳವಣಿಗೆಯಲ್ಲಿ ಹಲವು ವೈವಿಧ್ಯತೆಯಿದ್ದು, ಮಳೆಗಾಲದಲ್ಲಿ ಬೆಳವಣಿಗೆಯನ್ನು ಆರಂಭಿಸುತ್ತವೆ. ಇದು ಬೆಳವಣಿಗೆಯ ಮೊದಲ ಹಂತವಾಗಿದೆ. ಈ ಹಂತದಲ್ಲಿ ಇವುಗಳು ನೀರು ಮತ್ತು ಆಹಾರವನ್ನು ನಕಲಿ ಲಶುನಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಎರಡನೆಯ ಹಂತ ನವೆಂಬರ್-ಮಾರ್ಚ್ ತಿಂಗಳ ಒಳಗಿನದ್ದಾಗಿದ್ದು, ಈ ಹಂತದಲ್ಲಿ ಸುಪ್ತಾವಸ್ಥೆಯನ್ನು ಮುಟ್ಟುತ್ತವೆ.
ಕೊನೆಯ ಹಂತದಲ್ಲಿ ಸುಪ್ತಾವಸ್ಥೆಯಿಂದ ಹೊರಬಂದು ಹೂ ಬಿಡಲು ಪ್ರಾರಂಭಿಸುತ್ತವೆ. ಗಿಡಗಳನ್ನು ಕುಂಡದಿಂದ ವರ್ಷಕ್ಕೊಮ್ಮೆ ಬದಲಾಯಿಸಬೇಕು. ಕೆಲವು ಆರ್ಕಿಡ್ಗಳು ಸರಾಗವಾದ ಬಿಸಿಲು ಗಾಳಿಯನ್ನು ಹೊಂದಿಕೊಂಡು ಬೆಳೆಯುತ್ತವೆಯಾದರೂ ಮತ್ತೆ ಕೆಲವು ನೇರ ಬಿಸಿಲನ್ನು ಸಹಿಸುವುದಿಲ್ಲ.
ಆರ್ಕಿಡ್‌ಗಳ ಶಾಸ್ತ್ರೋಕ್ತ ಅಧ್ಯಯನ
ಆರ್ಕಿಡ್ಗಳಿಗೆ ರೋಗ ಇಲ್ಲವೆನ್ನಬಹುದಾದರೂ ಇದರ ಹೂಗಳಿಗೆ ನುಸಿ, ಜೇಡರ ಹುಳ, ಗೊಂಡೆ ಹುಳ, ಬಸವನ ಹುಳು, ಬಿಳಿ ತಿಗಣೆ ಮುಂತಾದವುಗಳು ತೊಂದರೆ ನೀಡುತ್ತವೆಯಾದರೂ ಇವುಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ರಕ್ಷಿಸಬಹುದಾಗಿದೆ. ಇನ್ನು ಇವತ್ತು ನಮಗೆ ಹಲವು ಬಗೆಗಳ ಹೂವಿನಿಂದ ಕಂಗೊಳಿಸುವ ಆರ್ಕಿಡ್ ಪ್ರಬೇಧಗಳು ಸಿಕ್ಕಿವೆ ಎನ್ನುವುದಾದರೆ ಅದಕ್ಕೆ ಸಸ್ಯ ವಿಜ್ಞಾನಿ ಲಿನಯಸ್ ಎಂಬುವರು ಕಾರಣರಾಗಿದ್ದಾರೆ.
ಇವರು ಆರ್ಕಿಡ್ ನ್ನು ಶಾಸ್ತ್ರೋಕ್ತವಾಗಿ ಆರಂಭಿಸಿದವರಲ್ಲಿ ಮೊದಲನೆಯವನಾಗಿದ್ದಾರೆ. ಇವರ ನಂತರ ಒಕ್ಸ್ ಎಮ್ಸ್, ಲಿಬರ್ಟಿಹೈಡ್ ಬೈಲೆ, ಬೆಂತಮ್ ಮತ್ತು ಹೂಕರ್, ಫಿಟ್ಜರ್ ಮತ್ತು ಸ್ಕ್ಲಿಟ್ಜರ್ ಮುಂತಾದವರು ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಈಗಲೂ ಅಧ್ಯಯನಗಳು ನಡೆಯುತ್ತಲೇ ಇರುವುದು ವಿಶೇಷವಾಗಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications