ದಾಂಪತ್ಯ ಜೀವನದಲ್ಲಿ ಸಂತೋಷ ಇಲ್ಲವೇ? ಹಾಗಾದರೆ ಈ 10 ವಾಸ್ತು ಸಲಹೆಗಳನ್ನು ಅನುಸರಿಸಿ...
ಪ್ರತಿಯೊಬ್ಬರ ವೈವಾಹಿಕ ಸಂಬಂಧ ಒಂದಲ್ಲಾ ಒಂದು ಸಮಸ್ಯೆಗಳಿಂದ ಕೂಡಿರುತ್ತದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯವು ಸಹಜವಾಗಿದ್ದರೂ ಕೆಲವೊಮ್ಮೆ ಮನೆಯಲ್ಲಿ ವಾಸ್ತು ದೋಷವು ಕುಟುಂಬ ಜೀವನದಲ್ಲಿ ಅನುಭವಿಸುವ ಅಡಚಣೆಗಳಿಗೆ ಕಾರಣವಾಗಿರಬಹುದು.
ಇದು ಅದೆಷ್ಟೋ ಜನರಿಗೆ ಗಮನಕ್ಕೆ ಬಾರದೇ ಹೋಗಬಹುದು. ಇದರಿಂದಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿಂದ ದೂರವಾಗಿ ಸಂತೋಷದ ಜೀವನ ನಡೆಸಬೇಕು ಅಂತಾದರೆ ಕೆಲ ವಾಸ್ತು ಸಲಹೆಗಳನ್ನು ಅನುಸರಿಸುವುದು ತುಂಬಾ ಮುಖ್ಯ. ಇದಕ್ಕೆ ಸಂಬಂಧಿಸಿದಂತೆ ವಾಸ್ತು ತಜ್ಞರು ಕುಟುಂಬದಲ್ಲಿ ಬಲವಾದ ಬಂಧವನ್ನು ಕಾಪಾಡಿಕೊಳ್ಳಲು 10 ಸಲಹೆಗಳನ್ನು ನೀಡಿದ್ದಾರೆ. ಅದರ ಬಗ್ಗೆ ಈಗ ತಿಳಿಯೋಣ.

ಬಲವಾದ ವೈವಾಹಿಕ ಸಂಬಂಧಗಳಿಗಾಗಿ 10 ವಾಸ್ತು ಸಲಹೆಗಳು:-
1. ವಿವಾಹಿತರ ನಡುವೆ ಮನಸ್ತಾಪಗಳಿದ್ದರೆ ಅವರು ಮಲಗುವ ಸ್ಥಳದ ದಿಕ್ಕು ಇದಕ್ಕೆ ಕಾರಣವಾಗಿರಬಹುದು. ಹೀಗಾಗಿ ವಿವಾಹಿತ ದಂಪತಿಗಳು ಆಗ್ನೇಯ ದಿಕ್ಕಿಗೆ ಎದುರಾಗಿರುವ ಕೋಣೆಯಲ್ಲಿ ವಾಸಿಸಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಪ್ರಕಾರ ಇದು ವೈವಾಹಿಕ ಸಂಬಂಧಕ್ಕೆ ಹಾನಿಕಾರಕವಾಗಿದೆ.
2. ಮಲಗುವ ಕೋಣೆಯಲ್ಲಿ ಚೆನ್ನಾಗಿ ಬೆಳಕು ಇರಬೇಕು. ಸೂರ್ಯನ ಬೆಳಕು ಮಲಗುವ ಕೋಣೆಯಲ್ಲಿ ಬರುವಂತಿದ್ದರೆ ತುಂಬಾ ಒಳ್ಳೆಯದು. ಜೊತೆಗೆ ಮಲಗುವ ಕೋಣೆಗೆ ಕಪ್ಪು ಅಥವ ಗಾಢವಾದ ಬಣ್ಣಗಳನ್ನು ಹಚ್ಚುವುದನ್ನು ತಪ್ಪಿಸಿ, ತಿಳಿ ನೀಲಿ, ಬಿಳಿ, ತಿಳಿ ಹಸಿರು ಇನ್ನಿತರ ಬಣ್ಣಗಳು ಹೆಚ್ಚು ಸೂಕ್ತವಾಗಿವೆ.
3. ನಿಮ್ಮ ಮನೆಯೊಳಗೆ ಯಾವುದೇ ಅಸ್ತವ್ಯಸ್ತತೆ ಇರಬಾರದು. ಅಸ್ತವ್ಯಸ್ತಗೊಂಡ ಮನೆಯು ಬಹಳಷ್ಟು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದು ಮನೆಯ ಜನರಲ್ಲಿ ಅಸಂಗತತೆಯನ್ನು ಉಂಟುಮಾಡುತ್ತದೆ.

4. ವಿವಾಹಿತ ದಂಪತಿಗಳು ಹೆಚ್ಚು ಸಮಯಯವನ್ನು ಒಟ್ಟಿಗೆ ಕಳೆಯಬೇಕು. ಮಲಗುವಾಗ ನಿಮ್ಮ ಕೋಣೆ ಸದಾ ಕತ್ತಲೆಯಾಗಿರುವುದನ್ನು ತಪ್ಪಿಸಬೇಕು. ನಕಾರತ್ಮಕ ಶಕ್ತಿ ನಿಮ್ಮ ಮಲಗುವ ಕೋಣೆಯನ್ನು ಪ್ರವೇಶಿಸದೇ ಇರಲು ನಿತ್ಯ ಪೂಜೆ, ದೂಪವನ್ನು ಬೆಳಗುವುದು ಉತ್ತಮ.
5. ವಾಸ್ತು ಪ್ರಕಾರ ದಂಪತಿಗಳ ವೈವಾಹಿಕ ಸಂಬಂಧ ಚೆನ್ನಾಗಿರಲು ಪತಿ ಬಲಭಾಗದಲ್ಲಿ ಮಲಗಿದರೆ ಹೆಂಡತಿ ಹಾಸಿಗೆಯ ಎಡಭಾಗದಲ್ಲಿ ಮಲಗುವುದು ಸೂಕ್ತವಾಗಿದೆ.
6. ಯಾವುದೇ ಕುಟುಂಬದ ಚಿತ್ರಗಳನ್ನು ಕೋಣೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು.
7. ಕುಟುಂಬದ ಯಾವುದೇ ಸದಸ್ಯರು ಹಾಸಿಗೆಯಲ್ಲಿ ಊಟ ಮಾಡಬಾರದು. ಇದು ನಕರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ ಮತ್ತು ಡೈನಿಂಗ್ ಟೇಬಲ್ ಮೇಲೆ ಒಟ್ಟಿಗೆ ಊಟ ಮಾಡುವುದರಿಂದ ಕುಟುಂಬದ ಸದಸ್ಯರೆಲ್ಲರೂ ಪರಸ್ಪರ ಹತ್ತಿರವಾಗುತ್ತಾರೆ.
8. ನಿಮ್ಮ ಮನೆಯ ಗೋಡೆಗಳಲ್ಲಿ ಯಾವುದೇ ಬಿರುಕುಗಳು ಕಂಡುಬಂದರೆ, ನೀವು ಅವುಗಳನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಬೇಕು. ಗೋಡೆಗಳಲ್ಲಿನ ಬಿರುಕುಗಳು ಒಡಹುಟ್ಟಿದವರ ನಡುವೆ ಸಂವಹನ ಸಮಸ್ಯೆಗಳಿಗೆ ಕಾರಣವಾಗಬಹುದು.
9. ಮನೆಯಲ್ಲಿ ಬಹಳಷ್ಟು ಸಸ್ಯಗಳನ್ನು ಹೊಂದಿರುವುದು ಬಹಳಷ್ಟು ಧನಾತ್ಮಕ ಶಕ್ತಿಯನ್ನು ಖಾತ್ರಿಗೊಳಿಸುತ್ತದೆ. ಇವು ಸಂಬಂಧಗಳು ಮತ್ತು ಕುಟುಂಬದ ಬಂಧಗಳು ಏಳಿಗೆಗೆ ತುಂಬಾ ಒಳ್ಳೆಯದು. ಮನೆಯ ಉತ್ತರ ಪ್ರದೇಶ ಹಸಿರು ಮರಗಳು ಮತ್ತು ಸಸ್ಯಗಳನ್ನು ಬಿತ್ತಲು ಮಂಗಳಕರವಾಗಿದೆ. ಇದು ಕುಟುಂಬದಲ್ಲಿ ನಂಬಿಕೆ ಮತ್ತು ಪ್ರೀತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ.
1o. ನಿಮ್ಮ ಕೋಣೆಯಲ್ಲಿ ಕನ್ನಡಿ ಇದ್ದರೆ, ಅದನ್ನು ಮಲಗುವ ಸಮಯದಲ್ಲಿ ಪತಿ ಅಥವಾ ಹೆಂಡತಿ ಕಾಣಿಸದ ರೀತಿಯಲ್ಲಿ ಇಡಬೇಕು. ನೀವು ಮಲಗಿರುವಾಗ ನಿಮಗೆ ಎದುರಾಗಿರುವ ಕನ್ನಡಿ ನಿಮ್ಮ ಸಂಬಂಧಕ್ಕೆ ಸೂಕ್ತವಲ್ಲ. ಕನ್ನಡಿಯ ಸ್ಥಳದಲ್ಲಿ ಬದಲಾವಣೆ ಸಾಧ್ಯವಾಗದಿದ್ದರೆ ನೀವು ಮಲಗಿರುವಾಗ ಕನ್ನಡಿಯನ್ನು ಒಂದು ಬಟ್ಟೆಯಿಂದ ಮುಚ್ಚಿ.












Click it and Unblock the Notifications