Get Updates
Get notified of breaking news, exclusive insights, and must-see stories!

Pomegranate: ದಾಳಿಂಬೆ ಹಣ್ಣಿನ ಸೇವನೆಯಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?

ನಾವು ದಿನನಿತ್ಯ ಉಪಯೋಗಿಸುವ ಹಣ್ಣುಹಂಪಲುಗಳಲ್ಲಿ ದಾಳಿಂಬೆ ವಿಭಿನ್ನ ಮತ್ತು ವಿಶಿಷ್ಟ ಹಣ್ಣಾಗಿದ್ದು ನಾಲಿಗೆ ರುಚಿ ಮಾತ್ರವಲ್ಲದೆ ದೇಹಕ್ಕೆ ಶಕ್ತಿಕೊಡುವ ಗುಣವನ್ನು ಹೊಂದಿದ್ದು ಸರ್ವ ರೀತಿಯಲ್ಲಿಯೂ ಸಹಕಾರಿಯಾಗಿದೆ. ಈ ಹಣ್ಣಿನಲ್ಲಿ ಏನೆಲ್ಲ ಔಷಧಿ ಗುಣಗಳಿವೆ ಎನ್ನುವುದನ್ನು ನೋಡಿದ್ದೇ ಆದರೆ ಅಚ್ಚರಿಯಾಗುತ್ತದೆ. ಜತೆಗೆ ಅದನ್ನು ಅರಿತು ಸೇವಿಸುತ್ತಾ ಬಂದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ದಾಳಿಂಬೆಯನ್ನು ಹಣ್ಣಿನ ರೂಪದ ತಿನಿಸಾಗಿ ಮಾತ್ರವಲ್ಲದೆ, ಸಂಬಾರ ಪದಾರ್ಥಗಳಲ್ಲಿಯೂ ಉಪಯೋಗಿಸಲಾಗುತ್ತದೆ. ದಾಳಿಂಬೆಯು ಹಲವಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಸೇವನೆಗೆ ಉಪಯುಕ್ತವಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ದಾಳಿಂಬೆಗೆ ಬಹಳಷ್ಟು ಬೇಡಿಕೆಯಿದ್ದು, ಇದನ್ನು ಎಲ್ಲ ಕಡೆಗಳಲ್ಲಿ ಬೆಳೆಯುವುದು ಸಾಧ್ಯವಾಗದ ಮಾತು. ಸಮಶೀತೋಷ್ಣ ವಾತಾವರಣ ಶೀತವಲಯಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಹಿಮಾಚಲಪ್ರದೇಶ, ಜಮ್ಮು ಇಲ್ಲಿನ ಕಾಡುಗಳಲ್ಲಿ ಕಾಡು ದಾಳಿಂಬೆಗಳು ಹೆಚ್ಚಾಗಿ ಕಂಡು ಬರುತ್ತವೆ.

HealthTips What Is The Benefits Of Pomegranate

ಈಗಾಗಲೇ ಹಲವು ರೈತರು ದಾಳಿಂಬೆ ಬೆಳೆದು ಬದುಕು ಕಂಡುಕೊಂಡಿದ್ದಾರೆ. ಇತ್ತೀಚೆಗೆ ಹಲವು ತಳಿಗಳು ಬಂದಿವೆ. ಬಹಳಷ್ಟು ಕಡೆಗಳಲ್ಲಿ ತಮ್ಮ ಮನೆಯ ಹಿತ್ತಲಲ್ಲಿ ಗಿಡನೆಟ್ಟು ಬೆಳೆಸುವುದು ಕೂಡ ಕಾಣಸಿಗುತ್ತದೆ. ದಾಳಿಂಬೆ ವಾಣಿಜ್ಯಿಕವಾಗಿ ಆದಾಯ ತರುವುದನ್ನು ಆಚೆಗಿಟ್ಟು ಆರೋಗ್ಯದ ದೃಷ್ಠಿಯಿಂದ ಸಿಗುವ ಲಾಭವನ್ನು ಅರಿತರೆ ಮನೆ ಪಕ್ಕದಲ್ಲೊಂದು ಗಿಡನೆಡೋಣ ಎಂದೆನಿಸದಿರದು. ಕಾರಣ ಇದರ ಹಣ್ಣು ಮಾತ್ರವಲ್ಲದೆ, ಮರದ ಬೇರಿನಿಂದ ಹಿಡಿದು ತೊಗಟೆ, ಹೂ, ಬೀಜ ಎಲ್ಲವೂ ಔಷಧೀಯ ಗುಣಗಳಿಂದ ಕೂಡಿದ್ದು ಬಹು ಉಪಯುಕ್ತವಾಗಿವೆ.

ದೇಹವನ್ನು ತಂಪಾಗಿಡುವಲ್ಲಿ ಸಹಕಾರಿ

ದಾಳಿಂಬೆ ರಸವನ್ನು ಸೇವಿಸುವುದರಿಂದ ಅಮಶಂಕೆಯನ್ನು ತಡೆಯಬಹುದಾಗಿದೆ. ಗಿಡದ ತೊಗಟೆಯ ಕಷಾಯಕ್ಕೆ ಚಿಟಿಕೆ ಉಪ್ಪು ಬೆರೆಸಿ ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ. ಇದರ ಚಿಗುರು ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಅಗೆಯುವುದರಿಂದ ವಸಡಿನಿಂದ ರಕ್ತ ಬರುವುದನ್ನು ತಡೆಯಲು ಸಾಧ್ಯವಿದೆ. ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಚೆನ್ನಾಗಿ ಪುಡಿ ಮಾಡಿ ಅದರೊಂದಿಗೆ ಸ್ವಲ್ಪ ಕರಿಮೆಣಸು, ಉಪ್ಪು ಬೆರೆಸಿ ನುಣ್ಣಗೆ ಪುಡಿ ಮಾಡಿ ಆ ಪುಡಿಯಿಂದ ಹಲ್ಲು ಉಜ್ಜಿದರೆ ಹಲ್ಲು ಹೊಳಪು ಬರುತ್ತದೆ. ಜತೆಗೆ ದೃಢತ್ವ ಹೊಂದುತ್ತದೆ.

HealthTips What Is The Benefits Of Pomegranate

ದಾಳಿಂಬೆ ಹಣ್ಣು ಸೇವಿಸುವುದರಿಂದ ವಿಷಮ ಶೀತ ಜ್ವರ, ಅಸ್ತಮಾ, ಮಾನಸಿಕ ಒತ್ತಡ ಹಾಗೂ ನರಗಳ ದೌರ್ಬಲ್ಯದಿಂದ ಉಂಟಾಗುವ ತಲೆನೋವು ಕಡಿಮೆಯಾಗುತ್ತದೆ. ಇದು ಪಿತ್ತಶಮನ ಗುಣ ಹೊಂದಿದ್ದು, ಬಾಯಾರಿಕೆಯನ್ನು ನೀಗಿಸುವಲ್ಲಿ ಮತ್ತು ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಕಾರಿಯಾಗಿದೆ. ರಸದೊಂದಿಗೆ ಅಷ್ಟೇ ಪ್ರಮಾಣದ ಜೇನು ಬೆರೆಸಿ ಸೇವಿಸಿದ್ದೇ ಆದಲ್ಲಿ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ಆಗುವ ಬಾಯಾರಿಕೆ ತಡೆಗೆ ದಾಳಿಂಬೆ ರಸದಿಂದ ಮಾಡಿದ ಪಾನೀಯ ಉತ್ತಮವಾಗಿದ್ದು, ಬಾಯಾರಿಕೆ ನೀಗಿಸಿ ದೇಹವನ್ನು ತಂಪಾಗಿಡುವಲ್ಲಿ ಸಹಾಯ ಮಾಡುತ್ತದೆ.

ಮೂತ್ರದಲ್ಲಿನ ಕಲ್ಲು ಕರಗಿಸಲು ಸಹಕಾರಿ

ದಾಳಿಂಬೆಯ ಬೀಜದಲ್ಲಿ ಜಠರೋತ್ತೇಜಕ ಗುಣವಿದ್ದು, ಬೀಜದ ಪುಡಿಯೊಂದಿಗೆ ಸ್ವಲ್ಪ ಜೇನು ಸೇರಿಸಿ ಸೇವಿಸಿದರೆ ಅತಿಸಾರವನ್ನು ನಿಯಂತ್ರಿಸಬಹುದು. ಒಂದು ಚಮಚದಷ್ಟು ಹಣ್ಣಿನ ಬೀಜಗಳನ್ನು ತೆಗೆದುಕೊಂಡು ಚೆನ್ನಾಗಿ ಅರೆದು ನಂತರ ಒಂದು ಲೋಟದ ತುಂಬಾ ಹುರುಳಿ ಕಾಳಿನ ಸೂಪ್ ನ್ನು ತೆಗೆದುಕೊಂಡು ಎರಡನ್ನು ಬೆರೆಸಿ ಕುಡಿಯುವುದರಿಂದ ಮೂತ್ರಕೋಶದ ಮತ್ತು ಮೂತ್ರ ಜನಕಾಂಗಗಳಲ್ಲಿ ಸಿಕ್ಕಿ ಹಾಕಿಕೊಂಡ ಕಲ್ಲುಗಳು ಕರಗುತ್ತವೆ ಎನ್ನಲಾಗಿದೆ.

ಇನ್ನು ದಾಳಿಂಬೆ ಹಣ್ಣಿನ ಒಳಗಡೆ ರಸ ತುಂಬಿದ ಕೆಂಪು ಗುಲಾಬಿ ಹಳದಿ ಬಿಳಿಯ ಸಿಹಿ ಒಗರು ಹುಳಿ ರುಚಿಯ ತಿರುಳಿನ ಬೀಜಗಳನ್ನು ಒಣಗಿಸಿ ಅನಾರ್ ದಾನ್ ತಯಾರಿಸುತ್ತಾರೆ ಇದು ರುಚಿಕಾರಕ ಗುಣ ಹೊಂದಿದ್ದು, ಉತ್ತರ ಭಾರತದಲ್ಲಿ ಹೆಚ್ಚಾಗಿ ಅಡುಗೆಗಳಿಗೆ ಹುಳಿಯ ರುಚಿ ಕೊಡಲು ಬಳಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ದಾಳಿಂಬೆ ಆರೋಗ್ಯದ ದೃಷ್ಠಿಯಿಂದ ಹಲವು ರೀತಿಯಲ್ಲಿ ಉಪಕಾರಿಯಾಗಿದ್ದು, ಅದನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜಾಣತನವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+