ಗೃಹಿಣಿಯರೇ ಎಚ್ಚರ..! ಈ ಆಹಾರ ಕುಕ್ಕರ್‌ನಲ್ಲಿ ಬೇಯಿಸಲೇಬೇಡಿ.. ಆರೋಗ್ಯಕ್ಕೆ ಅಪಾಯ!
ಅಡುಗೆಯನ್ನು ವೇಗವಾಗಿ ರುಚಿಯಾಗಿ ತಯಾರಿಸುವನ್ನು ಬಹುತೇಕ ಗೃಹಿಣಿಯರು ಇಷ್ಟಪಡುತ್ತಾರೆ. ಹೆಚ್ಚು ಸಮಯ ತೆಗೆದುಕೊಳ್ಳದೆ, ಹೆಚ್ಚು ಶ್ರಮವಿಲ್ಲದೆ ಬಹುಬೇಗ ಅಡುಗೆ ಮುಗಿಸುವುದು ಎಲ್ಲರ ಮನೆಯಲ್ಲಿ ನಿತ್ಯ ನಡೆಯುತ್ತದೆ. ಇದಕ್ಕಾಗಿ ಗೃಹಿಣಿಯರು ಅವಲಂಭಿತರಾಗಿರುವುದು ಕುಕ್ಕರ್ ಮೇಲೆ.
ಈಗ ಪ್ರತಿಯೊಬ್ಬರ ಮನೆಯಲ್ಲಿ ಅಡುಗೆಯನ್ನು ಸುಲಭಗೊಳಿಸಲು ಕುಕ್ಕರ್ ಅನ್ನು ಬಳಸಲಾಗುತ್ತದೆ. ಇಲ್ಲಿಯವರೆಗೆ ಕುಕ್ಕರ್‌ನಲ್ಲಿ ಅನ್ನವನ್ನು ಮಾತ್ರ ಬೇಯಿಸಲಾಗುತ್ತಿತ್ತು. ಆದರೆ ಈಗ ಜನರು ಆದಷ್ಟು ಬೇಗ ಅಡುಗೆ ಮುಗಿಸಲು ಆ ಕುಕ್ಕರ್‌ನಲ್ಲಿ ಎಲ್ಲಾ ಆಹಾರವನ್ನು ಬೇಯಿಸಲು ಪ್ರಾರಂಭಿಸಿದ್ದಾರೆ.

ಕುಕ್ಕರ್ ನಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಆದರೆ ಈ ಕುಕ್ಕರ್‌ನಲ್ಲಿ ಎಲ್ಲಾ ರೀತಿಯ ಆಹಾರವನ್ನು ಬೇಯಿಸುವುದು ಒಳ್ಳೆಯದಲ್ಲ. ಏಕೆಂದರೆ ಕೆಲವು ಆಹಾರ ಪದಾರ್ಥಗಳನ್ನು ಕುಕ್ಕರ್ ನಲ್ಲಿ ಕುದಿಸಿದಾಗ ಆ ಆಹಾರ ಪದಾರ್ಥಗಳಲ್ಲಿರುವ ಎಲ್ಲಾ ಪೋಷಕಾಂಶಗಳು ನಾಶವಾಗಿ ಅದು ಜಂಕ್ ಫುಡ್ ನಂತೆ ಆಗುತ್ತದೆ.
ನೀವು ಕುಕ್ಕರ್‌ನಲ್ಲಿ ಎಲ್ಲಾ ಅಡುಗೆ ಮಾಡುತ್ತಿದ್ದರೆ ಇನ್ಮುಂದೆ ಆ ತಪ್ಪು ಮಾಡಬೇಡಿ. ಹಾಗಾದರೆ ಕುಕ್ಕರ್‌ನಲ್ಲಿ ಯಾವ ಆಹಾರವನ್ನು ಬೇಯಿಸಬಾರದು? ಏಕೆ ಬೇಯಿಸಬಾರದು? ಆ ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದರೆ ಅದು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಈಗ ತಿಳಿಯೋಣ.

ಕುಕ್ಕರ್‌ನಲ್ಲಿ ತಯಾರಿಸಬಾರದ ಭಕ್ಷ್ಯಗಳು...
1. ಡೈರಿ ಉತ್ಪನ್ನಗಳು
ಕುಕ್ಕರ್‌ನಲ್ಲಿ ಯಾವುದೇ ಹಾಲು ಆಧಾರಿತ ಆಹಾರವನ್ನು ಬೇಯಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಹಾಗೊಂದು ವೇಳೆ ಅದನ್ನು ಬೇಯಿಸಿದರೆ, ಅದು ಅದರ ಪರಿಮಳವನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ ಅದರಲ್ಲಿರು ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ಕೆಲವೊಮ್ಮೆ ಕಂದುಬಣ್ಣಕ್ಕೆ ಅದು ತಿರಗಬಹುದು. ಅದರ ರುಚಿ ಕೂಡ ಬದಲಾಯಿಸಬಹುದು.
ಅದು ಜಂಕ್ ಫುಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಆದ್ದರಿಂದ ಕುಕ್ಕರ್‌ನಲ್ಲಿ ಕೆನೆ, ಚೀಸ್, ತಣ್ಣನೆಯ ಹಾಲು ಇತ್ಯಾದಿಗಳನ್ನು ಬೇಯಿಸುವುದನ್ನು ತಪ್ಪಿಸಿ. ಅಲ್ಲದೆ ಡೈರಿ ಉತ್ಪನ್ನಗಳನ್ನು ಬಳಸುವುದಾದರೆ ಊಟದ ಕೊನೆಯಲ್ಲಿ ಸೇವಿಸಿ.
2. ಪಾಸ್ತಾ
ಪಾಸ್ತಾ ತ್ವರಿತವಾಗಿ ತಯಾರಿಸುವ ಆಹಾರವಾಗಿದೆ. ಈ ಪಾಸ್ತಾವನ್ನು ಅತಿಯಾಗಿ ಬೇಯಿಸಿದರೆ ಅದು ಜಂಕ್ ಫುಡ್ ಆಗಿ ಬದಲಾಗುತ್ತದೆ. ಭಕ್ಷ್ಯದ ವಿನ್ಯಾಸ ಮತ್ತು ರುಚಿ ಕೂಡ ಹಾಳಾಗುತ್ತದೆ. ಆದ್ದರಿಂದ ನೀವು ಪಾಸ್ತಾವನ್ನು ಕುಕ್ಕರ್‌ನಲ್ಲಿ ಬೇಯಿಸುತ್ತಿದ್ದರೆ ಇನ್ಮುಂದೆ ಹಾಗೆ ಮಾಡಬೇಡಿ. ಅದನ್ನು ಬಾಣಲೆಯಲ್ಲಿ ಬೇಯಿಸಿ ತಿನ್ನಿರಿ. ಇದನ್ನು ಸಾಧ್ಯವಾದಷ್ಟು ನೀರಿನಲ್ಲಿ ಪ್ರತ್ಯೇಕವಾಗಿ ಕುದಿಸಿ, ನಂತರ ಅದನ್ನು ಮಸಾಲಾದೊಂದಿಗೆ ಬೆರೆಸುವುದು ಒಳ್ಳೆಯದು.
3. ಘನೀಕೃತ ಆಹಾರಗಳು
ಫ್ರಿಡ್ಜ್‌ನಲ್ಲಿ ಇಟ್ಟ ಯಾವುದೇ ಆಹಾರವನ್ನು ಕುಕ್ಕರ್‌ನಲ್ಲಿ ಬೇಯಿಸುವುದನ್ನು ತಪ್ಪಿಸಿ. ಯಾಕೆಂದರೆ ಫ್ರಿಡ್ಜ್‌ನಲ್ಲಿ ಇಟ್ಟ ಪದಾರ್ಥ, ತರಕಾರಿ ಹಾಗೂ ಉಳಿದ ಆಹಾರ ತುಂಬಾ ತಣ್ಣಗಾಗಿರುತ್ತದೆ. ಅದನ್ನು ಏಕಾಏಕಿ ಕುಕ್ಕರ್‌ನಲ್ಲಿ ಹಾಕಿ ಬಿಸಿ ಮಾಡಿದಾಗ ದು ಹಾಳಾಗಬಹುದು. ಅಥವಾ ವಿಷಕಾರಿಯಾಗಬಹುದು. ಹೀಗಾಗಿ ಹೆಪ್ಪುಗಟ್ಟಿದ ಆಹಾರವನ್ನು ಕೆಲಹೊತ್ತು ಫ್ರಿಡ್ಜ್‌ನಿಂದ ಹೊರತೆಗೆದು ಇಟ್ಟು ಕೋಣೆಯ ಉಷ್ಣಾಂಶಕ್ಕೆ ಪರಿವರ್ತನೆಯಾಗುವವರೆಗೂ ಬಿಟ್ಟು ಬೇಯಿಸುವುದು ಉತ್ತಮ.
4. ಹಸಿರು ಎಲೆಗಳ ತರಕಾರಿಗಳು
ಕುಕ್ಕರ್‌ನಲ್ಲಿ ಬೇಯಿಸಬಾರದ ಮತ್ತೊಂದು ಆಹಾರ ಪದಾರ್ಥವೆಂದರೆ ಪಾಲಕ್, ಕೊಲ್ಲಾರ್ಡ್ ಮತ್ತು ಬ್ರೊಕೊಲಿಯಂತಹ ಹಸಿರು ಎಲೆಗಳ ತರಕಾರಿಗಳು. ಕುಕ್ಕರ್‌ನಲ್ಲಿ ಈ ರೀತಿಯ ಎಲೆಗಳನ್ನು ಬೇಯಿಸುವುದು ರುಚಿ ಮತ್ತು ವಿನ್ಯಾಸವನ್ನು ಹಾಳುಮಾಡುತ್ತದೆ. ಅಲ್ಲದೆ ಹಸಿರು ಎಲೆಗಳ ಸೊಪ್ಪನ್ನು ಅತಿಯಾಗಿ ಬೇಯಿಸುವುದರಿಂದ ಅವುಗಳ ಪೋಷಕಾಂಶಗಳು ಸಂಪೂರ್ಣವಾಗಿ ನಾಶವಾಗುತ್ತವೆ. ನಂತರ ಆ ಆಹಾರಗಳನ್ನು ತಿನ್ನುವುದು ವ್ಯರ್ಥ.
5. ಧಾನ್ಯಗಳು
ಬಾರ್ಲಿ ಮತ್ತು ಸೋರ್ಗಮ್‌ನಂತಹ ಕೆಲವು ರೀತಿಯ ಧಾನ್ಯಗಳಿಂದ ಅಡುಗೆ ಮಾಡಲು ಸಮಯ ಬೇಕಾಗುತ್ತದೆ. ಆದರೆ ಈ ರೀತಿಯ ಸಿರಿಧಾನ್ಯಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದರೆ, ಅದರ ಅದರ ರುಚಿ, ಪೋಷಕಾಂಶ ಹಾಳಾಗುತ್ತದೆ. ಅಲ್ಲದೆ ಧಾನ್ಯಗಳು ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತವೆ. ಈ ರೀತಿಯ ಧಾನ್ಯದ ಆಹಾರವನ್ನು ಬಾಣಲೆಯಲ್ಲಿ ಬೇಯಿಸುವುದು ಯಾವಾಗಲೂ ಉತ್ತಮ.
-
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
ಗಾಢ ನಿದ್ರೆಗೆ ಜಾರಲು ಇಲ್ಲಿವೆ ಸುಲಭ ಉಪಾಯಗಳು: ಇಂದೇ ಪ್ರಯತ್ನಿಸಿ -
Summer Alert: ಬೇಸಿಗೆಯಲ್ಲಿ ಫ್ರಿಜ್ ನೀರು ಕುಡಿಯುತ್ತಿದ್ದೀರಾ? ಮೊದಲು ಈ ವಿಷಯ ತಿಳಿದುಕೊಳ್ಳಿ -
ವಾಸ್ತು ಮಾತ್ರ ಸಾಲದು! ನಿಮ್ಮ ಜಾತಕವೇ ಯಶಸ್ಸನ್ನು ನಿರ್ಧರಿಸುತ್ತದೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ












Click it and Unblock the Notifications