ಬೇಸಿಗೆಯಲ್ಲಿನ ಆರೋಗ್ಯದ ಸಮಸ್ಯೆಗೆ ದಾಸವಾಳ ರಾಮಬಾಣ
ಬೇಸಿಗೆಯ ದಿನಗಳಲ್ಲಿ ನಮ್ಮ ಹಿತ್ತಲಲ್ಲೇ ಬೆಳೆಯುವ ಗಿಡಮೂಲಿಕೆಗಳನ್ನೇ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಜಾಣತನವಾಗುತ್ತದೆ. ನಾವು ನೆಟ್ಟು ಬೆಳೆಸುವ ಹೂವಿನ ಗಿಡವಾದ ದಾಸವಾಳ ಬೇಸಿಗೆಯ ದಿನಗಳಲ್ಲಿ ಹತ್ತು ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತಿದೆ. ಇದರ ಉಪಯೋಗವನ್ನರಿತು ಸದ್ಭಳಕೆ ಮಾಡಿಕೊಂಡರೆ ಆರೋಗ್ಯದ ಸಮಸ್ಯೆಗಳಿಂದ ಮುಕ್ತರಾಗಲು ಸಾಧ್ಯವಿದೆ. ಹೀಗಾಗಿ ಹಲವು ರೀತಿಯಲ್ಲಿ ದಾಸವಾಳದ ಹೂವು, ಎಲೆ, ತೊಗಟೆ ಮತ್ತು ಬೇರನ್ನು ಬಳಕೆ ಮಾಡಿಕೊಳ್ಳುವುದು ಈ ಸಮಯದಲ್ಲಿ ಸೂಕ್ತ.
ಬಹಳಷ್ಟು ಜನರಿಗೆ ಸುಂದರ ಹೂಬಿಟ್ಟು ನಳನಳಿಸುವ ದಾಸವಾಳದ ಹೂವು ಮಾತ್ರ ಕಾಣುತ್ತದೆ. ಆದರೆ ಇದರಲ್ಲಿ ಹತ್ತು ಹಲವು ರೀತಿಯ ಔಷಧೀಯ ಗುಣಗಳಿರುವುದು ಗೊತ್ತೇ ಇಲ್ಲ. ಇವತ್ತು ಹತ್ತು ಹಲವು ರೀತಿಯ ಹೂಬಿಡುವ ದಾಸವಾಳದ ಹೈಬ್ರೀಡ್ ತಳಿಯಿದ್ದರೂ ಹಿಂದಿನ ಕಾಲದ ಬಿಳಿ ಬಣ್ಣದ ಹೂಗಳನ್ನು ಬಿಡುವ ದಾಸವಾಳವು ಶ್ರೇಷ್ಟವಾಗಿದ್ದು, ಇದರಲ್ಲಿ ಹತ್ತು ಹಲವು ಬಗೆಯ ಆರೋಗ್ಯಕಾರಿ ಗುಣಗಳಿವೆ ಎಂಬುದು ಸಾಬೀತಾಗಿದೆ. ಇದರ ಹೂ, ಎಲೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದ್ದು ಬೇರೆ ಬೇರೆ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ದಾಸವಾಳದ ಎಲೆ ಮತ್ತು ಹೂವಿನಲ್ಲಿ ತಂಪುಕಾರಕ ಗುಣಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಬೇಸಿಗೆಯಲ್ಲಿ ಇದನ್ನು ಹಲವು ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಹೂವು ಮತ್ತು ಎಲೆಯನ್ನು ನೀರಿನಲ್ಲಿ ನೆನೆ ಹಾಕಿ ಬಳಿಕ ಚೆನ್ನಾಗಿ ಕಿವುಚಿ ಎಲೆಯನ್ನು ಹೊರ ತೆಗೆದು ಲೋಳೆಯಾದ ರಸವನ್ನು ಕುಡಿಯಬಹುದು ಅಥವಾ ಆ ನೀರನ್ನು ಸ್ನಾನದ ವೇಳೆ ಶಾಂಪುವಿನಂತೆ ತಲೆಗೆ ಹಾಕಿ ಬಳಿಕ ಸ್ನಾನ ಮಾಡಿದರೆ ತಲೆ ತಂಪಾದ ಅನುಭವವಾಗುವುದಲ್ಲದೆ, ಉಲ್ಲಾಸದ ಅನುಭವ ನೀಡುತ್ತದೆ. ನೆತ್ತಿ ಸುಡುವ ಬಿಸಿಲಿನ ಈ ಸಮಯದಲ್ಲಿ ದಾಸವಾಳ ಎಲೆಯ ನೀರನ್ನು ತಲೆಗೆ ಹಾಕಿ ಬಳಿಕ ತೊಳೆದು ಸ್ನಾನ ಮಾಡುವುದು ಖುಷಿಕೊಡುತ್ತದೆ.
ಹಲವು ಸಮಸ್ಯೆಗಳಿಗೆ ದಾಸವಾಳ ಪರಿಹಾರ
ಬಿಸಿಲಿಗೆ ದೇಹದ ಉಷ್ಣಾಂಶ ಹೆಚ್ಚಾಗುವುದರಿಂದ ತಲೆನೋವು, ಉರಿಮೂತ್ರ, ಸಮರ್ಪಕವಾಗಿ ಮಲ ವಿಸರ್ಜನೆಯಾಗದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ. ತಲೆಯಲ್ಲಿ ಏನೋ ಭಾರವಾದಂತೆ ಕೆಲವೊಮ್ಮೆ ಭಾಸವಾಗುತ್ತಿರುತ್ತದೆ. ಜತೆಗೆ ತುರಿಕೆಯೂ ಕಾಣಿಸಿಕೊಳ್ಳಬಹುದು. ಇನ್ನು ದೇಹದ ಉಷ್ಣಾಂಶವು ಹೆಚ್ಚಾಗಬಹುದು ಇದನ್ನು ಕಡಿಮೆ ಮಾಡಿ ಹಗುರವಾಗಬೇಕಾದರೆ ದಾಸವಾಳದ ಎಲೆಗಳ ಲೋಳೆಯಾದ ನೀರು ಸಹಕಾರಿಯಾಗುತ್ತದೆ.
ಇದರಾಚೆಗೆ ದಾಸವಾಳದಲ್ಲಿ ಗರ್ಭವೃದ್ಧಿ ಮಾಡುವ, ಕೂದಲನ್ನು ಬೆಳೆಸುವ, ದಾಹ ತಣಿಸುವ, ಧಾತು ವೃದ್ಧಿಸುವ ಗುಣವೂ ಇದೆ ಎಂದು ಹೇಳಲಾಗುತ್ತಿದೆ. ಹೂಗಳು, ಬೇರು, ಎಲೆಗಳು ಉಪಯುಕ್ತವಾಗಿದ್ದು, ಎಲೆಗಳನ್ನು ಹಿಂಡಿ ಪ್ರತಿದಿನ ಐದಾರು ಚಮಚದಷ್ಟು ರಸವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಇನ್ನು ಇದೇ ರಸದೊಂದಿಗೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ. ಬಿಳಿದಾಸವಾಳದ ಬೇರನ್ನು ಹಸುವಿನ ಹಾಲಿನಲ್ಲಿ ಅರೆದು ಸೇವಿಸಿದರೆ ಗರ್ಭಧಾರಣೆಗೆ ಸಹಕಾರಿಯಾಗುತ್ತದೆಯಂತೆ. ಬೇರಿನ ರಸವನ್ನು ಗೋಪಿ ಚಂದನದ ಜೊತೆ ಸೇವಿಸಿದರೆ ಗರ್ಭಸ್ರಾವ ತಡೆಯಲು ಸಾಧ್ಯವಾಗುತ್ತದೆ.

ಆರೋಗ್ಯದ ಸಮಸ್ಯೆಗೆ ಔಷಧಿಯಾಗಿ ಬಳಕೆ
ದಾಸವಾಳದ ಎಲೆಯನ್ನು ಅರೆದು ತಲೆಗೆ ಲೇಪಿಸಿದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು. ಬಿಳಿದಾಸವಾಳದ ಹೂವುಗಳನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಿಸಬಹುದಾಗಿದೆ. ಎಲೆ ಮತ್ತು ಹೂಗಳನ್ನು ಕಲ್ಲು ಸಕ್ಕರೆಯೊಂದಿಗೆ ಅರೆದು ಸೇವಿಸುತ್ತಾ ಬಂದರೆ ಹೊಟ್ಟೆಯಲ್ಲಿ ಕಾಣಿಸುವ ಕೆಲವೊಂದು ತೊಂದರೆಗಳು ಮಾಯವಾಗುವುವು. ಹಳ್ಳಿಗಳಲ್ಲಿ ದಾಸವಾಳವನ್ನು ತಮ್ಮ ಮನೆಯ ಸುತ್ತ ನೆಟ್ಟು ಬೆಳೆಸುತ್ತಾರೆ. ಇವು ಸುಂದರ ಹೂಗಳನ್ನು ನೀಡುತ್ತಿದ್ದು, ಈ ಹೂಗಳು ದೇವರ ಪೂಜೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿವೆ.
ದಾಸವಾಳದ ಉಪಯೋಗವನ್ನು ಅರಿತು ಬೇಸಿಗೆಯ ದಿನಗಳಲ್ಲಿ ಅದನ್ನು ದೈನಂದಿನ ಚಟುವಟಿಕೆಯಲ್ಲಿ ಬಳಸಿಕೊಳ್ಳುವುದು ಒಳ್ಳೆಯದು. ಮನೆಯ ಹಿತ್ತಲಲ್ಲಿ ಹೂ ಕುಂಡಗಳಲ್ಲಿ ದಾಸವಾಳವನ್ನು ನೆಟ್ಟು ಬೆಳೆಸುವುದನ್ನು ರೂಢಿ ಮಾಡಿಕೊಂಡರೆ ಇದರ ಹೂವು ದೇವರ ಪೂಜೆಗೂ ಹಾಗೆಯೇ ಹೂವಿನ ಜತೆಗೆ ಎಲೆ, ತೊಗಟೆ, ಬೇರು ಎಲ್ಲವೂ ಆರೋಗ್ಯದ ಸಮಸ್ಯೆಗೆ ಔಷಧಿಯಾಗಿ ಬಳಕೆಯಾಗುವುದರಲ್ಲಿ ಎರಡು ಮಾತಿಲ್ಲ.
-
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್ -
Gas Bill: ಹೋಟೆಲ್ ಬಿಲ್ನಲ್ಲಿ ಗ್ರಾಹಕರಿಗೆ 'ಗ್ಯಾಸ್ ಶುಲ್ಕ' ವಿಧಿಸುವಂತಿಲ್ಲ: ಕೇಂದ್ರದಿಂದ ಖಡಕ್ ಎಚ್ಚರಿಕೆ -
ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಪಾರ್ಕಿಂಗ್ ಮತ್ತು ವರಾಂಡಾ ಯಾವ ದಿಕ್ಕಿನಲ್ಲಿ ಇರಬೇಕು? -
Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ.. -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications