Goddu khara recipe: ಮಳೆ ಶುರುವಾಯ್ತು ಚಳಿಗೆ ಖಾರ ಖಾರವಾಗಿ ಸುಲಭ ಗೊಡ್ಡು ಖಾರ ಟ್ರೈ ಮಾಡಿ
ಬೆಂಗಳೂರು, ಏಪ್ರಿಲ್. 21: ಮಳೆ ಶುರುವಾಗಿದೆ. ಈ ಚಳಿ ಚಳಿ ವಾತಾವರಣದಲ್ಲಿ ಬಾಯಿಗೆ ಖಾರ ಖಾರವಾಗಿ ಮತ್ತು ರುಚಿ ರುಚಿಯಾಗಿ ತಿನ್ನುವ ಮನಸಾದರೆ ಈ ಗೊಡ್ಡು ಖಾರ ಟ್ರೈ ಮಾಡಿ. ಹಳ್ಳಿಗಳಲ್ಲಿ ಇಂದಿಗೂ ಬಾಯಿ ಕೆಟ್ಟರೇ, ಊಟ ಮಾಡಲು ಮನಸ್ಸು ಇಲ್ಲ ಎಂದರೆ ಈ ಗೊಡ್ಡು ಖಾರ ಸಾಮಾನ್ಯವಾಗಿ ಮಾಡಲಾಗುತ್ತದೆ.
ಗೊಡ್ಡು ಖಾರ ಅತ್ಯಂತ ಜನಪ್ರಿಯ ಹಳ್ಳಿ ಶೈಲಿಯ ಕೆಂಪು ಮೆಣಸಿನಕಾಯಿ ಚಟ್ನಿಯಾಗಿದೆ. ಇದನ್ನು, ಅನ್ನ, ರೊಟ್ಟಿ ಮತ್ತು ದೊಸೆಯ ಜೊತೆಗೆ ತಿನ್ನಬಹುದು. ಒಮ್ಮೆ ತಯಾರಿಸಿದರೆ ಇದನ್ನು ಒಂದು ತಿಂಗಳು ಆರಾಮಾವಾಗಿ ಸಂಗ್ರಹಿಸಬಹುದು. ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ, ಜೀರಿಗೆ, ಕರಿಬೇವಿನ ಸೊಪ್ಪು, ಉಪ್ಪು ಮತ್ತು ಹುಣಸೆಹಣ್ಣುಗಳನ್ನು ಬಳಸಿ ಗೊಡ್ಡು ಖಾರವನ್ನು ತಯಾರಿಸಲಾಗುತ್ತದೆ. .

ಗೊಡ್ಡು ಖಾರಾ ತಯಾರಿಸಲು ಬೇಕಾಗುವ ಪದಾರ್ಥಗಳು
* 10 ರಿಂದ 12 ಕೆಂಪು ಮೆಣಸಿನಕಾಯಿಗಳು (ಬ್ಯಾಡಗಿ ಅಥವಾ ಗುಂಟೂರು ಮೆಣಸಿನಕಾಯಿ)
* ಒಂದು ಮಧ್ಯಮ ಗಾತ್ರದ ಬೆಳ್ಳುಳ್ಳಿ
* ಒಂದು ಟೀಸ್ಪೂನ್ ಜೀರಿಗೆ
* ಒಂದು ಟೀಸ್ಪೂನ್ ಕೊತ್ತಂಬರಿ ಕಾಳುಗಳು (ಬೇಕಾದರೆ ಹಸಿ ಕೊತ್ತಂಬರಿ ಸೊಪ್ಪು ಬಳಸಬಹುದು)
* ಕರಿಬೇವಿನ ಎಲೆಗಳು
* ಒಂದು ಸಣ್ಣ ಗಾತ್ರದ ಈರುಳ್ಳಿ (ಬೇಕಿದ್ದರೆ ಬಳಸಬಹುದು)
* ಒಂದು ಟೀಸ್ಪೂನ್ ಎಣ್ಣೆ
* ಒಂದು ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು
* ಒಂದು ಚಮಚ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಂತೆ
ಗೊಡ್ಡು ಖಾರ ಅಥವಾ ಕೆಂಪು ಮೆಣಸಿನಕಾಯಿ ಚಟ್ನಿ ಮಾಡುವುದು ಹೇಗೆ
ಒಂದು ಬಾಣಲೆ ಅಥವಾ ಪ್ಯಾನ್ ಅನ್ನು ತೆಗೆದುಕೊಳ್ಳಿ. ಅದರಲ್ಲಿ ಬ್ಯಾಡಗಿ ಅಥವಾ ಗುಂಟೂರು ಕೆಂಪು ಮೆಣಸಿನಕಾಯಿ ಮತ್ತು ಎಣ್ಣೆಯನ್ನು ಹಾಕಿಕೊಳ್ಳಿ. ಮೆಣಸಿನಕಾಯಿ ಗರಿಗರಿಯಾಗುವವರೆಗೆ ಫ್ರೈ ಮಾಡಿ. ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಸೇರಿಸಿ, ಬೆಳ್ಳುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯುವುದನ್ನು ಮುಂದುವರಿಸಿ. ನಂತರ ಕೊತ್ತಂಬರಿ ಕಾಳುಗಳು, ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಕರಿಬೇವಿನ ಎಲೆಗಳು ಗರಿಗರಿಯಾಗುವವರೆಗೆ ಫ್ರೈ ಮಾಡಿ. ಸ್ಟವ್ ಆಫ್ ಮಾಡಿ. ಬೇಕಿದ್ದರೇ ಈರುಳ್ಳಿಯನ್ನು ಸುಟ್ಟು ಇಟ್ಟುಕೊಳ್ಳಿ.

ಹುರಿದ ಪದಾರ್ಥಗಳು, ಸುಟ್ಟ ಈರುಳ್ಳಿ, ಉಪ್ಪು ಮತ್ತು ಹುಣಸೆಹಣ್ಣುಗಳನ್ನು ಮಿಕ್ಸಿ ಜಾರ್‌ನಲ್ಲಿ ತೆಗೆದುಕೊಳ್ಳಿ. ಅಗತ್ಯವಿರುವ ನೀರನ್ನು ಸೇರಿಸಿ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಕಾಯಿಸಿ ಆರಿಸಿದ ನೀರನ್ನು ಸೇರಿಸುವುದರಿಂದ ತುಂಬಾ ದಿನಗಳ ಕಾಲ ಇದನ್ನು ಸ್ಟೋರ್ ಮಾಡಬಹುದು. ಇದನ್ನು ಬಿಸಿ ಅನ್ನ ಅಥವಾ ರೊಟ್ಟಿಯೊಂದಿಗೆ ತುಪ್ಪದ ಜೊತೆಗೆ ಬಡಿಸಿ. ಒಂದು ತಿಂಗಳು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು.












Click it and Unblock the Notifications