Weight Loss: ಗ್ರೀನ್ ಕಾಫಿ ಕುಡಿದರೆ ಹಲವು ಪ್ರಯೋಜನ: ತೂಕ ಸಹ ಇಳಿಯುತ್ತದೆ
ಜನರು ಈಗ ಹೆಚ್ಚಾಗಿ ತಮ್ಮ ಆರೋಗ್ಯ ಹಾಗೂ ದೇಹದ ಬಗ್ಗೆ ಕಾಳಜಿಯನ್ನು ವಹಿಸುತ್ತಾರೆ. ಹಾಲು ಮಿಶ್ರಿತ ಟಿ ಕುಡಿಯುವದರ ಬದಲಿಗೆ, ಗ್ರೀನ್ ಟಿ ಕುಡಿದ ಆರೋಗ್ಯವನ್ನು ಸುಧಾರಿಸಿಕೊಳ್ಳುವತ್ತ ಜನ ದೃಷ್ಟಿ ನೆಟ್ಟಿದ್ದಾರೆ. ಅಂದಹಾಗೆ ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇಂದು ನಾವು ಇಂದು ಗ್ರೀನ್ ಟಿ ಬಗ್ಗೆ ಏನನ್ನು ಹೇಳುವುದಿಲ್ಲ. ಈಗ ಭಾರತದಲ್ಲಿ ಗ್ರೀನ್ ಕಾಫಿ ಭಾರೀ ಫೇಮಸ್ ಆಗುತ್ತಿದೆ. ಆ ಬಗ್ಗೆ ನೋಡೋಣ.
ಗ್ರೀನ್ ಟಿ ರೀತಿಯಲ್ಲಿ ಕಾಣಿಸಿಕೊಳ್ಳುವ ಗ್ರೀನ್ ಕಾಫಿ ಸೇವನೆ ಸಹ ಆರೋಗ್ಯಕ್ಕೆ ಉತ್ತಮ. ಇದನ್ನು ಕೇರಳದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಗುಂಪು ಒಂದು ಜನಪ್ರೀಯಗೊಳಿಸಿದೆ. ಇದನ್ನು ಸೇವನೆ ಮಾಡುವುದರಿಂದಲೂ ಜನರು ಅನೆಕ ಲಾಭಗಳನ್ನು ಪಡೆಯಬಹುದು. ಹಾಗಿದ್ದರೆ ಇದರ ವಿಶೇಷತೆಗಳು ಏನು ಇಲ್ಲಿದೆ ಮಾಹಿತಿ.

ವಿದ್ಯಾರ್ಥಿಗಳ ಪರಿಶ್ರಮ
ಕಾಲೇಜುಗಳಲ್ಲಿ ಕಲೆಯುತ್ತಿರುವ 30 ಜನರ ಮಕ್ಕಳ ತಂಡ ತಮ್ಮ ಪ್ರಾಜೆಕ್ಟ್ ಆಯ್ಕೆ ಮಾಡಿಕೊಂಡಿದ್ದೇ ವಿಶೇಷವಾಗಿತ್ತು. ಇವರು ಗ್ರೀನ್ ಟೀ ಇಂದ ಸ್ಪೂರ್ತಿ ಪಡೆದು, ಗ್ರೀನ್ ಕಾಫಿ ಮಾಡುವ ಯೋಚನೆಯನ್ನು ನಡೆಸಿದರು. ಇದರ ಪರಿಣಾಮ ಇವರು ತಯಾರಿಸುತ್ತಿರುವ ಗ್ರೀನ್ ಕಾಫಿ ಕೇರಳದಲ್ಲಿ ಸಖತ್ ಫೇಮಸ್ ಆಗಿದೆ.
ಕೆಲ ದಿನಗಳಿಂದ ಕೊಚ್ಚಿಯಲ್ಲಿ ಜನರ ಮೊದಲ ಆಯ್ಕೆ 'ಗ್ರೀನ್ ಕಾಫಿ'. ಜನರಲ್ಲಿ ಹೆಚ್ಚುತ್ತಿರುವ ಕಾಫಿಯ ಬೇಡಿಕೆಯನ್ನು ಪೂರೈಸಲು ಮಕ್ಕಳು ಹಸಿರು ಕಾಫಿ ಪುಡಿಯನ್ನು ತಯಾರಿಸುವುದು ಈ ಪ್ರಾಜೆಕ್ಟ್‌ನ ಉದ್ದೇಶವಾಗಿದೆ. ಇದೀಗ ಮಕ್ಕಳು ತಮ್ಮ ಪ್ರಯತ್ನಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರವನ್ನೂ ಪಡೆದಿದ್ದಾರೆ.
ಗ್ರೀನ್ ಕಾಫಿ ಪ್ರಯೋಜನ ಏನು?
ಈ ಪಾನಿಯವನ್ನು ಸೂಪರ್ ಫುಡ್ ಎಂದೂ ಸಹ ಕರೆಯುತ್ತಾರೆ. ಗ್ರೀನ್ ಕಾಫಿ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿನ ಸಕ್ಕತೆ ಹಾಗೂ ಕೊಬ್ಬಿನ ಪ್ರಮಾಣ ಕ್ರಮೇಣ ಕಡಿಮೆ ಆಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಇರುವವರು ಇದನ್ನು ಸೇವಿಸಬಹುದು ಎಂದು ಹೇಳಲಾಗುತ್ತಿದೆ. ಈ ಕಾಫಿ ಸೇವನೆಯಿಂದ ಚಯಾಪಚಯ ಕ್ರಿಯೆ ಚೆನ್ನಾಗಿ ಆಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಬಹುದು.
ಇದನ್ನು ಹೇಗೆ ಕುಡಿಯಬೇಕು?
ಗ್ರೀನ್ ಟಿ ಎಂತೆ ಗ್ರೀನ್ ಕಾಫಿಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಿತಿಯಿಂದ ಇದನ್ನು ಬಳಸಿ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅಂದಹಾಗೆ ಈ ಗ್ರೀನ್ ಕಾಫಿಯನ್ನು ವಾರಕ್ಕೆ ಮೂರರಿಂದ ನಾಲ್ಕು ಬಾರಿ ಮಾತ್ರ ಸೇವಿಸಿದರೆ, ಇದರ ಲಾಭ ಪಡೆಯಬಹುದು. ಇದನ್ನು ಅತಿಯಾಗಿ ಸೇವನೆ ಮಾಡುವುದರಿಂದ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆ ಆಗುತ್ತದೆ. ಅಲ್ಲದೆ ಆಯಾಸ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆಗಳನ್ನು ಎದುರಿಸಬಹುದು.
ಗ್ರೀನ್ ಕಾಫಿ ಮಾಡುವುದು ಹೇಗೆ?
ಗ್ರೀನ್ ಕಾಫಿ ಬೀಜಗಳು ಮತ್ತು ಪುಡಿ ಎರಡೂ ಮಾರುಕಟ್ಟೆಯಲ್ಲಿ ಲಭ್ಯ. ನೀವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡನ್ನೂ ಖರೀದಿಸಬಹುದು. ಬೀಜಗಳಿಂದ ಕಾಫಿ ಮಾಡಲು, ಅವುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ, ಈ ನೀರನ್ನು ಕಡಿಮೆ ಉರಿಯಲ್ಲಿ ಗ್ಯಾಸ್‌ನಲ್ಲಿ ಕುದಿಸಿ, ಫಿಲ್ಟರ್ ಮಾಡಿ ಮತ್ತು ಉಗುರುಬೆಚ್ಚಗಿನ ಕುಡಿಯಿರಿ.
ಗ್ರೀನ್ ಕಾಫಿ ಕುಡಿದ ಅರ್ಧಗಂಟೆ ಏನನ್ನೂ ತಿನ್ನಬಾರದು. ಒಂದು ವೇಳೆ ನಿಮ್ಮಲ್ಲಿ ಅಲರ್ಜಿ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ ನಂತರವೇ ಇದರ ಸೇವನೆಯನ್ನು ಮಾಡಿದರೆ ಉತ್ತಮ.
-
Mangoes: ಮಾವಿನಹಣ್ಣು ಖರೀದಿ ಮಾಡುವಾಗ 3 ತಪ್ಪು ಮಾಡ್ಬೇಡಿ! ಈ 6 ಟ್ರಿಕ್ಸ್ ತಿಳ್ಕೊಂಡಿರಿ -
Vastu Tips: ಮನೆಯಲ್ಲಿ ಎರಡು ಕನ್ನಡಿಗಳು ಎದುರುಬದರಿನಲ್ಲಿ ಇದೆಯಾ? ತಕ್ಷಣ ಬದಲಿಸಿ -
Vastu vs Horoscope: ಮನೆ ವಾಸ್ತು ಪರ್ಫೆಕ್ಟ್ ಆದರೂ ಏಕೆ ಕಿರಿಕಿರಿ? ತಿಳಿಯಿರಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ












Click it and Unblock the Notifications