ಆನ್ ಯುವರ್ ಒನ್: ಇದನ್ನು ತಿಳಿಯದವರಿಲ್ಲ.. 2024ರ ಹೊಸ ವರ್ಷದ ವೇಳೆ ಇದೇ ಪದದ ಹಿಂದೆ ಹೊಸ ದಾಖಲೆ ನಿರ್ಮಾಣ-ಏನಿದು?
OYO Room: 2024ರ ಹೊಸ ವರ್ಷದ ಮೊದಲ ರಾತ್ರಿಯಂದು ಓಯೋ ರೂಂ ದಾಖಲೆ ಮಟ್ಟದಲ್ಲಿ ಬುಕ್ಕಿಂಗ್ ಆಗಿದ್ದು, ಇದು ಎಲ್ಲೆಡೆ ಭಾರೀ ಸುದ್ದಿಯಾಗಿತ್ತು. ಹಾಗಾದರೆ ಈ ಓಯೋದ ಪದದ ಅರ್ಥವೇನು ಹಾಗೂ ಈ ಹೆಸರು ಇಡಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಓಯೋ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಈಗಿನ ಕಾಲದಲ್ಲಿ. ಇದರ ಬಗ್ಗೆ ತಿಳಿಯದವರ ಸಂಖ್ಯೆಯೇ ತುಂಬಾ ಕಡಿಮೆ. ಈ ಹೆಸರು ತೆಗೆದ ತಕ್ಷಣ ಬಹುತೇಕರು ನಾಚಿ ನೀರಾಗಿಬಿಡುತ್ತಾರೆ. ಇನ್ನೂ ಕೆಲವರು ಕಾಮನ್ ರೀತಿಯಲ್ಲಿ ನುಸುನಕ್ಕು ಸಮ್ಮನಾಗಿಬಿಡುತ್ತಾರೆ. ಮತ್ತೊಂದು ವರ್ಗ ಪ್ರವಾಸಿಗರು ಕೂಡ ಇರುತ್ತಾರೆ. ಒಂದು ವೇಳೆ ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದಿದ್ದರೆ, ಕೊನೆಗೆ ಈ ಓಯೋ ರೂಂ ಬುಕ್ ಮಾಡಿ ಅಲ್ಲಿಯೇ ತಂಗುತ್ತಾರೆ.

ಮಾಹಿತಿಯ ಪ್ರಕಾರ, ಓಯೋ ರೂಂಗಳನ್ನು ಅತೀ ಹೆಚ್ಚು ಬಳಕೆ ಮಾಡಿಕೊಳ್ಳುವವರೇ ಯುವಕ, ಯುವತಿಯರೇ ಆಗಿರುತ್ತಾರೆ. ತಮ್ಮ ಆಪ್ತೆ ಅಥವಾ ಆಫ್ತನೊಂದಿಗೆ ಭೇಟಿ ನೀಡುತ್ತಾರೆ ಎನ್ನುವ ಮಾಹಿತಿಯಿದೆ. ಹಾಗಾದರೆ ಈ ಓಯೋ ಪದದ ಅರ್ಥ ಏನೆಂದು ಇಲ್ಲಿ ತಿಳಿಯಿರಿ. ಇದು ದೇಶಾದ್ಯಂತ ತುಂಬಾ ಜನಪ್ರಿಯವಾಗಿದ್ದು, ಇದರ ಬಗ್ಗೆ ಚಿಕ್ಕವರಿಂದ ಹಿಡಿದು ವಯಸ್ಕರವರೆಗೆ ಗೊತ್ತೇ ಇರುತ್ತದೆ.
ಇಲ್ಲಿ ಕಡಿಮೆ ಬೆಲೆಗೆ ಕೊಠಡಿಗಳು ಇಲ್ಲಿ ಲಭ್ಯ ಇರುತ್ತವೆ. ಬೇರೆ ಯಾವುದೇ ಹೋಟೆಲ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸುವುದು ದೀರ್ಘ ಪ್ರಕ್ರಿಯೆ ಆಗಿದೆ. ಅದರೆ ಓಯೋನಲ್ಲಿ ಕೊಠಡಿಯನ್ನು ಕಾಯ್ದಿರಿಸಲು ಹೆಚ್ಚಿನ ದಾಖಲೆಗಳನ್ನು ನೀಡುವ ಅಗತ್ಯ ಇರುವುದಿಲ್ಲ. ಎಲ್ಲಿಂದಲಾದರೂ ಸುಲಭವಾಗಿ ಬುಕ್ ಮಾಡಿ ರೂಂ ಪಡೆಯಬಹುದಾಗಿದೆ.
ಇನ್ನು ಇದುವರರೆಗೂ ಬಹುತೇ ಮಂದಿ ಓಯೋ ರೂಂ ಬಳಕೆ ಮಾಡಿಕೊಂಡಿರುತ್ತಾ, ಆದರೆ ಈ ಪದದ ಅರ್ಥವನ್ನು ತಿಳಿದುಕೊಂಡಿರುವುದಿಲ್ಲ. ಓಯೋ ಮಾಲೀಕ ರಿತೇಶ್ ಅಗರ್ವಾಲ್ ಅವರು ಅದನ್ನು ಆರಂಭಿಸಿದಾಗ ಅದಕ್ಕೆ 'ಒರವಲ್' ಎಂದು ಹೆಸರಿಟ್ಟರು. ಆದರೆ 2013ರಲ್ಲಿ ಅದರ ಹೆಸರನ್ನು OYO ರೂಮ್ಸ್ ಎಂದು ಬದಲಾಯಿಸಿದರು. ಈ OYOನ ಪೂರ್ಣ ಹೆಸರು 'ಆನ್ ಯುವರ್ ಓನ್' ಆಗಿದ್ದು, ಓಯೋ ಕೊಠಡಿಯನ್ನು ಬುಕ್ ಮಾಡಿದವರು ಅದನ್ನು ತಮ್ಮ ಸ್ವಂತ ಕೊಠಡಿ ಎಂದು ಪರಿಗಣಿಸುವ ಉದ್ದೇಶದಿಂದ ಓಯೋ ಎಂದು ಹೆಸರಿಸಲಾಗಿದೆ.












Click it and Unblock the Notifications