Southekayi Pakoda Recipe: ನವರಾತ್ರಿ ಸೌತೆಕಾಯಿ ಪಕೋಡ ರೆಸಿಪಿ: 10 ನಿಮಿಷಗಳಲ್ಲಿ ತಯಾರಿಸಿ
ನವರಾತ್ರಿ ಆಚರಣೆ ಆರಂಭವಾಗುತ್ತಿದೆ. ಒಂಬತ್ತು ದಿನಗಳ ಕಾಲ ತಾಯಿ ಶಕ್ತಿದೇವಿಯನ್ನು ಪೂಜಿಸುವ ಮೂಲಕ ಭಕ್ತರು ನವರಾತ್ರಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಒಂಬತ್ತು ದಿನಗಳ ಕಾಲ ಉಪವಾಸ ಮಾಡುವ ಅನೇಕ ಭಕ್ತರಿದ್ದಾರೆ. ಕೆಲವರು ಈ 9 ದಿನಗಳಲ್ಲಿ ಹಣ್ಣುಗಳನ್ನು ಮಾತ್ರ ತಿನ್ನುತ್ತಾರೆ. ಆದರೆ ಹಣ್ಣುಗಳಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ. ಹೀಗಾಗಿ ಉಪವಾಸ ಬೇಸರವಾಗಬಹುದು. ಈ ನವರಾತ್ರಿಯ ಉಪವಾಸವನ್ನು ಆಚರಿಸುವವರಿಗಾಗಿ ಕೆಲವು ಸುಲಭವಾದ ಪಾಕವಿಧಾನವನ್ನು ನಾವು ನಿಮಗೆ ಹೇಳಿಕೊಡುತ್ತೇವೆ.
ಉಪವಾಸದ ಸಮಯದಲ್ಲಿ ರುಚಿಕರವಾದ ಹಾಗೂ ದೇಹಕ್ಕೆ ತಂಪು ನೀಡುವ ಸೌತೇಕಾಯಿ ಪಕೋಡವನ್ನು ತಯಾರಿಸಬಹುದು. ಇದು ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಇದು ಮನೆ ಮಂದಿಗೆಲ್ಲಾ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ನೀವು ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಹಾಗಾದರೆ ತಡ ಮಾಡುವುದು ಬೇಡ ಸೌತೇಕಾಯಿ ಪಕೋಡ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ.

ಸೌತೆಕಾಯಿ ಪಕೋಡ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
*ಕಡಲೆಬೇಳೆ ಹಿಟ್ಟು ಒಂದು ಕಪ್
*ಕಲ್ಲು ಉಪ್ಪು
*ಮೆಣಸಿನ ಪುಡಿ
*ಧನಿಯಾ ಪುಡಿ ಒಂದು ಚಮಚ
*ಕೊತ್ತಂಬರಿ ಸುಪ್ಪಿ ಸ್ವಲ್ಪ
*ಹಸಿರು ಮೆಣಸಿನಕಾಯಿ 5
*ಸೌತೆಕಾಯಿ ಮಧ್ಯಮ ಗಾತ್ರದ 3
*ತುಪ್ಪ ಅಥವಾ ಎಣ್ಣೆ ಕರಿಯಲು ಬೇಕಾಗುವಷ್ಟು
ಸೌತೆಕಾಯಿ ಪಕೋಡ ಮಾಡುವ ವಿಧಾನ
* ಸೌತೆಕಾಯಿ ಪಕೋಡಗಳನ್ನು ಮಾಡಲು ಮೊದಲು ಉಪ್ಪು, ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಹಸಿರು ಮೆಣಸಿನಕಾಯಿಯನ್ನು ಒಂದು ಮಿಕ್ಸಿ ಚಾರ್‌ಗೆ ಹಾಕಿ ರುಚ್ಚಿಕೊಳ್ಳಿ.
* ರುಬ್ಬಿಕೊಂಡ ಮಿಶ್ರಣವನ್ನು ಕಡಲೆಬೇಳೆ ಹಿಟ್ಟಿಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ
* ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿ ಹೆಚ್ಚು ಗಟ್ಟಿಯಾಗದಂತೆ ಹೆಚ್ಚು ತೆಳುವಾಗದಂತೆ ಚೆನ್ನಾಗಿ ಕಲಸಿಕೊಳ್ಳಿ
* ಬಳಿಕ ಹಿಟ್ಟನ್ನು 20 ನಿಮಿಷಗಳ ಕಾಲ ಪಾತ್ರೆಯನ್ನು ಮುಚ್ಚಿ ಒಂದೆಡೆ ಇರಿಸಿ
* ಒಂದು ಬಾಣಲೆಯನ್ನು ಒಲೆಯ ಮೇಲೆ ಇರಿಸಿ ಕರಿಯಲು ಬೇಕಾಗುವಷ್ಟು ಎಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಕೊಮಚ ಬಿಸಿ ಮಾಡಿ

*20 ನಿಮಿಷಗಳ ಬಳಿಕ ಹಿಟ್ಟಿಗೆ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ
* ಸೌತೆಕಾಯಿಯನ್ನು ವೃತ್ತಾಕಾರದಲ್ಲಿ ತೆಳುವಾಗಿ ಕತ್ತಿಸಿ ಅದನ್ನು ಹಿಟ್ಟಿನಲ್ಲಿ ಎರಡೂ ಬದಿಯಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ
*ಗೋಲ್ಡನ್ ಬ್ರೌನ್ ಬರುವವರೆಗೂ ಡೀಪ್ ಫ್ರೈ ಮಾಡಿ, ಒಂದು ಪಾತ್ರೆಯಲ್ಲಿ ಅದನ್ನು ತೆಗೆದು ಅದು ಸ್ವಲ್ಪ ತಣ್ಣಗಾದ ಬಳಿಕ ಗರಿಗರಿಯಾಗಲು ಮತ್ತೊಮ್ಮೆ ಅವುಗಳನ್ನು ಫ್ರೈ ಮಾಡಿ
* ಈಗ ನಿಮ್ಮ ಕುರುಕುಲಾದ ಸೌತೆಕಾಯಿ ಪಕೋಡಗಳು ಸಿದ್ಧವಾಗಿವೆ. ಬಿಸಿಯಾಗಿರುವಾಗಲೇ ತಿನ್ನಲು ಬಡಿಸಿ.












Click it and Unblock the Notifications