Get Updates
Get notified of breaking news, exclusive insights, and must-see stories!

Chandra Grahan 2025: ರಕ್ತ ಚಂದ್ರಗ್ರಹಣದ ಪ್ರಭಾವ ಏನು? ಯಾರ ಮೇಲೆ ಗ್ರಹಣದ ಎಫೆಕ್ಟ್? ಗ್ರಹಣದ ಟೈಂನಲ್ಲಿ ಹೇಗಿರಬೇಕು?

ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಣಗಳನ್ನು ಮಹತ್ತರವಾದ ದೈವಿಕ ಘಟನೆಗಳೆಂದು ಪರಿಗಣಿಸಲಾಗಿದೆ. ಚಂದ್ರಗ್ರಹಣದ ವೇಳೆ ಚಂದ್ರನ ಮೇಲೆ ರಾಹು-ಕೇತುಗಳ ದೋಷಕರ ಛಾಯೆ ಬೀಳುತ್ತದೆ. ಇದನ್ನು ರಾಹುಗ್ರಸ್ತ ಗ್ರಹಣ ವೆಂದು ಶ್ಲೋಕಗಳಲ್ಲಿ ಉಲ್ಲೇಖಿಸಲಾಗಿದೆ. ಚಂದ್ರನೇ ಕರ್ಕಾಟಕದ ಅಧಿಪತಿ.

ಗ್ರಹಣ ಬಂತು ಅಂದ್ರೆ ಕೆಲವರಿಗೆ ಭಯ, ಇನ್ನು ಕೆಲವರಿಗೆ ಕುತೂಹಲ. ಕೆಲವರು ಶಾಸ್ತ್ರದಲ್ಲಿ ಹೇಳಿದ್ದ ಸಂಪ್ರದಾಯ ಪಾಲನೆ ಮಾಡಿದ್ರೆ, ಇನ್ನು ಕೆಲವರು ಅದೆಲ್ಲ ಮೂಢನಂಬಿಕೆ ಅಂತ ಲೆಕ್ಕಿಸುವುದಿಲ್ಲ. ಸೆಪ್ಟೆಂಬರ್ 7 ರಂದು ಭಾರತದಲ್ಲಿ ಕಾಣಿಸಿಕೊಳ್ಳಲಿರೋ ರಕ್ತ ಚಂದ್ರಗ್ರಹಣ. ಅಂದು ರಕ್ತಸಿಕ್ತವಾಗಿ ಕಾಣಿಸಿಕೊಳ್ಳುವ ಚಂದ್ರ ಕೇಡು ಮಾಡ್ತಾನಾ? ಅದಕ್ಕೆ ಪರಿಹಾರ ಏನು? ಅದೆಲ್ಲದ್ದಕ್ಕೂ ಖ್ಯಾತ ಜೋತಿಷ್ಯಿಗಳು ಭಾರತೀಯ ಸಂಪ್ರಾದಾಯ ಟ್ರಸ್ಟ್ ನ ಅಧ್ಯಕ್ಷರು ಡಾ. ಮಹರ್ಷಿ ಗುರೂಜಿ ಅವರು ಉತ್ತರ ನೀಡಿದ್ದಾರೆ.

Blood Moon Eclipse on September 7 2025 Do And Don ts During Eclipse

ಸೆಪ್ಟೆಂಬರ್‌ 7 ಭಾನುವಾರದಂದು ಗ್ರಹಣ ಸ್ಪರ್ಶಕಾಲ ಶುರುವಾಗೋದು ನಾಸ ಕೊಟ್ಟಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್‌ 7 ರ ರಾತ್ರಿ 8.58 ರಿಂದ 2.25 ನಿಮಿಷದ 3 ಗಂಟೆ 22 ನಿಮಿಷ ಇರುತ್ತದೆ. ಕರ್ನಾಟಕದಲ್ಲಿ ಚಂದ್ರ ಗ್ರಹಣ ಕಾಣುವ ಸಮಯ 8.58 ರಿಂದ 12.22 ನಿಮಿಷದವರೆಗೂ ಇರುತ್ತದೆ. ಈ ಮಧ್ಯ ಭಾಗದಲ್ಲಿ ಗ್ರಹಣವನ್ನ ಆಚರಣ ಮಾಡಬೇಕು ಎಂದು ಹೇಳಿದ್ದಾರೆ. ಗ್ರಹಣದ ಸಂದರ್ಭದಲ್ಲಿ ಹೋಮ ಹವನ ಹಾಗೂ ಜಪವನ್ನ ಮಾಡುತ್ತಾರೆ.

ಗ್ರಹಣದ ಸಂದರ್ಭದಲ್ಲಿ ಊಟ ಮಾಡಬಾರದು. ಆದರೂ ಕೆಲವರು ಗ್ರಹಣವನ್ನ ಲೆಕ್ಕಿಸದೇ ಊಟವನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ ಊಟ ಮಾಡಿದರೆ ಸರಿಯಾಗಿ ಜೀರ್ಣ ಆಗುವುದಿಲ್ಲ. ಇನ್ನೂ ಗರ್ಭಿಣಿಯರು ಗ್ರಹಣದ ಸಂದರ್ಭದಲ್ಲಿ ಆಚೆ ಓಡಾಡಬಾರದು. ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ಬೆಳವಣಿಗೆಯ ಮೇಲೆಯೂ ಪರಿಣಾಯ ಬೀರುತ್ತದೆ. ಕನಿಷ್ಠಪಕ್ಷ ಒಂದು ಗಂಟೆ ಮುಂಚೆ ಊಟ ಮಾಡಬೇಕು ಎಂದು ಖ್ಯಾತ ಜೋತಿಷ್ಯಿಗಳು ಭಾರತೀಯ ಸಂಪ್ರಾದಾಯ ಟ್ರಸ್ಟ್ ನ ಅಧ್ಯಕ್ಷರು ಡಾ. ಮಹರ್ಷಿ ಗುರೂಜಿ ಅವರು ಹೇಳಿದ್ದಾರೆ.

ಇನ್ನು ಸೆಪ್ಟೆಂಬರ್‌ 7 ರಂದು ಖಗ್ರಾಸ ಚಂದ್ರ ಗ್ರಹಣ ಭಾರತದಲ್ಲಿ ಕಾಣಿಸ್ಕೊಳ್ಳುತ್ತೆ. ಇದು ಈ ವರ್ಷದ ಎರಡನೇಯ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ ನಮ್ಮ ದೇಶದಲ್ಲಿ ಕಾಣಿಸ್ಕೊಳ್ಳುವ ಗ್ರಹಣಗಳನ್ನ ಮಾತ್ರ ನಾವು ಆಚರಣೆ ಮಾಡುತ್ತೇವೆ. ಕೆಲವು ಧಾರ್ಮಿಕ ನಿಯಮಗಳನ್ನ ಪಾಲನೆ ಮಾಡುತ್ತೇವೆ. ರಕ್ತ ಚಂದ್ರಗ್ರಹಣ ಭಾರತ, ಚೀನಾ, ಮಂಗೋಲಿಯಾ, ರಷ್ಯಾದ ಕೆಲವು ಭಾಗ, ಮಲೇಷ್ಯಾ, ಸಿಂಗಾಪುರ, ಇಂಡೋನೇಷ್ಯಾ, ಶ್ರೀಲಂಕಾ, ಏಷ್ಯಾಖಂಡದ ವಿವಿಧ ರಾಷ್ಟ್ರಗಳು, ಆಫ್ರಿಕಾ ಖಂಡದ ಪೂರ್ವ ಭಾಗ, ಗಲ್ಫ್‌ ದೇಶಗಳು, ಆಸ್ಟ್ರೇಲಿಯಾದಲ್ಲೂ ಕಾಣಿಸಿಕೊಳ್ಳುತ್ತಾ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+