ಬೇಸಿಗೆಯ ಸುಡುವ ಬಿಸಿಲಿಗೆ ಬಾಳೆಹಣ್ಣಿನ ಜ್ಯೂಸ್ ಅಮೃತ: 5 ನಿಮಿಷಗಳಲ್ಲಿ ಮನೆಯಲ್ಲೇ ತಯಾರಿಸಿ
ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗಿದೆ, ಜನರ ಆಸಕ್ತಿಯೂ ತಂಪಾದ ಪಾನೀಯಗಳ ಕಡೆ ಆಸಕ್ತಿ ಹೆಚ್ಚಾಗುತ್ತಿದೆ. ವಿಶೇಷವಾಗಿ ಹಣ್ಣುಗಳಿಂದ ತಯಾರಿಸಿದ ಜ್ಯೂಸ್್ಗಳಿಗೆ ಹೆಚ್ಚಿನ ಬೇಸಿಗೆಯಲ್ಲಿ ಬೇಡಿಕೆ ಜಾಸ್ತಿ ಆಗಿದೆ. ರಸ್ತೆಬದಿಯ ಜ್ಯೂಸ್ ಅಂಗಡಿಗಳಲ್ಲಿ ಹಲವಾರು ರೀತಿಯ ಹಣ್ಣಿನ ಜ್ಯೂಸ್ ದೊರೆಯುತ್ತವೆ, ಆದರೆ ಅವುಗಳಿಗಿಂತ ಮನೆಮದ್ದಾಗಿ ತಯಾರಿಸುವ ಬಾಳೆಹಣ್ಣು ಜ್ಯೂಸ್ ನಮ್ಮ ಆರೋಗ್ಯಕ್ಕೆ ಎಷ್ಟು ಹಿತಕರ ಮತ್ತು ರುಚಿಕರ ಆಗಿರುತ್ತದೆ.
ಈ ಬಾಳೆಹಣ್ಣು ಜ್ಯೂಸ್ ಬೇಸಿಗೆಕಾಲದಲ್ಲಿ ದೇಹಕ್ಕೆ ತಂಪು ನೀಡುವುದರೊಂದಿಗೆ, ಶಕ್ತಿಯನ್ನು ಸಹ ಒದಗಿಸುತ್ತದೆ. ಅತಿ ಕಡಿಮೆ ಪದಾರ್ಥಗಳನ್ನು ಬಳಸಿ ನಾವು ಇದನ್ನು ಸುಲಭವಾಗಿ ಮನೆಯಲ್ಲೆ ತಯಾರಿಸಬಹುದಾಗಿದೆ.

ಬಾಳೆಹಣ್ಣಿನಲ್ಲಿ ನೈಸರ್ಗಿಕವಾಗಿ ಇರುವ ಸಕ್ಕರೆಯು ನಮ್ಮ ದೇಹಕ್ಕೆ ತಕ್ಷಣವೆ ಎನರ್ಜಿ ನೀಡುತ್ತದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಇಷ್ಟಪಡುವ ಈ ಜ್ಯೂಸ್ ಬೆಳಗಿನ ಉಪಹಾರ ಮತ್ತು ಮದ್ಯಾಹ್ನದ ಊಟ ಸಮಯದಲ್ಲಿ ಇದನ್ನು ತಂಪು ಪಾನೀಯವಾಗಿ ಬಳಸಬಹುದಾಗಿದೆ.
ಇನ್ನೊಂದು ವಿಶೇಷವೆಂದರೆ ಈ ಬಾಳೆಹಣ್ಣು ಜ್ಯೂಸ್ ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಏಲಕ್ಕಿಯ ಸುವಾಸನೆ ಇದಕ್ಕೆ ಮತ್ತಷ್ಟು ರುಚಿಯನ್ನು ನೀಡುವುದರ ಜೊತೆಗೆ ನಮಗೆ ತಾಜಾತನವನ್ನು ಹೆಚ್ಚಿಸುತ್ತದೆ.
ಜ್ಯೂಸ್ ಮಾಡಲು ಬೇಕಾಗುವ ಪದಾರ್ಥಗಳು:
ಬಾಳೆಹಣ್ಣು - 2
ಹಾಲು - 1 ಕಪ್
ಸಕ್ಕರೆ - 2 ಟೀ ಸ್ಪೂನ್
ಐಸ್ ಕ್ಯೂಬ್‌ಗಳು - 4
ಏಲಕ್ಕಿ ಪುಡಿ - ಒಂದು ಚಿಟಿಕೆ
ಜ್ಯೂಸ್ ತಯಾರಿಸುವ ವಿಧಾನ:
ಮೊದಲು ಬಾಳೆಹಣ್ಣುಗಳ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಬಳಿಕ ಈ ತುಂಡುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ ಹಾಲು ಸೇರಿಸಬೇಕು. ನಂತರ ಈ ಮಿಶ್ರಣವನ್ನು ಚೆನ್ನಾಗಿ ಬ್ಲೆಂಡ್ ಮಾಡಬೇಕು.
ನಂತರ ಐಸ್ ಕ್ಯೂಬ್‌ಗಳು ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತೊಮ್ಮೆ ನಯವಾಗಿ ಮಿಶ್ರಣ ಮಾಡಬೇಕು. ಜ್ಯೂಸ್ ಮೃದು ಹೊಂದುವವರೆಗೆ ಬ್ಲೆಂಡ್ ಮಾಡಿದರೆ ಉತ್ತಮ. ಅಂತಿಮವಾಗಿ ತಯಾರಾದ ಬಾಳೆಹಣ್ಣು ಜ್ಯೂಸ್ ಅನ್ನು ಗ್ಲಾಸ್‌ಗೆ ಹಾಕಿಕೊಂಡು ಸರ್ವ್ ಮಾಡಬಹುದು.
ಇದನ್ನು ಕಡಿಮೆ ಸಮಯದಲ್ಲಿ ಮತ್ತು ಸರಳ ಪದಾರ್ಥಗಳಿಂದ ತಯಾರಿಸಬಹುದಾದ ಈ ಬಾಳೆಹಣ್ಣು ಜ್ಯೂಸ್ ಬೇಸಿಗೆಯಲ್ಲಿ ತಂಪು ನೀಡುವ ಜೊತೆಗೆ ರುಚಿ ಮತ್ತು ಆರೋಗ್ಯ ಎರಡನ್ನೂ ನೀಡುತ್ತದೆ. ಮನೆಯಲ್ಲೇ ತಯಾರಿಸಿ ಸವಿದು ನೋಡಿ.














Click it and Unblock the Notifications