Akki Roti Recipe: ಅಕ್ಕಿ ರೊಟ್ಟಿ ಮೃದುವಾಗಿರಲು ಹೀಗೆ ತಯಾರಿಸಿ
ಅಕ್ಕಿ ರೊಟ್ಟಿ ತಯಾರಿಸಲು ಸಾಮಾನ್ಯವಾಗಿ ಎಲ್ಲರಿಗೂ ಬರುವುದಿಲ್ಲ. ಒಂದು ವೇಳೆ ತಯಾರಿಸಲು ಪ್ರಯತ್ನಿದರೆ ಸರಳವಾಗಿ ಬರುವ ವಿಧಾನ ಇದಲ್ಲ. ಹೀಗಾಗಿ ಮನೆಯಲ್ಲಿ ಅಕ್ಕಿ ರೊಟ್ಟಿ ತಯಾರಿಸುವ ಮುನ್ನ ಕೆಲವೊಂದು ವಿಚಾರ ನಿಮಗೆ ತಿಳಿದಿದ್ದರೆ ಒಳ್ಳೆಯದು. ಯಾಕೆಂದರೆ ಸರಿಯಾದ ವಿಧಾನದಲ್ಲಿ ಅಕ್ಕಿ ರೊಟ್ಟಿಯನ್ನು ತಯಾರಿಸಿದರೆ ಅದು ತುಂಬಾ ಮೃದುವಾಗಿ ರುಚಿಯಾಗಿ ಬರುತ್ತದೆ.
ಮನೆಯಲ್ಲಿ ನಾವು ನಾನಾ ಬಗೆಯ ಅಡುಗೆಗಳನ್ನು ತಯಾರಿಸುತ್ತೇವೆ. ಆದರೆ ಒಂದೊಂದು ಅಡುಗೆಗೂ ತಯಾರಿಸುವ ವಿಧಾನ ಬೇರೆಯದ್ದಾಗಿರುತ್ತದೆ. ಉದಾಹರಣೆಗೆ ಚಪಾತಿ ತಯಾರಿಸುವ ವಿಧಾನ ಬೇರೆ, ಹೋಳಿಗೆ ತಯಾರಿಸುವ ವಿಧಾನ ಬೇರೆ, ಪೂರಿ ತಯಾರಿಸುವ ವಿಧಾನ ಬೇರೆ. ಹೀಗೆಯೇ ನಾನಾ ಬಗೆಯ ಅಡುಗೆ ತಯಾರಿಸಿದಾಗ ಅದರಲ್ಲಿ ಸಂಪೂರ್ಣವಾಗಿ ಪಳಗಿದ್ದರೆ ಮಾತ್ರ ರುಚಿಕರವಾಗಿ ಆಹಾರ ತಯಾರಿಸಬಹುದು.

ಹಾಗಾದರೆ ಅಕ್ಕಿ ರೊಟ್ಟಿ ತಯಾರಿಸುವಾಗ ಅನುಸರಿಸುವ ವಿಧಾನಗಳೇನು? ಮೃದುವಾದ ಅಕ್ಕಿ ರೊಟ್ಟಿ ತಯಾರಿಸಲು ಏನು ಮಾಡಬೇಕು ಎಲ್ಲವನ್ನೂ ತಿಳಿಯೋಣ. ಮೊದಲಿಗೆ ಅಕ್ಕಿ ರೊಟ್ಟಿ ತಯಾರಿಸಲು ಬಳಸುವ ಪದಾರ್ಥಗಳ ಬಗ್ಗೆ ನೋಡೋಣ.
ಬೇಕಾಗುವ ಪದಾರ್ಥಗಳು:-
* ಅಕ್ಕಿ ಹಿಟ್ಟು ಒಂದು ಕಪ್
* ಜೀರಿಗೆ ಸ್ವಲ್ಪ
* ಮೆಂತೆ ಸೊಪ್ಪು ಸ್ವಲ್ಪ
* ಕ್ಯಾರೆಟ್ ಒಂದು
* ಸೌತೇಕಾಯಿ ಅರ್ಧ
* ಮೂಲಂಗಿ ಅರ್ಧ ಭಾಗ
* ಕೊತ್ತಂಬರಿ ಸೊಪ್ಪು ಸ್ವಲ್ಪ
* ರುಚಿಗೆ ಉಪ್ಪು
* ಅಡುಗೆ ಎಣ್ಣೆ

ತಯಾರಿಸುವ ವಿಧಾನ:-
* ಅಕ್ಕಿ ರೊಟ್ಟಿ ತಯಾರಿಸಲು ಮೊದಲಿಗೆ ಒಂದು ಮದ್ಯಮ ಗಾತ್ರದ ಕ್ಯಾರೆಟ್‌ನ್ನು ತೊಳೆದು ಸಿಪ್ಪೆ ತೆಗೆದು ತುರಿದುಕೊಳ್ಳಬೇಕು.
* ನಂತರ ಮದ್ಯಮ ಗಾತ್ರದ ಸೌತೇಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ಬೀಜ ತೆಗೆದುಕೊಂಡು ಅದನ್ನೂ ಅರ್ಧ ಭಾಗದಷ್ಟು ಮಾತ್ರ ತುರಿದುಕೊಳ್ಳಬೇಕು.
* ಬಳಿಕ ಮದ್ಯಮ ಗಾತ್ರದ ಮೂಲಂಗಿಯನ್ನು ತೊಳೆದು ಸಿಪ್ಪೆ ತೆಗೆದು ಅರ್ಧದಷ್ಟು ತುರಿದುಕೊಳ್ಳಬೇಕು.
* ಒಂದು ಹಿಡಿಯಷ್ಟು ಮೆಂತೆ ಸೊಪ್ಪು ತೆಗೆದುಕೊಂಡು ತೊಳೆದು ಚಿಕ್ಕದಾಗಿ ಕಟ್ ಮಾಡಿ.
* ಕೊತ್ತಂಬರಿ ಸೊಪ್ಪು ಸ್ವಲ್ಪ ತೆಗೆದುಕೊಂಡು ತೊಳೆದು ಚಿಕ್ಕದಾಗಿ ಕಟ್ ಮಾಡಿ.
* ಇದಾದ ನಂತರ ಒಂದು ಬಟ್ಟಲಿನಲ್ಲಿ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ತುರಿದುಕೊಂಡ ಮೂಲಂಗಿ, ಕ್ಯಾರೆಟ್, ಸೌತೇಕಾಯಿ ಹಾಕಿ
* ಬಳಿಕ ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
* ನಂತರ ಇದಕ್ಕೆ ಕುದಿಯುವ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಮಾಡಿಕೊಳ್ಳಬೇಕು
* ಒಂದು ಹಾಳೆಗೆ ಎಣ್ಣೆ ಹಚ್ಚಿ ಅದರ ಮೇಲೆ ಉಂಡೆ ಇಟ್ಟು ಕೈಯಿಂದ ತಟ್ಟಿ ಅಗಲ ಮಾಡಿ ಹೆಂಚಿಗೆ ಎಣ್ಣ ಸವರಿ ಹಾಕಿ ಬೇಯಿಸಿಕೊಂಡರೆ ರುಚಿಯಾದ ಅಕ್ಕಿ ರೊಟ್ಟಿ ಸವಿಯಲು ಸಿದ್ಧ.
ಇದು ತುಂಬಾ ಮೃದುವಾಗಿ ಇರುತ್ತದೆ. ಮಕ್ಕಳ ಬಾಕ್ಸ್ ಗೂ ಕೂಡ ಇದನ್ನು ತಯಾರಿಸಬಹುದು. ಇದನ್ನು ಯಾವುದೇ ಚಟ್ನಿ ಜೊತೆಗೆ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ.












Click it and Unblock the Notifications