Summer Health Tips: ಬೇಸಿಗೆಯಲ್ಲಿ ಈ 6 ತರಕಾರಿಗಳನ್ನು ತಿನ್ನಲೇಬಾರದು; ಕಾರಣ ತಿಳಿಯಿರಿ

ಬೇಸಿಗೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಈ ತೀವ್ರವಾದ ಬಿಸಿಲಿನ ಸಮಯದಲ್ಲಿ ನಮ್ಮ ದೇಹವು ತನ್ನ ಸಾಮಾನ್ಯ ತಾಪಮಾನವನ್ನು ಕಾಯ್ದುಕೊಳ್ಳಲು ಹೆಚ್ಚು ಹೋರಾಡುಬೇಕು. ಈ ವೇಳೆ ನಾವು ತಿನ್ನುವ ಆಹಾರವು ದೇಹದ ತಾಪಮಾನವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಆದರೆ ಕೆಲವು ತರಕಾರಿಗಳು ಉಷ್ಣವನ್ನು ಉತ್ಪಾದಿಸುವ(ಥರ್ಮೋಜೆನಿಕ್)ಗುಣ ಹೊಂದಿರುತ್ತವೆ, ಅವು ಜೀರ್ಣವಾಗುವಾಗ ದೇಹದ ಒಳಗಿನ ಉಷ್ಣತೆಯನ್ನು ಹೆಚ್ಚಿಸುತ್ತಾ ಹೋಗುತ್ತವೆ. ಇದರಿಂದ ದೇಹದಲ್ಲಿ ಉರಿ, ಅಜೀರ್ಣ, ಹೆಚ್ಚಿದ ಬೆವರು ಮತ್ತು ಚರ್ಮದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಬೇಸಿಗೆಯಲ್ಲಿ ಯಾವ ತರಕಾರಿಗಳನ್ನು ಸೇವಿಸುವುದು ಕಡಿಮೆ ಮಾಡಬೇಕು ಎಂಬುದು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.

1. ಹಸಿ ಮೆಣಸಿನ ಕಾಯಿ ಮತ್ತು ಕೆಂಪು ಮೆಣಸಿನ ಕಾಯಿ

ಮೆಣಸಿನ ಕಾಯಿಯಲ್ಲಿ ಇರುವ ಕ್ಯಾಪ್ಸೈಸಿನ್ ದೇಹಕ್ಕೆ ಹೆಚ್ಚು ಬಿಸಿಯಾಗಿರುವ ಅನುಭವವನ್ನು ನೀಡುತ್ತದೆ. ಇದು ನಮ್ಮ ದೇಹದಲ್ಲಿ ಬೆವರು ಹೆಚ್ಚಿಸಲು ಕಾರಣವಾಗಿದೆ. ಆದರೆ ಹೆಚ್ಚು ಬಿಸಿಲು ಮತ್ತು ತೇವಾಂಶ ಇರುವ ಸಮಯದಲ್ಲಿ ಈ ಬೆವರು ಸರಿಯಾಗಿ ಆವಿಯಾಗದೇ ದೇಹವನ್ನು ಇನ್ನಷ್ಟು ಆಯಾಸಗೊಳಿಸಬಹುದು. ಇದರಿಂದ ಅಜೀರ್ಣ, ಅಸಹನೆ ಮತ್ತು ಹೊಟ್ಟೆ ಉರಿ ಇನ್ನಿತರ ಸಮಸ್ಯೆಗಳು ಹೆಚ್ಚಾಗಬಹುದು.

6 Vegetables to Avoid

2. ಶುಂಠಿ ಮತ್ತು ಕಚ್ಚಾ ಬೆಳ್ಳುಳ್ಳಿ

ಶುಂಠಿ ಮತ್ತು ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮವಾಗಿದ್ದರೂ ಕೂಡ ಉಷ್ಣತೆಯ ಗುಣವನ್ನು ಹೊಂದಿರುತ್ತವೆ. ಇವು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಿ ದೇಹದ ಒಳಗಿನ ಉಷ್ಣತೆಯನ್ನು ಹೆಚ್ಚಿಸಬಹುದು. ಹೀಟ್‌ವೇವ್ ಸಮಯದಲ್ಲಿ ಇವುಗಳನ್ನು ಹೆಚ್ಚು ಸೇವಿಸಿದರೆ ಹೊಟ್ಟೆಯಲ್ಲಿ ಉರಿ, ದೇಹದಲ್ಲಿ ತಾಪ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಬೇಸಿಗೆಯಲ್ಲಿ ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುವುದು ಒಳಿತು.

Coconut Water Side Effects: ಎಳನೀರು ಕುಡಿಯುವ ಮೊದಲು ತಿಳಿಯಬೇಕಾದ 5 ಕಾರಣಗಳು
Coconut Water Side Effects: ಎಳನೀರು ಕುಡಿಯುವ ಮೊದಲು ತಿಳಿಯಬೇಕಾದ 5 ಕಾರಣಗಳು

3. ಈರುಳ್ಳಿ

ತುಂಬಾ ಜನರು ಬೇಸಿಗೆಯಲ್ಲಿ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ದೇಹ ತಂಪಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಹಸಿ ಈರುಳ್ಳಿಯನ್ನು ಸೇವಿಸಿದರೆ ಅದು ಹೊಟ್ಟೆ ಉರಿ, ಗ್ಯಾಸ್ ಮತ್ತು ದೈಹಿಕ ಶಕ್ತಿ ಇಲ್ಲದಿರುವ ಹಾಗೆ ಉಂಟುಮಾಡಬಹುದು. ಈರುಳ್ಳಿಯನ್ನು ನೀರು ಅಥವಾ ವಿನೆಗರ್‌ನಲ್ಲಿ ನೆನೆಸಿದ ನಂತರ ಬಳಸಿದರೆ ಉತ್ತಮ.

6 Vegetables to Avoid

4. ಪಾಲಕ್ ಸೊಪ್ಪು ಮತ್ತು ಸಾಸಿವೆ ಸೊಪ್ಪು

ಪಾಲಕ್ ಮತ್ತು ಸಾಸಿವೆ ಸೊಪ್ಪುಗಳಲ್ಲಿ ಪೋಷಕಾಂಶಗಳ ಪ್ರಮಾಣ ಹೆಚ್ಚು ಇದ್ದರೂ, ಅವು ಸ್ವಲ್ಪ ಉಷ್ಣತೆಯ ಗುಣವನ್ನು ಹೊಂದಿರುತ್ತವೆ. ಪಾಲಕ್‌ನಲ್ಲಿರುವ ಆಕ್ಸಲೇಟ್‌ಗಳು ಜೀರ್ಣಕ್ರಿಯೆಗೆ ಕಷ್ಟವಾಗಬಹುದು ಅಂದರೆ ವಿಶೇಷವಾಗಿ ದೇಹದಲ್ಲಿ ನೀರಿನ ಕೊರತೆ ಇದ್ದಾಗ, ಆದ್ದರಿಂದ ಬೇಸಿಗೆಯಲ್ಲಿ ಇವುಗಳನ್ನು ಹೆಚ್ಚು ಸೇವಿಸುವುದು ಒಳ್ಳೆಯದಲ್ಲ.

5. ಅರಬಿ (ಕೆಸು) ಮತ್ತು ಬೇರು ತರಕಾರಿಗಳು

ಅರಬಿ ಮತ್ತು ಇತರೆ ಬೇರು ತರಕಾರಿಗಳು ದೇಹಕ್ಕೆ ಅಸ್ವಸ್ಥತೆ ಕಾರಣವಾಗಿದ್ದು, ಜೀರ್ಣಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಬೇಸಿಗೆಯಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿರುತ್ತದೆ ಮತ್ತು ಇವುಗಳನ್ನು ತಿನ್ನುವುದರಿಂದ ಸ್ವಲ್ಪ ಸುಸ್ತು, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಎದುರಾಗುತ್ತವೆ.

ತೂಕ ಇಳಿಕೆಗೆ ಕರಿಬೇವು ಸೂಪರ್‌ಫುಡ್! ದಿನವೂ ಸೇವಿಸಿದರೆ ಈ ಬದಲಾವಣೆ ಖಚಿತ
ತೂಕ ಇಳಿಕೆಗೆ ಕರಿಬೇವು ಸೂಪರ್‌ಫುಡ್! ದಿನವೂ ಸೇವಿಸಿದರೆ ಈ ಬದಲಾವಣೆ ಖಚಿತ

6. ಕ್ಯಾರೆಟ್ ಮತ್ತು ಮೂಲಂಗಿ

ಕ್ಯಾರೆಟ್ ಮತ್ತು ಕೆಲವು ರೀತಿಯ ಮೂಲಂಗಿ ತರಕಾರಿಗಳು ಸಾಮಾನ್ಯವಾಗಿ ಚಳಿಗಾಲದ ಬೆಳೆಗಳು. ಇವುಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ತರಕಾರಿಗಳಿಗಿಂತ ಇವು ಕಡಿಮೆ ತುಂಬಾ ಪರಿಣಾಮಕಾರಿ ಆಗಿರುತ್ತವೆ.

ಈ ಮಾಹಿತಿಯು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+