Lassa Fever: ಇಲಿಗಳಿಂದ ಹೊಸ ರೋಗ: ಲಸ್ಸಾ ಸೋಂಕಿನ ಲಕ್ಷಣ, ಅಪಾಯದ ಬಗ್ಗೆ ತಿಳಿಯಿರಿ

ನವದೆಹಲಿ, ಫೆಬ್ರವರಿ 15: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ಓಮಿಕ್ರಾನ್ ರೂಪಾಂತರದಿಂದ ಜಗತ್ತು ಇನ್ನೂ ಹೊರ ಬಂದಿಲ್ಲ. ವಿಶ್ವದ ಹಲವು ರಾಷ್ಟ್ರಗಳು ಕೊವಿಡ್-19 ಭೀತಿಯಲ್ಲಿ ಇರುವುದರ ಮಧ್ಯೆ ಬ್ರಿಟನ್‌ನಲ್ಲಿ ಹೊಸ ರೋಗ ಕಾಣಿಸಿಕೊಂಡಿದೆ.

ಬ್ರಿಟನ್‌ನಲ್ಲಿ 2009ರಿಂದ ಇತ್ತೀಚೆಗೆ ಮೊದಲ ಬಾರಿ ಮೂವರಲ್ಲಿ ಲಸ್ಸಾ ಜ್ವರ ಕಾಣಿಸಿಕೊಂಡಿದ್ದು, ಈ ಪೈಕಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಪ್ರಾಧಿಕಾರ ತಿಳಿಸಿದೆ. ಲಂಡನ್‌ನ ಉತ್ತರದ ಬೆಡ್‌ಫೋರ್ಡ್‌ಶೈರ್‌ನಲ್ಲಿರುವ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೂವರೂ ಸೋಂಕಿತರು ಪೂರ್ವ ಇಂಗ್ಲೆಂಡ್‌ನ ಒಂದೇ ಕುಟುಂಬದವರಾಗಿದ್ದು, ಇತ್ತೀಚೆಗೆ ಪಶ್ಚಿಮ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ. ಲಸ್ಸಾ ಜ್ವರ ಎಂಬುದು ತೀವ್ರವಾದ ವೈರಲ್ ಹೆಮರಾಜಿಕ್ ಕಾಯಿಲೆಯಾಗಿದ್ದು, ಎಬೋಲಾ ಮತ್ತು ಮಾರ್ಬರ್ಗ್ ವೈರಸ್‌ಗಳ ಜಾತಿಗೆ ಸೇರಿದೆ. ಆದರೆ ಕಡಿಮೆ ಮಾರಣಾಂತಿಕವಾಗಿದೆ. 1969ರಲ್ಲಿ ಮೊದಲು ಉತ್ತರ ನೈಜೀರಿಯಾದಲ್ಲಿ ಕಾಣಿಸಿಕೊಂಡ ರೋಗವನ್ನು ಲಸ್ಸಾ ಜ್ವರ ಎಂದು ಗುರುತಿಸಲಾಗಿತ್ತು.

ಮೂವರು ರೋಗಿಗಳ ಜೊತೆ ಸಂಪರ್ಕ ಹೊಂದಿರುವವರನ್ನು ಪತ್ತೆ ಮಾಡಲಾಗುತ್ತಿದ್ದು, ಸೂಕ್ತ ಚಿಕಿತ್ಸೆ, ಆರೋಗ್ಯ ಸಲಹೆ ನೀಡಲಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಈ ರೋಗವು ವೇಗವಾಗಿ ಹರಡುವ ಅಪಾಯ ಅಷ್ಟು ತೀಕ್ಷ್ಣವಾಗಿಲ್ಲ ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಹೇಳಿದೆ. ಹಾಗಿದ್ದರೆ ಈ ಲಸ್ಸಾ ಜ್ವರ ಎಂದರೇನು?, ಲಸ್ಸಾ ಜ್ವರ ಹೇಗೆ ಹರಡುತ್ತದೆ?, ಈ ಲಸ್ಸಾ ಜ್ವರದ ಲಕ್ಷಣಗಳೇನು?, ಯಾವ ವಯಸ್ಸಿನವರಿಗೆ ಲಸ್ಸಾ ಜ್ವರ ಅಪಾಯಕಾರಿಯಾಗಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಬ್ರಿಟನ್‌ನಲ್ಲಿ ಮೂರು ಲಸ್ಸಾ ಜ್ವರದ ಪ್ರಕರಣ ಪತ್ತೆ

ಬ್ರಿಟನ್‌ನಲ್ಲಿ ಮೂರು ಲಸ್ಸಾ ಜ್ವರದ ಪ್ರಕರಣ ಪತ್ತೆ

ಬ್ರಿಟನ್‌ನಲ್ಲಿ ಒಟ್ಟು ಮೂವರಿಗೆ ಲಸ್ಸಾ ಜ್ವರ ತಗುಲಿರುವುದು ದೃಢಪಟ್ಟಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಒಬ್ಬ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇನ್ನೊಬ್ಬ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ತಿಳಿಸಿದೆ. ಒಬ್ಬ ಸೋಂಕಿತ ರೋಗಿಗೆ ಬ್ರಿಟಿಷ್ ರಾಜಧಾನಿಯ ಉತ್ತರದಲ್ಲಿರುವ ರಾಯಲ್ ಫ್ರೀ ಲಂಡನ್ NHS ಫೌಂಡೇಶನ್ ಟ್ರಸ್ಟ್‌ನ ಆಸ್ಪತ್ರೆಯಲ್ಲಿ ತಜ್ಞರಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ವೈರಲ್ ಹೆಮರಾಜಿಕ್ ಜ್ವರದ ಚಿಕಿತ್ಸೆಗಾಗಿ ಪರಿಣತಿ ಹೊಂದಿರುವ ಸುರಕ್ಷಿತ ಹಾಗೂ ಪ್ರತ್ಯೇಕ ಘಟಕವಿದೆ.

ಲಸ್ಸಾ ಜ್ವರ ತಗುಲಿರುವ ಶಂಕೆ ಹಿನ್ನೆಲೆ ಲಂಡನ್‌ನ ಉತ್ತರದಲ್ಲಿರುವ ಬೆಡ್‌ಫೋರ್ಡ್‌ಶೈರ್ ಹಾಸ್ಪಿಟಲ್ಸ್ NHS ಫೌಂಡೇಶನ್ ಟ್ರಸ್ಟ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ಸಾವನ್ನಿಪ್ಪಿದ ನಂತರದಲ್ಲಿ ರೋಗ ಇರುವುದು ದೃಢಪಟ್ಟಿತ್ತು. ಕಳೆದ ತಿಂಗಳು ನೈಜೀರಿಯಾದ ಆರೋಗ್ಯ ಪ್ರಾಧಿಕಾರವು ಇದೇ ರೋಗದ ಹರಡುವಿಕೆ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಹೇಳಿಕೊಂಡಿತ್ತು. ಬೇಸಿಗೆ ಕಾಲದಲ್ಲಿ ಈ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಿತ್ತು.

ಲಸ್ಸಾ ಜ್ವರ ಎಂದರೇನು?

ಲಸ್ಸಾ ಜ್ವರ ಎಂದರೇನು?

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪೊಲ್ಯೂಷನ್ (ಸಿಡಿಸಿ) ಪ್ರಕಾರ, ಲಸ್ಸಾ ಜ್ವರ-ಉಂಟುಮಾಡುವ ವೈರಸ್ ಪಶ್ಚಿಮ ಆಫ್ರಿಕಾದಲ್ಲಿ ಕಂಡುಬರುತ್ತದೆ. ಇದನ್ನು 1969ರಲ್ಲಿ ಮೊದಲ ಬಾರಿಗೆ ನೈಜೀರಿಯಾದ ಲಸ್ಸಾದಲ್ಲಿ ಕಂಡು ಹಿಡಿಯಲಾಯಿತು. ಈ ಜ್ವರವು ಸಾಮಾನ್ಯವಾಗಿ ಇಲಿಗಳಿಂದ ಹರಡುತ್ತದೆ. ಇದು ಪ್ರಾಥಮಿಕವಾಗಿ ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್, ಲೈಬೀರಿಯಾ, ಗಿನಿಯಾ ಮತ್ತು ನೈಜೀರಿಯಾ ಸೇರಿದಂತೆ ಸ್ಥಳೀಯ ದೇಶಗಳಲ್ಲಿ ಕಂಡುಬಂದಿತ್ತು.

ಸೋಂಕಿತ ಇಲಿಯ ಮೂತ್ರ ಅಥವಾ ಮಲದಿಂದ ಕಲುಷಿತವಾಗಿರುವ ಆಹಾರ, ಮನೆಯ ವಸ್ತುಗಳ ಸಂಪರ್ಕದಿಂದ ವ್ಯಕ್ತಿಗೆ ರೋಗ ಅಂಟಿಕೊಳ್ಳಬಹುದು. ಅನಾರೋಗ್ಯದ ವ್ಯಕ್ತಿಯ ಸೋಂಕಿತ ದೈಹಿಕ ದ್ರವ್ಯದಿಂದಲೂ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡಬಹುದು. ಅಂದರೆ ಸೋಂಕಿತನ ಕಣ್ಣು, ಮೂಗು ಅಥವಾ ಬಾಯಿಯ ಲೋಳೆಯ ಪೊರೆಗಳ ಮೂಲಕ ದ್ರವ್ಯದ ಸಂಪರ್ಕದಿಂದ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಂಟಿಕೊಳ್ಳುವ ಅಪಾಯವಿರುತ್ತದೆ.

ಕಳೆದ ಎರಡು ತಿಂಗಳಿನಲ್ಲಿ ನೈಜೀರಿಯಾದಲ್ಲಿ ಇದೇ ಲಸ್ಸಾ ಜ್ವರದಿಂದ ಈಗಾಗಲೇ 48 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟಿ 20 ವರ್ಷದ ಆಸುಪಾಸಿನವರೇ ಹೆಚ್ಚಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಲಸ್ಸಾ ಜ್ವರದ ಲಕ್ಷಣಗಳು ಯಾವುವು?

ಲಸ್ಸಾ ಜ್ವರದ ಲಕ್ಷಣಗಳು ಯಾವುವು?

ಲಸ್ಸಾ ಜ್ವರವು ಅಂಟಿಕೊಂಡ ರೋಗಿಗಳಲ್ಲಿ ಹಲವು ರೀತಿ ಸೋಂಕಿತ ಲಕ್ಷಣಗಳು ಗೋಚರಿಸುತ್ತಿವೆ. ಸಿಡಿಸಿ ಪ್ರಕಾರ, ಜ್ವರಕ್ಕೆ ಸಂಬಂಧಿಸಿದ ಅತ್ಯಂತ ಸಾಮಾನ್ಯವಾಗಿ ಕಿವುಡುತನ ಮತ್ತು ಶಾಶ್ವತ ಶ್ರವಣ ದೋಷವನ್ನು ಅನುಭವಿಸುತ್ತಿದ್ದಾರೆ.

- ಜ್ವರ

- ಆಯಾಸ

- ದೌರ್ಬಲ್ಯ ಮತ್ತು ತಲೆನೋವು

- ರಕ್ತಸ್ರಾವ

- ಉಸಿರಾಟದ ತೊಂದರೆ

- ವಾಂತಿ

- ಮುಖದ ಊತ

- ಎದೆ ನೋವು

- ಬೆನ್ನು ಮತ್ತು ಹೊಟ್ಟೆ ನೋವು

ಲಸ್ಸಾ ಜ್ವರ ಸೋಂಕಿತರಲ್ಲಿ ಚೇತರಿಕೆಯ ಸಮಸ್ಯೆ ಇಲ್ಲ

ಲಸ್ಸಾ ಜ್ವರ ಸೋಂಕಿತರಲ್ಲಿ ಚೇತರಿಕೆಯ ಸಮಸ್ಯೆ ಇಲ್ಲ

ಲಸ್ಸಾ ಜ್ವರ ಸೋಂಕು ಎನ್ನುವುದು ತೀವ್ರ ಅನಾರೋಗ್ಯವನ್ನು ಹುಟ್ಟುಹಾಕುತ್ತದೆ ಆದರೂ, ಹೆಚ್ಚಿನ ಸೋಂಕಿತರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ, ಲಸ್ಸಾ ಜ್ವರದ ಸೋಂಕು ತಗುಲಿದವರ ಪೈಕಿ ಸಾವಿನ ಪ್ರಮಾಣ ಶೇ.1ರಷ್ಟಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ.15ರಷ್ಟಿದೆ. ಸಾರ್ವಜನಿಕರಿಗೆ ಈ ಸೋಂಕಿನಿಂದ ಅಪ್ಟಾಗಿ ಅಪಾಯವಿಲ್ಲ ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಹೇಳಿದೆ. "ಸೂಕ್ತ ಮೌಲ್ಯಮಾಪನ ಮತ್ತು ಸಲಹೆಯನ್ನು ಒದಗಿಸಲು ಸೋಂಕಿತನ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ನಾವು ಸಂಪರ್ಕಿಸುತ್ತಿದ್ದೇವೆ," ಎಂದಿದೆ.

ಲಸ್ಸಾ ಜ್ವರದ ಕುರಿತು ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ಲಸ್ಸಾ ಜ್ವರದ ಕುರಿತು ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ಲಸ್ಸಾ ಜ್ವರದ ಸೋಂಕಿನಿಂದ ಸುರಕ್ಷಿತವಾಗಿರಲು ಇಲಿಗಳ ಸಂಪರ್ಕವನ್ನು ತಪ್ಪಿಸುವುದು ಉತ್ತಮ ಮಾರ್ಗವಾಗಿದೆ. ಇದರರ್ಥ ರೋಗವು ಹೆಚ್ಚಾಗಿರುವ ಸ್ಥಳಗಳಲ್ಲಿ ಮಾತ್ರ ಇಲಿಗಳ ಸಂಪರ್ಕವನ್ನು ತಪ್ಪಿಸುವುದಾಗಿದೆ. ಆದರೆ ಇಲಿಗಳು ಮನೆಗೆ ಪ್ರವೇಶಿಸುವುದನ್ನು ತಡೆಯಲು ಇತರ ಪ್ರದೇಶಗಳಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಇಲಿ-ನಿರೋಧಕ ಪಾತ್ರೆಗಳಲ್ಲಿ ಆಹಾರವನ್ನು ಇಡುವುದು ಮತ್ತು ಇಲಿ ಬಲೆಗಳನ್ನು ಇಡುವುದು ಸೂಕ್ತ ಎಂದು ಸಿಡಿಸಿ ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+