ಭೂ ಒತ್ತುವರಿ ವಿರುದ್ಧ ಬಿಡಿಎ "ಆಪರೇಷನ್ ಡೆಮಾಲಿಷನ್" ಕಾರ್ಯಾಚರಣೆ

ಬೆಂಗಳೂರು, ಜನವರಿ 28: ಬಿಡಿಎ ಆಸ್ತಿಗೆ ಹಾಕಿದ್ದ ಅಕ್ರಮ ಬೇಲೆ ತೆರವುಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಪರೇಷನ್ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಹೂರ್ತ ನಿಗದಿ ಮಾಡಿದೆ. ಬಿಡಿಎ ಆಸ್ತಿಗೆ ಬೇಲಿ ಹಾಕಿಕೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ಮಾಡುವ ನಿಟ್ಟಿನಲ್ಲಿ ಬಿಡಿಎ ಅಧಿಕಾರಿಗಳು ಮೊದಲ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕೋಟ್ಯಂತರ ಭೂ ಒತ್ತುವರಿ:

ಕೋಟ್ಯಂತರ ಭೂ ಒತ್ತುವರಿ:

ಬೆಂಗಳೂರು ನಗರದಲ್ಲಿ ಒತ್ತವರಿಗೆ ಒಳಗಾಗಿರುವ ಆಸ್ತಿಯನ್ನು ಗುರುತಿಸಿ ಎರಡು ತಿಂಗಳಲ್ಲಿ ತೆರವುಗೊಳಿಸುವಂತೆ ಬಿಡಿಎ ಆಯುಕ್ತ ಎಚ್‌.ಆರ್. ಮಹದೇವ್ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರವೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಿಡಿಎ ವಿಜಿಲೆನ್ಸ್ ವಿಭಾಗದ ಡಿವೈಎಸ್ಪಿ ಬಾಲಕೃಷ್ಣ, ಭೂ ಸ್ವಾಧೀನ ಅಧಿಕಾರಿ ಶಿವರಾಜ್ ಮತ್ತು ಇಂಜಿನಿಯರ್ ಗಳು ಜೆಪಿನಗರದ ಎಂಟನೇ ಹಂತದಲ್ಲಿ ಬಿಡಿಎಗೆ ಸೇರಿದ 13 ಸಾವಿರ ಚದರಡಿ ಜಾಗವನ್ನು ಪತ್ತೆ ಮಾಡಿದ್ದಾರೆ. ಇದರ ಜತೆಗೆ ಸಮೀಪದಲ್ಲಿರುವ ವಡ್ಡರಪಾಳ್ಯದ ಸರ್ವೆ ನಂ 18, 19 ಮತ್ತು 20 ರಲ್ಲಿ ಸಾವಿರಾರು ಕೋಟಿ ಮೌಲ್ಯದ 30 ಎಕರೆ ಜಮೀನನ್ನು ಗುರುವಾರ ಪತ್ತೆ ಮಾಡಿದ್ದಾರೆ.

ವಡ್ಡರಪಾಳ್ಯದಲ್ಲಿರುವ ಜಮೀನಿನ ಕೆಲ ಭಾಗವನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ನಕಲಿ ದಾಖಲೆ ಸೃಷ್ಟಿಸಿ ನಿವೇಶನವನ್ನಾಗಿ ವಿಗಂಡಿಸಿ ಮಾರಾಟ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಬಿಡಿಎ ಅಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಈ ಭೂಮಿಯನ್ನು ಗುರುತಿಸಿದ ಬಿಡಿಎ ಅಧಿಕಾರಿಗಳು ಅತಿ ಶೀಘ್ರದಲ್ಲಿಯೇ ಒತ್ತುವರಿ ತೆರವು ಮಾಡಿ ಬಿಡಿಎ ಬೇಲಿ ಹಾಕುವುದಾಗಿ ತಿಳಿಸಿದ್ದಾರೆ.

ನ್ಯಾಯಾಲಯದ ನಿರ್ದೇಶನ ಗಾಳಿಗೆ

ನ್ಯಾಯಾಲಯದ ನಿರ್ದೇಶನ ಗಾಳಿಗೆ

ಇನ್ನು ಜೆ.ಪಿ. ನಗರದ 8 ನೇ ಹಂತದಲ್ಲಿ ( ಗೊಟ್ಟಿಗೆರೆ ಸಮೀಪ) ಸುಮಾರು ಹದಿಮೂರು ಸಾವಿರ ಚದರಡಿ ಜಾಗವನ್ನು ಬಿಲ್ಡರ್ ಕಂಪನಿಯೊಂದು ಒತ್ತುವರಿ ಮಾಡಿಕೊಂಡಿರುವುದನ್ನು ಬಿಡಿಎ ಅಧಿಕಾರಿಗಳು ಇದೇ ವೇಳೆ ಪತ್ತೆ ಮಾಡಿದರು. ನೂರಾರು ಕೋಟಿ ಬೆಲೆ ಬಾಳುವ ಜಾಗದಲ್ಲಿ ಈಗಾಗಲೇ ಮೂರು ಹಂತದ ಕಟ್ಟಡಗಳನ್ನು ನಿರ್ಮಾಣವಾಗಿದೆ. ಭೂ ಮಾಲಿಕತ್ವ ಕುರಿತು ಸದ್ಯ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣ ಇತ್ಯರ್ಥ ಆಗುವವರೆಗೂ ವಿವಾದಿತ ಭೂಮಿಯಲ್ಲಿ ಯಾವುದೇ ಕಟ್ಟಡ ನಿರ್ಮಿಸಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಇದನ್ನು ಹೊರತು ಪಡಿಸಿ ವಿವಾದಿತ ಭೂಮಿಯಲ್ಲಿ ಕಟ್ಟಡ ನಿರ್ಮಿಸಿದ್ದು, ಈ ಕುರಿತ ದಾಖಲೆಗಳನ್ನು ಹಾಗೂ ಕಟ್ಟಡದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಆಯುಕ್ತರ ಭರವಸೆ

ಆಯುಕ್ತರ ಭರವಸೆ

ಈ ಕುರಿತು ಒನ್ ಇಂಡಿಯಾ ಕನ್ನಡಗೆ ಪ್ರತಿಕ್ರಿಯೆ ನೀಡಿದ ಬಿಡಿಎ ಆಯುಕ್ತ ಮಹದೇವ್ ಅವರು, ಬಿಡಿಎ ಆಸ್ತಿ ಪರರ ಪಾಲಾಗಿದೆ. ಆ ಆಸ್ತಿಯನ್ನು ಗುರುತಿಸಿ ಬಿಡಿಎ ವಶಕ್ಕೆ ತೆಗೆದುಕೊಳ್ಳುವುದು ನನ್ನ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕಾರ್ಯಾಚರಣೆಗೆ ಸೂಚಿಸಿದ್ದೇನೆ. ಬನಶಂಕರಿ ಆರನೇ ಹಂತ ಹಾಗೂ ವಡ್ಡರಪಾಳ್ಯ, ಜೆ.ಪಿ.ನಗರ ಸುತ್ತಮುತ್ತ ಬಿಡಿಎಗೆ ಸೇರಿದ ಸಾವಿರಾರು ಕೋಟಿ ಮೌಲ್ಯದ 60 ಎಕರೆ ಆಸ್ತಿಯನ್ನು ಗುರುತಿಸಿದ್ದೇವೆ. ಕೆಲವು ಆಸ್ತಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿ ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಅಂತಹ ಭೂಮಿಯನ್ನು ಸಹ ಗುರುತಿಸಲು ಸೂಚಿಸಿದ್ದೇನೆ. ವಿವಾದಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಡಿಎ ವತಿಯಿಂದ ಸಮರ್ಥ ವಕೀಲರನ್ನು ನಿಯೋಜಿಸಿ ಆಸ್ತಿ ವಶಪಡಿಸಿಕೊಳ್ಳಲಾಗುವದು. ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳಲ್ಲಿ ಶೀಘ್ರದಲ್ಲಿಯೇ ತೆರವು ಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಒಂದಿಂಚೂ ಜಾಗ ಬಿಡಲ್ಲ:

ಒಂದಿಂಚೂ ಜಾಗ ಬಿಡಲ್ಲ:

ಮೊದಲ ಹಂತದಲ್ಲಿ ಒತ್ತುವರಿಗೆ ಒಳಗಾಗಿರುವ ಬಿಡಿಎ ಆಸ್ತಿ ಪತ್ತೆ ಮಾಡಲಿಕ್ಕೆ ಸೂಚಿಸಿದ್ದೇನೆ. ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಎಷ್ಟು ಎಕರೆ ಎಂಬುದು ನಿಕರವಾಗಿ ನಾನು ಈಗ ಹೇಳುವುದು ತಪ್ಪಾಗುತ್ತದೆ. ಆದರೆ, ಪ್ರಾಧಿಕಾರಕ್ಕೆ ಸೇರಿದ ಒಂದಿಂಚು ಜಾಗವನ್ನೂ ಕೂಡ ನಾನು ಬಿಡುವುದಿಲ್ಲ. ಬಿಡಿಎ ಆಸ್ತಿಯ ಒತ್ತುವರಿಗೆ ಕಾರಣವಾಗಿರುವ ಬಿಡಿಎ ಅಧಿಕಾರಿಗಳನ್ನು ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇನೆ. ಬಿಡಿಎ ಆಸ್ತಿ ಒತ್ತುವರಿಯಾಗಿದ್ದರೆ ಸಾರ್ವಜನಿಕರು ಕೂಡ ನೇರವಾಗಿ ದೂರು ಸಲ್ಲಿಸಬಹುದು ಎಂದು ಬಿಡಿಎ ಆಯುಕ್ತರಾದ ಎಚ್‌.ಅರ್ ಮಹದೇವ್ ಅವರು ಮನವಿ ಮಾಡಿದ್ದಾರೆ.

ಮೊದಲ ಹಂತದಲ್ಲಿ 300 ಎಕರೆ :

ಮೊದಲ ಹಂತದಲ್ಲಿ 300 ಎಕರೆ :

ಇನ್ನು ಬಿಡಿಎಗೆ ಸೇರಿದ ಸುಮಾರು 200 ಕ್ಕೂ ಹೆಚ್ಚು ಎಕರೆ ಭೂಮಿ ಒತ್ತುವರಿಗೆ ಒಳಗಾಗಿ, ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆಯಲ್ಲಿವೆ. ಇದಲ್ಲದೇ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸುಮಾರು ನೂರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಬಿಡಿಎ ಅಧಿಕಾರಿಗಳು ಮೊದಲ ಹಂತದಲ್ಲಿ ಪತ್ತೆ ಮಾಡಿದ್ದಾರೆ. ಹಂತ ಹಂತವಾಗಿ ಬಿಡಿಎ ಆಸ್ತಿಗಳನ್ನು ಗುರುತಿಸಿ ಸ್ವಾಧೀನಕ್ಕೆ ಪಡೆಯಲು " ಆಪರೇಷನ್ ಒತ್ತುವರಿ ತೆರವು " ಕಾರ್ಯಾಚರಣೆ ಆರಂಭಿಸಿದ್ದಾರೆ. ಜೆಪಿ.ನಗರ , ವಡ್ಡರಪಾಳ್ಯ ಹಾಗೂ ಸುತ್ತ ಮುತ್ತಲಿನ ಬಿಡಿಎ ಆಸ್ತಿಗಳನ್ನು ವಶಕ್ಕೆ ಪಡೆಯಲು ಆಯುಕ್ತರು ಕಾರ್ಯ ಯೋಜನೆ ರೂಪಿಸಿದ್ದಾರೆ ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಖರೀದಿದಾರರಿಗೆ ಸಂಕಷ್ಟ:

ಖರೀದಿದಾರರಿಗೆ ಸಂಕಷ್ಟ:

ಬಿಡಿಎ ಆಸ್ತಿಗಳಿಗೆ ಅಕ್ರಮವಾಗಿ ದಾಖಲೆ ಸೃಷ್ಟಿಸಿ ಕೆಲವರು ಮಾರಾಟ ಮಾಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಬಿಡಿಎ ಆಸ್ತಿ ಖರೀದಿಸಿದವರಿಗೆ ಸಂಕಷ್ಟ ಎದುರಾಗಲಿದೆ. ಬಿಡಿಎ ಮರು ಸ್ವಾಧೀನ ಪಡಿಸಿಕೊಂಡರೆ ಅತ್ತ ಹಣವೂ ಇಲ್ಲ, ಭೂಮಿಯೂ ಇಲ್ಲದೇ ಬೀದಿಗೆ ಬೀಳುವಂತಹ ಸ್ಥಿತಿ ನಿರ್ಮಾಣವಾಗಲಿದೆ. ಬಿಡಿಎ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡುವುದು, ಇಲ್ಲವೇ ಮೂಲ ನಿವೇಶನ ಕಡಿತ ಮಾಡಿ ಹೆಚ್ಚುವರಿ ನಂಬರ್ ನೀಡಿ ಪರಭಾರೆ ಮಾಡಿದ ನಿವೇಶನಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದು, ಅಕ್ರಮವಾಗಿ ಬಿಡಿಎ ಜಾಗ ಖರೀದಿಸಿದ್ದಲ್ಲಿ, ಒತ್ತುವರಿ ಮಾಡಿಕೊಂಡವರಿಗೆ ಸಂಕಷ್ಟ ಎದುರಾಗಲಿದೆ.

ಕ್ಲೀನ್ ಬಿಡಿಎ:

ಕ್ಲೀನ್ ಬಿಡಿಎ:

ಇನ್ನು ಸುಮಾರು ಭೂ ಒತ್ತುವರಿ ಪ್ರಕರಣ ಹಾಗೂ ಬಿಡಿಎ ಭು ವ್ಯಾಜ್ಯ ಪ್ರಕರಣಗಳಲ್ಲಿ ಅಧಿಕಾರಿಗಳು ಹಾಗೂ ಕೆಲವು ವಕೀಲರು ಸ್ವಂತ ಲಾಭಕ್ಕಾಗಿ ಬಿಡಿಎ ಆಸ್ತಿಯನ್ನು ಕೈ ತಪ್ಪುವಂತ ಮಾಡಿದ್ದಾರೆ. ಅಧಿಕಾರಿಗಳು ತಮ್ಮ ಲಾಭಕ್ಕಾಗಿ ಬಿಡಿಎ ಅಸ್ತಿಯನ್ನು ಪರರ ಪಾಲು ಮಾಡಿರುವ ಪ್ರಕರಣಗಳನ್ನು ಜಾಲಾಡುವಂತೆ ಆಯುಕ್ತರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈ ತಪ್ಪಿರುವ ಭೂ ವಾಜ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರು ಪರಿಶೀಲಿಸಿ ಮತ್ತೆ ನ್ಯಾಯಾಲಯದಲ್ಲಿ ಸಮರ ಸಾರಲು ಸಿದ್ಧತೆ ನಡೆದಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬಿಡಿಎ ಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಕಾರ್ಯಾಚರಣೆಗಳು ಯಶಸ್ವು ಆಗಲಿವೆಯೇ ? ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+